ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಅದ್ದೂರಿ ರಿಸೆಪ್ಷನ್, ಶ್ರೀಲಂಕಾದಲ್ಲಿ ಹನಿಮೂನ್..! ತಿಂಗಳು ಕಳೆದರೂ ಪತ್ನಿಯನ್ನ ಟಚ್ ಮಾಡಿಲ್ಲ, ಆತ ಗಂಡಸೇ ಅಲ್ಲ..! ಧನದಾಹಿ ಗಂಡನ ಕಿರುಕುಳಕ್ಕೆ ಯುವತಿ ಬಲಿ 

26-12-25 11:21 pm       Bangalore Correspondent   ಕ್ರೈಂ

ಬೆಂಗಳೂರಿನ ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಅದ್ದೂರಿ ರಿಸೆಪ್ಷನ್, ಶ್ರೀಲಂಕಾದಲ್ಲಿ ಹನಿಮೂನ್.. ಇದಾಗಿ ಕೇವಲ ಹದಿನೈದು ದಿನದಲ್ಲೇ ನವ ವಿವಾಹಿತ ಯುವತಿ ಗಂಡನ ಧನದಾಹಕ್ಕೆ ಬೇಸತ್ತು ಸಾವಿಗೆ ಶರಣಾದ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.‌

ಬೆಂಗಳೂರು, ಡಿ.26 : ಬೆಂಗಳೂರಿನ ಪ್ಯಾಲೆಸ್‌ ಗ್ರೌಂಡ್‌ನಲ್ಲಿ ಅದ್ದೂರಿ ರಿಸೆಪ್ಷನ್, ಶ್ರೀಲಂಕಾದಲ್ಲಿ ಹನಿಮೂನ್.. ಇದಾಗಿ ಕೇವಲ ಹದಿನೈದು ದಿನದಲ್ಲೇ ನವ ವಿವಾಹಿತ ಯುವತಿ ಗಂಡನ ಧನದಾಹಕ್ಕೆ ಬೇಸತ್ತು ಸಾವಿಗೆ ಶರಣಾದ ಘಟನೆ ರಾಮಮೂರ್ತಿ ನಗರದಲ್ಲಿ ನಡೆದಿದೆ.‌

ಕಳೆದ ಅಕ್ಟೋಬರ್ 29ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟು, ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ಅದ್ದೂರಿ ರಿಸೆಪ್ಷನ್ ಮಾಡಿಕೊಂಡಿದ್ದರು. ಹತ್ತು ದಿನಗಳ ಹಿಂದೆ ಶ್ರೀಲಂಕಾಗೆ ಹನಿಮೂನ್‌ ಹೋಗಿದ್ದರು. ಆದ್ರೆ, ಅಲ್ಲಿ ಅದೇನಾಯ್ತೋ ಏನೋ ಅರ್ಧಕ್ಕೆ ಶ್ರೀಲಂಕಾದಿಂದ ಇಬ್ಬರೂ ವಾಪಸ್ಸಾಗಿದ್ದರು. ಮನೆಗೆ ಬಂದ ಬಳಿಕ ನೇರವಾಗಿ ತವರು ಮನೆಗೆ ಹೋಗಿದ್ದ ಯುವತಿ ಅಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.

40 ಲಕ್ಷ ಖರ್ಚು ಮಾಡಿ ಅದ್ದೂರಿಯಾಗಿ ಗಾನವಿ ತಂದೆ ಶಶಿಕುಮಾರ್ ಮಗಳ ಮದುವೆ ರಿಸೆಪ್ಷನ್ ಮಾಡಿದ್ದರು. ಮದುವೆ ಆಗಿ ಒಂದೇ ವಾರಕ್ಕೆ ಗಾನವಿ ಪತಿ ಸೂರಜ್ ಇನ್ನೂ ಆರು ಸೆಟ್ ಬಂಗಾರ ಮತ್ತು ಇನೋವಾ ತಂದು ಕೊಡಬೇಕೆಂದು ಕಿರುಕುಳ ಆರಂಭಿಸಿದ್ದ. ವರದಕ್ಷಿಣೆ ನೀಡುವವರೆಗೆ ಮನೆಗೆ ಸೇರಿಸಲ್ಲ ಎಂದು ಪತಿ ಸೂರಜ್ ಡಿಮ್ಯಾಂಡ್ ಇಟ್ಟಿದ್ದ. ಹೀಗಾಗಿ ತವರು ಮನೆಗೆ ಬಂದಿದ್ದ ಗಾನವಿ, ರಾಮಮೂರ್ತಿ ‌ನಗರ ಠಾಣಾ ವ್ಯಾಪ್ತಿಯ ಬಿ. ಚನ್ನಸಂದ್ರದ ತಂದೆಯ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಘಟನೆ ಬಗ್ಗೆ ಬೆಂಗಳೂರಿನ  ರಾಮಮೂರ್ತಿ ನಗರ ಠಾಣೆಯಲ್ಲಿ ಗಂಡ ಸೂರಜ್, ಆತನ ತಾಯಿ ಜಯಂತಿ, ಅಣ್ಣ ಸಂಜಯ್ ವಿರುದ್ಧ ಪ್ರಕರಣ ದಾಖಲಾಗಿದೆ. ಸೂರಜ್ ಧನ ದಾಹ ಎಷ್ಟಿತ್ತು  ಎನ್ನುವುದನ್ನು ಗಾನವಿ ಪೋಷಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮದುವೆ ಬಳಿಕ ಶ್ರೀಲಂಕಾಗೆ ಹನಿಮೂನ್‌ಗೆ ತೆರಳಿದ್ದರು. ಹನಿಮೂನ್ ನಲ್ಲಿಯೂ ಸೂರಜ್‌ ವರದಕ್ಷಿಣೆಯದ್ದೇ ಜಪ ಮಾಡುತ್ತಿದ್ದ. ಪ್ರೀತಿಯಿಂದ ಹೆಂಡತಿ ಹತ್ತಿರ ಹೋದರೂ, ಸೂರಜ್ ಮುಟ್ಟುತ್ತಿರಲಿಲ್ಲವಂತೆ. ಫಸ್ಟ್ ನೈಟ್ ಆಗಬೇಕು ಅಂದರೆ, ಫಸ್ಟ್ ನನ್ನ ಡಿಮ್ಯಾಂಡ್ ಈಡೇರಬೇಕು ಎಂದು ಹೇಳ್ತಿದ್ದನಂತೆ. ವರದಕ್ಷಿಣೆ ಡಿಮ್ಯಾಂಡ್ ಈಡೇರಿದರೇ ಮಾತ್ರವೇ ನಿನ್ನಾಸೆ ಈಡೇರೋದು ಎಂದು ಪತಿ ಸೂರಜ್ ಹೇಳಿದ್ದನಂತೆ. ಇದೇ ವಿಚಾರಕ್ಕೆ ಜಗಳ ಮಾಡಿಕೊಂಡು ಗಾನವಿ ಹನಿಮೂನ್ ನಿಂದ ಅರ್ಧಕ್ಕೆ ಬೆಂಗಳೂರಿಗೆ ವಾಪಸ್ ಬಂದಿದ್ದಾರೆ. ಮನೆಗೆ ಬಂದರೂ ವರದಕ್ಷಿಣೆ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾನೆ. ಮಾತುಕತೆಗೆ ಹೋಗಿದ್ದ ಗಾನವಿ ಫೋಷಕರ ಮೇಲೆಯೂ ಸೂರಜ್ ಫ್ಯಾಮಿಲಿ ದರ್ಪ ತೋರಿದ್ದು ನಿಮ್ಮ ಮಗಳನ್ನ ಕರೆದುಕೊಂಡು ಗೆಟ್ ಔಟ್ ಎಂದಿದ್ದಾನಂತೆ.

ಇದಲ್ಲದೆ, ಆರು ಸೆಟ್ ಒಡವೆ ತಂದು ಕೊಡು, ಇನ್ನೋವಾ ಕಾರು ಬೇಕು ಅಂಥ ಪತಿ ಸೂರಜ್ ಡಿಮ್ಯಾಂಡ್ ಮಾಡಿದ್ದ. ಮಗಳನ್ನ ಮನೆಗೆ ಸೇರಿಸಿಕೊಳ್ಳಿ ಅಂಥ ಗಾನವಿ ತಂದೆ ಅಳಿಯನ ಕಾಲಿಗೆ ಬಿದ್ದರೂ ಕೇಳಿರಲಿಲ್ಲ. ಬಳಿಕ ತಂದೆ ಶಶಿಕುಮಾರ್ ಜೊತೆಗೆ ಗಾನವಿ ವಾಪಸ್ ಬಂದಿದ್ದು ತಂದೆಗೂ ಅವಮಾನ ಮಾಡಿದ್ದರು ಅನ್ನೋ ನೋವಿನಲ್ಲಿ ಗಾನವಿ ಸಾವಿಗೆ ಶರಣಾಗಿದ್ದಾಳೆ. 

ಆತ ಗಂಡಸೇ ಅಲ್ಲ, ತನ್ನ ಸಮಸ್ಯೆ ಮುಚ್ಚಿಡಲು ಕಿರುಕುಳ 

ಆತ ಗಂಡಸೇ ಅಲ್ಲ, ಐವಿಎಫ್ ನಲ್ಲಿ ಮಗು ಮಾಡ್ಕೊಳೋಣ ಅಂಥ ಹೇಳಿದ್ದನಂತೆ. ಅದಕ್ಕೆ ನಮ್ಮ ಮನೆಯ ಹುಡುಗಿನೇ ಬೇಕಿತ್ತಾ?  ಎಂದು ಗಾನವಿ ಪೋಷಕರು ಪ್ರಶ್ನೆ ಮಾಡುತ್ತಿದ್ದಾರೆ. ಗಾನವಿಯ ದೊಡ್ಡಮ್ಮ ಸಾವಿನ ಬಗ್ಗೆ ಮಾತನಾಡಿದ್ದು, ಒಳ್ಳೆಯ ಸಂಬಂಧ ಎಂದು ಮದುವೆ ಮಾಡಿಸಿದ್ದೆವು. ಅವರು ಹೇಳಿದಂತೆ ಅದ್ದೂರಿ ರಿಸೆಪ್ಷನ್ ಮಾಡಿಕೊಟ್ಟೆವು. ವರದಕ್ಷಿಣೆ, ಒಡವೆಗಾಗಿ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಮದುವೆ ಆಗಿ ತಿಂಗಳಾದರೂ ನಮ್ಮ ಹುಡುಗಿಯನ್ನ ಆತ ಟಚ್ ಕೂಡ ಮಾಡಿಲ್ಲ. ಹನಿಮೂನ್ ಅನ್ನು ಪದೇ ಪದೇ ಮುಂದೆ ಹಾಕುತ್ತಿದ್ದ. ಹನಿಮೂನ್‌ಗೆ ಹೋದರೂ ಇಬ್ಬರ ನಡುವೆ ಏನೂ ನಡೆದಿಲ್ಲ. ಮದುವೆ ದಿನದಿಂದಲೂ ಗಾನವಿಗೆ ಹಿಂಸೆ ನೀಡಿದ್ದಾನೆ. ಆತನಲ್ಲಿದ್ದ ಸಮಸ್ಯೆಯನ್ನ ಮುಚ್ಚಿಡಲು ಗಾನವಿಗೆ ಹಿಂಸೆ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ.

A newly married woman from Bengaluru died after allegedly being harassed by her husband and in-laws for dowry, despite an extravagant wedding at Palace Grounds and a honeymoon trip to Sri Lanka. The victim, Ganavi, who married Suraj on October 29, reportedly faced relentless demands for six sets of gold and an Innova car. Even during the honeymoon, Suraj allegedly refused physical intimacy, insisting that dowry demands be met first.