ಬ್ರೇಕಿಂಗ್ ನ್ಯೂಸ್
23-03-22 09:55 pm Mangalore Correspondent ಕರಾವಳಿ
ಮಂಗಳೂರು, ಮಾ.23: ಶಕ್ತಿನಗರದ ಶಕ್ತಿ ವಸತಿ ಶಾಲೆಯ ಆವರಣದಲ್ಲಿ ‘’ಶಕ್ತಿ ಕ್ಯಾನ್ ಕ್ರಿಯೇಟ್’’ ಹೆಸರಲ್ಲಿ ಒಂದು ತಿಂಗಳ ಕಾಲ ವಿಶಿಷ್ಟ ಬೇಸಿಗೆ ಶಿಬಿರ ಹಮ್ಮಿಕೊಂಡಿದ್ದು, ಈಜು ತರಬೇತಿ, ಬೇಸಿಗೆ ಶಿಬಿರ ಹಾಗೂ ಕ್ರಿಕೆಟ್ ತರಬೇತಿ ಪ್ರತ್ಯೇಕ ಇರುತ್ತದೆ. ಎಪ್ರಿಲ್ 1ರಿಂದ 30ರ ವರೆಗೆ ವಿವಿಧ ಬ್ಯಾಚ್ ಗಳಲ್ಲಿ ಶಿಬಿರಗಳು ನಡೆಯಲಿದ್ದು, 1ರಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಶಕ್ತಿ ಎಜುಕೇಶನ್ ಟ್ರಸ್ಟ್ ಪ್ರಧಾನ ಸಲಹೆಗಾರ ರಮೇಶ್ ಕೆ. ತಿಳಿಸಿದ್ದಾರೆ.
ಶಕ್ತಿ ವಸತಿ ಶಾಲೆಯ ಈಜುಕೊಳದಲ್ಲಿ ಎಪ್ರಿಲ್ 1ರಿಂದ 21ರ ತನಕ ಈಜು ತರಬೇತಿ ಶಿಬಿರ ನಡೆಯಲಿದ್ದು, ಬೆಳಗ್ಗೆ ಮತ್ತು ಸಂಜೆ ಅವಧಿಗೆ ಪ್ರತ್ಯೇಕ ಬ್ಯಾಚ್ ಇರುತ್ತದೆ. ಮೂರು ವರ್ಷ ಮೇಲ್ಪಟ್ಟ ಮಕ್ಕಳು, ಬಾಲಕ, ಬಾಲಕಿಯರಿಂದ ತೊಡಗಿ ದೊಡ್ಡವರಿಗೂ ಪಾಲ್ಗೊಳ್ಳಲು ಅವಕಾಶ ಇರುತ್ತದೆ. ಶಿಬಿರದ ಶುಲ್ಕ 2800 ಆಗಿರುತ್ತದೆ. ಶಿಬಿರವನ್ನು ಮಂಗಳಾ ಈಜು ತರಬೇತುದಾರರು ನಡೆಸಿಕೊಡಲಿದ್ದಾರೆ. ಶಿಬಿರದ ಸಂಯೋಜಕರಾಗಿ ಶಕ್ತಿ ಶಾಲೆಯ ಈಜು ತರಬೇತುದಾರ ರಾಜೇಶ್ ಖಾರ್ವಿ ಇರಲಿದ್ದಾರೆ.
ಎಪ್ರಿಲ್ 10ರಿಂದ 23ರ ತನಕ ಮಂಗಳೂರಿನ ಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳ ಸಂಯೋಜನೆಯಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಎಲ್ಕೆಜಿಯಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ಶಿಬಿರದ ಶುಲ್ಕ ಮೂರು ಸಾವಿರ ರೂ. ಆಗಿದ್ದು, ಬೆಳಗ್ಗೆ 9ರಿಂದ ಸಂಜೆ 4 ಗಂಟೆಯ ವರೆಗೆ ಶಿಬಿರ ನಡೆಯುತ್ತದೆ. ಊಟ, ತಿಂಡಿ, ವಾಹನ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗಿದೆ. ಶಿಬಿರದಲ್ಲಿ ಯೋಗ, ಚಿತ್ರಕಲೆ, ಕಲಕುಶಲ ಕಲೆ, ವ್ಯಂಗ್ಯಚಿತ್ರ, ಮುಖವಾಡ ರಚನೆ, ಫೋಮ್ ಆರ್ಟ್, ಕಾವಿ ಕಲೆ, ಗ್ರೀಟಿಂಗ್ ಕಾರ್ಡ್, ಗಾಳಿಪಟ ರಚನೆ, ರಂಗೋಲಿ, ವೇದಗಣಿತ, ಮಾನವ ಸಂಪನ್ಮೂಲ ತರಬೇತಿ, ನಾಯಕತ್ವ ತರಬೇತಿ, ಹಾಡು, ನಾಟಕ ಹೀಗೆ ವಿವಿಧ ಪ್ರಕಾರಗಳನ್ನು ಕಲಿಸಲಾಗುತ್ತದೆ.
ಶಕ್ತಿ ವಸತಿ ಶಾಲೆಯ ಕ್ರೀಡಾಂಗಣದಲ್ಲಿ ಎಪ್ರಿಲ್ 1ರಿಂದ 30ರ ವರೆಗೆ ಪ್ರತಿದಿನ ಸಂಜೆ ನಾಲ್ಕು ಗಂಟೆಯಿಂದ 6 ಗಂಟೆಯ ವರೆಗೆ ಕ್ರಿಕೆಟ್ ತರಬೇತಿ ನಡೆಯಲಿದೆ. ಕ್ರಿಕೆಟ್ ತರಬೇತುದಾರರಾದ ಸಾಮ್ಯುವೆಲ್ ಜಯರಾಜ್ ಮತ್ತು ರಾಜೇಶ್ ಶೆಟ್ಟಿ ಮಾರ್ಗದರ್ಶನ ನೀಡಲಿದ್ದಾರೆ. ಶಿಬಿರದಲ್ಲಿ ಆರು ವರ್ಷ ವಯಸ್ಸಿನ ಮೇಲ್ಪಟ್ಟ ವಿದ್ಯಾರ್ಥಿಗಳು ಭಾಗವಹಿಸಬಹುದು. ಶಿಬಿರದ ಶುಲ್ಕ 2500 ರೂ. ಆಗಿರುತ್ತದೆ. ಶಿಬಿರದ ನೋಂದಣಿಗೆ ಆನ್ಲೈನ್ www.shakthi.edu.in ಅಥವಾ 9980437225(ಈಜು), 9980437223(ಬೇಸಗೆ ಶಿಬಿರ), 8867408483(ಕ್ರಿಕೆಟ್) ಸಂಪರ್ಕಿಸಬಹುದು. ನೋಂದಣಿಗೆ ಮಾರ್ಚ್ 30 ಕೊನೆಯ ದಿನವಾಗಿರುತ್ತದೆ. ಸುದ್ದಿಗೋಷ್ಠಿಯಲ್ಲಿ ಶಕ್ತಿ ಪಪೂ ಕಾಲೇಜು ಪ್ರಾಂಶುಪಾಲ ಪೃಥ್ವಿರಾಜ್, ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ ಇದ್ದರು.
Mangalore Shakthi Residential School to organise Shakthi Can create summer camp from April 1st to 30th said Ramesh K who is the the advicer of Shakthi Education trust during a press meet held at press club in Mangalore.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 02:30 pm
Mangalore Correspondent
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm
Kavoor police constable arrest, Mangalore: ದೂ...
16-07-25 11:42 am