ಬ್ರೇಕಿಂಗ್ ನ್ಯೂಸ್
27-09-21 05:44 pm Headline Karnataka News Network ಸ್ಪೆಷಲ್ ಕೆಫೆ
ನ್ಯೂಯಾರ್ಕ್, ಸೆ.27: ಜಗತ್ತು ಸುತ್ತಬೇಕು. ಯುರೋಪ್, ಅಮೆರಿಕ, ಸ್ವಿಜರ್ಲ್ಯಾಂಡ್, ಜಪಾನ್ ನೋಡಬೇಕು. ಸಿಂಗಾಪುರ, ಹಾಂಕಾಂಗಿನ ಮಿಂಚುವ ಸಿಟಿ ನೋಡಿ ಬರಬೇಕು. ಇಂಥ ಆಸೆ ಯಾರಿಗಿಲ್ಲ ಹೇಳಿ. ಆದರೆ, ಯಾರು ಕೂಡ ಜಗತ್ತಿನ ಎಲ್ಲ ದೇಶಗಳನ್ನು ಸುತ್ತಾಡಿದವರು ಇಲ್ಲ. ಇದ್ದರೂ, ಆತನ ಜೀವಿತಾವಧಿ ಮುಗಿದಿರುತ್ತದೆ. ಆದರೆ, ಅಮೆರಿಕದ 21ರ ಹರೆಯದ ಹುಡುಗಿಯೊಬ್ಬಳು ಜಗತ್ತಿನಲ್ಲಿರುವ ಎಲ್ಲ ದೇಶಗಳನ್ನೂ ಸುತ್ತಿ ಬಂದಿದ್ದಾಳೆ. ಅಷ್ಟೇ ಅಲ್ಲ, ಜಗತ್ತು ಸುತ್ತಿ ಬಂದ ಅತಿ ಕಿರಿಯ ಯುವತಿ ಎಂಬ ದಾಖಲೆಯನ್ನೂ ಸಾಧಿಸಿ, ಗಿನ್ನೆಸ್ ರೆಕಾರ್ಡ್ ಮಾಡಿದ್ದಾಳೆ.
ಆಕೆಯ ಹೆಸರು ಲೆಕ್ಸೀ ಆಲ್ಫೋರ್ಡ್. ಅಮೆರಿಕದ ನೆವಾಡಾ ನಗರದ ಮಧ್ಯಮ ವರ್ಗದ ಕುಟುಂಬದಿಂದ ಬಂದಾಕೆ. ತಂದೆ, ತಾಯಿ ಟ್ರಾವೆಲ್ ಏಜನ್ಸಿ ನಡೆಸುತ್ತಿದ್ದುದರಿಂದ ಆರಂಭದಲ್ಲಿ ಹೆತ್ತವರ ಜೊತೆಯಲ್ಲೇ ದೇಶ ಸುತ್ತಾಟಕ್ಕೆ ಹೋಗುತ್ತಿದ್ದಳು. 12 ವರ್ಷಕ್ಕೆ ತಲುಪುವಷ್ಟರಲ್ಲಿ ಹಲವಾರು ದೇಶಗಳನ್ನು ಸುತ್ತಾಡಿದ್ದ ಲೆಕ್ಸೀಗೆ ನಾನ್ಯಾಕೆ ಜಗತ್ತಿನ ಅಷ್ಟೂ ದೇಶಗಳನ್ನು ಸುತ್ತಿ ಬರಬಾರದು ಎಂಬ ಛಲ ಹುಟ್ಟಿತ್ತು. ಅದರತ್ತ ಗಮ್ಯ ನೆಟ್ಟ ಲೆಕ್ಸೀ ಅಲ್ಫೋರ್ಡ್, ತನ್ನ 18ರ ಹರೆಯ ಮುಗಿಯುವ ಹೊತ್ತಲ್ಲೇ ಜಗತ್ತಿನ ಮುಂಚೂಣಿ 70ಕ್ಕೂ ಹೆಚ್ಚು ದೇಶಗಳನ್ನು ಸುತ್ತಿ ಬಂದಿದ್ದಳು.
21ನೇ ವರ್ಷ ಪೂರೈಸಿದ ಹೊತ್ತಲ್ಲಿ ಜಗತ್ತಿನಲ್ಲಿರುವ ಅಷ್ಟೂ ದೇಶಗಳನ್ನು (195 ದೇಶಗಳಿವೆ ಎನ್ನುವ ಲೆಕ್ಕಾಚಾರ) ಸುತ್ತಾಟ ನಡೆಸಿದ್ದಾಳೆ. ಕಾಂಬೋಡಿಯಾದಲ್ಲಿರುವ ತೇಲುವ ಗ್ರಾಮಗಳನ್ನು ನೋಡಿ ಬಂದಿದ್ದಾಳೆ. ದುಬೈನಲ್ಲಿರುವ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾವನ್ನೂ ಹತ್ತಿಳಿದಿದ್ದಾಳೆ. ಆರ್ಜೆಂಟೀನಾದ ಉಶ್ವಾಯಿ ಪರ್ವತ ಶಿಖರದಿಂದ ಹಿಡಿದು ಈಜಿಪ್ಟ್ ನಲ್ಲಿ ಹುದುಗಿರುವ ಪಿರಮಿಡ್ ಲೋಕವನ್ನೂ ಸುತ್ತಿ ಬಂದಿದ್ದಾಳೆ. ಒಬ್ಬಂಟಿಯಾಗಿ ಹೋಗಿ ಬರುವುದು ಕಷ್ಟ ಎನ್ನಲಾಗುವ ನಾರ್ತ್ ಕೊರಿಯಾವನ್ನು ಕೊನೆಯ ಬಾರಿಗೆ 2019ರಲ್ಲಿ ಭೇಟಿ ಮಾಡಿದ ಲೆಕ್ಸೀ, 2019 - ನಾರ್ತ್ ಕೊರಿಯಾ - 196 ಎಂದು ಬರೆದ ಸ್ಲೇಟ್ ಹಿಡಿದು ಫೋಟೋ ತೆಗೆಸಿಕೊಂಡಿದ್ದಾಳೆ. ಇದರೊಂದಿಗೆ, ಅಪರೂಪದ ಗಿನ್ನೆಸ್ ವರ್ಲ್ಡ್ ರೆಕಾರ್ಡನ್ನು ಕೂಡ ತನ್ನ ಹೆಸರಿಗೆ ಬರೆಸಿಕೊಂಡಿದ್ದಾಳೆ.
ದೇಶ ಸುತ್ತಾಟದ ಹೊತ್ತಲ್ಲೇ ತನ್ನ ಪದವಿಯನ್ನೂ ಪೂರೈಸಿದ್ದಾಳೆ. ನನ್ನ ಹೆತ್ತವರು ಪೂರ್ತಿ ಸಪೋರ್ಟ್ ಕೊಟ್ಟಿದ್ದಾರೆ. ಓದಿನ ವಿಚಾರದಲ್ಲಿಯೂ ಒಂದು ವಾರ, ತಿಂಗಳು ಕಾಲ ಅಭ್ಯಾಸ ನಡೆಸಿ, ವರ್ಷದ ಕೊನೆಗೆ ಪರೀಕ್ಷೆ ಬರೆಯುತ್ತಿದ್ದೆ. ಜಗತ್ತಿನ ನಾನಾ ದೇಶಗಳಲ್ಲಿರುವ ವೈವಿಧ್ಯವನ್ನು ತುಂಬಿಕೊಳ್ಳಲು, ಅದನ್ನು ತಿಳಿಯಲು ನನಗೆ ಹೆತ್ತವರು ಅವಕಾಶ ಕೊಟ್ಟಿದ್ದಾರೆ. ಇದರಿಂದಲೇ ನಾನು ವರ್ಲ್ಡ್ ರೆಕಾರ್ಡ್ ಮಾಡುವಂತಾಯ್ತು ಎಂದು ಲೆಕ್ಸೀ ಹೇಳುತ್ತಾಳೆ.
We all probably have a bucket list - mainly a list of travel goals that we want to achieve. While most of us crib about different things that don't work in our favour to realise those goals, some people always find a way. Like this travel buff, who has reached every corner of the globe. Lexie Alford is the youngest person ever to travel to all the countries in the world including North Korea and other such extremely inaccessible countries at just 21 years of age.
11-12-23 05:11 pm
Bangalore Correspondent
ಬೆಳಗಾವಿ ; ಪ್ರೀತಿಸಿ ಮನೆಯಿಂದ ಓಡಿ ಹೋದ ಜೋಡಿ, ಯುವಕ...
11-12-23 01:00 pm
Madikeri suicide resort: ಕೊಡಗು ; ರೆಸಾರ್ಟ್ನಲ್...
09-12-23 05:33 pm
Bangalore, Actress Leelavathis, PM Modi: ನಟಿ...
08-12-23 10:23 pm
Bangalore, Cm Ibrahim, H. D. Kumaraswamy: ಹೆಚ...
08-12-23 09:55 pm
11-12-23 07:34 pm
HK News Desk
NewDelhi, Supreme Court, Article 370: ಆರ್ಟಿಕಲ...
11-12-23 01:42 pm
Kerala, Sabrimala temple: ಶಬರಿಮಲೆ ದೇಗುಲದಲ್ಲಿ...
11-12-23 12:29 pm
ಪಾಸ್ಪೋರ್ಟ್ ವೆರಿಫಿಕೇಶನ್ಗಾಗಿ ಪೊಲೀಸ್ ಠಾಣೆಗೆ...
09-12-23 11:49 am
Chennai, schools, colleges, holiday; ತಮಿಳುನಾಡ...
08-12-23 02:22 pm
11-12-23 08:00 pm
Mangalore Correspondent
ಪಂಚಾಯತ್ ಪುರಸಭೆಯಾದರೂ ನಾಲ್ಕು ವರ್ಷದಿಂದ ಅಧಿಕಾರಿಗಳ...
11-12-23 04:39 pm
Mangalore, Nursing student, suicide: ನರ್ಸಿಂಗ್...
11-12-23 01:51 pm
Puttur, moral Policing: ಉಪ್ಪಿನಂಗಡಿ ; ಮುಸ್ಲಿಂ...
10-12-23 04:17 pm
Mangalore News, Someshwar Beach: ಸೋಮೇಶ್ವರದಲ್ಲ...
10-12-23 12:06 pm
11-12-23 06:58 pm
Mangalore Correspondent
Drug parcel fruad, Mumbai police, Bangalore N...
11-12-23 11:35 am
Mangalore, Boat workers, killed: ತಣ್ಣೀರುಬಾವಿ...
10-12-23 04:26 pm
Mrpl News,Crime: ಎಂಆರ್ ಪಿಎಲ್ ಟ್ಯಾಂಕರ್ ನಿಂದ ಡಾ...
09-12-23 10:33 pm
NIA Raid, Karnataka, ISIS: ಐಸಿಸ್ ಉಗ್ರರೊಂದಿಗೆ...
09-12-23 03:50 pm