Asia Cup 2022 Virat Kohli Should Have Named Players Who Didnt Message Him After He Quit Test Captaincy Says Sunil Gavaskar.
">ಬ್ರೇಕಿಂಗ್ ನ್ಯೂಸ್
06-09-22 02:15 pm Source: Vijayakarnataka ಕ್ರೀಡೆ
ದುಬೈ: ಟೆಸ್ಟ್ ಕ್ಯಾಪ್ಟನ್ಸಿಗೆ ವಿರಾಟ್ ಕೊಹ್ಲಿ ವಿದಾಯ ಹೇಳಿದ ಬಳಿಕ ಅವರಿಗೆ ಹಾಲಿ ಮತ್ತು ಮಾಜಿ ಕ್ರಿಕೆಟಿಗರಲ್ಲಿ ಯಾರೆಲ್ಲಾ ಸಂದೇಶ ರವಾನಿಸಿಲ್ಲ, ಅವರೆಲ್ಲರ ಹೆಸರನ್ನು ವಿರಾಟ್ ಬಹಿರಂಗ ಪಡಿಸಬೇಕಿತ್ತು ಎಂದು ಮಾಜಿ ನಾಯಕ ಸುನೀಲ್ ಗವಾಸ್ಕರ್ ತಾಕೀತು ಮಾಡಿದ್ದಾರೆ. ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಗವಾಸ್ಕರ್, ಪತ್ರಿಕಾಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಹೀಗೆಲ್ಲಾ ಮಾತನಾಡಿರುವುದು ತಂಡದ ಡ್ರೆಸಿಂಗ್ ರೂಮ್‌ನಲ್ಲಿ ಯಾವುದೂ ಸರಿಯಿಲ್ಲ ಎಂಬ ಸಂದೇಶ ನೀಡುತ್ತದೆ. ಅವರು ಹೀಗೆ ಮಾಡಲು ಕಾರಣವಾದರೂ ಏನು? ಎಂದು ಪ್ರಶ್ನೆ ಮಾಡಿದ್ದಾರೆ.
ಇಲ್ಲಿನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ (ಸೆ.04) ನಡೆದ ಏಷ್ಯಾ ಕಪ್ 2022 ಟೂರ್ನಿಯ ಸೂಪರ್-4 ಪಂದ್ಯದಲ್ಲಿ ಟೀಮ್ ಇಂಡಿಯಾ ಜಿದ್ದಾಜಿದ್ದಿನ ಪೈಪೋಟಿಯ ನಡುವೆ 5 ವಿಕೆಟ್‌ಗಳ ಸೋಲುಂಡಿತು. ಪಂದ್ಯದಲ್ಲಿ ಭಾರತದ ಪರ 44 ಎಸೆತಗಳಲ್ಲಿ 60 ರನ್ ಬಾರಿಸಿ ಉತ್ತಮ ಪ್ರದರ್ಶನ ತೋರಿದ್ದ ಮಾಜಿ ನಾಯಕ ವಿರಾಟ್ ಕೊಹ್ಲಿ, ತಂಡದ ಪರವಾಗಿ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ವೇಳೆ, ತಾವು ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟಾಗ ಎಂ.ಎಸ್ ಧೋನಿ ಹೊರತಾಗಿ ಬೇರೆ ಯಾವ ಆಟಗಾರರು ಕೂಡ ಸಂದೇಶ ಕಳಿಸಲಿಲ್ಲ ಎಂದು ಹೇಳಿಕೊಂಡರು. ಅಷ್ಟೇ ಅಲ್ಲದೆ ಎಲ್ಲರ ಬಳಿಯೂ ನನ್ನ ಫೋನ್ ನಂಬರ್ ಇದೆ ಆದರೆ ಯಾರೊಬ್ಬರೂ ಸಂಪರ್ಕಿಸುವ ಪ್ರಯತ್ನ ಮಾಡಲಿಲ್ಲ ಎಂದು ಬೇಸರ ತೋಡಿಕೊಂಡಿದ್ದರು.
"ಡ್ರೆಸಿಂಗ್ ರೂಮ್ ಒಳಗಿನ ಪರಿಸ್ಥಿತಿಗಳ ಬಗ್ಗೆ ನನಗೆ ತಿಳಿದಿಲ್ಲ. ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟಾಗ ತಮ್ಮನ್ನು ಸಂಪರ್ಕಿಸಿದ ಏಕೈಕ ವ್ಯಕ್ತಿಯ ಹೆಸರು ಬಹಿರಂಗ ಪಡಿಸಿರುವಾಗ, ಸಂಪರ್ಕಿಸದ ವ್ಯಕ್ತಿಗಳ ಹೆಸರನ್ನೂ ಅವರು ತಿಳಿಸಬೇಕಿತ್ತು. ಆಗ ಎಲ್ಲವೂ ತಿಳಿಯಾಗುತ್ತಿತ್ತು. ಯಾರೆಲ್ಲಾ ಸಂಪರ್ಕಿಸಲಿಲ್ಲ ಎಂಬುದರ ಬಗ್ಗೆ ಸ್ಪಷ್ಟತೆ ಸಿಗುತ್ತಿತ್ತು," ಎಂದು ಗವಾಸ್ಕರ್ ಹೇಳಿದ್ದಾರೆ.
"ಡ್ರೆಸಿಂಗ್ ರೂಮ್ ಒಳಗಿನ ಪರಿಸ್ಥಿತಿಗಳ ಬಗ್ಗೆ ನನಗೆ ತಿಳಿದಿಲ್ಲ. ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟಾಗ ತಮ್ಮನ್ನು ಸಂಪರ್ಕಿಸಿದ ಏಕೈಕ ವ್ಯಕ್ತಿಯ ಹೆಸರು ಬಹಿರಂಗ ಪಡಿಸಿರುವಾಗ, ಸಂಪರ್ಕಿಸದ ವ್ಯಕ್ತಿಗಳ ಹೆಸರನ್ನೂ ಅವರು ತಿಳಿಸಬೇಕಿತ್ತು. ಆಗ ಎಲ್ಲವೂ ತಿಳಿಯಾಗುತ್ತಿತ್ತು. ಯಾರೆಲ್ಲಾ ಸಂಪರ್ಕಿಸಲಿಲ್ಲ ಎಂಬುದರ ಬಗ್ಗೆ ಸ್ಪಷ್ಟತೆ ಸಿಗುತ್ತಿತ್ತು," ಎಂದು ಗವಾಸ್ಕರ್ ಹೇಳಿದ್ದಾರೆ.
ಈ ವರ್ಷ ಇಂಗ್ಲೆಂಡ್ ಪ್ರವಾಸದ ಬಳಿಕ ಒಂದು ತಿಂಗಳ ವಿಶ್ರಾಂತಿ ತೆಗೆದುಕೊಂಡ ವಿರಾಟ್ ಕೊಹ್ಲಿ, ಏಷ್ಯಾ ಕಪ್ 2022 ಟೂರ್ನಿಯ ಮೂಲಕ ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡಿದರು. ಟೂರ್ನಿಯಲ್ಲಿ ಆಡಿದ ಮೂರು ಇನಿಂಗ್ಸ್‌ಗಳಲ್ಲಿ ಕೊಹ್ಲಿ ಕ್ರಮವಾಗಿ 35, 59 ಮತ್ತು 60 ರನ್‌ಗಳನ್ನು ಗಳಿಸಿದ್ದಾರೆ. ಪಂದ್ಯದಿಂದ ಪಂದ್ಯಕ್ಕೆ ತಮ್ಮ ಬ್ಯಾಟಿಂಗ್ ಪ್ರದರ್ಶನವನ್ನು ಸುಧಾರಿಸುವ ಮೂಲಕ ಶ್ರೇಷ್ಠ ಲಯಕ್ಕೆ ಮರಳಿದ ಸಂದೇಶ ರವಾನಿಸುತ್ತಿದ್ದಾರೆ.
ತಮ್ಮ ವೃತ್ತಿಬದುಕಿನ ಅತ್ಯಂತ ಹೀನಾಯ ಲಯದಲ್ಲಿರುವ ವಿರಾಟ್ ಕೊಹ್ಲಿ, 2019ರ ನವೆಂಬರ್ ಬಳಿಕ ಯಾವುದೇ ಮಾದರಿಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿಲ್ಲ. ಕಳೆದ ಇಂಗ್ಲೆಂಡ್ ಪ್ರವಾಸದಲ್ಲೂ ಕೊಹ್ಲಿ ಸಾಲು ಸಾಲು ವೈಫಲ್ಯ ಅನುಭವಿಸಿದ್ದರು. ಅಷ್ಟೇ ಅಲ್ಲದೆ ಏಷ್ಯಾ ಕಪ್ 2022 ಟೂರ್ನಿ ಆರಂಭಕ್ಕೂ ಮುನ್ನ ತಾವು ಮಾನಸಿಕ ಸಮಸ್ಯೆಯಿಂದ ಬಳಲಿದ್ದಾಗಿ ಒಪ್ಪಿಕೊಂಡಿದ್ದರು.
Asia Cup 2022 Virat Kohli Should Have Named Players Who Didnt Message Him After He Quit Test Captaincy Says Sunil Gavaskar.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm