ಬ್ರೇಕಿಂಗ್ ನ್ಯೂಸ್
28-03-22 10:19 pm Mangalore Correspondent ಕರಾವಳಿ
ಮಂಗಳೂರು, ಮಾ.28: ನಗರದಲ್ಲಿ ಕಾಶ್ಮೀರದ ಪಂಡಿತರ ಹತ್ಯಾಕಾಂಡ ಕುರಿತ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ನೋಡಿದ ಸಂತರು ದಿಗ್ಭ್ರಮೆಗೊಂಡಿದ್ದಾರೆ. ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ಗುರುಪುರ ಮಠದ ರಾಜಶೇಖರಾನಂದ ಸ್ವಾಮೀಜಿ, ಚಿತ್ರವನ್ನು ನೋಡಿದ ನನಗೆ ರಕ್ತ ಕುದಿಯುತ್ತಿದೆ. ಹಿಂದಿನ ಸರಕಾರದ ದೌರ್ಬಲ್ಯ, ನಿರ್ಲಕ್ಷ್ಯದಿಂದಾಗಿ ಇಷ್ಟೆಲ್ಲಾ ನಡೆದಿದೆ. ಭಯೋತ್ಪಾದಕರ ಕ್ರೌರ್ಯ ಇಲ್ಲಿ ಅನಾವರಣ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಯೋತ್ಪಾದಕರ ಕರಾಳ ಕ್ರೌರ್ಯವನ್ನು ನೋಡಿ, ಅಲ್ಲಿನ ದೃಶ್ಯಗಳನ್ನು ನೋಡಿ ಸಂತನಾದ ನನಗೇ ಕಣ್ಣೀರು, ಆಕ್ರೋಶ ಬರಬೇಕಾದರೆ ಜನಸಾಮಾನ್ಯರಿಗೆ ಏನಾಗಬಹುದು.. ಕಾಶ್ಮೀರದಲ್ಲಿ ಹಿಂದುಗಳ ಮೇಲೆ ನಡೆದ ಕ್ರೌರ್ಯವನ್ನು ಊಹಿಸಲು ಸಾಧ್ಯವಿಲ್ಲ. ಇದು ಇಲ್ಲಿಗೇ ಕೊನೆಗೊಳ್ಳಬೇಕು. ಮುಂದೆ ಯಾವತ್ತೂ ಕೇರಳ ಫೈಲ್ಸ್, ಕೊಡಗು ಫೈಲ್ಸ್ ನಂತಹ ಸಿನಿಮಾಗಳು ಮತ್ತೆ ಬರುವಂತೆ ಆಗಬಾರದು. ಇದಕ್ಕಾಗಿ ಹಿಂದುಗಳು ಎಚ್ಚತ್ತುಕೊಳ್ಳಬೇಕು. ಹಿಂದುಗಳು ಅಲ್ಪಸಂಖ್ಯಾತರಾದರೆ ಪರಿಸ್ಥಿತಿ ಹೇಗಿರಬಹುದು ಎಂಬುದನ್ನು ಈ ಸಿನಿಮಾ ತೋರಿಸುತ್ತದೆ ಎಂದು ವಜ್ರದೇಹಿ ಸ್ವಾಮೀಜಿ ಹೇಳಿದರು.
ಚಿಲಿಂಬಿ ಓಂ ಶಕ್ತಿ ಮಠದ ವಿದ್ಯಾನಂದ ಸ್ವಾಮೀಜಿ ಮಾತನಾಡಿ, ನಿದ್ದೆ ಮಾಡುತ್ತಿರುವ ಹಿಂದುಗಳು ಇನ್ನಾದರೂ ಎಚ್ಚತ್ತುಕೊಳ್ಳಬೇಕು. ಹಿಂದು ಸಂಸ್ಕೃತಿ ಬಲಹೀನವಾದರೆ ಸಮಾಜದಲ್ಲಿ ಸೆಕ್ಯುಲರಿಸಂ ಅನ್ನುವುದೇ ನಾಶವಾಗುತ್ತದೆ. ಹಿಂದು ಸನಾತನ ಸಂಸ್ಕೃತಿಯಿಂದ ಮಾತ್ರ ಸೆಕ್ಯುಲರಿಸಂ ಉಳಿಯಲು ಸಾಧ್ಯ. ಹಿಂದುಗಳ ಸಂಖ್ಯೆ ಕಡಿಮೆಯಾದ ಕೂಡಲೇ ಅವರನ್ನು ಈ ಪರಿ ಚಿತ್ರಹಿಂಸೆ ಕೊಟ್ಟಿದ್ದಾರಂದ್ರೆ ಅದನ್ನು ಊಹಿಸಲು ಆಗುತ್ತಿಲ್ಲ ಎಂದು ಹೇಳಿದ್ದಾರೆ.
ಮೂಡುಬಿದಿರೆ ಜೈನ ಮಠದ ಭಟ್ಟಾರಕ ಶ್ರೀ ಮಾತನಾಡಿ, ಸಿನಿಮಾದಲ್ಲಿನ ದೃಶ್ಯಗಳು ಭೀಭತ್ಸವಾಗಿದೆ. ಇಂತಹ ಸ್ಥಿತಿ ಮುಂದೆ ಯಾವತ್ತೂ ಬರಬಾರದು. ಅದಕ್ಕಾಗಿ ಹಿಂದು- ಮುಸ್ಲಿಮರು ಸೌಹಾರ್ದದಿಂದ ಬಾಳಬೇಕು. ದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯಬೇಕು ಎಂದು ಹೇಳಿದರು. ವಿಶ್ವ ಹಿಂದು ಪರಿಷತ್ತಿನಿಂದ ಹತ್ತು ಜನ ಸಂತರು ಮತ್ತು ನೂರಾರು ಕಾರ್ಯಕರ್ತರಿಗೆ ಸಿನಿಮಾ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.
Mangalore It is because of Congress failure we are seeing Kashmir files movies says Gurupura Vajradehi Swamiji after watching the movie at cinepolis in city center.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm