Icc T20 World Cup Sunil Gavaskar Backs The Indian Team Selection Amid Criticism.
">ಬ್ರೇಕಿಂಗ್ ನ್ಯೂಸ್
19-09-22 03:26 pm Source: Vijayakarnataka ಕ್ರೀಡೆ
ಬೆಂಗಳೂರು: ಮುಂಬರುವ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲುವನ್ನು ಎದುರು ನೋಡುತ್ತಿದೆ. ಈ ಸಲುವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸೆಪ್ಟೆಂಬರ್ 12ರಂದು ರೋಹಿತ್ ಶರ್ಮಾ ಸಾರಥ್ಯದ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿತ್ತು. ಆದರೆ, ತಂಡದ ಆಯ್ಕೆಯನ್ನು ಹಲವು ಮಾಜಿ ಕ್ರಿಕೆಟಿಗರು ಪ್ರಶ್ನೆ ಮಾಡಿದ್ದರು. ಕೆಲ ನಿರ್ದಿಷ್ಟ ಆಟಗಾರರನ್ನು ಕೈಬಿಟ್ಟ ವಿಚಾರವಾಗಿ ಅಸಮಾಧಾನ ಕೂಡ ಹೊರಹಾಕಿದರು. ಈ ಬಗ್ಗೆ ಮಾತನಾಡಿರುವ ಮಾಜಿ ನಾಯಕ ಸುನೀಲ್ ಗವಾಸ್ಕರ್, ಟೀಮ್ ಇಂಡಿಯಾ ಆಯ್ಕೆ ಸಮಿತಿ ತೆಗೆದುಕೊಂಡಿರುವ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಕ್ರಿಕೆಟ್ ಪಂಡಿತರು ಮತ್ತು ಮಾಜಿ ಕ್ರಿಕೆಟಿಗರಿಗೆ ಈಗ ಆಯ್ಕೆ ಮಾಡಲಾಗಿರುವ ತಂಡವನ್ನು ಬೆಂಬಲಿಸಿ ಎಂದು ಮನವಿ ಕೂಡ ಮಾಡಿದ್ದಾರೆ.
ಆಯ್ಕೆಯನ್ನು ಪ್ರಶ್ನೆ ಮಾಡಬಾರದು: ಗವಾಸ್ಕರ್
ಬಹುತೇಕ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದರೂ, ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿಯ ನಿರ್ಧಾರವನ್ನು ಗವಾಸ್ಕರ್ ಸಮರ್ಥಿಸಿದ್ದಾರೆ. ಅಷ್ಟೇ ಅಲ್ಲದೆ ಆಯ್ಕೆ ಸಮಿತಿಯ ನಿರ್ಧಾರವನ್ನು ಎಲ್ಲರು ಗೌರವಿಸಬೇಕು ಎಂದಿದ್ದಾರೆ.
"ಎಲ್ಲ ತಂಡಗಳಂತೆ ಭಾರತದ ಈ ತಂಡಕ್ಕೂ ಕೊಂಚ ಅದೃಷ್ಟ ಕೈ ಹಿಡಿದರೆ ಸಾಕು ಖಂಡಿತಾ ಟ್ರೋಫಿ ಗೆಲ್ಲುತ್ತದೆ. ತಾಯ್ನಾಡಿಗೆ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದು ತರುವ ಸಾಮರ್ಥ್ಯ ಈ ತಂಡಕ್ಕಿದೆ. ಒಮ್ಮೆ ತಂಡದ ಆಯ್ಕೆ ಆದ ಬಳಿಕ ಅದು ನಮ್ಮ ಭಾರತ ತಂಡ ಎಂಬುದನ್ನು ಗೌರವಿಸಬೇಕು. ಅದಕ್ಕೆ ಬೆಂಬಲಿಸಬೇಕು. ಆಯ್ಕೆ ಸಮಿತಿಯ ನಿರ್ಧಾರವನ್ನು ಪ್ರಶ್ನೆ ಮಾಡುವುದರಲ್ಲಿ ಅರ್ಥವಿಲ್ಲ. ಇದರಿಂದ ಕೆಲ ಆಟಗಾರರ ಆತ್ಮವಿಶ್ವಾಸಕ್ಕೆ ದಕ್ಕೆಯಾಗುತ್ತದೆ," ಎಂದು ಇಂಡಿಯನ್ ಎಕ್‌ಪ್ರೆಸ್‌ಗೆ ನೀಡಿರುವ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದ್ದಾರೆ.
ಆಯ್ಕೆಯನ್ನು ಪ್ರಶ್ನೆ ಮಾಡಬಾರದು: ಗವಾಸ್ಕರ್
ಬಹುತೇಕ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದರೂ, ಟೀಮ್ ಇಂಡಿಯಾ ಸೆಲೆಕ್ಷನ್ ಕಮಿಟಿಯ ನಿರ್ಧಾರವನ್ನು ಗವಾಸ್ಕರ್ ಸಮರ್ಥಿಸಿದ್ದಾರೆ. ಅಷ್ಟೇ ಅಲ್ಲದೆ ಆಯ್ಕೆ ಸಮಿತಿಯ ನಿರ್ಧಾರವನ್ನು ಎಲ್ಲರು ಗೌರವಿಸಬೇಕು ಎಂದಿದ್ದಾರೆ.
"ಎಲ್ಲ ತಂಡಗಳಂತೆ ಭಾರತದ ಈ ತಂಡಕ್ಕೂ ಕೊಂಚ ಅದೃಷ್ಟ ಕೈ ಹಿಡಿದರೆ ಸಾಕು ಖಂಡಿತಾ ಟ್ರೋಫಿ ಗೆಲ್ಲುತ್ತದೆ. ತಾಯ್ನಾಡಿಗೆ ಟಿ20 ಕ್ರಿಕೆಟ್ ವಿಶ್ವಕಪ್ ಗೆದ್ದು ತರುವ ಸಾಮರ್ಥ್ಯ ಈ ತಂಡಕ್ಕಿದೆ. ಒಮ್ಮೆ ತಂಡದ ಆಯ್ಕೆ ಆದ ಬಳಿಕ ಅದು ನಮ್ಮ ಭಾರತ ತಂಡ ಎಂಬುದನ್ನು ಗೌರವಿಸಬೇಕು. ಅದಕ್ಕೆ ಬೆಂಬಲಿಸಬೇಕು. ಆಯ್ಕೆ ಸಮಿತಿಯ ನಿರ್ಧಾರವನ್ನು ಪ್ರಶ್ನೆ ಮಾಡುವುದರಲ್ಲಿ ಅರ್ಥವಿಲ್ಲ. ಇದರಿಂದ ಕೆಲ ಆಟಗಾರರ ಆತ್ಮವಿಶ್ವಾಸಕ್ಕೆ ದಕ್ಕೆಯಾಗುತ್ತದೆ," ಎಂದು ಇಂಡಿಯನ್ ಎಕ್‌ಪ್ರೆಸ್‌ಗೆ ನೀಡಿರುವ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದ್ದಾರೆ.
ಟೀಮ್ ಇಂಡಿಯಾದ ಮಾಜಿ ಚೀಫ್ ಸೆಲೆಕ್ಟರ್ ದಿಲೀಪ್ ವೆಂಗ್ಸರ್ಕರ್ ಅವರಿಗೂ ವಿಶ್ವ ಕಪ್ ತಂಡದ ಆಯ್ಕೆ ಬಗ್ಗೆ ಅಸಮಾಧಾನವಿದೆ. "ನಾನು ಈ ವಿಶ್ವಕಪ್ ತಂಡಕ್ಕೆ ಮೊಹಮ್ಮದ್ ಶಮಿ, ಉಮ್ರಾನ್ ಮಲಿಕ್ ಮತ್ತು ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡುತ್ತಿದ್ದೆ. ಈ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಅಬ್ಬರಿಸಿದ್ದಾರೆ. ಹೀಗಾಗಿ ಅವರಿಗೆ ದೀರ್ಘ ಕಾಲದ ಅವಕಾಶ ನೀಡುತ್ತಿದ್ದೆ," ಎಂದು ವೆಂಗ್ಸರ್ಕರ್
ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್ (ವಿಕೆಟ್‌ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್‌ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್.ಕಾಯ್ದಿರಿಸಿದ ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ದೀಪಕ್ ಚಹರ್, ರವಿ ಬಿಷ್ಣೋಯ್
ಪಾಕಿಸ್ತಾನ ವಿರುದ್ಧ ಮೊದಲ ಪಂದ್ಯ
2020ರಲ್ಲೇ ನಡೆಯಬೇಕಿದ್ದ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯನ್ನು ಕೋವಿಡ್-19 ಕಾರಣ 2022ಕ್ಕೆ ಮುಂದೂಡಲಾಗಿತ್ತು. ಅಂತೆಯೇ ಈ ವರ್ಷ ಆಸ್ಟ್ರೇಲಿಯಾದ ಆತಿಥ್ಯದಲ್ಲೇ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿ ನಡೆಯುತ್ತಿದ್ದು, ಅಕ್ಟೋಬರ್ 16ರಿಂದ ನವೆಂಬರ್ 13ರವರೆಗೆ ಜರುಗಲಿದೆ. ಟೂರ್ನಿ ಸಲುವಾಗಿ ಬಿಸಿಸಿಐ ಈಗಾಗಲೇ 15 ಆಟಗಾರರ ತಂಡ ಪ್ರಕಟ ಮಾಡಿದೆ. ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ, ಅ.10ರಂದು ಆಸೀಸ್ ನಾಡಿಗೆ ಪ್ರಯಾಣ ಬೆಳೆಸಲಿದ್ದು, ಮೊದಲಿಗೆ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದೆ. ಬಳಿಕ ಸೂಪರ್-12 ಹಂತದಲ್ಲಿ ತನ್ನ ಮೊದಲ ಪಂದ್ಯದಲ್ಲೇ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಣಸಲಿದೆ.
Icc T20 World Cup Sunil Gavaskar Backs The Indian Team Selection Amid Criticism.
01-12-23 10:57 pm
HK News Desk
BJP Mla Munirathna, Bomb Email to schools in...
01-12-23 10:28 pm
Chikmagaluru news lawyer, Police: ಹೆಲ್ಮೆಟ್ ಹಾ...
01-12-23 06:08 pm
Bangalore School Bomb Mail: ಬಾಂಬ್ ಮೇಲ್ ; ಟೈಪ್...
01-12-23 05:49 pm
Bengaluru, schools get bomb threat on email:...
01-12-23 03:29 pm
01-12-23 08:02 pm
HK News Desk
ದೇವರ ದರ್ಶನಕ್ಕೆ ಹೊರಟವರು ಮಸಣಕ್ಕೆ ; ಚಾಲಕ ನಿದ್ದೆಗ...
01-12-23 05:19 pm
EXIT POLL- ಪಂಚ ರಾಜ್ಯಗಳ ಮತದಾನೋತ್ತರ ಸಮೀಕ್ಷೆ ; ಮ...
30-11-23 09:40 pm
ಯುಪಿಐ ಪಾವತಿ ವ್ಯವಸ್ಥೆಗೆ ಕಡಿವಾಣ ಹಾಕಲು ಚಿಂತನೆ ;...
30-11-23 09:02 pm
ರಾಷ್ಟ್ರಗೀತೆಗೆ ಅವಮಾನ ; 12 ಬಿಜೆಪಿ ಶಾಸಕರ ವಿರುದ್ಧ...
30-11-23 07:29 pm
01-12-23 08:06 pm
Mangalore Correspondent
Sunil Kumar Bajal: ಗ್ರಾಮ ಪಂಚಾಯತ್ ಪುಸ್ತಕ ಬರಹಗಾ...
01-12-23 06:33 pm
Mangalore Ullal, garbage collection van: ತುಕ್...
01-12-23 02:18 pm
S L Boje Gowda, BJP, JDS, Mangalore: ವಿಧಾನ ಪರ...
01-12-23 01:45 pm
Mangalore Catholics, Tipu attack,Kirem: ಟಿಪ್ಪ...
30-11-23 04:43 pm
01-12-23 10:41 pm
Bangalore Correspondent
Fraud Case, Mangalore: ಅಪಾರ್ಟ್ಮೆಂಟ್ ನಲ್ಲಿ ಫ್ಲ...
01-12-23 04:39 pm
Baby Sale Bangalore: ನವಜಾತ ಶಿಶು ಮಾರಾಟ ಕೇಸ್ ;...
30-11-23 07:35 pm
ನಕಲಿ ನೋಟು ಸಪ್ಲೈ , ಇನ್ಶೂರೆನ್ಸ್ ಹೆಸ್ರಲ್ಲಿ ಜನರಿ...
30-11-23 07:24 pm
Bangalore Mangalore News, Mobile Naked Photos...
30-11-23 03:15 pm