ಬ್ರೇಕಿಂಗ್ ನ್ಯೂಸ್
10-03-22 12:37 pm Mangalore Correspondent ಕರಾವಳಿ
ಮಂಗಳೂರು, ಮಾ.10 : ಈ ಹಿಂದೆ ಗೂಂಡಾರಾಜ್ ಆಗಿದ್ದ ಉತ್ತರಪ್ರದೇಶವನ್ನು ಯೋಗಿ ಅದಿತ್ಯನಾಥ್ ಸಾಮಾನ್ಯ ಜನರ ರಾಜ್ಯವನ್ನಾಗಿಸಿದ್ದಾರೆ. ಅದಕ್ಕಾಗಿ ಜನರು ಬಿಜೆಪಿಗೆ ಮತ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಹಿನ್ನೆಲೆಯಲ್ಲಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಗೌಡರು, ಉತ್ತರ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಶೃದ್ಧಾಕೇಂದ್ರಗಳ ಅಭಿವೃದ್ಧಿ ಕಾರ್ಯ ಚುನಾವಣೆಯ ಫಲಿತಾಂಶದಲ್ಲಿ ಬಿಂಬಿತವಾಗುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೆಲಸ ಕಾರ್ಯಗಳು, ಅದನ್ನ ಆಧರಿಸಿ ಮತದಾರರ ಭಾವನೆಗಳು ಈ ಚುನಾವಣೆಯಲ್ಲಿ ಬಿಂಬಿತವಾಗಿದೆ. ಇನ್ನುಳಿದ ನಾಲ್ಕು ರಾಜ್ಯಗಳಲ್ಲಿ ನಿರೀಕ್ಷೆಯಂತೆ ಬಿಜೆಪಿ ಪರವಾಗಿ ಫಲಿತಾಂಶ ಬಂದಿದೆ ಎಂದರು.
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಮುಂದಿನ ಕರ್ನಾಟಕ ಚುನಾವಣೆ ಮೇಲೆ ಸ್ವಾಭಾವಿಕವಾಗಿ ಪರಿಣಾಮ ಬೀರಲಿದೆ. ಈ ಫಲಿತಾಂಶದ ಬಳಿಕ ರಾಜ್ಯದ ಸಚಿವ ಸಂಪುಟದಲ್ಲಿ ಒಂದಿಷ್ಟು ಬದಲಾವಣೆ ಆಗುವ ಸಂಭವವಿದೆ. ಈ ಬಗ್ಗೆ ಕೇಂದ್ರದ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸದಾನಂದ ಗೌಡ ಸುಳಿವು ನೀಡಿದ್ದಾರೆ.
ಕಾಂಗ್ರೆಸ್ ಈ ಹಿಂದೆಯೇ ಧೂಳಿ ಪಟವಾಗಿತ್ತು. ಕಾಂಗ್ರೆಸ್ ನಾಯಕರು ಅಧಿಕಾರದಲ್ಲಿ ಇದ್ದಷ್ಟು ದಿನ ದೇಶವನ್ನು ಕೊಳ್ಳೆ ಹೊಡೆದಿದ್ದಾರೆ. ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ, ಕುಟುಂಬ ರಾಜಕಾರಣದಿಂದ ಜನರು ರೋಸಿ ಹೋಗಿದ್ದಾರೆ. ಹೀಗಾಗಿ ಜನರು ಪಾಠ ಕಲಿಸುತ್ತಿದ್ದು ಕಾಂಗ್ರೆಸ್ ದೇಶದಲ್ಲಿ ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿದೆ. ನರೇಂದ್ರ ಮೋದಿ ಆಡಳಿತ ವರ್ಚಸ್ಸಿನ ಎದುರು ಬೇರೆ ಯಾವ ಪಾರ್ಟಿಯೂ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸಿನ ಕುಟುಂಬ ರಾಜಕೀಯದಿಂದ ಅದರ ಅಧ್ಯಾಯ ಮುಗಿಯಲು ಕಾರಣವಾಗಿದೆ. ಮೀನನ್ನು ನೀರಿನಿಂದ ಎತ್ತಿದಾಗ ಯಾವ ರೀತಿ ಚಡಪಡಿಸುತ್ತದೋ, ಅದೇ ಸ್ಥಿತಿ ಕಾಂಗ್ರೆಸ್ ಪಾಲಿಗೂ ಆಗಿದೆ ಎಂದು ಮಾಜಿ ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳಿದ್ದಾರೆ.
ಗೋವಾದಲ್ಲಿ ಅತಂತ್ರ ಫಲಿತಾಂಶ ಬಂದರೆ ಏನಾದರೂ ಮಾಡಬೇಕೆಂಬ ಯೋಚನೆ ಕಾಂಗ್ರೆಸ್ ಗೆ ಇತ್ತು. ಅದಕ್ಕಾಗಿ ಡಿಕೆಶಿ ಅವರನ್ನು ಅಲ್ಲಿಗೆ ಕಳಿಸಲಾಗಿತ್ತು. ಯಾಕೆಂದರೆ ಈಗ ಅವರಿಗೆ ಎಲ್ಲಿಯೂ ಅಧಿಕಾರ ಇಲ್ಲ. ಬೇರೆಯವರ ಜೊತೆ ಸೇರಿ ಗಾಳ ಹಾಕಲು ಡಿಕೆಶಿ ಗೋವಾಗೆ ಹೋಗಿದ್ದಾರೆ. ಆದರೆ ಗಾಳ ಹಾಕುವ ಕನಸು ಯಶಸ್ವಿಯಾಗೋದಿಲ್ಲ ಎಂದರು ಡಿವಿ. ರೈತ ಮಸೂದೆಯನ್ನು ಹೋರಾಟಕ್ಕೆ ಮಣಿದು ಹಿಂದೆ ತೆಗೆದಿರೋದು ಅಲ್ಲ. ರೈತರಲ್ಲಿ ವಿಭಜನೆ ಆಗಬಾರೆಂದು ಅವರ ವಿಶ್ವಾಸ ಪಡೆದು ಮಸೂದೆ ಹಿಂಪಡೆದಿದ್ದೇವೆ. ಯುಪಿಯಲ್ಲಿ ರೈತ ಹೋರಾಟದ ಜಾಗಗಳಲ್ಲಿಯೇ ಅತೀ ಹೆಚ್ಚು ಮತಗಳು ಬಿಜೆಪಿಗೆ ಬಂದಿದೆ ಎಂದು ಡಿ.ವಿ ಸದಾನಂದ ಗೌಡ ವಿಶ್ಲೇಷಣೆ ಮಾಡಿದ್ದಾರೆ.
BJP Massive lead in Uttarpradesh, people voted Yogi because he changed the Gundaraj UP says Sadananda Gowda. The BJP has taken massive lead over Samajwadi Party as per early trends. Currently, the ruling party is leading on 200 plus seats while the SP is ahead in 75 constituencies. UP CM Yogi Adityanath is leading in Gorakhpur and Akhilesh Yadav is ahead in Karhal. Chief Minister Yogi Adityanath is fighting to retain the state for BJP while Akhileshh Yadav is looking to make a comeback, five years after he was dethroned by the saffron surge in 2017.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm