ಬ್ರೇಕಿಂಗ್ ನ್ಯೂಸ್
23-03-22 09:35 pm Mangalore Correspondent ಕರಾವಳಿ
ಮಂಗಳೂರು, ಮಾ.23: ಹಿಂದುಯೇತರ ವ್ಯಕ್ತಿಗಳಿಗೆ ದೇವಸ್ಥಾನ ಪರಿಸರದಲ್ಲಿ ಯಾವುದೇ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ನೀಡಬಾರದು. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಯಿಂದಲೇ ಸೂಕ್ತ ಆದೇಶ ಹೊರಡಿಸಬೇಕು ಎಂದು ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಆಗ್ರಹಿಸಿದ್ದಾರೆ.
ಈ ಬಗ್ಗೆ ವಿಹಿಂಪ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಶರಣ್ ಪಂಪ್ವೆಲ್, ಕರ್ನಾಟಕ ಧರ್ಮಾದಾಯ ದತ್ತಿ ಸಂಸ್ಥೆಗಳ ವಿಧೇಯಕದ ಪ್ರಕಾರ, ದೇವಸ್ಥಾನದ ಆವರಣ, ಭೂಮಿ, ಕಟ್ಟಡಗಳಲ್ಲಿ ಹಿಂದುಯೇತರ ವ್ಯಕ್ತಿಗಳಿಗೆ ವ್ಯಾಪಾರ, ವಹಿವಾಟು ನಡೆಸಲು ಅವಕಾಶ ಇಲ್ಲ. ಇದೇ ನಿಯಮವನ್ನು ಎಲ್ಲ ದೇಗುಲದ ವ್ಯವಸ್ಥಾಪನಾ ಮಂಡಳಿಗಳು ಪಾಲನೆ ಮಾಡಬೇಕು. ಈ ಬಗ್ಗೆ ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ನೀಡಲಾಗಿದ್ದು, ಸೂಕ್ತ ಆದೇಶವನ್ನು ಹೊರಡಿಸಬೇಕು ಎಂದು ಒತ್ತಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ.

ಕರಾವಳಿಯ ಕೆಲವು ದೇವಸ್ಥಾನಗಳಲ್ಲಿ ಉತ್ಸವ ಸಂದರ್ಭದಲ್ಲಿ ಈಗಾಗಲೇ ಹಿಂದುಯೇತರ ವ್ಯಕ್ತಿಗಳಿಗೆ ವ್ಯಾಪಾರ ನಿರ್ಬಂಧಿಸಿ ಆದೇಶ ಮಾಡಲಾಗಿದೆ. ಇದನ್ನು ಸ್ವಾಗತ ಮಾಡುತ್ತೇವೆ. ಯಾವುದೇ ವ್ಯಕ್ತಿಗಳು ನಿರ್ಬಂಧ ಉಲ್ಲಂಘಿಸಿ, ವ್ಯಾಪಾರ ನಡೆಸಲು ಮುಂದಾದಲ್ಲಿ ಸೂಕ್ತ ತಿರುಗೇಟು ನೀಡಲಿದ್ದೇವೆ ಎಂದು ಶರಣ್ ಪಂಪ್ವೆಲ್ ಹೇಳಿದರು. ಕಳೆದ ಹಲವು ವರ್ಷಗಳಿಂದ ಹಿಂದುಗಳ ಮನೆಗಳಿಂದ ದನವನ್ನು ಕದ್ದೊಯ್ದು ಕಡಿದು ಮಾಂಸ ಮಾಡುವುದು, ಹೆಣ್ಮಕ್ಕಳನ್ನು ಪ್ರೀತಿಯ ನೆಪದಲ್ಲಿ ಕರೆದೊಯ್ದು ಲವ್ ಜಿಹಾದ್ ನಡೆಸುವುದು, ಮತಾಂತರ ನಡೆಸುವುದು ಇತ್ಯಾದಿ ನಡೀತಾ ಇದೆ. ಹಾಗಿದ್ದರೂ, ನಾವು ತಿರುಗಿ ಬೀಳುವ ಅಥವಾ ತಿರುಗೇಟು ನೀಡುವ ಕಾರ್ಯ ಮಾಡಿಲ್ಲ. ಆದರೆ ಮೊನ್ನೆ ಹಿಜಾಬ್ ಬಗ್ಗೆ ಕೋರ್ಟ್ ತೀರ್ಪು ನೀಡಿದ್ದನ್ನು ವಿರೋಧಿಸಿ, ಇವರು ತಮ್ಮ ವ್ಯಾಪಾರ, ವಹಿವಾಟು ಬಂದ ಮಾಡಿದ್ದಾರೆ. ಅಗತ್ಯ ವಹಿವಾಟು ಎನ್ನಲಾಗುವ ಮೆಡಿಕಲ್, ಹಾಲಿನ ಬೂತ್ ಗಳನ್ನೂ ಬಂದ್ ಮಾಡಿದ್ದರು. ಇದರಿಂದ ಭಾರತದ ಕಾನೂನನ್ನು ಗೌರವಿಸುವುದಿಲ್ಲ ಎನ್ನುವ ನಿರ್ಧಾರಕ್ಕೆ ಇವರು ಬಂದಿದ್ದಾರೆ.
ಅಂಥ ದಾರ್ಷ್ಟ್ಯ ಇವರಿಗಿದ್ದರೆ, ಇವರು ನಮ್ಮ ದೇವಸ್ಥಾನಗಳ ಜಾತ್ರೆಗಳಲ್ಲಿ ವ್ಯಾಪಾರ ನಡೆಸಿ, ಲಕ್ಷಾಂತರ ವಹಿವಾಟು ನಡೆಸುವುದು ಯಾಕೆ. ನಮ್ಮ ಧಾರ್ಮಿಕ ಕೇಂದ್ರಗಳಲ್ಲಿ ಲಕ್ಷಾಂತರ ದುಡಿದು ಇವರು ಲಾಭ ಮಾಡಿಕೊಳ್ಳುವುದಕ್ಕೆ ನಾವು ಅವಕಾಶ ನೀಡುವುದಿಲ್ಲ. ಮುಸ್ಲಿಂ ಸಂಘಟನೆಗಳ ನಾಯಕರು, ಮೌಲ್ವಿಗಳು ಹೇಳುವುದನ್ನು ಬಡ ವ್ಯಾಪಾರಸ್ಥರು ಕೇಳಿಕೊಂಡು ತಮ್ಮದೇ ಕಾಲಬುಡಕ್ಕೆ ಕಲ್ಲು ಹಾಕ್ಕೊಂಡಿದ್ದಾರೆ. ಇವರು ತಮ್ಮ ನಡತೆ ಸರಿ ಮಾಡಿಕೊಳ್ಳದಿದ್ದರೆ ವ್ಯಾಪಾರಕ್ಕೂ ಅವಕಾಶ ನೀಡಲ್ಲ ಎಂದು ಶರಣ್ ಪಂಪ್ವೆಲ್ ಹೇಳಿದ್ದಾರೆ. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್, ಸಂಯೋಜಕ ಭುಜಂಗ ಕುಲಾಲ್, ಪುನೀತ್ ಅತ್ತಾವರ ಮತ್ತಿತರರು ಇದ್ದರು.
The non-Hindus should not be allowed to do business during temple feast," VHP regional secretary Sharan Pumpwell said supporting the ban on people of other religions setting up stalls in Hindu temple festivals. Addressing the media here on Wednesday March 23, Sharan Pumpwell urged the government to implement orders as per the Karnataka Hindu Religious Institutions and Charitable Endowments Rules 2002, 31 (12) which says no property including land, building or sites situated near the institution shall be leased out to non-Hindus.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm