ಬ್ರೇಕಿಂಗ್ ನ್ಯೂಸ್
20-05-22 08:20 pm Udupi Correspondent ಕರಾವಳಿ
ಉಡುಪಿ, ಮೇ 20: ಪಾವಗಡ ಸೋಲಾರ್ ಹಗರಣ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಆರೋಪದ ಕುರಿತು ಕಾದು ನೋಡೋಣ. ಪಾವಗಡ ಆದ್ರೂ ತೋರಿಸ್ಲಿ ಏನು ಬೇಕಾದ್ರೂ ತೋರಿಸ್ಲಿ. ಯಾವ ತನಿಖೆ ಬೇಕಾದ್ರೂ ಮಾಡಲಿ. ತಪ್ಪು ಮಾಡಿದ್ದರೆ ಕತ್ತು ಕೊಡೋಕ್ಕೂ ನಾನು ತಯಾರಿದ್ದೇನೆ ಎಂದು ಸವಾಲು ಹಾಕಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೆ ನಮ್ಮ ಸರ್ಕಾರ ಇರುವಾಗ ರಾಜ್ಯದ ವಿದ್ಯುತ್ ಪರಿಸ್ಥಿತಿ ಹೇಗಿತ್ತು, ಈಗ ಹೇಗಿದೆ ಎನ್ನುವುದು ಜನರಿಗೆ ಗೊತ್ತಿದೆ. ನಮ್ಮ ಸರ್ಕಾರ ಇರುವಾಗ ಎಷ್ಟು ಪವರ್ ಜನರೇಟ್ ಮಾಡಿದ್ದೇವೆ. ಎಲ್ಲದರ ದಾಖಲೆಯೂ ನನ್ನಲ್ಲಿ ಇದೆ ಎಂದು ಹೇಳಿದರು.

ಪ್ರಮೋದ್ ಮುಂದೆ ಪಶ್ಚಾತ್ತಾಪ ಪಡಲಿದ್ದಾರೆ !
ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಗೆ, ಪ್ರಮೋದ್ ಪಕ್ಷ ಬಿಟ್ಟರೂ ಕಾರ್ಯಕರ್ತರು ಜಗ್ಗಲಿಲ್ಲ. ಉಡುಪಿ ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ಜೊತೆಗಿದೆ. ಮುಂದೆ ಯಾರನ್ನು ಚುನಾವಣಾ ಕಣಕ್ಕೆ ಇಳಿಸಲಿದೆ ಎಂದು ಶೀಘ್ರದಲ್ಲೇ ತಿಳಿಯಲಿದೆ. ಇಲ್ಲಿನ ನಾಯಕರು ಪ್ರಪೋಸಲ್ ನನಗೆ ನೀಡಲಿದ್ದಾರೆ. ನಾವೆಲ್ಲ ಕುಳಿತು ಉಡುಪಿ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ನಿರ್ಧರಿಸಲಿದ್ದೇವೆ. ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದೆ. ಮುಂದಿನ ದಿನದಲ್ಲಿ ಇದಕ್ಕಾಗಿ ಪ್ರಮೋದ್ ಪಶ್ಚಾತಾಪ ಪಡುತ್ತಾರೆ. ಪ್ರಮೋದ್ ಹಾಗೂ ಅವರ ಕುಟುಂಬಕ್ಕೆ ಪಕ್ಷ ಎಲ್ಲವನ್ನ ಕೊಟ್ಟಿತ್ತು. ಪ್ರಮೋದ್ ನನ್ನ ಪಕ್ಕದಲ್ಲಿ ಕುಳಿತುಕೊಳ್ತಿದ್ರು. ಈಗ ಕೆಳಗೆ ಕುಳಿತು ಕೊಳ್ಳುವಂತಾಗಿದೆ. ಅವರ ಫೋಟೋಗಳನ್ನ ನೋಡಿ ಬೇಸರವಾಯಿತು. ಆದಷ್ಟು ಬೇಗ ಪ್ರಮೋದ್ ಪಶ್ಚಾತಾಪ ಪಡುತ್ತಾರೆ ಎಂದು ಟಾಂಗ್ ನೀಡಿದರು.

ನಮ್ಮ ಪಕ್ಷದ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಬಹಳಷ್ಟು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ. ಮುಂದೆ ವಿಶೇಷ ಮೆಂಬರ್ ಶಿಪ್ ಡ್ರೈವ್ ಉಡುಪಿ ಜಿಲ್ಲೆಯಲ್ಲಿ ನಡೆಯಲಿದೆ. ಕರಾವಳಿಗೆ ಪ್ರತ್ಯೇಕ ಪ್ರಣಾಳಿಕೆ ರಚಿಸಿ ಕೊಡಲಿದ್ದೇವೆ. ಉದ್ಯೋಗ ಸೃಷ್ಟಿಗೆ ಕಾರ್ಯಕ್ರಮ ರೂಪಿಸ್ತಾಯಿದ್ದೇವೆ. ಜನರು ಈ ಭಾಗದಿಂದ ವಲಸೆ ಹೋಗುವುದನ್ನ ತಡಿಬೇಕು. ಕರಾವಳಿಯ ಯುವಕರು ಕೆಲಸ ಕೊಡುವವರು ಹೊರತು ಬೇರೆಯವರ ಕೆಳಗೆ ಕೆಲಸ ಮಾಡುವವರಲ್ಲ. ಹೀಗಾಗಿ ಉದ್ಯೋಗ ಸೃಷ್ಟಿ ಮಾಡಲು ಪ್ರತ್ಯೇಕ ಪ್ರಣಾಳಿಕೆ ಕರಾವಳಿಯಿಂದ ಕಾರವಾರದ ವರೆಗೂ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು.
ಸಚಿವ ಎಸ್ ಟಿ ಸೋಮಶೇಖರ್ ಆಪರೇಶನ್ ಕಮಲ ಹೇಳಿಕೆಯ ವಿಚಾರದಲ್ಲಿ ಪ್ರತಿಕ್ರಿಯಿಸಿದ ಡಿಕೆಶಿ, ನಾನು ಮತ್ತು ಜಿಟಿ ದೇವಗೌಡ ಮಾತ್ರ ನನಗೆ ಲೆಕ್ಕ. ಸೋಮ ಶೇಖರ್ ಉತ್ಸಾಹದಿಂದ ನಮ್ಮ ಪಕ್ಷದಿಂದ ಬಿಜೆಪಿಗೆ ಹೋಗಿದ್ದಾರೆ. ಅವರು ಈಗ ಪಕ್ಷದ ವಿಚಾರ ಹೇಳಿಕೊಂಡ್ರೆ ನನಗೆ ಸಂಬಂಧ ಇಲ್ಲ. ಜಿಟಿ ದೇವೇಗೌಡ ಹಿಂದೆ ಏನು ಮಾತಾಡಿದ್ರು ಮುಂದೆ ಏನು ಮಾತಾಡ್ತಾರೆ ಕಾದು ನೋಡೋಣ ಎಂದರು.
Though Pramod Madhwaraj deserted the Congress party, not even a single Congress activist has left the party after his exit. The party had provided enough opportunities to his father and mother. Pramod is regretting his decision to have joined the BJP in a hurry. We used to sit together earlier but it has reached the situation of sitting down. I am sad about it. Congress activists are enthusiastic. Some BJP leaders also are eager to join Congress,” said KPCC president D K Shivakumar in his criticism.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm