ಬ್ರೇಕಿಂಗ್ ನ್ಯೂಸ್
20-03-22 02:24 pm Mangaluru Correspondent ಕರಾವಳಿ
ಉಳ್ಳಾಲ, ಮಾ.20: ಕುರಾನ್, ಬೈಬಲ್ ಏನು ಹೇಳಿಕೊಡುತ್ತದೆ? ಅನ್ಯ ಧರ್ಮೀಯರನ್ನು ಕೊಲ್ಲಲು ಹೇಳಿಕೊಡುವ ಧರ್ಮ ಯಾವುದ್ರೀ..? ಬೈಬಲ್, ಕುರಾನನ್ನ ಮನೆಯಲ್ಲಿ ಇಟ್ಟುಬಿಡಿ. ಶಾಲೆಗೆ ತರಬೇಡಿ. ಗುಜರಾತಿನಂತೆ ಕರ್ನಾಟಕ ರಾಜ್ಯದ ಶಾಲೆಗಳಲ್ಲೂ ಭಗವದ್ಗೀತೆ ಕಲಿಸುವುದನ್ನು ಸ್ವಾಗತಿಸಿ ಎಂದು ಆರ್ ಎಸ್ ಎಸ್ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.
ವಿಶ್ವ ಹಿಂದು ಪರಿಷತ್ ಮಂಗಳೂರು ವಿಭಾಗದ ವತಿಯಿಂದ ಇಂದು ಶ್ರೀ ಕ್ಷೇತ್ರ ಕದ್ರಿಯಿಂದ ಕುತ್ತಾರು ಆದಿ ಕೊರಗಜ್ಜ ಕ್ಷೇತ್ರದ ವರೆಗೆ ನಡೆದ "ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ" ಪಾದಯಾತ್ರೆ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
ಶಾಲೆಗಳಲ್ಲಿ ಭಗವದ್ಗೀತೆ ಕಲಿಸಿಕೊಡುತ್ತೇನೆಂದು ಸ್ವರ್ಣವಲ್ಲಿ ಶ್ರೀಗಳು ಹೇಳಿದಾಗ ಬುದ್ಧಿಜೀವಿಗಳು ವಿರೋಧಿಸಿದ್ದರೂ ಇದೀಗ ಗುಜರಾತಿನ ಶಾಲೆಗಳಲ್ಲಿ ಭಗವದ್ಗೀತೆ ಕಲಿಕೆ ಆರಂಭವಾಗ್ತಿದೆ. ಕರ್ನಾಟಕದ ಶಾಲೆಗಳಲ್ಲೂ ಸರಕಾರ ಭಗವದ್ಗೀತೆ ಕಲಿಸಲು ಮುಂದಾಗಿರುವುದು ಒಳ್ಳೆಯ ಕಾರ್ಯ. ಅರಬ್ ರಾಷ್ಟ್ರದಲ್ಲಿ ಮೊನ್ನೆ ಮೊನ್ನೆಯಷ್ಟೆ ಮಹಿಳೆಯರಿಗೆ ಡ್ರೈವಿಂಗ್ ಲೈಸೆನ್ಸ್, ಮತದಾನದ ಹಕ್ಕು ನೀಡಲಾಯಿತು. ಭಾರತದಲ್ಲಿ ಸಂವಿಧಾನ ಸ್ಥಾಪನೆಯಾದಗಲೇ ಇಲ್ಲಿನ ಮುಸ್ಲಿಂ ಮಹಿಳೆಯರಿಗೆ ಮತದಾನ ಸೇರಿ ಎಲ್ಲಾ ಹಕ್ಕನ್ನ ಇಲ್ಲಿನ ಸರಕಾರ ನೀಡಿದೆ. ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾಗೆ ಹಿಜಾಬ್ ಹಾಕಿಸೋ ತಾಕತ್ತು ಎಸ್ ಡಿಪಿಐ ಅವರಿಗೆ ಇದೆಯೇ..? ಸುಮ್ನೆ ಉಡುಪಿ ಸರಕಾರಿ ಕಾಲೇಜಿನ ಆರು ವಿದ್ಯಾರ್ಥಿನಿಯರ ತಲೆ ತಿನ್ನೋದೇಕೆ ? ಹಿಜಾಬ್ ಹಾಕಲೇ ಬೇಕೆಂದರೆ ನಿಮ್ಮ ಮುಸ್ಲಿಂ ರಾಷ್ಟ್ರಗಳಿಗೆ ಹೋಗಿ. ಹೈಕೋರ್ಟ್ ನೀಡಿದ ತೀರ್ಪನ್ನ ಒಪ್ಪಿಕೊಂಡ್ರಾ ನೀವು. ಹಿಂದೂಗಳೇ ಬ್ಯಾರಿಗಳ ಒಟ್ಟಿಗೆ ದೋಸ್ತಿ ಮಾಡುವ ಮೊದಲು ಆಲೋಚನೆ ಮಾಡಿ. ಸುತ್ತಲೂ ಭಯೋತ್ಪಾದಕರು, ಮತಾಂತರಿಗಳು ಇರುವಾಗ ಹಿಂದು ಹೆಣ್ಮಕ್ಕಳ ತಾಯಂದಿರು ಜಾಗೃತರಾಗೋ ಕಾಲ ಬಂದೊದಗಿದೆ.
ಪ್ರತಿರೋಧ ತೋರಿಸುವುದರಲ್ಲಿ ಎರೆ ಹುಳಗಿಂತಲೂ ಕೀಳಾಗಿದೆ ಹಿಂದೂ ಸಮಾಜ. ಎರೆ ಹುಳವನ್ನ ಮುಟ್ಟಲು ಹೋದರೆ ಅದು ಪ್ರತಿರೋಧ ತೋರಿಸಿ ಹೊರಳಿ ಹೋರಾಡುವುದಾದರೆ ಹಿಂದೂ ಸಮಾಜ ಅದಕ್ಕಿಂತಲೂ ಕಡೆ ಆಯ್ತೆ. ಹಿಜಾಬ್ ವಿಚಾರ ಮುಂದಿಟ್ಟು ನ್ಯಾಯಾಲಯ, ಸಂವಿಧಾನ ಕಡೆಗಣಿಸಿ ಮೊನ್ನೆ ಮುಸಲ್ಮಾನರು ಬಂದ್ ನಡೆಸಿದರು. ಹಿಂದೂಗಳೊಂದಿಗೆ ಏನಿದ್ದರೂ ಇವರದ್ದು ಡೋಂಗಿ ದೋಸ್ತಿ. ಮುಸ್ಲಿಂ ಸಾಮ್ರಾಜ್ಯ ನಿರ್ಮಾಣವೇ ಅವರ ಪ್ರಬಲ ಕನಸು ಎಂದು ಭಟ್ ಆರೋಪಿಸಿದರು.
ಇಡೀ ದಕ್ಷಿಣ ಭಾರತದ ಮತಾಂತರ ಕೇಂದ್ರ ಕೇರಳದ ಮಲಪ್ಪುರಂನ ಪೊನ್ನಾಣಿಗೆ ಹೋಗಲು ಸಾಧ್ಯವೇ? ಇಂತಹ ಮಿನಿ ಪಾಕಿಸ್ತಾನಗಳು ಈ ದೇಶದಲ್ಲಿ ಎಷ್ಟಿರಬಹುದು? ಮುಸ್ಲಿಮರಲ್ಲಿ ಅಬ್ದುಲ್ ಕಲಾಂ, ನ್ಯಾಯಾಧೀಶರುಗಳಾದ ಅಬ್ದುಲ್ ನಝೀರ್, ಜೈಬುನ್ನೀಸರನ್ನ ಬಿಟ್ಟು ನಾಲ್ಕನೆಯ ಒಳ್ಳೆಯ ವ್ಯಕ್ತಿ ಯಾರು ಎಂದು ಹುಡುಕಾಟ ನಡೆಸೋ ಸಂಧರ್ಭ ಒದಗಿದೆ. ಮೊನ್ನೆಯ ಪ್ರಕರಣದಲ್ಲಿ ಹಿಜಾಬ್ ಗಿಂತಲೂ ಕೇಸರಿ ಶಾಲು ಹಾಕಿ ಬಂದದ್ದೇ ಹೊಟ್ಟೆ ಉರಿದದ್ದು ಎಂದರು.
ಕಾಶ್ಮೀರ್ ಫೈಲ್ಸ್ ಚಿತ್ರ ಸುಳ್ಳು ಕಥೆ, ಗುಜರಾತ್ ಫೈಲ್ಸ್ ಸಿನೆಮಾ ಮಾಡಲಿ ಎಂದ ಮಾಜಿ ಸಿ.ಎಂ ಸಿದ್ಧರಾಮಯ್ಯ ಒಂದು ಬಾರಿ ಗುಜರಾತ್ ಗೆ ಹೋಗಿ ಬರಲಿ, ಗೋಧ್ರಾ ಹತ್ಯಾಕಾಂಡದಲ್ಲಿ ರೈಲಲ್ಲಿ ಸಜೀವ ದಹನಗೊಂಡವರ ಮನೆ ಮಂದಿಯ ಭೇಟಿ ಮಾಡಿ ಬರಲಿ. ಅವರ ತಾಯಿ, ಪತ್ನಿ ಗೋಮಾತೆಯನ್ನು ಬೆಳಗ್ಗಿನಿಂದ ರಾತ್ರಿ ತನಕ ಪೂಜಿಸಿದ ಫಲದಿಂದ ಸಿದ್ರಾಮಯ್ಯ ಬದುಕುಳಿದಿದ್ದಾರೆ ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯಕಾರಿಣಿ ಸದಸ್ಯ ಕೃಷ್ಣ ಮೂರ್ತಿ, ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರು, ಜಿಲ್ಲಾ ಸೇವಾ ಪ್ರಮುಖರಾದ ಪ್ರವೀಣ್ ಕುತ್ತಾರು, ಪಂಜಂದಾಯ, ಬಂಟ, ವೈದ್ಯನಾಥ ದೈವಸ್ಥಾನ, ಕೊರಗಜ್ಜ ಆದಿ ಕ್ಷೇತ್ರದ ಮೊಕ್ತೇಸರ ರವೀಂದ್ರನಾಥ ಪೂಂಜ, ಸ್ಥಳೀಯ ಗುತ್ತಿನ ಮನೆತನದ ವಿನೋದ್ ಶೆಟ್ಟಿ ಬೊಳ್ಳೆಗುತ್ತು, ರತ್ನಾಕರ ಕಾವ, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ವಿ.ಹಿಂ.ಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್ ಸ್ವಾಗತಿಸಿ, ಪ್ರಸ್ತಾವನೆಗೈದರು. ಬಜರಂಗದಳ ಪ್ರಮುಖರಾದ ಚೇತನ್ ಅಸೈಗೋಳಿ ವಂದಿಸಿ ರವಿ ಅಸೈಗೋಳಿ ನಿರೂಪಿದರು.
Mangalore Bhagavad Gita to be Part Of School Syllabus is a good sign says Dr kalladka prabhakar bhat during the event held at Kuttar in the banner of koragajja Shetrake namma nadigey. A day after Gujarat’s BJP government announced plans to introduce the Bhagavad Gita in schools, the party’s government in Karnataka has hinted at similar plans, with the education minister saying the matter will be discussed with the chief minister and textbook committee members.
08-09-25 08:07 pm
HK News Desk
ವೀರಶೈವ ಲಿಂಗಾಯತರು ಹಿಂದು ಬದಲು ಇತರರು ಎಂದು ನಮೂದಿಸ...
08-09-25 06:48 pm
ಮಸೀದಿ ಎದುರಲ್ಲಿ ಗಣೇಶ ವಿಸರ್ಜನೆ ವೇಳೆ ಕಲ್ಲು ತೂರಾಟ...
08-09-25 05:21 pm
ತುಳು ರಾಜ್ಯ ಭಾಷೆ ಘೋಷಣೆ ಬಗ್ಗೆ ಸಂಪುಟದಲ್ಲಿ ಚರ್ಚೆ...
08-09-25 02:41 pm
Prajwal Revanna: ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರ...
07-09-25 07:43 pm
08-09-25 11:06 pm
HK News Desk
ನೇಪಾಳದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ; ದೇಶಾದ್ಯಂತ...
08-09-25 10:59 pm
ಏಳು ವರ್ಷ ಶಿಕ್ಷೆ ಪೂರ್ತಿಗೊಳಿಸಿದ ಬಳಿಕವೂ ಹೆಚ್ಚುವರ...
08-09-25 06:07 pm
ಮಲ್ಲಿಗೆ ಮುಡಿದಿದ್ದ ನಟಿ ನವ್ಯಾ ನಾಯರ್ಗೆ ಒಂದು ಲಕ್...
08-09-25 02:02 pm
ಸಾವಿರಾರು ಕೋಟಿ ವಂಚಿಸಿದ ವಿಜಯ್ ಮಲ್ಯ, ನೀರವ್ ಮೋದಿ...
07-09-25 08:33 pm
08-09-25 12:08 pm
Udupi Correspondent
Mangalore, Bantwal Mosque Speaker: ಬಂಟ್ವಾಳದಲ್...
07-09-25 11:24 pm
ಬಂಗ್ಲೆಗುಡ್ಡೆ ಕಾಡಿಗೆ ಮತ್ತೆ ಭದ್ರತೆ ; ಸ್ಥಳ ಮಹಜರು...
07-09-25 10:59 pm
ಅಪ್ರಾಪ್ತ ಬಾಲಕನ ತ್ರಿಬಲ್ ರೈಡ್ ; ಸ್ಕೂಟರ್ ಕೊಟ್ಟ ಹ...
07-09-25 10:04 pm
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಗೆಹರಿಯದ ಕೆಂಪು ಕಲ್ಲು...
07-09-25 02:25 pm
08-09-25 10:34 pm
Mangalore Correspondent
ಮಂಗಳೂರು ಏರ್ಪೋರ್ಟ್ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆ...
07-09-25 03:34 pm
Mangalore SAF Police Constable, Arrest: ವಕೀಲ...
06-09-25 08:32 pm
60 Crore Fraud, Actress Shilpa Shetty, Raj Ku...
06-09-25 07:45 pm
ಲಷ್ಕರ್ ಉಗ್ರರ ಹೆಸರಲ್ಲಿ ಮುಂಬೈ ಸ್ಫೋಟದ ಬೆದರಿಕೆ ಸಂ...
06-09-25 05:26 pm