ಬ್ರೇಕಿಂಗ್ ನ್ಯೂಸ್
24-02-22 11:13 pm Mangalore Correspondent ಕರಾವಳಿ
ಮಂಗಳೂರು, ಫೆ.24 : ಉಕ್ರೇನ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟ ಇಬ್ಬರು ವೈದ್ಯಕೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಇವರಲ್ಲಿ ಒಬ್ಬರು ಮಂಗಳೂರು ತಾಲೂಕಿನ ಪಡೀಲು ಗ್ರಾಮದವರಾಗಿದ್ದು, ಮತ್ತೊಬ್ಬರು ಮಂಗಳೂರು ನಗರದ ವಾಸಿಯಾಗಿರುತ್ತಾರೆ. ಒಬ್ಬ ವಿದ್ಯಾರ್ಥಿಯು ಉಕ್ರೇನ್ ರಾಜಧಾನಿ ಕೀವ್ ನಗರದಲ್ಲಿ ಮೊದಲನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಇನ್ನೊರ್ವ ವಿದ್ಯಾರ್ಥಿನಿ ಕಾರ್‍ಕೀವ್ ನಗರದಲ್ಲಿ 3ನೇ ವರ್ಷದ ವೈದ್ಯಕೀಯ ವಿದ್ಯಾರ್ಥಿಯಾಗಿರುತ್ತಾರೆ.
ಈ ಇಬ್ಬರೂ ವಿದ್ಯಾರ್ಥಿಗಳ ಪಾಲಕರು ಜಿಲ್ಲಾಡಳಿತದ ಸಂಪರ್ಕದಲ್ಲಿರುತ್ತಾರೆ. ಈ ವಿದ್ಯಾರ್ಥಿಗಳು ಇದೇ 26ನೇ ತಾರೀಕಿನಂದು ಉಕ್ರೇನ್‍ನಿಂದ ಭಾರತಕ್ಕೆ ಹಿಂತಿರುಗಬೇಕಾಗಿದ್ದು, ಆದರೆ ಅವರಿಗೆ ದಾಖಲೆಗಳ ಸಮಸ್ಯೆಗಳಿಂದಾಗಿ ವಿಮಾನದ ಟಿಕೆಟ್ ಕಾಯ್ದಿರಿಸುಲ್ಲಿ ಸ್ವಲ್ಪ ವಿಳಂಬವಾಗಿದ್ದು, ಸದ್ಯಕ್ಕೆ ಇಬ್ಬರೂ ವಿದ್ಯಾರ್ಥಿಗಳು ಹಾಸ್ಟೆಲುಗಳಲ್ಲಿ ಸುರಕ್ಷಿತವಾಗಿರುವುದಾಗಿ ತಿಳಿಸಿರುತ್ತಾರೆ. ರಷ್ಯಾದೊಂದಿಗಿನ ಉದ್ವಿಗ್ನ ಪರಿಸ್ಘಿತಿ ಹಿನ್ನಲೆಯಲ್ಲಿ ಉಕ್ರೇನ್ ಸರ್ಕಾರವು ತನ್ನ ದೇಶದಲ್ಲಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿರುವ ಕಾರಣದಿಂದ ವಾಪಸು ಬರಲು ಸಾಧ್ಯವಾಗಿರುವುದಿಲ್ಲ.
ಜಿಲ್ಲಾಡಳಿತವು ರಾಜ್ಯ ಸರಕಾರ ಮತ್ತು ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿದ್ದು, ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಎಲ್ಲಾ ರೀತಿಯ ಪ್ರಯತ್ನವನ್ನು ಜಿಲ್ಲಾಡಳಿತದಿಂದ ಮಾಡಲಾಗುತ್ತಿದ್ದು, ಸದ್ಯ ಜಿಲ್ಲಾಡಳಿತವು ವಿದ್ಯಾರ್ಥಿಗಳ ಸಂಪರ್ಕದಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾವುದೇ ಅಗತ್ಯ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ಕಂಟ್ರೋಲ್ ರೂಂ 1077 ಗೆ ಕರೆ ಮಾಡಿ ಸಹಾಯ ಯಾಚನೆ ಅಥವಾ ಸಾರ್ವಜನಿಕರು ಮಾಹಿತಿ ನೀಡಬಹುದಾಗಿದೆ.
Ministry of External Affairs Control Room Toll-free Number: 1800118797
Other Phone numbers:
+91 11 23012113
+91 11 23014104
+91 11 23017905
Fax: +91 11 23088124
Email: situationroom@mea.gov.in
Embassy of India in Ukraine 24-hour helpline
24*7 Emergency Helpline:
+380 997300428
+380 997300483
Email: cons1.kyiv@mea.gov.in
Website:www.eoiukraine.gov.in
Several Indian students who had gone to Ukraine for studies are stranded there because of the ongoing conflict between Russia and Ukraine. The war has affected several countries of the world.
03-05-26 01:30 pm
HK News Staffer
ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯ...
03-05-26 12:34 pm
2028ರ ಅಸೆಂಬ್ಲಿಯತ್ತ ಕಾಂಗ್ರೆಸ್ ಹೈಕಮಾಂಡ್ ದೃಷ್ಟಿ...
02-05-26 06:35 pm
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
03-05-26 05:18 pm
HK News Staffer
ಯುದ್ಧ ನಮ್ಮ ಆಯ್ಕೆಯಲ್ಲ, ಹೇರಲ್ಪಟ್ಟದ್ದು.. ; ಇರಾನ್...
03-05-26 02:35 pm
ದೇಶಾದ್ಯಂತ ಮೊಬೈಲ್ಗಳಿಗೆ ಎಚ್ಚರಿಕೆ ಧ್ವನಿ; ‘ಸೆಲ್...
02-05-26 08:26 pm
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
03-05-26 09:19 pm
HK News Staffer
ವಿಶೇಷ ಪೂಜೆಗೆ ಬೆತ್ತಲೆ ಫೋಟೊ ಕಳಿಸು, 30 ಲಕ್ಷ ಕೊಡ್...
03-05-26 02:31 pm
ಮಕ್ಕಳನ್ನು ರಕ್ಷಿಸಲು ಹೋಗಿ 2 ತಿಂಗಳ ಗರ್ಭಿಣಿ ಜಲಸಮಾ...
02-05-26 08:35 pm
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm