ಬ್ರೇಕಿಂಗ್ ನ್ಯೂಸ್
16-03-22 08:02 pm Mangalore Correspondent ಕರಾವಳಿ
ಮಂಗಳೂರು, ಮಾ.16: ಕರಾವಳಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಹೊಟೇಲ್ ಮ್ಯಾನೇಜ್ಮೆಂಟ್ ಕೋರ್ಸ್ ಓದುತ್ತಿದ್ದ ಬೆಂಗಳೂರು ಮೂಲದ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮಾ.15ರ ಮಂಗಳವಾರ ಮಧ್ಯಾಹ್ನ ವಿದ್ಯಾರ್ಥಿ ಭರತ್ (20) ಉರ್ವಾದಲ್ಲಿರುವ ಪಿಜಿ ವಸತಿ ಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ ಬರೆದಿಟ್ಟಿದ್ದು ಕರಾವಳಿ ಕಾಲೇಜಿನ ಮ್ಯಾನೇಜ್ಮೆಂಟ್ ಮತ್ತು ಅಲ್ಲಿನ ಉಪನ್ಯಾಸಕ ರಾಹುಲ್ ಎಂಬವರು ತನ್ನ ಸಾವಿಗೆ ಕಾರಣ ಎಂದು ದೂರಿದ್ದಾನೆ.
ಘಟನೆ ಬಗ್ಗೆ ವಿದ್ಯಾರ್ಥಿಯ ಹೆತ್ತವರು ಉರ್ವಾ ಠಾಣೆಗೆ ದೂರು ನೀಡಿದ್ದು ಅಸಹಜ ಪ್ರಕರಣ ದಾಖಲಾಗಿದೆ. ಭರತ್ ಎರಡನೇ ವರ್ಷದ ವ್ಯಾಸಂಗ ಮಾಡುತ್ತಿದ್ದು ಕಾಲೇಜಿನಲ್ಲಿ ರಾಹುಲ್ ಎಂಬ ಪ್ರಾಧ್ಯಾಪಕ ಬೇರೆ ವಿದ್ಯಾರ್ಥಿಗಳ ಮುಂದೆ ತನ್ನನ್ನು ಅವಹೇಳನ ಮಾಡುತ್ತಿದ್ದ ಬಗ್ಗೆ ತಾಯಿ ಬಳಿ ಹೇಳಿಕೊಂಡಿದ್ದ. ಕಾಲೇಜಿನಲ್ಲಿ ಡೊನೇಶನ್ ಮತ್ತು ಟ್ಯೂಷನ್ ಫೀಸ್ ಎಂದು ಹೇಳಿ 60 ಸಾವಿರ ಮತ್ತು 70 ಸಾವಿರ ಒಂದು ವರ್ಷದ ಅವಧಿಗೆ ಪಡೆದಿದ್ದಾರೆ. ಹೀಗಿದ್ದರೂ, ಕಾಲೇಜಿನಲ್ಲಿ ಸರಿಯಾದ ಪ್ರಾಧ್ಯಾಪಕರಿಲ್ಲ ಎಂದು ಭರತ್ ತಾಯಿ ಬಳಿ ಹೇಳಿಕೊಂಡಿದ್ದ. ಇದರಿಂದ ಬೇಸತ್ತ ತಾಯಿ ಈ ನಡುವೆ ರಾಹುಲ್ ಗೆ ಕರೆ ಮಾಡಿ, ವಿಚಾರಿಸಿದ್ದರು. ಆದರೆ ರಾಹುಲ್ ತಾಯಿ ಮಾತನ್ನೂ ಕೇಳಿರಲಿಲ್ಲ ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಭರತ್ ಪ್ರೊಜೆಕ್ಟ್ ರೆಕಾರ್ಡ್ ನೀಡುವುದಕ್ಕಾಗಿ ಕಾಲೇಜಿಗೆ ತೆರಳಿದ್ದು ಅಲ್ಲಿದ್ದ ರಾಹುಲ್ ಈತನ ಪ್ರೊಜೆಕ್ಟ್ ರೆಕಾರ್ಡ್ ತಿರಸ್ಕರಿಸಿದ್ದಾರೆ. ಅಲ್ಲದೆ, ನೀನು ಈ ಬಾರಿ ಪರೀಕ್ಷೆಗೆ ಕುಳಿತುಕೊಳ್ಳಲು ಅನರ್ಹ ಎಂದು ಬೈದು ಕಳಿಸಿದ್ದರು. ಇದರಿಂದ ಬೇಸತ್ತ ಭರತ್ ಮರಳಿ ಪಿಜಿಗೆ ಬಂದಿದ್ದು ತಾಯಿಗೆ ಫೋನ್ ಮಾಡಿದ್ದು ಸ್ವೀಕರಿಸದೇ ಇದ್ದಾಗ ವಾಟ್ಸಪ್ ಮೆಸೇಜ್ ಮಾಡಿದ್ದ.
'ಸಾರಿ ಅಮ್ಮಾ , ನಾನು ಸಾಯುವುದಕ್ಕೆ ಈ ಕಾಲೇಜು ಕಾರಣ. ಕೇವಲ ಹಣ ಪಡೆಯುವುದಕ್ಕಷ್ಟೇ ಈ ಕಾಲೇಜು ಇರೋದು. ನಾನು ನಿಮಗೆ ಮತ್ತಷ್ಟು ನೋವು ಕೊಡಲು ಇಷ್ಟಪಡಲ್ಲ. ನಾನು ನಿಮಗೆ ಕರೆ ಮಾಡಲು ಪ್ರಯತ್ನಿಸಿದೆ. ಆದರೆ ನೀವು ರಿಸೀವ್ ಮಾಡಲಿಲ್ಲ. ಪೊಲೀಸ್ ಕೇಸ್ ಆದಲ್ಲಿ ನನ್ನ ಸಾವಿಗೆ ಕಾಲೇಜು ಕಾರಣ ಅನ್ನುವುದನ್ನು ತಿಳಿಸಿ. ನನ್ನ ಮೆಸೇಜ್ ನೋಡುವಾಗ ನಾನು ಹೋಗಿರುತ್ತೇನೆ' ಎಂದು ಭರತ್ ತನ್ನ ತಾಯಿಗೆ ಇಂಗ್ಲಿಷ್ ನಲ್ಲಿ ವಾಟ್ಸಪ್ ಮೆಸೇಜ್ ಮಾಡಿದ್ದ. ಮಧ್ಯಾಹ್ನ ಎರಡು ಗಂಟೆಗೆ ಮೆಸೇಜ್ ನೋಡಿದ ತಾಯಿ ಮತ್ತು ತಂದೆ ಮಗನಿಗೆ ಕರೆ ಮಾಡಿದ್ದು ಸ್ವೀಕರಿಸಲಿಲ್ಲ.
ಬಳಿಕ ಪರಿಚಯದ ರಾಯನ್ ಎಂಬ ಉಪನ್ಯಾಸಕರ ಬಳಿ ಹೇಳಿ ಮಗನ ಬಗ್ಗೆ ಚೆಕ್ ಮಾಡಲು ಹೇಳಿದ್ದಾರೆ. ಬಳಿಕ ರಾಯನ್ ಹುಡುಕಾಟ ನಡೆಸಿದಾಗ, ಸಂಜೆ ವೇಳೆಗೆ ಉರ್ವಾ ಠಾಣೆ ಬಳಿಯ ಪಿಜಿ ಕೊಠಡಿಯಲ್ಲಿ ಭರತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡುಬಂದಿದೆ. ಬುಧವಾರ ಬೆಳಗ್ಗೆ ಮಂಗಳೂರಿಗೆ ಬಂದ ಹೆತ್ತವರಾದ ಭಾಸ್ಕರ್ ಮತ್ತು ಶೋಭಾರಾಣಿ ಉರ್ವಾ ಠಾಣೆಗೆ ದೂರು ನೀಡಿದ್ದು ಮಗನ ಸಾವಿಗೆ ಕಾರಣವಾದ ಪ್ರಾಧ್ಯಾಪಕ ರಾಹುಲ್ ಮತ್ತು ಕಾಲೇಜು ಚೇರ್ಮನ್ ಗಣೇಶ್ ರಾವ್ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
Mangalore 20-Year-old youth commits suicide because of huge college fee and donations of Karavali college of engineering. The deceased has been identified as Bharath a resident of Bangalore. A death note has been found in which he has clearly mentioned that Karavali college is responsible for my death.
01-10-25 10:06 pm
HK News Desk
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
01-10-25 09:44 pm
HK News Desk
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
01-10-25 11:00 pm
Mangalore Correspondent
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm