ಬ್ರೇಕಿಂಗ್ ನ್ಯೂಸ್
10-09-21 11:01 am Source: One India kannada ಸ್ಪೆಷಲ್ ಕೆಫೆ
ಗಣೇಶ ಚತುರ್ಥಿ ಎಲ್ಲರ ಮನೆಯಲ್ಲೂ ಸಂಭ್ರಮ ಮನೆ ಮಾಡಿದೆ. ಹೊಸ ಉಡುಗೆಯುಟ್ಟು, ಮನೆಯಲ್ಲಿ ಗೌರಿ ಗಣೇಶನ ವಿಗ್ರಹವಿಟ್ಟು, ಮೋದಕಪ್ರಿಯನಿಗೆ ನೈವೇದ್ಯವನ್ನಿಟ್ಟು ಶೃದ್ಧಾ ಭಕ್ತಿಯಿಂದ ಆಚರಿಸುವ ಹಬ್ಬ ಇದು.
ಗಣೇಶನ ಜನ್ಮದಿನದ ಆಚರಣೆಯನ್ನು ಗಣೇಶ ಚತುರ್ಥಿ ಎಂದು ಕರೆಯಲಾಗುತ್ತದೆ. ಗಣೇಶ ಚತುರ್ಥಿಯ ದಿನ, ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಭಾದ್ರಪದ ಮಾಸದ ಶುಕ್ಲ ಪಕ್ಷದಲ್ಲಿ ಗಣೇಶ ಜನನವಾಯಿತು ಎನ್ನುವುದು ನಂಬಿಕೆ.
ಗಣೇಶೋತ್ಸವ ಅಂದರೆ ಗಣೇಶ ಚತುರ್ಥಿಹಬ್ಬವು 10 ದಿನಗಳ ನಂತರ, ಅನಂತ ಚತುರ್ದಶಿಯಂದು ಕೊನೆಗೊಳ್ಳುತ್ತದೆ. ಈ ದಿನ ಗಣೇಶನ ವಿಸರ್ಜನೆ ನಡೆಸಲಾಗುತ್ತದೆ.
ಅನಂತ ಚತುರ್ದಶಿಯ ದಿನದಂದು ಭಕ್ತರು ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗುವ ಮೂಲಕ ಸರೋವರ, ನದಿ ಇತ್ಯಾದಿಗಳಲ್ಲಿ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡುತ್ತಾರೆ. ಈ ವರ್ಷ ಗಣೇಶ ಚತುರ್ಥಿ ಹಬ್ಬವು ಸೆಪ್ಟೆಂಬರ್ 10 ರಿಂದ ಆರಂಭವಾಗುತ್ತದೆ.
ಸ್ವಚ್ಛವಾದ ಆಸನದ ಮೇಲೆ ಕುಳಿತು, ಮೊದಲು ಗಣೇಶನಿಗೆ ಪಂಚಾಮೃತ ಮಜ್ಜನ ಮಾಡಿಸಿ. ಇದರ ನಂತರ, ಕುಂಕುಮ, ಶ್ರೀಗಂಧ, ಅಕ್ಷತೆ, ಹೂವುಗಳು, ದಕ್ಷಿಣೆ ಮತ್ತು ಇಷ್ಟವಾದ ತಿನಿಸುಗಳನ್ನು ಅರ್ಪಿಸಿ. ಹೀಗೆ ಚತುರ್ಥಿಯ ವೇಳೆ, ಪ್ರತಿಷ್ಟಾಪಿಸಿದ ಗಣೇಶ ಮನೆಯಲ್ಲಿರುವವರೆಗೂ, ಗಣೇಶ ಪುರಾಣ, ಗಣೇಶ ಚಾಲೀಸಾಗಣೇಶ ಸ್ತುತಿ, ಶ್ರೀ ಗಣೇಶ ಸಹಸ್ರನಾಮಾವಳಿ, ಆರತಿ, ಸಂಕಟನಾಶನ ಗಣೇಶ ಸ್ತೋತ್ರ ಇತ್ಯಾದಿಗಳನ್ನು ಪಠಿಸಿ. ಗಣಪತಿಯ ಮಂತ್ರವನ್ನು ಜಪಿಸಿ ಮತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಆರತಿ ಮಾಡಿ. ಹೀಗೆ ಮಾಡುವುದರಿಂದ ಗಣಪತಿ ಕುಟುಂಬದ ಎಲ್ಲಾ ವಿಘ್ನಗಳನ್ನು ನಿವಾರಿಸುತ್ತಾನೆ ಎನ್ನಲಾಗಿದೆ.
ಸಂದೇಶಗಳು ಇಲ್ಲಿವೆ
* ಚೌತಿ ಎಲ್ಲರ ಬಾಳಿಗೂ ಶುಭದಾಯಕವಾಗಿರಲಿ. ಗಣಪತಿ ನಿಮಗೆ ಆರೋಗ್ಯ, ಸಂಪತ್ತು, ನೆಮ್ಮದಿಯನ್ನು ಕರುಣಿಸಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಗಣೇಶ ಚತುರ್ಥಿಯ ಶುಭಾಶಯಗಳು
* ಗಜಾನನ ನಮ್ಮ ಮಾರ್ಗದರ್ಶಕ. ನಮ್ಮ ರಕ್ಷಕ. ಏಕಮನಸ್ಸಿನಿಂದ ವಿಘ್ನೇಶನನ್ನು ಪೂಜಿಸೋಣ. ಲೋಕಕಲ್ಯಾಣಕ್ಕಾಗಿ ಒಟ್ಟಾಗಿ ಪ್ರಾರ್ಥಿಸೋಣ. ಸರ್ವರಿಗೂ ಚೌತಿಯ ಶುಭಾಶಯಗಳು
* ವಿನಾಯಕನ ಕೃಪಾದೃಷ್ಟಿಯಿಂದ ನಿಮ್ಮ ಕಷ್ಟಗಳೆಲ್ಲಾ ಸುಟ್ಟು ಬೂದಿಯಾಗಲಿ. ದೇವರ ಅನುಗ್ರಹವೂ ಅನುದಿನವೂ ನಿಮ್ಮ ಸಂತೋಷವನ್ನು ಹೆಚ್ಚಿಸಲಿ. ನಿಮಗೆ ಗಣೇಶ ಚತುರ್ಥಿ ಶುಭಾಶಯಗಳು
* ಬದುಕಿನ ಕಷ್ಟವೆಲ್ಲಾ ದೂರವಾಗಲಿ, ದೇವರ ಆಶೀರ್ವಾದದ ಪ್ರಭೆಯಲ್ಲಿ ಖುಷಿಯೊಂದೇ ನೆಲೆಗೊಳ್ಳಲಿ. ಸರ್ವರಿಗೂ ಗಣೇಶ ಹಬ್ಬದ ಶುಭಾಶಯಗಳು
* ವಿಘ್ನ ನಿವಾರಕ ನಿಮ್ಮೆಲ್ಲಾ ಕಷ್ಟಗಳನ್ನು ದೂರ ಮಾಡಲಿ. ನಿಮ್ಮ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳಲಿ. ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು
* ನಿಮ್ಮ ಇಷ್ಟಾರ್ಥಗಳು ಸಿದ್ಧಿಸುವಂತೆ ಸಿದ್ಧಿ ವಿನಾಯಕ ಅನುಗ್ರಹಿಸಲಿ. ದೇವರ ಆಶೀರ್ವಾದದಿಂದ ನಿಮ್ಮ ಜೀವನದ ಹಾದಿ ಸುಗಮವಾಗಲಿ. ನಿಮ್ಮ ಮನೆ ಮನಗಳಲ್ಲಿ ಸಂತೋಷದ ಮಳೆ ಸುರಿಯಲಿ. ದೈವಾನುಗ್ರಹ ಸದಾ ನಿಮ್ಮ ಜೊತೆಗಿರಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಹಬ್ಬದ ಶುಭಾಶಯಗಳು
* ವಿನಾಯಕನ ಕೃಪಾದೃಷ್ಟಿಯಿಂದ ನಿಮ್ಮ ಕಷ್ಟಗಳೆಲ್ಲಾ ಸುಟ್ಟು ಬೂದಿಯಾಗಲಿ. ದೇವರ ಅನುಗ್ರಹವೂ ಅನುದಿನವೂ ನಿಮ್ಮ ಸಂತೋಷವನ್ನು ಹೆಚ್ಚಿಸಲಿ. ನಿಮಗೆ ಗಣೇಶ ಚತುರ್ಥಿ ಶುಭಾಶಯಗಳು
* ಬದುಕಿನ ಕಷ್ಟವೆಲ್ಲಾ ದೂರವಾಗಲಿ, ದೇವರ ಆಶೀರ್ವಾದದ ಪ್ರಭೆಯಲ್ಲಿ ಖುಷಿಯೊಂದೇ ನೆಲೆಗೊಳ್ಳಲಿ. ಸರ್ವರಿಗೂ ಗಣೇಶ ಹಬ್ಬದ ಶುಭಾಶಯಗಳು
* ಗಜವದನನ ಆಶೀರ್ವಾದದ ಬೆಳಕು ನಿಮ್ಮ ಜೀವನವನ್ನು ಇನ್ನಷ್ಟು ಸುಖಮಯವಾಗಿಸಲಿ. ಬದುಕಿನ ಎಲ್ಲಾ ಕಷ್ಟ ಕಾರ್ಪಣ್ಯಗಳು ಕೊನೆಯಾಗಲಿ. ನಿಮಗೂ ನಿಮ್ಮ ಕುಟುಂಬಕ್ಕೂ ಚೌತಿಯ ಶುಭಾಶಯಗಳು
* ಗಣೇಶ ಯಾವಾಗಲೂ ನಿಮ್ಮ ಮಾರ್ಗದರ್ಶಕ ಮತ್ತು ರಕ್ಷಕನಾಗಿ ಉಳಿಯಲಿ ಮತ್ತು ನಿಮ್ಮ ಜೀವನದಿಂದ ಅಡೆತಡೆಗಳನ್ನು ತೆಗೆದುಹಾಕಲಿ. ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಗಣೇಶ ಚತುರ್ಥಿಯ ಶುಭಾಶಯಗಳು!
* ಗಣೇಶ ನಿಮ್ಮ ಎಲ್ಲಾ ಚಿಂತೆಗಳು, ದುಃಖಗಳು ಮತ್ತು ಉದ್ವಿಗ್ನತೆಗಳನ್ನು ನಾಶಮಾಡಿ ನಿಮ್ಮ ಜೀವನವನ್ನು ಪ್ರೀತಿ ಮತ್ತು ಸಂತೋಷವನ್ನು ಕರುಣಿಸಲಿ. ಗಣೇಶ ಚತುರ್ಥಿ ಶುಭಾಶಯಗಳು!
*ನೀವು ಸಮೃದ್ಧ ಮತ್ತು ದೀರ್ಘಾಯುಷ್ಯವನ್ನು ಹೊಂದಲಿ ಎಂದು ನಾನು ಗಣೇಶ ನಲ್ಲಿ ಪ್ರಾರ್ಥಿಸುತ್ತೇನೆ. ಗಣೇಶ ಚತುರ್ಥಿ ಶುಭಾಶಯಗಳು!
*ಗಣೇಶ ಚತುರ್ಥಿಯನ್ನು ಗಣೇಶನ ಹಬ್ಬವನ್ನು ಆಚರಿಸಿ. ಗಣೇಶ ಭಗವಂತ ದುಷ್ಟರನ್ನು ಕೊಲ್ಲಲು ಈ ಭೂಮಿಯ ಮೇಲೆ ಇಳಿದ ಈ ದಿನ ಈ ಜಗತ್ತಿನಲ್ಲಿ ಪ್ರಾಮಾಣಿಕತೆ ಮತ್ತು ಪ್ರೀತಿಯ ಸಂದೇಶವನ್ನು ಹರಡಿ. ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
*ಗಣಪತಿ ಬಪ್ಪ ಮೋರೆಯಾ ಗಣೇಶ ಭಗವಂತ ನಿಮಗೆ ಎಲ್ಲಾ ಸಂತೋಷ ಮತ್ತು ಯಶಸ್ಸನ್ನು ನೀಡಲಿ. ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಗಣೇಶ ಚತುರ್ಥಿಯ ಶುಭ ಹಾರೈಕೆಗಳು.
16-09-25 11:00 pm
Bangalore Correspondent
Nanjegowda MLA, Malur: ಮಾಲೂರು ಕಾಂಗ್ರೆಸ್ ಶಾಸಕ...
16-09-25 10:54 pm
Bangalore Suicide, Air force: ಸಹೋದರಿ ಜೊತೆ ಜಗಳ...
15-09-25 08:53 pm
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am