ಬ್ರೇಕಿಂಗ್ ನ್ಯೂಸ್
28-03-22 05:52 pm Mangalore Correspondent ಕರಾವಳಿ
ಉಳ್ಳಾಲ, ಮಾ.28 : ಉಚ್ಚಿಲ ಬಟ್ಟಂಪಾಡಿ ಸಮುದ್ರ ತೀರದಲ್ಲಿ ಪ್ರವಾಸೋದ್ಯಮದ ಸೋಗಲ್ಲಿ ಖಾಸಗಿ ವ್ಯಕ್ತಿಗಳು ಹಗಲು ದರೋಡೆ ನಡೆಸುತ್ತಿದ್ದು ಫ್ರೀ ವೆಡ್ಡಿಂಗ್ ಶೂಟ್ ಗೆ ಬಂದಿದ್ದ ಜೋಡಿಯಿಂದ ದಂಡದ ರೂಪದಲ್ಲಿ 5 ಸಾವಿರ ರೂ. ಲೂಟಿ ಹೊಡೆದಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದ್ದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಜಾಣ ಮೌನಕ್ಕೆ ಜಾರಿದೆ.
ಬಟ್ಟಂಪಾಡಿಯಲ್ಲಿ ಹೊಳೆ ಸೇರುವ ಬೀಚ್ ಪರಿಸರವನ್ನ ಪ್ರವಾಸೋದ್ಯಮ ಇಲಾಖೆ ಮುಂಬೈ ಮೂಲದ ಖಾಸಗಿ ಕಂಪನಿಗೆ ನಿರ್ವಹಣೆಗಾಗಿ ಲೀಸ್ ನೀಡಿದೆ. ಬೀಚ್ ನಿರ್ವಹಣೆ ನೆಪದಲ್ಲಿ ತುಂಬೆಯ ಪ್ರಕಾಶ್ ಶೆಟ್ಟಿ ಎಂಬ ಪ್ರಭಾವಿ ವ್ಯಕ್ತಿ ಸಬ್ ಕಾಂಟ್ರಾಕ್ಟ್ ಪಡೆದು ಇಲ್ಲಿ ತಾನು ಆಡಿದ್ದೇ ಆಟ ಎನ್ನುವಂತೆ ವರ್ತಿಸುತ್ತಿದ್ದಾರೆ. ವಾರದ ಹಿಂದೆ ಬಟ್ಟಂಪಾಡಿ ಬೀಚ್ ನಲ್ಲಿರುವ ಹೊಳೆಯಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಗೆ ಬಂದಿದ್ದ ಜೋಡಿಯಿಂದ ಖಾಸಗಿ ವ್ಯಕ್ತಿಗಳು ಬೋಟಿಂಗ್ ನೆಪದಲ್ಲಿ ಯಾವುದೇ ರಸೀದಿ ನೀಡದೆ ಗೂಗಲ್ ಪೇ ಮುಖಾಂತರ 5000 ರೂಪಾಯಿಗಳನ್ನ ವಸೂಲಿ ಮಾಡಿದ್ದಾರೆ.
ಬಟ್ಟಂಪಾಡಿ ಹೊಳೆಯಲ್ಲಿ ಪ್ರವಾಸೋದ್ಯಮ ನೆಪದಲ್ಲಿ ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಬೋಟಿಂಗ್ ದಂಧೆ ನಡೆಸುತ್ತಿದ್ದು ಇಲ್ಲಿನ ವಹಿವಾಟು ನೋಡಿಕೊಳ್ಳುತ್ತಿರುವ ಇಮ್ತಿಯಾಝ್ ಎಂಬಾತ ಪ್ರೀ ವೆಡ್ಡಿಂಗ್ ಶೂಟ್ ಬಂದಿದ್ದ ಜೋಡಿಯಿಂದ 5000 ರೂ. ವಸೂಲಿ ಮಾಡಿದ್ದಾರೆ ಎಂದು ದೂರು ಕೇಳಿಬಂದಿದೆ. ಈ ಬಗ್ಗೆ ನಗರದ ವೆಲೆನ್ಸಿಯಾ ನಿವಾಸಿ ಯುವತಿ ಉಚ್ಚಿಲದ ಮೀನುಗಾರ ಮುಖಂಡರಲ್ಲಿ ಅಲವತ್ತು ತೋಡಿಕೊಂಡಿದ್ದಾರೆ.
ಯುವತಿ ಇತ್ತೀಚೆಗೆ ತನ್ನ ಭಾವೀ ಪತಿ, ಸಂಬಂಧಿಗಳು, ಕ್ಯಾಮೆರಾಮೆನ್ ಜೊತೆ ಬಟ್ಟಂಪಾಡಿ ಹೊಳೆಯಲ್ಲಿ ಬೋಟಿಂಗ್ ನಡೆಸಿ ಪ್ರೀ ವೆಡ್ಡಿಂಗ್ ಶೂಟ್ ನಡೆಸುತ್ತಿದ್ದಾಗ ಅಲ್ಲಿದ್ದ ಇಮ್ತಿಯಾಝ್ ಎಂಬಾತ ವಿಚಾರಣೆ ನಡೆಸಿದ್ದಾನೆ. ಇದು ಪ್ರವಾಸೋದ್ಯಮ ಇಲಾಖೆಗೆ ಸೇರಿದ ಜಾಗ, ಇಲ್ಲಿ ಪ್ರವೇಶ ಮಾಡಬೇಕಿದ್ದಲ್ಲಿ ಹಣ ತೆರಬೇಕೆಂದು ಹೇಳಿ 100 ರೂಪಾಯಿ ಬೆಲೆಯ ಆರು ಟಿಕೆಟ್ ಗಳನ್ನ ನೀಡಿದ್ದ. ಆಬಳಿಕ ಶೂಟಿಂಗ್ ಮುಗಿದ ಬಳಿಕ, ಇಲ್ಲಿ ಬೋಟಿಂಗ್ ನಡೆಸಿದ್ದು ಅಪರಾಧ. ಅಧಿಕಾರಿಗಳಿಗೆ ಹೇಳಿ ದಂಡ ಹಾಕಿಸುತ್ತೇನೆಂದು ಬೆದರಿಸಿ ಮದುಮಗನಿಂದ ಗೂಗಲ್ ಪೇ ಮುಖಾಂತರ 5000 ರೂ.ಗಳನ್ನ ಪೀಕಿಸಿ ವಂಚಿಸಿದ್ದಾನೆ.
ಸ್ಥಳೀಯ ಮೀನುಗಾರ ಮುಖಂಡ ಸುಖೇಶ್ ಉಚ್ಚಿಲ್ ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ. ಬಟ್ಟಂಪಾಡಿ ಬೀಚ್ ನಲ್ಲಿರುವ ಸ್ಥಳೀಯ ಮಹಿಳೆಯೊಬ್ಬರಿಗೆ ಸೇರಿದ ಖಾಸಗಿ ಜಮೀನನ್ನು ಅತಿಕ್ರಮಿಸಿ ಅಲ್ಲಿನ ಹೊಳೆಯಲ್ಲಿ ತುಂಬೆ ಪ್ರಕಾಶ್ ಶೆಟ್ಟಿಯ ಗೂಂಡಾಗಳು ಅಕ್ರಮ, ಅಸುರಕ್ಷಿತ ಬೋಟಿಂಗ್ ನಡೆಸುತ್ತಿದ್ದು ಇದಕ್ಕೆ ಸ್ಥಳೀಯ ಮೀನುಗಾರರು ವಿರೋಧ ವ್ಯಕ್ತ ಪಡಿಸುತ್ತಾ ಬಂದಿದ್ದಾರೆ. ಇತ್ತೀಚೆಗೆ ಹೊಳೆಯ ನಡುವೆ ಬೆಳೆದಿದ್ದ ಕಾಂಡ್ಲಾವನವನ್ನ ಕಡಿದು ಹಾಕಿದ್ದು ಆರೋಪಿ ಪ್ರಕಾಶ್ ಶೆಟ್ಟಿ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣವನ್ನೂ ದಾಖಲಿಸಿದ್ದರು. ಆದರೆ ಮಂಗಳೂರಿನ ಜನಪ್ರತಿನಿಧಿಗಳ ಕೃಪೆಯಿಂದಾಗಿ ಪ್ರಕಾಶ್ ಶೆಟ್ಟಿ ವಿರುದ್ಧ ಯಾವುದೇ ಕ್ರಮ ಆಗಿಲ್ಲ ಎನ್ನುತ್ತಾರೆ ಸ್ಥಳೀಯರು. ಸ್ಥಳೀಯ ಮೀನುಗಾರರ ಒತ್ತಾಯಕ್ಕೆ ಮಣಿದು ಬಟ್ಟಂಪಾಡಿ ಬೀಚ್ ವ್ಯಾಪ್ತಿಯಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಅರಣ್ಯ ಇಲಾಖೆ ಸೂಚನಾ ಫಲಕ ಅಳವಡಿಸಿದೆ.
Ullal Money laundering in the name of tourism, unknown persons collect 5000 from couple for pre wedding shoot at Batapady Beach in uchila, Mangalore.
01-10-25 10:06 pm
HK News Desk
Dharmasthala Case: ಧರ್ಮಸ್ಥಳ ಪ್ರಕರಣ ; ಆದಷ್ಟು ಬ...
30-09-25 07:31 pm
Hassan Blast: ಹಾಸನದಲ್ಲಿ ಅನುಮಾನಾಸ್ಪದ ಸ್ಫೋಟ ; ನ...
30-09-25 04:00 pm
Mahesh Shetty: ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆ...
30-09-25 03:58 pm
ಬಿಎಂಟಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಪ್ರಬ...
30-09-25 01:08 pm
01-10-25 09:44 pm
HK News Desk
Cough Syrup Side Effects Suspected, Kidney Fa...
01-10-25 05:32 pm
ಮುಂಬೈ ಉಗ್ರ ದಾಳಿ ; 17 ವರ್ಷಗಳ ಬಳಿಕ ಪಿ. ಚಿದಂಬರಂ...
01-10-25 04:10 pm
ಫಸ್ಟ್ ನೈಟ್ ಅರ್ಜೆಂಟ್ ಮಾಡಂಗಿಲ್ಲ..! ಮದುಮಗಳ ರಾಗಕ್...
30-09-25 04:08 pm
ಪಾಕಿಸ್ತಾನದ ಕ್ವೆಟ್ಟಾದಲ್ಲಿ ಭಾರೀ ಸ್ಫೋಟ ; ಕಾರಿನಲ್...
30-09-25 04:03 pm
01-10-25 11:00 pm
Mangalore Correspondent
Jayanth, Chinnayya, Dharmasthala Case: ಚಿನ್ನಯ...
01-10-25 04:45 pm
ಮುಳಿಹಿತ್ಲು ಫ್ರೆಂಡ್ಸ್ ಸರ್ಕಲ್ ತಂಡದ ಮುಡಿಗೇರಿದ ಕು...
01-10-25 03:35 pm
ಮಂಗಳೂರು ಪೂರ್ತಿ ಝಗಮಗ ; ಕೋಟಿ ಕೋಟಿ ಮಿನಿಚರ್ ಅಳವಡಿ...
30-09-25 10:57 pm
Ullal Municipal Commissioner: ಉಳ್ಳಾಲ ನಗರಸಭೆಯಲ...
30-09-25 06:48 pm
01-10-25 02:39 pm
Mangalore Correspondent
Ullal Gold Robbery, Mangalore, CCB police: ಜು...
29-09-25 01:24 pm
ಸಹಾಯ ಕೇಳಿ ಬಂದ ಯುವತಿಯನ್ನು ಮದುವೆಯಾಗುತ್ತೇನೆಂದು ನ...
28-09-25 11:08 pm
ವಾಟ್ಸಪ್ ಮೆಸೇಜ್ ನಂಬಿ ಷೇರು ಮಾರುಕಟ್ಟೆ ಹೂಡಿಕೆ ; ನ...
28-09-25 05:04 pm
ಉಡುಪಿ ಬಸ್ ಚಾಲಕ ಸೈಫುದ್ದೀನ್ ಸ್ನೇಹಿತರಿಂದಲೇ ಕೊಲೆ...
28-09-25 04:57 pm