ಬ್ರೇಕಿಂಗ್ ನ್ಯೂಸ್
19-03-26 10:38 pm Mangaluru Staffer ಕ್ರೈಂ
ಮಂಗಳೂರು, ಮಾರ್ಚ್ 19: ನಗರದ ಮಣ್ಣಗುಡ್ಡದ ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕ ಮತ್ತು ಅಲ್ಲಿನ ಸಿಬಂದಿ ಯುವಕನೊಬ್ಬನ ನಡುವೆ ಮಾರಾಮಾರಿ ಜಗಳ ನಡೆದಿದ್ದು ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಮಾರ್ಚ್ 13ರಂದು ಘಟನೆ ನಡೆದಿದ್ದು ಬೈಕಿನಲ್ಲಿ ಬಂದಿದ್ದ ಯುವಕನೊಬ್ಬ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕುವಂತೆ ಹೇಳಿದ್ದ. ಆದರೆ ಶಿವರಾಜ್ ಎಂಬ ರಾಯಚೂರು ಮೂಲದ ಪೆಟ್ರೋಲ್ ಹಾಕುವ ಕಾರ್ಮಿಕ 500 ರೂ. ಪೆಟ್ರೋಲ್ ಹಾಕಿದ್ದ. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಅಲ್ಲಿನ ಇತರ ಸಿಬಂದಿ ಇಬ್ಬರನ್ನೂ ಸಮಾಧಾನಿಸುತ್ತಿದ್ದರೂ ಇಬ್ಬರು ಯುವಕರು ಹೊಡೆದಾಟ ಮಾಡಿದ್ದಾರೆ.




ಸಿಬಂದಿ ಶಿವರಾಜ್ ಮೊದಲು ಮೈಗೆ ಕೈಮಾಡಿದ್ದು ಇದರ ಸಿಟ್ಟಿನಲ್ಲಿ ಗ್ರಾಹಕ ಯುವಕನೂ ತನ್ನ ಗೆಳೆಯರನ್ನು ಕರೆದು ತಿರುಗಿ ಹೊಡೆದಿದ್ದಾನೆ. ಅಲ್ಲಿದ್ದ ಎಲ್ಲ ಸಿಬಂದಿ ಗಲಾಟೆ ನಿಲ್ಲಿಸಲು ಯತ್ನಿಸಿದರೂ ಇಬ್ಬರೂ ರೊಚ್ಚಿಗೆದ್ದವರ ರೀತಿ ಬೈದಾಡುತ್ತ ಹೊಡೆದಾಟ ನಡೆಸಿದ್ದಾರೆ. ಒಳಗಡೆ ಕುಳಿತ ನಂತರವೂ ಸಿಬಂದಿ ಯುವಕನಿಗೆ ಹಲ್ಲೆ ನಡೆಸಲಾಗಿದೆ. ಬಳಿಕ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಶಿವರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸಂಜೆಯ ವೇಳೆಗೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಠಾಣೆಗೆ ತೆರಳಿ ಸಿಬಂದಿ ಯುವಕನನ್ನು ಬಿಡಿಸಿ ತಂದಿದ್ದಾರೆ. ಆದರೆ ಈ ರೀತಿ ದುರ್ವರ್ತನೆ ತೋರಿದ್ದಕ್ಕಾಗಿ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.
CCTV captures violent clash at a #petrolpump in #Mangalore #Mannagudda. Argument over fuel amount escalates into a fight between customer and staff. Staffer Shivraj detained, later released and sacked over misconduct. #Mangaluru #CrimeNews pic.twitter.com/EYza31VnRj
— Headline Karnataka (@hknewsonline) March 19, 2026
A violent altercation broke out between a customer and a petrol pump staff member at a fuel station in Mannagudda, Mangaluru, with the entire incident captured on CCTV.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 10:01 pm
HK News Staffer
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm