ಬ್ರೇಕಿಂಗ್ ನ್ಯೂಸ್
15-03-22 06:41 pm Udupi Correspondent ಕರಾವಳಿ
ಉಡುಪಿ, ಮಾ.15: ಹೈಕೋರ್ಟ್ ತೀರ್ಪಿನಿಂದ ನಮಗೆ ಆಘಾತವಾಗಿದೆ. ಹಿಜಾಬ್ ಹಕ್ಕಿಗಾಗಿ ನಮ್ಮ ಹೋರಾಟ ನಿಲ್ಲೋದಿಲ್ಲ. ನಾವು ನಮ್ಮ ಕೈಲಾದಷ್ಟು ಹೋರಾಟ ಮಾಡುತ್ತೇವೆ ಎಂದು ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿ ಸರಕಾರಿ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರು ಹೇಳಿದ್ದಾರೆ.
ಹೈಕೋರ್ಟ್ ತೀರ್ಪಿನ ಬಗ್ಗೆ ಸುದ್ದಿಗೋಷ್ಟಿ ನಡೆಸಿದ ವಿದ್ಯಾರ್ಥಿನಿಯರು, ನಮಗೆ ಶಿಕ್ಷಣವೂ ಮುಖ್ಯ. ನಮ್ಮ ಧರ್ಮದ ಹಿಜಾಬ್ ಕೂಡ ಅಷ್ಟೇ ಮುಖ್ಯ. ಶಿಕ್ಷಣ ಪಡೆಯುತ್ತೇವೆ, ಹಾಗೆಂದು ಹಿಜಾಬ್ ತೆಗೆಯಲ್ಲ. ನಾವು ಹಿಜಾಬ್ ಇಲ್ಲದೇ ತರಗತಿಗೆ ಹೋಗೋದಿಲ್ಲ. ಹಿಜಾಬ್ ಧರಿಸಲು ಅವಕಾಶ ಕೊಟ್ಟರೆ ಪರೀಕ್ಷೆ ಬರೆಯುತ್ತೇವೆ. ಇಲ್ಲದಿದ್ದರೆ ದೂರ ಉಳಿಯುತ್ತೇವೆ ಎಂದು ಹಿಜಾಬ್ ಧರಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ದಾರೆ.

ಹಿಜಾಬ್ ಇಲ್ಲದೇ ಕ್ಲಾಸ್ಗೆ ಹೋಗಲ್ಲ. ಸಂವಿಧಾನದ ಮೇಲೆ ನಮಗೆ ತುಂಬಾ ಭರವಸೆ ಇತ್ತು. ನಾವು ಮುಂದೆಯೂ ಹಿಜಾಬಿಗಾಗಿ ಹೋರಾಟ ಮಾಡುತ್ತೇವೆ. ಖುರಾನ್ನಲ್ಲಿ ಹಿಜಾಬ್ ಹಾಕಬೇಕು ಅಂತ ಹೇಳಿದೆ. ಅದಕ್ಕಾಗಿ ಕಷ್ಟ ಪಡುತ್ತಿದ್ದೇವೆ, ಕೈಲಾದಷ್ಟು ಫೈಟ್ ಮಾಡ್ತೇವೆ. ನಮಗೆ ಹಿಜಾಬ್ ಬೇಕು, ಜೊತೆಗೆ ಶಿಕ್ಷಣ ಕೂಡ ಬೇಕು. ಹಿಜಾಬ್ಗೆ ಅವಕಾಶ ಕೊಟ್ಟರೆ ಮಾತ್ರ ಪರೀಕ್ಷೆ ಬರೆಯುತ್ತೇವೆ ಎಂದು ಹೇಳಿದ್ದಾರೆ.
ಕೆಲವರು ರಾಜಕೀಯ ಲಾಭಕ್ಕಾಗಿ ಹಿಜಾಬ್ ವಿವಾದ ಸೃಷ್ಟಿ ಮಾಡಿದ್ದಾರೆ. ಇದರಿಂದ ಅದೆಷ್ಟೋ ವಿದ್ಯಾರ್ಥಿನಿಯರ ಶಿಕ್ಷಣ ಹಾಳಾಗುತ್ತಿದೆ. ಆವತ್ತು ಕ್ಲಾಸ್ ಒಳಗೆ ಬಿಟ್ಟಿದ್ರೆ ಇಷ್ಟು ದೊಡ್ಡದಾಗಿ ಆಗುತ್ತಿರಲಿಲ್ಲ. ನಾವು ಎಂದಿಗೂ ನಮ್ಮ ವಿದ್ಯಾಭ್ಯಾಸ ಕೊನೆಗೊಳಿಸುವುದಿಲ್ಲ. ಸುಪ್ರೀಂ ಕೋರ್ಟ್ ಹೋಗುವ ಬಗ್ಗೆ ಮುಂದೆ ನಿರ್ಧರಿಸುತ್ತೇವೆ ಎಂದು ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಅರ್ಜಿದಾರ ವಿದ್ಯಾರ್ಥಿನಿಯರು ಹೇಳಿದ್ದಾರೆ.
The Udupi Muslim girls whose petitions seeking permission to wear Hijab inside the classrooms were dismissed by the Karnataka High Court said on Tuesday they will not go to college without hijab and fight the case legally till they get “justice”.
05-09-26 04:53 pm
HK News Staffer
400 ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ ; ಪ್ರತಿ ಹ...
02-09-26 05:06 pm
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
05-09-26 11:55 am
HK News Staffer
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
06-09-26 08:09 pm
Mangalore Correspondent
Ujre Wild Elephant: ಉಜಿರೆ ಎಸ್ಡಿಎಂ ಎಂಜಿನಿಯರಿಂ...
06-09-26 01:14 pm
ಸುಬ್ರಹ್ಮಣ್ಯ ಬಳಿ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್...
06-09-26 12:47 pm
ದಕ್ಷಿಣ ಕನ್ನಡ- ಚಿಕ್ಕಮಗಳೂರು ಸಂಪರ್ಕ ಕೊಂಡಿ ಚಾರ್ಮಾ...
05-09-26 04:58 pm
ಬೆಂಗಳೂರು-ಮಂಗಳೂರು ವಂದೇ ಭಾರತ್ಗೆ ಮತ್ತೊಂದು ಟೆಸ್ಟ...
05-09-26 11:59 am
06-09-26 10:28 pm
HK News Staffer
ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ಆರೋಪ ; ಹೈಕೋರ್ಟಿಗೆ...
06-09-26 06:11 pm
ತಾನು ಐಎಎಸ್ ಅಧಿಕಾರಿ, ಪ್ರವಾಸೋದ್ಯಮ ಇಲಾಖೆಯ ಹೊಟೇಲ...
05-09-26 08:58 pm
ಶಿವಮೊಗ್ಗ ; ಕಾರಿನಲ್ಲಿ ಜಿಂಕೆ ಮಾಂಸ ಮಾರಾಟ ಯತ್ನ ;...
05-09-26 04:55 pm
ಬಡ್ಡಿ ಕಟ್ಟದಿದ್ದಕ್ಕೆ ಮಹಿಳೆಯನ್ನು ಅಪಹರಿಸಿ ಹಲ್ಲೆ...
05-09-26 03:08 pm