ಬ್ರೇಕಿಂಗ್ ನ್ಯೂಸ್
30-06-24 01:45 pm HK News Desk ಕ್ರೀಡೆ
ನವದೆಹಲಿ, ಜೂನ್ 30: ಸೋತ ನೆಲದಲ್ಲೇ ಗೆದ್ದು ತೋರಿಸಬೇಕು ಎನ್ನುವುದು ನಾಣ್ಣುಡಿ. ಇದೇ ಮಾತನ್ನು ಭಾರತ ಕ್ರಿಕಿಟ್ ತಂಡ 17 ವರ್ಷಗಳ ಬಳಿಕ ಸಾಧಿಸಿ ತೋರಿಸಿದೆ. 2007ರಲ್ಲಿ ಮೊದಲ ಟಿ20 ವಿಶ್ವಕಪ್ ಗೆದ್ದ ನಂತರ ಮತ್ತೊಮ್ಮೆ ವಿಶ್ವಕಪ್ ಮುತ್ತಿಕ್ಕಿದೆ. ಅಷ್ಟೇ ಅಲ್ಲ, ರಾಹುಲ್ ದ್ರಾವಿಡ್ ಕೋಚ್ ಆಗಿ ತನ್ನ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ನೆಲದಲ್ಲಿ ಅಂದು ಸೋಲು ಕಂಡಿದ್ದ ಕಹಿ ನೆನಪನ್ನು ಅಳಿಸಿ ಹಾಕಿದ್ದಾರೆ.
2007ರಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟ ವೆಸ್ಟ್ ಇಂಡೀಸ್ ನಲ್ಲಿ ನಡೆದಿದ್ದಾಗ ಟೀಮ್ ಇಂಡಿಯಾ ನಾಯಕನಾಗಿ ರಾಹುಲ್ ದ್ರಾವಿಡ್ ಇದ್ದರು. ಸೂಪರ್ ಲೀಗ್ ಹಂತದಲ್ಲೇ ಭಾರತ ತಂಡ ಕ್ರಿಕೆಟ್ ಶಿಶು ಬಾಂಗ್ಲಾದೇಶ ಎದುರಲ್ಲಿ ಸೋಲುಂಡು ಹೊರ ಬಿದ್ದಾಗ ತೀವ್ರ ಟೀಕೆ ಕೇಳಿಬಂದಿತ್ತು. ಧೋನಿಯ ಮನೆಗೆ ಕಲ್ಲು ತೂರಾಟವೂ ನಡೆದಿತ್ತು. ಇದರಿಂದ ಹೆಚ್ಚು ಮುಜುಗರ ಅನುಭವಿಸಿದ್ದು ರಾಹುಲ್ ದ್ರಾವಿಡ್. ಆನಂತರ ನಾಯಕ ಸ್ಥಾನವನ್ನೇ ರಾಹುಲ್ ತ್ಯಜಿಸಿದ್ದರು. ಇದೀಗ ಅದೇ ಕೆರಿಬಿಯನ್ ನಾಡಿನಲ್ಲಿ ತನ್ನದೇ ತರಬೇತಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿ ಗೆಲ್ಲಿಸಿದ್ದಾರೆ. 17 ವರ್ಷಗಳ ಹಳೆಯ ಕಹಿ ಘಟನೆಗೆ ಸೇಡು ತೀರಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಭಾರತ ತಂಡ ಈ ಬಾರಿ ಟಿ ಟ್ವೆಂಟಿ ವಿಶ್ವಕಪ್ ಗೆಲ್ಲುತ್ತಿದ್ದಂತೆ ರಾಹುಲ್ ದ್ರಾವಿಡ್ ಕೋಚ್ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ. ಮಹಾಭಾರತದಲ್ಲಿ ದ್ರೋಣ, ತನ್ನನ್ನು ಅವಮಾನಿಸಿದ್ದ ದ್ರುಪದ ರಾಜನಿಗೆ ತನ್ನ ಶಿಷ್ಯ ಅರ್ಜುನನ ಮೂಲಕ ಬಂಧಿಸಿ ಕರೆತಂದು ಹಳೆ ಸೇಡು ತೀರಿಸಿಕೊಂಡಿದ್ದ ಕತೆಯಿದೆ. ಅದೇ ಮಾದರಿಯಲ್ಲಿ ರಾಹುಲ್ ತನಗೆ ಸಿಗದ ಗೆಲುವನ್ನು ಅದೇ ನೆಲದಲ್ಲಿ ತನ್ನ ಶಿಷ್ಯರ ಮೂಲಕ ತನ್ನದಾಗಿಸಿದ್ದಾರೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಸ್ಟಾರ್ ಆಟಗಾರರ ತಂಡಕ್ಕೆ ತರಬೇತಿ ನೀಡುವುದು ರಾಹುಲ್ ದ್ರಾವಿಡ್‌ಗೆ ಸವಾಲಾಗಿತ್ತು. ಆದರೆ ಯುವ ಬಳಗ ಮತ್ತು ಸ್ಟಾರ್ ಗಳನ್ನು ಸಮತೋಲನದಲ್ಲಿ ಇಟ್ಟುಕೊಂಡು ತಂಡವನ್ನು ಮುನ್ನಡೆಸಿದ್ದು ಕಪ್ ಗೆಲ್ಲುವಂತೆ ಮಾಡಿದ್ದಾರೆ. ಆಮೂಲಕ ವಿದೇಶಿ ಕೋಚ್ ಆಗಬೇಕಿಲ್ಲ, ಭಾರತೀಯ ಕೋಚ್ ಗಳೂ ಕಪ್ ಗೆಲ್ಲಿಸುತ್ತಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಹಾಗೆ ನೋಡಿದರೆ ಕಳೆದ ವರ್ಷವೇ ಭಾರತ ತಂಡ ಏಕದಿನ ವಿಶ್ವಕಪ್ ಗೆಲ್ಲಬೇಕಿತ್ತು. ಟೂರ್ನಿಯುದ್ದಕ್ಕೂ ಅಜೇಯರಾಗಿದ್ದ ಭಾರತದ ಬಳಗ ಫೈನಲಿನಲ್ಲಿ ಮುಗ್ಗರಿಸಿತ್ತು. ಈ ಬಾರಿ ಟಿ ಟ್ವೆಂಟಿ ವಿಶ್ವ ಕಿರೀಟ ಗೆದ್ದು ರೋಹಿತ್ ಬಳಗ ಬೀಗಿದೆ. ಟೆಸ್ಟ್ ಕ್ರಿಕೆಟ್ ನಲ್ಲಿ ಗೋಡೆಯೆಂದೇ ಖ್ಯಾತರಾಗಿದ್ದ ರಾಹುಲ್ ದ್ರಾವಿಡ್ ಅತಿ ವೇಗವೇ ಸರ್ವಸ್ವ ಆಗಿರುವ ಟಿ ಟ್ವೆಂಟಿಯಲ್ಲಿ ತಂಡವನ್ನು ಗೆಲ್ಲಿಸಿ ಮಿಂಚು ಹರಿಸಿದ್ದಾರೆ.
ಇದೇ ವೇಳೆ, ವಿಶ್ವ ಕಪ್ ಗೆಲುವಿನೊಂದಿಗೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ ಟ್ವೆಂಟಿ ಮಾದರಿಯ ಆಟಕ್ಕೆ ವಿದಾಯ ಹೇಳಿದ್ದಾರೆ. ಫೈನಲ್ ಪಂದ್ಯದಲ್ಲಿ ಮಿಂಚಿನ ಆಟವಾಡಿ 76 ರನ್ ಸಿಡಿಸಿದ್ದ ವಿರಾಟ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದು, ಇದು ತನ್ನ ಕೊನೆಯ ಟಿ ಟ್ವೆಂಟಿ ಪಂದ್ಯ ಎಂದು ಹೇಳಿ ವಿದಾಯ ಘೋಷಣೆ ಮಾಡಿದ್ದರು. ಇದಾದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಂಡ ರೋಹಿತ್ ಶರ್ಮಾ ಕೂಡ ತಮ್ಮ ಟಿ20-ಐ ವೃತ್ತಿ ಬದುಕು ಈ ಟ್ರೋಫಿ ಗೆಲುವಿನೊಂದಿಗೆ ಅಂತ್ಯಗೊಂಡಿದೆ ಎಂದಿದ್ದಾರೆ.
'ಇದು ನನ್ನ ಟಿ20-ಐ ಕೆರಿಯರ್‌ನ ಕಡೇ ಪಂದ್ಯ. ಈ ಮಾದರಿಯ ಕ್ರಿಕೆಟ್ ಆಡಲು ಶುರು ಮಾಡಿದ ದಿನದಿಂದಲೂ ಆನಂದಿಸುತ್ತಾ ಬಂದಿದ್ದೇನೆ. ಇದಕ್ಕಿಂತಲೂ ಉತ್ತಮ ಸಮಯ ನಿವೃತ್ತಿಗೆ ಸಿಗಲಾರದು. ವಿಶ್ವಕಪ್ ಗೆಲ್ಲಬೇಕೆಂಬುದು ನನ್ನ ಬಯಕೆಯಾಗಿತ್ತು. ವಿಶ್ವಕಪ್ ಗೆದ್ದು ಗುಡ್‌ಬೈ ಹೇಳಬೇಕೆಂದಿದ್ದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿ ರೋಹಿತ್ ಶರ್ಮಾ ನಿವೃತ್ತಿ ತೆಗೆದುಕೊಂಡಿದ್ದಾರೆ. ಈವರೆಗೆ ಆಡಿದ 159 ಪಂದ್ಯಗಳಲ್ಲಿ 31.34ರ ಸರಾಸರಿಯಲ್ಲಿ 4231 ರನ್‌ಗಳನ್ನು ಬಾರಿಸಿದ್ದಾರೆ. ಇದರಲ್ಲಿ 32 ಅರ್ಧ ಶತಕಗಳಿದ್ದು, ಬರೋಬ್ಬರಿ 5 ಶತಕಗಳಿವೆ. ಇದಲ್ಲದೆ 383 ಫೋರ್‌ಗಳನ್ನು ಬಾರಿಸಿದ್ದು, ವಿಶ್ವ ದಾಖಲೆಯ 205 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಟಿ20-ಐ ಕ್ರಿಕೆಟ್‌ನಲ್ಲಿ 200ಕ್ಕೂ ಹೆಚ್ಚು ಸಿಕ್ಸರ್ ಸಿಡಿಸಿದ ಏಕಮಾತ್ರ ಬ್ಯಾಟರ್ ಎನಿಸಿದ್ದಾರೆ. 140.89ರ ಸರಾಸರಿ ಸ್ಟ್ರೈಕ್‌ರೇಟ್ ಕೂಡ ಅವರದ್ದಿದೆ.
There was a new sunrise for Indian cricket on the banks of the North Atlantic Ocean on Saturday. All the agony of losing at the final hurdle is a thing of the past. The balm for years of hurt - that reached its crescendo on November 19 last in Ahmedabad when India lost to Australia in the final of the 50-over World Cup - has been provided by a group of bravehearts who refused to give up.
22-12-24 10:26 pm
HK News Desk
Pralhad Joshi, CT Ravi: ಸಿಟಿ ರವಿಯನ್ನ ಎನ್ಕೌಂಟ...
22-12-24 10:23 am
Bangalore Volvo Car Accident: ಕೋಟಿ ಬೆಲೆಯ ಕಾರಿ...
21-12-24 09:28 pm
CT Ravi Released: ಸಿ.ಟಿ.ರವಿ ಬಂಧನ ಖಂಡಿಸಿ ರಾಜ್ಯ...
20-12-24 10:43 pm
C T Ravi Arrested, Minister Lakshmi Hebbalkar...
19-12-24 08:05 pm
20-12-24 05:01 pm
HK News Desk
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
22-12-24 11:03 pm
Mangalore Correspondent
Kundapura Jet ski, Drowning: ತ್ರಾಸಿ ಬೀಚ್ ನಲ್ಲ...
22-12-24 06:04 pm
Celebrate Christmas and New Year in Style wit...
22-12-24 12:33 am
Mangalore Heli Tourism: ಮಂಗಳೂರು ನಗರ ದರ್ಶನಕ್ಕೆ...
21-12-24 08:16 pm
Praveen Nettaru Murder, NIA Arrest: ಪ್ರವೀಣ್ ನ...
21-12-24 11:30 am
22-12-24 07:23 pm
Bangalore Correspondent
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm
Puttur, Gold Robbery, Mangalore Crime: ಪುತ್ತೂ...
21-12-24 07:45 pm
Mangalore, Fraud case, Odisha: ನಕಲಿ ಷೇರು ಮಾರು...
21-12-24 06:24 pm
Kodagu Fake Gold Bank Case; ಕೇರಳದಲ್ಲಿ ನಕಲಿ ಚಿ...
20-12-24 08:20 pm