ಬ್ರೇಕಿಂಗ್ ನ್ಯೂಸ್
25-02-22 12:08 pm Mangalore Correspondent ಕರಾವಳಿ
ಉಳ್ಳಾಲ, ಫೆ.25 : ಅವ್ರು ಕುಂಕುಮ ಹಾಕ್ತಾರೆ, ಆಫೀಸಲ್ಲಿ ದೇವ್ರ ಫೊಟೊ ಇಡ್ತಾರೆ.. ನಾವ್ ಕೇಳಿದ್ವಾ ? ನಮ್ಮನ್ನ ಹಿಜಾಬ್ ಹಾಕಲು ಯಾಕ್ ಬಿಡಲ್ಲ ಎಂದು ಉಳ್ಳಾಲ ಭಾರತ್ ಪಿಯು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಧರಣಿ ಕುಳಿತಿದ್ದಾರೆ.
ಹಿಜಾಬ್ ಕಿಚ್ಚು ಉಳ್ಳಾಲಕ್ಕೂ ಹಬ್ಬಿದ್ದು ಮಾಸ್ತಿಕಟ್ಟೆಯ ಭಾರತ್ ಪಿಯು ಕಾಲೇಜಿನಲ್ಲಿ ಜಿಲ್ಲಾ ಶಿಕ್ಷಣ ಇಲಾಖೆಯ ಆದೇಶದಂತೆ ತರಗತಿ ಒಳಗೆ ಹಿಜಾಬನ್ನ ನಿರಾಕರಿಸಲಾಗಿತ್ತು. ನಿನ್ನೆ ಸಂಜೆ ಶಾಲಾ ಮೇಲುಸ್ತುವಾರಿಯ ಉಳ್ಳಾಲ ಮೊಗವೀರ ಸಂಘದ ಸಮಿತಿ ಸಭೆ ನಡೆದಿದ್ದು ಅಂತಿಮವಾಗಿ ಸರಕಾರದ ಆದೇಶವನ್ನೇ ಪಾಲಿಸುವುದಾಗಿ ನಿರ್ಣಯ ಕೈಗೊಳ್ಳಲಾಗಿತ್ತು.
ಇಂದು ಬೆಳಗ್ಗೆ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಜೊತೆಯಾಗಿಯೇ ಕಾಲೇಜಿಗೆ ಬಂದಿದ್ದು ಶಾಲಾಡಳಿತವು ತರಗತಿ ಒಳಗೆ ಹಿಜಾಬ್ ಹಾಕಿ ವಿದ್ಯಾರ್ಥಿನಿಯರನ್ನ ಪ್ರವೇಶಿಸಲು ಬಿಟ್ಟಿಲ್ಲ. ಈ ವೇಳೆ ಮುಸ್ಲಿಂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಾಂಶುಪಾಲೆ ಕಲಾವತಿ ಮತ್ತು ಮೊಗವೀರ ಸಂಘದ ಅಧ್ಯಕ್ಷರಾದ ಮನೋಜ್ ಸಾಲ್ಯಾನ್ ಅವರಲ್ಲಿ ತಮಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಮನೋಜ್ ಸಾಲ್ಯಾನ್ ಅವರು ವಿದ್ಯಾರ್ಥಿನಿಯರಲ್ಲಿ ಸರಕಾರದ ಆದೇಶವನ್ನ ಪಾಲಿಸೋದು ನಮ್ಮ ಕರ್ತವ್ಯ ಎಂದಿದ್ದಾರೆ.
ಪಟ್ಟು ಬಿಡದ ವಿದ್ಯಾರ್ಥಿ , ವಿದ್ಯಾರ್ಥಿನಿಯರು ವರ್ಗಾವಣೆ ಪತ್ರ(ಟಿ.ಸಿ) ನೀಡಲು ಆಗ್ರಹಿಸಿದ್ದಾರೆ. ಪರೀಕ್ಷೆ ಹತ್ತಿರ ಇರೋದರಿಂದ ಟಿ.ಸಿ ನೀಡಲು ಸಾಧ್ಯವಿಲ್ಲವೆಂದು ಪ್ರಾಂಶುಪಾಲರು ಹೇಳಿದ್ದಾರೆ. ಮತ್ತೂ ಪಟ್ಟು ಬಿಡದ ವಿದ್ಯಾರ್ಥಿಗಳು ಟಿ.ಸಿ ಕೊಡಲೇ ಬೇಕೆಂದಾಗ ಕಾಲೇಜಿನ ಆಡಳಿತ ಸದಸ್ಯರು ಬೇರೆ ಕಾಲೇಜಿನ ಸರ್ಟಿಫಿಕೇಟ್ ತಂದರೆ ಟಿ.ಸಿ ನೀಡೋದಾಗಿ ಹೇಳಿದ್ದಾರೆ.
ಶಾಲಾಡಳಿತದ ಈ ಉತ್ತರದಿಂದ ಉದ್ರಿಕ್ತಗೊಂಡ ವಿದ್ಯಾರ್ಥಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿ ಘೋಷಣೆ ಕೂಗಿದ್ದಾರೆ. ಸ್ಥಳಕ್ಕೆ ಬಂದ ಉಳ್ಳಾಲ ದರ್ಗಾ ಅಧ್ಯಕ್ಷ ರಶೀದ್ ಹಾಜಿ ಅವರು ವಿದ್ಯಾರ್ಥಿಗಳನ್ನ ಸಮಾಧಾನಗೊಳಿಸಿ ಕೋರ್ಟ್ ತೀರ್ಪು ಬರೋವರೆಗೂ ಕಾಯುವಂತೆ ವಿನಂತಿಸಿದ್ದಾರೆ. ದರ್ಗಾ ಅಧ್ಯಕ್ಷರ ಮಾತನ್ನೂ ಕೇಳದ ವಿದ್ಯಾರ್ಥಿನಿಯರು ಕಾಲೇಜಿನ ಪ್ರವೇಶ ದ್ವಾರದ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ಕಾಲೇಜಿನಲ್ಲಿರುವ ಹಿಂದೂ ವಿದ್ಯಾರ್ಥಿಗಳಿಗೂ ರಜೆ ನೀಡುವಂತೆ ಒತ್ತಾಯಿಸಿದ್ದಾರೆ. ಬಳಿಕ ಕಾಲೇಜು ಆಡಳಿತವು ಪಿಯು ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೂ ರಜೆ ನೀಡಿದೆ. ಪ್ರತಿಭಟನಾ ನಿರತ ಮುಸ್ಲಿಂ ವಿದ್ಯಾರ್ಥಿಗಳೂ ಧರಣಿ ನಿಲ್ಲಿಸಿ ಮನೆಗೆ ತೆರಳಿದ್ದಾರೆ.
ಕಾಲೇಜಿನಲ್ಲಿ ಶಾಸಕ ಯು.ಟಿ .ಖಾದರ್, ದರ್ಗಾ ಅಧ್ಯಕ್ಷ ರಶೀದ್ ಹಾಜಿ, ಮೊಗವೀರ ಸಂಘದವರು ಜತೆಯಾಗಿ ಸಭೆ ನಡೆಸಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಗುರುಪ್ರಸಾದ್, ಡಿಸಿಪಿ ಹರಿರಾಂ ಶಂಕರ್, ಎಸಿಪಿ ದಿನಕರ ಶೆಟ್ಟಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಾಲೇಜು ಆವರಣದಲ್ಲಿ 144 ಸೆಕ್ಷನ್ ಜಾರಿ ಇರೋದರಿಂದ ರಸ್ತೆಯಲ್ಲಿ ಸೇರಿದ್ದ ಗುಂಪನ್ನ ಚದುರಿಸಿದ್ದಾರೆ.
ಸಮಸ್ಯೆ ಇತ್ಯರ್ಥಕ್ಕೆ ಜಿಲ್ಲಾಧಿಕಾರಿ ಜೊತೆ ಸಭೆ - ಖಾದರ್
ಭಾರತ್ ಪಿಯು ಕಾಲೇಜಿನಲ್ಲಿ 60 ಶೇಕಡಾ ಮುಸ್ಲಿಂ ವಿದ್ಯಾರ್ಥಿಗಳಿದ್ದು ಅಲ್ಲಿ ಹಿಜಾಬ್ ನಿಷೇಧ ಕಡ್ಡಾಯ ಮಾಡುವುದು ಕಾಲೇಜು ಆಡಳಿತಕ್ಕೆ ಕುತ್ತಿಗೆಗೆ ಬಂದಿದೆ. ಒಂದೆಡೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಕಾಲೇಜು ಆಡಳಿತಕ್ಕೆ ನುಂಗಲಾರದ ತುತ್ತಾಗಿದ್ದಾರೆ. ವಿದ್ಯಾರ್ಥಿನಿಯರು ತಮಗೆ ಟಿಸಿ ನೀಡುವಂತೆ ಕೇಳಿಕೊಂಡಿದ್ದರಿಂದ ಸಮಸ್ಯೆ ಇತ್ಯರ್ಥಕ್ಕೆ ಶಾಸಕ ಯುಟಿ ಖಾದರ್ ಎಂಟ್ರಿಯಾಗಿದ್ದು ಇಂದು ಸಂಜೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ತಿಳಿಸಿದ್ದಾರೆ. ಕಾಲೇಜು ಆಡಳಿತದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
Mangalore Ullal Hijab students protest in front of college as college denies entry into campus, tight security ordered. Bharath PU college had decided in its meeting to not enter any students with hijab. MLA UT khader who visited the spot promised the students of talking to DC.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm