ಬ್ರೇಕಿಂಗ್ ನ್ಯೂಸ್
20-03-26 06:10 pm HK News Staffer ಕರ್ನಾಟಕ
ಮುಂಬೈ, ಮಾರ್ಚ್ 20: ಸ್ವಯಂಘೋಷಿತ ದೇವಮಾನವ, ಜ್ಯೋತಿಷಿ ಹೆಸರಿನಲ್ಲಿ ಮಾಟ ಮಂತ್ರಗಳಿಂದ ಮಹಿಳೆಯರನ್ನು ವಶೀಕರಣಗೊಳಿಸಿ ಅತ್ಯಾಚಾರ ಎಸಗುತ್ತಿದ್ದ ಆರೋಪದಲ್ಲಿ ನಾಸಿಕ್ ಮೂಲದ ಅಶೋಕ್ ಖಾರಟ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನ ಬೆನ್ನಲ್ಲೇ ಆತನ ಕಚೇರಿಯಲ್ಲಿ ಸಿಕ್ಕ ಪೆನ್ ಡ್ರೈವ್ ನಲ್ಲಿ 58 ಮಹಿಳೆಯರ ಜೊತೆಗಿನ ಅಶ್ಲೀಲ ವಿಡಿಯೋಗಳು ಪತ್ತೆಯಾಗಿದ್ದು ಹಲವಾರು ರಾಜಕಾರಣಿಗಳ ಜೊತೆಗಿನ ನಂಟನ್ನೂ ಬಯಲುಗೊಳಿಸಿದೆ.
ಪೂಜೆ, ಜ್ಯೋತಿಷ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರ ಕೇಳಿಬರುವ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಖಾರಟ್, ಅವರಿಗೆ ಡ್ರಗ್ಸ್ ನೀಡಿ ಅಥವಾ ಬೆದರಿಸಿ ಬಳಸಿಕೊಳ್ಳುತ್ತಿದ್ದ. 35 ವರ್ಷದ ಮಹಿಳೆಯೊಬ್ಬರು ತನ್ನನ್ನು ವಂಚಿಸಿ ಅತ್ಯಾಚಾರ ಎಸಗಿದ್ದಾರೆಂದು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಅಶೋಕ್ ಖಾರಟ್ ಬಂಧಿಸಿದ್ದಾರೆ. ಇದಲ್ಲದೆ, ಅಶೋಕ್ ಖಾರಟ್ ರಾಜ್ಯದ ಪ್ರಮುಖ ರಾಜಕಾರಣಿಗಳ ಜೊತೆ ನಂಟು ಹೊಂದಿರುವ ಮಾಹಿತಿಯೂ ಬಹಿರಂಗವಾಗಿದೆ.

ಖಾರಟ್ ನಿವೃತ್ತ ಮರ್ಚೆಂಟ್ ನೇವಿ ಅಧಿಕಾರಿಯಾಗಿದ್ದು ಈ ಕಾರಣಕ್ಕೆ ಕ್ಯಾಪ್ಟನ್ ಅಶೋಕ್ ಎಂದೇ ಪರಿಚತರು. ಈತನ ಬಂಧನ ಆಗುತ್ತಲೇ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಪ್ರತಿ ದಿನ ಸಲಹೆ, ಪರಿಹಾರಕ್ಕಾಗಿ ಬರುತ್ತಿದ್ದ ಜನರನ್ನು ಅಶೋಕ್ ಖಾರಟ್ ದುರುಪಯೋಗ ಮಾಡಿರುವ ಆರೋಪ ಕೇಳಿಬಂದಿದೆ.
ಅಶೋಕ್ ಖಾರಟ್ ಕಚೇರಿಯಲ್ಲಿದ್ದ ಪೆನ್ ಡ್ರೈವನ್ನು ಪೊಲೀಸರು ವಶಪಡಿಸಿದ್ದಾರೆ. ಇದರಲ್ಲಿ 58 ವಿವಿಧ ಮಹಿಳೆಯರ ಜೊತೆಗಿನ ವಿಡಿಯೋಗಳಿದ್ದು ಭಾರೀ ಸಂಚಲನ ಸೃಷ್ಟಿಸಿದೆ. ಅಶೋಕ್ ಖಾರಟ್ ತನ್ನ ಕಚೇರಿಯಲ್ಲೇ ರಹಸ್ಯ ಕ್ಯಾಮರಾಗಳನ್ನು ಇರಿಸಿಕೊಂಡಿದ್ದು ಅಲ್ಲಿ ಬರುತ್ತಿದ್ದ ಎಲ್ಲ ಮಹಿಳೆಯರು, ರಾಜಕಾರಣಿಗಳ ಜೊತೆಗಿನ ಸಖ್ಯವನ್ನು ಸೆರೆಹಿಡಿದಿದ್ದ.
ಇದಲ್ಲದೆ, ಆರೋಪಿ ಜ್ಯೋತಿಷಿ ನಾಸಿಕ್ನ ದುಬಾರಿ ಏರಿಯಾ ಕೆನಡಾ ಕಾರ್ನರ್ ಪ್ರದೇಶದಲ್ಲಿ 'ಓಕಸ್ ಪ್ರಾಪರ್ಟಿ ಡೀಲರ್ಸ್ ಮತ್ತು ಡೆವಲಪರ್ಸ್' ಎಂಬ ಕಚೇರಿಯನ್ನು ನಿರ್ವಹಿಸುತ್ತಿದ್ದ. ಹೀಗಾಗಿ ಸಮಾಜದಲ್ಲಿ ಸಾಕಷ್ಟು ಪ್ರಭಾವವನ್ನು ಹೊಂದಿದ್ದು, ದೈವಿಕ ಶಕ್ತಿಗಳನ್ನು ಹೊಂದಿರುವ ವ್ಯಕ್ತಿ ಎಂದು ಅನೇಕರು ನಂಬಿದ್ದರು. ಈತನಿಗೆ ಮಹಾರಾಷ್ಟ್ರದಿಂದ ದೆಹಲಿ ವರೆಗೆ ರಾಜಕಾರಣಿಗಳ ಸಂಪರ್ಕವಿತ್ತು. ಮಹಾರಾಷ್ಟ್ರದ ಮಿರ್ಗಾಂವ್ನಲ್ಲಿ ಈಶಾನ್ಯೇಶ್ವರ ದೇವಸ್ಥಾನ ಮತ್ತು ಭವ್ಯವಾದ ಆಶ್ರಯಧಾಮವನ್ನು ಹೊಂದಿದ್ದು, ಅಲ್ಲಿ ಪ್ರಭಾವಿ ವ್ಯಕ್ತಿಗಳು ಈತನನ್ನು ಭೇಟಿ ಮಾಡುತ್ತಿದ್ದರು.
ನಾಸಿಕ್ ಸೇರಿದಂತೆ ಹಲವು ಕಡೆ ಅಶೋಕ ಖಾರಟ್ 200 ಕೋಟಿಗೂ ಹೆಚ್ಚು ಭೂಮಿ, ಕಟ್ಟಡ ಸಂಕೀರ್ಣದ ಆಸ್ತಿ ಹೊಂದಿದ್ದಾನೆ. ಪತಾರ್ಡಿ ಪ್ರದೇಶದಲ್ಲಿ 30 ಎಕ್ರೆ ಜಾಗ ಹೊಂದಿದ್ದು ಇದರ ಮೌಲ್ಯ 150 ಕೋಟಿಯೆಂದು ಹೇಳಲಾಗಿದೆ. ಖಂಡಾಲ್ವಾಡಿ, ಕಾರಟ್, ಮಿರ್ಗಾಂವ್ ನಲ್ಲಿ ಪತ್ನಿ, ಇಬ್ಬರು ಹೆಣ್ಮಕ್ಕಳ ಹೆಸರಲ್ಲಿ 45 ಎಕ್ರೆ ಆಸ್ತಿಯಿದ್ದು ಇದರ ಮೌಲ್ಯ 30 ಕೋಟಿಯಂತೆ. ಮರ್ಚೆಂಟ್ ನೇವಿಯಾಗಿ ನಿವೃತ್ತಿಗೊಂಡು 1990ರ ದಶಕದಲ್ಲಿ ಜ್ಯೋತಿಷಿ ಕೆಲಸ ಆರಂಭಿಸಿದ್ದ ಖಾರಟ್ ಈಗ ಒಂದು ಸಿಟ್ಟಿಂಗ್ ಮೇಲೆ 50 ಲಕ್ಷ ರೂ. ವರೆಗೆ ಬಿಲ್ ಮಾಡುತ್ತಿದ್ದರು.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm