ಬ್ರೇಕಿಂಗ್ ನ್ಯೂಸ್
28-02-22 11:45 pm Mangalore Correspondent ಕರಾವಳಿ
ಮಂಗಳೂರು, ಫೆ. 28 : ಶಿರಾಡಿ ಘಾಟ್ ಕರಾವಳಿ ಭಾಗದ ಪ್ರಮುಖ ಸಂಚಾರ ಮಾರ್ಗವಾಗಿದ್ದು, ಇಲ್ಲಿ ಏಳು ಸುರಂಗ ಸಹಿತ ಹೆದ್ದಾರಿ ಮಾರ್ಗವನ್ನು 14 ಸಾವಿರ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಅದಕ್ಕಾಗಿ ತಜ್ಞರ ವರದಿ ಪಡೆದು ವಿಸ್ತೃತ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಕುಲಶೇಖರದ ಕೊರ್ಡೆಲ್ ಹಾಲ್‌ನಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ 3163 ಕೋಟಿ ರೂ. ಮೊತ್ತದಲ್ಲಿ 164 ಕಿ.ಮೀ. ಉದ್ದದ 15 ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತ್ ಮಾಲಾ ಯೋಜನೆಯಡಿ ಎರಡು ಸಾವಿರ ಕೋಟಿ ರೂ. ವೆಚ್ಚದಲ್ಲಿ ನವಮಂಗಳೂರು, ಕಾರವಾರ ಬಂದರುಗಳ ಅಭಿವೃದ್ಧಿ ಪಡಿಸಲಾಗುವುದು. ಬೆಂಗಳೂರು- ಮಂಗಳೂರು ಸಂಪರ್ಕಿಸುವ ಶಿರಾಡಿ ಘಾಟಿಯ 26 ಕಿ.ಮೀ. ರಸ್ತೆಯನ್ನು ಚತುಷ್ಪಥವಾಗಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ದ.ಕ. ಜಿಲ್ಲೆಯಲ್ಲಿ 14 ರೈಲ್ವೇ ಮೇಲ್ಸೇತುವೆ (ಆರ್‌ಒಬಿ)ಗಳಿಗೆ ಮಂಜೂರಾತಿ ನೀಡುತ್ತಿದ್ದು, ಅದರ ಪಟ್ಟಿಯನ್ನು ಸಂಸದ ನಳಿನ್ ಕುಮಾರ್‌ಗೆ ನೀಡುವುದಾಗಿ ಹೇಳಿದ ಅವರು, ಮಂಗಳೂರಿಗೆ ಶೀಘ್ರದಲ್ಲಿ ರಿಂಗ್ ರೋಡ್ ಸೌಲಭ್ಯ ಸಿಗಲಿದೆ, ನಂತೂರು ಫ್ಲೈಓವರ್‌ಗೂ ಅನುಮತಿ ನೀಡುವುದಾಗಿ ಗಡ್ಕರಿ ಹೇಳಿದರು.
ಸುರತ್ಕಲ್ ಟೋಲ್ ರದ್ದು ಬಗ್ಗೆ ದೆಹಲಿಯಲ್ಲಿ ಸಭೆ
ಮಂಗಳೂರು ಹೊರವಲಯದ ಸುರತ್ಕಲ್ ಟೋಲ್ ಪ್ಲಾಝಾ ರದ್ದುಗೊಳಿಸಲು ಕಾನೂನು ತೊಡಕುಗಳಿವೆ. ಈ ಸಮಸ್ಯೆ ಬಗೆಹರಿಸಲು ಶೀಘ್ರದಲ್ಲಿ ದೆಹಲಿಯಲ್ಲಿ ಸಭೆ ಕರೆಯಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್, ಸುರತ್ಕಲ್ ನಲ್ಲಿರುವ ಟೋಲ್ ಗೇಟ್ ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಟೋಲ್ ಗೇಟನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ವಿನಂತಿ ಮಾಡುತ್ತಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕೈಮುಗಿದು ಸಚಿವ ಗಡ್ಕರಿ ಅವರಲ್ಲಿ ಕೇಳಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಈ ಕಾರ್ಯಕ್ರಮದ ಸುದ್ದಿಗೋಷ್ಟಿಯಲ್ಲಿ ಟೋಲ್ ಗೇಟ್ ರದ್ದುಗೊಳಿಸಲು ಕಾನೂನು ತೊಡಕಿದೆ, ರದ್ದುಗೊಳಿಸುತ್ತೇನೆ ಎಂದು ತಾನು ಹೇಳಿಯೇ ಇಲ್ಲ ಎಂದಿದ್ದರು. ಜನಾಭಿಪ್ರಾಯ, ಒತ್ತಡಕ್ಕೆ ಮಣಿದ ಸಂಸದ ನಳಿನ್ ಕುಮಾರ್, ಇಂದು ಸಚಿವ ಗಡ್ಕರಿ ಅವರಲ್ಲಿ ಕೈಮುಗಿದು ಕೇಳಿಕೊಂಡಿದ್ದು ವಿಶೇಷವಾಗಿತ್ತು.
Mangalore MP Nalin Kumar Kateel requests Gadkari to close Surathkal Toll also 14 thousand crores sanctioned for shiradhi that re construction. A continuous protest was held against illegal toll at surathkal.
06-09-25 08:28 pm
HK News Desk
Prathap Simha, Mysuru Dasara: ದಸರಾ ಕುಸ್ತಿ ; ಬ...
06-09-25 07:26 pm
Sonia Gandhi, Dharmasthala: Who Killed the Wo...
05-09-25 11:15 pm
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 10:59 pm
Mangalore Correspondent
Mangalore, Dharmasthala, Vittal Gowda, Skull:...
06-09-25 10:15 pm
ಗೋಮಾಂಸ ಭಕ್ಷಕರಿಗೆ ರಾಜ್ಯ ಸರ್ಕಾರ ಶಾದಿ ಭಾಗ್ಯ ರೀತಿ...
06-09-25 05:56 pm
Mla Vedavyas Kamath, Mangalore: ಮಳೆಗೆ ಹದಗೆಟ್ಟ...
06-09-25 04:46 pm
Ullal News, Warrant, Video, Mangalore: ಮೊದಲ ಪ...
05-09-25 08:12 pm
06-09-25 08:32 pm
Bangalore Correspondent
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am