ಬ್ರೇಕಿಂಗ್ ನ್ಯೂಸ್
27-02-22 12:42 pm Udupi Correspondent ಕರಾವಳಿ
ಉಡುಪಿ, ಫೆ.27 : ಕೆಲವರು ಹಿಜಾಬ್ ವಿಚಾರದಲ್ಲಿ ಮುಸ್ಲಿಮರ ಷರಿಯಾ ಕಾನೂನು ಮುಂದಿಟ್ಟು ವಾದಿಸುತ್ತಿದ್ದಾರೆ. ಆದರೆ ಇವರಿಗೆ ಷರಿಯಾ ಕಾನೂನು ಬರಲೇಬೇಕು ಅಂತಿದ್ದರೆ, ಮೊದಲು ಶಿವಮೊಗ್ಗದಲ್ಲಿ ಕೊಲೆಯಾದ ಹರ್ಷ ಕೊಲೆ ಆರೋಪಿಗಳನ್ನು ಕಲ್ಲು ಹೊಡೆದು ಕೊಲ್ಲಲು ಅವಕಾಶ ಕೊಡಲಿ. ಅವರನ್ನು ಜೈಲಿವನಿಂದ ಬಿಡುಗಡೆ ಮಾಡಿ, ಸಾರ್ವಜನಿಕವಾಗಿ ಕಲ್ಲು ಹೊಡೆದು ಸಾಯಿಸಿ. ಷರಿಯಾ ಕಾನೂನು ಪ್ರಕಾರ, ಯಾರನ್ನೇ ಆಗಲೀ ಕೊಲೆಗೈದರೆ ಅಥವಾ ರೇಪ್ ಮಾಡಿದರೆ ಅವರನ್ನು ಕಲ್ಲು ಹೊಡೆದು ಸಾಯಿಸುತ್ತಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಹರ್ಷ ಕೊಲೆ ಪ್ರಕರಣವನ್ನು ಖಂಡಿಸಿ ಮಣಿಪಾಲದ ಟೈಗರ್ ಸರ್ಕಲ್ ಬಳಿ ನಡೆದ ಪ್ರತಿಭಟನಾ ಸಭೆಯಲ್ಲಿ ರಘುಪತಿ ಭಟ್ ಮಾತನಾಡಿದರು. ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಷಡ್ಯಂತ್ರ ಇದೆ. ಈ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಷರೀಯಾ ಕಾನೂನು ಮುಂದಿಟ್ಟು ತರಗತಿ ಒಳಗೆ ಹಿಜಾಬ್ ಬೇಕೆಂದು ಪಟ್ಟು ಹಿಡಿದಿದ್ದಾರೆ. ಮುಸ್ಲಿಮರು ಷರಿಯಾ ಕಾನೂನು ಪಾಲಿಸುತ್ತಾರೆ ಅಂದ್ರೆ ನಾವು ಒಂದಷ್ಟು ತ್ಯಾಗ ಮಾಡಿಕೊಳ್ಳಲು ಸಿದ್ಧರಿದ್ದೇವೆ. ಅವರಿಗೆ ಷರಿಯಾ ಕಾನೂನೇ ಮುಖ್ಯವಾದರೆ, ಮುಸ್ಲಿಮರಿಗೆ ಷರಿಯಾ ಕಾನೂನನ್ನೇ ಕಡ್ಡಾಯಗೊಳಿಸಿ. ಅದರಂತೆ, ಕೊಲೆಗೈದರೆ, ಅತ್ಯಾಚಾರ ಮಾಡಿದರೆ ಸಾರ್ವಜನಿಕವಾಗಿ ಕಲ್ಲು ಹೊಡೆಯುವ ಕಾನೂನನ್ನೂ ಜಾರಿಗೊಳಿಸಿ. ನಾವು ಹಿಜಾಬ್ ತೆಗೆದು ತರಗತಿಗೆ ಬರುವವರನ್ನು ಗೌರವಿಸುತ್ತೇವೆ. ಆದರೆ ಕಾಂಗ್ರೆಸಿನವರು ಈ ವಿಚಾರದಲ್ಲಿ ಪಲಾಯನವಾದ ಮಾಡುವುದನ್ನು ಸಹಿಸುವುದಿಲ್ಲ ಎಂದು ರಘುಪತಿ ಭಟ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಮಾತನಾಡಿ, ಸಮಾಜದಲ್ಲಿ ಶಾಂತಿ ಕದಡುವ ಮೂಲಕ ಹಿಂದುಗಳ ತಾಳ್ಮೆ ಕೆದಕುವುದು ಬೇಡ. ಹಿಂದುಗಳು ಸುಮ್ಮನಿರುವುದಿಲ್ಲ. ಪಿಎಫ್ಐ, ಎಸ್ ಡಿಪಿಐ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. ಕಾಂಗ್ರೆಸಿನವರು ರಾಷ್ಟ್ರ ಧ್ವಜದ ಹೆಸರಲ್ಲಿ ಹಿಜಾಬ್ ವಿಚಾರ ಸದನದಲ್ಲಿ ಚರ್ಚೆಯಾಗದಂತೆ ಮಾಡಿದ್ದಾರೆ. ಈಶ್ವರಪ್ಪ ಹೇಳಿಕೆಯ ನೆಪದಲ್ಲಿ ಪ್ರತಿಭಟನೆ ನಡೆಸಿ, ಸದನದ ಸಮಯವನ್ನು ಹಾಳು ಮಾಡಿದ್ದಾರೆ. ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ನಾನು ಕೂಡ ಹೇಳುತ್ತೇನೆ, ಮುಂದೆ ಯಾವತ್ತಾದರೂ ಭಗವಾಧ್ವಜವೇ ರಾಷ್ಟ್ರ ಧ್ವಜ ಆಗಲೂಬಹುದು. ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಎಸ್ಡಿಪಿಐ ಇತ್ತೀಚೆಗೆ ಕಾಪು ಪಂಚಾಯತ್ ನಲ್ಲಿ ಮೂರು ಸೀಟುಗಳನ್ನು ಗೆದ್ದಿತ್ತು. ಆನಂತರ, ತನ್ನ ಪ್ರಾಬಲ್ಯ ಹೆಚ್ಚಿಸಲು ರಾಜಕೀಯ ಹಿತಾಸಕ್ತಿ ಸಾಧನೆಗಾಗಿ ಹಿಜಾಬ್ ವಿವಾದ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರು ಈ ದೇಶದ ಕಾನೂನು, ಹೈಕೋರ್ಟ್ ಬಗ್ಗೆ ಗೌರವ ಹೊಂದಿದ್ದರೆ ಇವರ ದಾಳಕ್ಕೆ ಈಡಾಗಬಾರದು. ಷರಿಯಾ ಕಾನೂನೇ ಬೇಕಿದ್ದರೆ, ಷರಿಯಾ ಪಾಲನೆ ಮಾಡುವ ದೇಶಗಳಿಗೆ ಹೋಗಿ, ಅಲ್ಲಿಯೇ ನೆಲೆಸುವುದಕ್ಕೆ ನಮ್ಮ ಅಡ್ಡಿಯಿಲ್ಲ. ಹಿಜಾಬ್ ಬೇಕೆಂದು ಹರ್ಷನ ರೀತಿ ಕೊಲೆ ಸರಣಿ ಮುಂದುವರಿಸುವುದಾದರೆ ಭವಿಷ್ಯದಲ್ಲಿ ಅಲ್ಪಸಂಖ್ಯಾತರಿಗೆ ಜೀವನ ಕಷ್ಟವಾಗಬಹುದು ಎಂದು ಸುರೇಶ್ ನಾಯಕ್ ಹೇಳಿದರು. ಬಿಜೆಪಿ ನಾಯಕರಾದ ಮಟ್ಟಾರು ರತ್ನಾಕರ ಹೆಗ್ಡೆ, ವೀಣಾ ಶೆಟ್ಟಿ, ಶ್ರೀಶ ನಾಯಕ್, ನವೀನ್ ಕುತ್ಯಾರು, ಮನೋಹರ ಕಲ್ಮಾಡಿ ಮತ್ತಿತರರು ಇದ್ದರು.
If we really want to follow Sharia law for Muslims, the six assailants, who killed Harsha, should be released from prison and allowed to be stoned publicly. According to Sharia, when a person kills another or rapes, he is stoned publicly to death,” said MLA Raghupati Bhat. Bhat was addressing the protesters near Tiger Circle of Manipal in a huge protest rally that was held condemning the murder of Bajrang Dal worker Harsha and against Congress party on Saturday February 26.
16-07-25 09:36 pm
HK News Desk
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
ಕಾವೇರಿ ಆರತಿ ದುಡ್ಡು ಹೊಡೆಯುವ ಸ್ಕೀಮ್, ನೂರು ಕೋಟಿ...
16-07-25 11:47 am
35 IPS Officers Transfer: ರಾಜ್ಯದಲ್ಲಿ 35 ಐಪಿಎಸ...
15-07-25 01:32 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
16-07-25 10:52 pm
Mangalore Correspondent
ಕೆಂಪು ಕಲ್ಲು, ಮರಳು ಸಮಸ್ಯೆಗೆ ಕಾಂಗ್ರೆಸ್ ಸರ್ಕಾರದ...
16-07-25 01:01 pm
Dharmasthala Missing case, Ananya Bhat, Compl...
15-07-25 10:40 pm
Udupi Rain, Fishermen Missing: ಉಡುಪಿ ; ಭಾರೀ ಗ...
15-07-25 10:13 pm
Kmc Manipal Hospital, Mangalore, Health Card:...
15-07-25 07:19 pm
16-07-25 11:04 pm
Mangalore Correspondent
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am
ಸುಂದರವಾಗಿದ್ದಕ್ಕೆ ತಲೆ ಬೋಳಿಸಿ ಮನೆಯಲ್ಲಿ ಕೂಡಿಹಾಕಿ...
15-07-25 10:57 pm