1 ಕಿ. ಮೀ ದೂರದವರೆಗೆ ಟ್ರಾಫಿಕ್ ಪೇದೆಯನ್ನು ಬ್ಯಾನೆಟ್​ ಮೇಲೆ ಹೊತ್ತೊಯ್ದ ಕಾರ್ ಡ್ರೈವರ್

02-10-21 02:56 pm       Headline Karnataka News Network   ಸ್ಪೆಷಲ್ ಕೆಫೆ

ಸಂಚಾರಿ ನಿಯಮ ಉಲ್ಲಂಘಿಸಿದ ಕಾರು ತಡೆಯಲು ಹೋದ ಟ್ರಾಫಿಕ್ ಪೊಲೀಸ್ ನನ್ನೇ  ಬ್ಯಾನೆಟ್​ ಮೇಲೆ ಎಳೆದೊಯ್ದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ, ಅ.2: ಸಂಚಾರಿ ನಿಯಮ ಉಲ್ಲಂಘಿಸಿದ ಕಾರು ತಡೆಯಲು ಹೋದ ಟ್ರಾಫಿಕ್ ಪೊಲೀಸ್ ನನ್ನೇ  ಬ್ಯಾನೆಟ್​ ಮೇಲೆ ಎಳೆದೊಯ್ದಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಕಾರು ಚಾಲಕ 1 ಕಿಲೋ ಮೀಟರ್‌ ದೂರದವರೆಗೆ ಬ್ಯಾನೆಟ್​ ಮೇಲೆ ಕುಳಿತಿದ್ದ ಟ್ರಾಫಿಕ್​ ಪೊಲೀಸ್​ನನ್ನು ಎಳೆದುಕೊಂಡು ಹೋಗಿದ್ದಾನೆ.

ದೆಹಲಿಯ ಅಜಾದ್ ನಗರದ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು ಕಾರಿನ ಚಾಲಕ ರಾಂಗ್‌ ಸೈಡ್‌ನಲ್ಲಿ ಆಗಮಿಸಿದ್ದಕ್ಕಾಗಿ ಸಂಚಾರಿ ಪೊಲೀಸ್​ ವಿಜಯ್ ಸಿಂಗ್ ಗುರವ್ ಕಾರ್‌ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದ್ರೂ ಚಾಲಕ ಕಾರ್‌ ನಿಲ್ಲಿಸದೇ ಪೇದೆಯನ್ನು ಬೋನೆಟ್ ಮೇಲೆ ಕೂರಿಸಿಕೊಂಡು ಜಾಲಿ ಡ್ರೈವ್ ಮಾಡಿದ್ದಾನೆ. 

ಈ ವೇಳೆ ಸಂಚಾರಿ ಪೊಲೀಸ್​ ಕಾರು ತಡೆಯಲು ಪ್ರಯತ್ನಿಸಿ  ಸುಸ್ತಾಗಿ ಹೋಗಿದ್ದಾರೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದು ದುರ್ವರ್ತನೆ ತೋರಿದ ಕಾರು ಚಾಲಕನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

A traffic cop sat on the bonnet of a car in Mumbai’s Andheri in order to stop the driver who had violated a traffic rule. Instead of stopping, the driver drove the car with the traffic cop sitting on the bonnet for one kilometre.