We Dont Think About Those Lines Rishabh Pant Befitting Reply To Threat From Dinesh Karthik Over Place In Indias T20 Line-Up.
">ಬ್ರೇಕಿಂಗ್ ನ್ಯೂಸ್
15-08-22 03:43 pm Source: Vijayakarnataka ಕ್ರೀಡೆ
ಹೊಸದಿಲ್ಲಿ: ಮುಂಬರುವ 2022ರ ಏಷ್ಯಾ ಕಪ್ ಟೂರ್ನಿಯ ಭಾರತ ತಂಡದಲ್ಲಿ ತಮ್ಮ ಹಾಗೂ ದಿನೇಶ್ ಕಾರ್ತಿಕ್ ಅವರ ನಡುವೆ ಕಠಿಣ ಸ್ಪರ್ಧೆ ಬಗ್ಗೆ ರಿಷಭ್ ಪಂತ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಆಗಸ್ಟ್ 27 ರಿಂದ ಆರಂಭವಾಗುವ ಏಷ್ಯಾ ಕಪ್ ಟೂರ್ನಿಯಲ್ಲಿ ಇವರಿಬ್ಬರೂ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ದಿನೇಶ್ ಕಾರ್ತಿಕ್ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ದಿನದಿಂದಲೂ ಟಿ20 ಸ್ವರೂಪದಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಿನೇಶ್ ಕಾರ್ತಿಕ್ ಅಥವಾ ರಿಷಭ್ ಪಂತ್ ಅವರಲ್ಲಿ ಒಬ್ಬರನ್ನು ಪ್ಲೇಯಿಂಗ್ ಇಲೆವೆನ್‌ಗೆ ಪರಿಗಣಿಸಿದರೆ, ಹಾರ್ದಿಕ್ ಪಾಂಡ್ಯ ಜೊತೆಗೆ ನಾಲ್ವರು ಬೌಲರ್‌ಗಳನ್ನು ಆಡಿಸಬಹುದು ಎಂದು ಹಲವು ಮಾಜಿ ಆಟಗಾರರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ರಿಷಭ್ ಪಂತ್, ಪ್ರತಿಯೊಬ್ಬರೂ ಶೇ. 100ರಷ್ಟು ಕೊಡುಗೆಯನ್ನು ತಂಡಕ್ಕೆ ನೀಡಲು ಬಯಸುತ್ತಾರೆ. ಹಾಗಾಗಿ ತಂಡದ ಆಯ್ಕೆಯ ಬಗ್ಗೆ ಚಿಂತಿಸುವುದಿಲ್ಲ. ಪರಿಸ್ಥಿತಿಗಳು ಹಾಗೂ ತಂಡದ ಅನುಕೂಲಕ್ಕೆ ಅನುಗುಣವಾಗಿ ಕೋಚ್ ಹಾಗೂ ನಾಯಕ ಆಯ್ಕೆ ಮಾಡುವ ಸಂಯೋಜನೆ ಇದಾಗಿರುತ್ತದೆ ಎಂದಿದ್ದಾರೆ.
"ಈ ಪದಗಳ ಬಗ್ಗೆ ನಾವು ಚಿಂತಿಸುತ್ತಿಲ್ಲ. ನಾವು ವೈಯಕ್ತಿಕವಾಗಿ ತಂಡಕ್ಕೆ ಶೇ. 100ರಷ್ಟು ಕೊಡುಗೆಯನ್ನು ನೀಡಲು ಬಯಸುತ್ತೇವೆ. ಪರಿಸ್ಥಿತಿ ಹಾಗೂ ತಂಡದ ಅನುಕೂಲಕ್ಕೆ ಅನುಗುಣವಾಗಿ ಇನ್ನುಳಿದ ಸಂಗತಿಗಳನ್ನು ಕೋಚ್ ಹಾಗೂ ನಾಯಕ ಸೇರಿದಂತೆ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧರಿಸಲಿದೆ," ಎಂದು ರಿಷಭ್ ಪಂತ್ ಹೇಳಿರುವುದನ್ನು ಝೀ ಹಿಂದೂಸ್ಥಾನ್ ವರದಿ ಮಾಡಿದೆ.
ಕಳೆದ ಜೂನ್ ತಿಂಗಳಿನಿಂದ ಭಾರತ ತಂಡದಲ್ಲಿ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಇಬ್ಬರೂ ಜೊತೆಯಲ್ಲಿಯೇ ಆಡುತ್ತಿದ್ದಾರೆ. 2022ರ ಐಪಿಎಲ್ ಟೂರ್ನಿ ಮುಗಿದ ಬಳಿಕ ದಕ್ಷಿಣ ಆಫ್ರಿಕಾ ವಿರುದ್ಧ ತವರು ಟಿ20 ಸರಣಿಯಲ್ಲಿ ಈ ಇಬ್ಬರೂ ಭಾರತ ತಂಡದಲ್ಲಿ ಆಡಿದ್ದರು. ಈ ಸರಣಿಯಲ್ಲಿ ನಾಯಕ ಹಾಗೂ ವಿಕೆಟ್ ಕೀಪರ್ ಜವಾಬ್ದಾರಿಯನ್ನು ಪಂತ್ ಪೂರೈಸಿದ್ದರು. ಆದರೆ, ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಷರ್ ಕಾರ್ಯವನ್ನು ನಿರ್ವಹಿಸಿದ್ದರು.
ಅಂದಹಾಗೆ ಆಗಸ್ಟ್ 18 ರಿಂದ ಜಿಂಬಾಬ್ವೆ ವಿರುದ್ಧ ಆರಂಭವಾಗುವ ಮೂರು ಪಂದ್ಯಗಳ ಓಡಿಐ ಕ್ರಿಕೆಟ್ ಸರಣಿಯಲ್ಲಿ ರಿಷಭ್ ಪಂತ್ ಹಾಗೂ ದಿನೇಶ್ ಕಾರ್ತಿಕ್ ಆಡುತ್ತಿಲ್ಲ. ಆದರೆ, ಯುಎಇ ಆತಿಥ್ಯದಲ್ಲಿ ನಡೆಯುವ 2022ರ ಏಷ್ಯಾ ಕಪ್ ಟೂರ್ನಿಯ ಭಾರತ ತಂಡದಲ್ಲಿ ಈ ಇಬ್ಬರೂ ಸ್ಥಾನ ಪಡೆದಿದ್ದಾರೆ. ಐಸಿಸಿ ಟಿ20 ವಿಶ್ವಕಪ್ ಭಾರತ ತಂಡದ ಆಯ್ಕೆಗೆ ಏಷ್ಯಾ ಕಪ್ ಟೂರ್ನಿ ಈ ಇಬ್ಬರಿಗೂ ಪ್ರಮುಖ ವೇದಿಕೆಯಾಗಿದೆ.
ಆಗಸ್ಟ್ 27 ರಿಂದ ಈ ಟೂರ್ನಿ ಅಧಿಕೃತವಾಗಿ ಆರಂಭವಾಗಲಿದೆ. ಅದರಂತೆ ಆಗಸ್ಟ್ 28 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಟೂರ್ನಿಯ ತಮ್ಮ ಮೊದಲನೇ ಪಂದ್ಯದಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಬಹುಶಃ ದಿನೇಶ್ ಕಾರ್ತಿಕ್ ಬದಲು ರಿಷಭ್ ಪಂತ್ ಆಡುವ ಸಾಧ್ಯತೆ ಇದೆ.
We Dont Think About Those Lines Rishabh Pant Befitting Reply To Threat From Dinesh Karthik Over Place In Indias T20 Line-Up.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
27-09-23 05:08 pm
HK News Desk
Anand Mahindra, Case Against: ಸ್ಕಾರ್ಪಿಯೋ ಅಪಘಾ...
26-09-23 07:44 pm
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
27-09-23 10:42 pm
Mangalore Correspondent
Indian Coast Guard Mangalore: ಸಮುದ್ರ ಮಧ್ಯೆ ಮೀ...
27-09-23 10:01 pm
Mangalore Bus Protest, Assult: ಪ್ರಯಾಣಿಕ - ಬಸ್...
27-09-23 12:57 pm
Mangalore, Tempo driver suicide: ಬಾವಿಗೆ ಹಾರಿ...
27-09-23 12:31 pm
Indiana Hospital, arrest: ಇಂಡಿಯಾನ ಆಸ್ಪತ್ರೆಯಲ್...
26-09-23 02:24 pm
27-09-23 11:09 pm
HK News Desk
Mangalore Police, Kadri: ಗಂಡ - ಹೆಂಡ್ತಿ ಜಗಳ ;...
27-09-23 11:26 am
Mangalore OTP Fraud, Sub Registrar office Bio...
26-09-23 10:44 pm
Kerala, drug dealer trains dogs: ನಾಯಿ ಸಾಕಣೆ ಕ...
26-09-23 07:20 pm
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm