ಬ್ರೇಕಿಂಗ್ ನ್ಯೂಸ್
14-09-25 11:44 pm HK News Desk ಕ್ರೀಡೆ
ದುಬೈ, ಸೆ 14 : ಆರಂಭಿಕ ಆಟಗಾರ ಅಭಿಷೇಕ್ ಶರ್ಮ ಅವರ ಬಿರುಗಾಳಿಯ ಬ್ಯಾಟಿಂಗ್, ನಾಯಕ ಸೂರ್ಯಕುಮಾರ್ ಯಾದವ್ (47*, 37 ಎಸೆತ, 5x4, 1x6) ಸಮಯೋಚಿತ ಆಟ ಮತ್ತು ಭಾರತದ ಸಂಘಟಿತ ಬೌಲಿಂಗ್ ದಾಳಿಯ ಮುಂದೆ ನೀರಸ ಆಟವಾಡಿದ ಪಾಕಿಸ್ತಾನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತಕ್ಕೆ ಶರಣಾಗಿದೆ.
ಸಾಕಷ್ಟು ವಿರೋಧಗಳ ಮಧ್ಯೆಯೂ ಭಾನುವಾರ ನಿಗದಿಯಂತೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ 20 ಓವರ್ ಗಳಲ್ಲಿ ಗಳಿಸಿದ್ದು ಕೇವಲ 127 ರನ್. ಆರಂಭಿಕ ಓವರ್ ನಿಂದಲೇ ವಿಕೆಟ್ ಕಳೆದುಕೊಳ್ಳಲಾರಂಭಿಸಿದ ಪಾಕಿಸ್ತಾನ ಎಲ್ಲೂ ಪ್ರತಿರೋಧ ತೋರಿಸಲೇ ಇಲ್ಲ. ಕೊನೆಯಲ್ಲಿ ಶಾಹೀನ್ ಶಾ ಅಫ್ರಿದಿ ನಾಲ್ಕು ಸಿಕ್ಸರ್ ಸಹಿತ 16 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿದ್ದರಿಂದ ತಂಡ ಸ್ಪರ್ಧಾತ್ಮಕ ಮೊತ್ತ ಗಳಿಸುವಂತಾಯಿತು. ಇದಕ್ಕೆ ಮೊದಲು ಆರಂಭಿಕಾರ ಶಾಹಿಬ್ಜದ ಫರ್ಹನ್ (40, 44 ಎಸೆತ, 1x4, 3x6) ಪಾಕ್ ಪರ ಗರಿಷ್ಠ ಸ್ಕೋರರ್ ಎನಿಸಿದರು. ಭಾರತ ಪರ ಕುಲದೀಪ್ ಯಾದವ್ (18/3), ಅಕ್ಸರ್ ಪಟೇಲ್ (18/2), ಜಸ್ಪ್ರೀತ್ ಬುಮ್ರಾ (28/2) ಉತ್ತಮ ಬೌಲಿಂಗ್ ಪ್ರದರ್ಶಿಸಿದರು.
ಸುಲಭ ಗುರಿ ಬೆನ್ನಟ್ಟಿದ ಭಾರತಕ್ಕೆ ಅಭಿಷೇಕ್ ಬಿರುಸಿನ ಆರಂಭ ಒದಗಿಸಿದರು. ಪಾಕಿಸ್ತಾನದ ಪ್ರಮುಖ ಬೌಲರ್ ಶಾಹೀನ್ ಶಾ ಅಫ್ರಿದಿ ಅವರ ಪ್ರಥಮ ಎಸೆತವನ್ನೇ ಬೌoಡರಿಗಟ್ಟಿದ ಅವರು ಎರಡನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿ ದಿಕ್ಕು ತಪ್ಪಿಸಿದರು. ಮೂರನೇ ಓವರ್ ಎಸೆಯಲು ಬಂದ ಅಫ್ರಿದಿಗೆ ಮತ್ತೆ ಅದೇ ರುಚಿ ತೋರಿಸಿದರು. ಕೇವಲ 13 ಎಸೆತದಲ್ಲಿ 4 ಬೌ0ಡರಿ, 2 ಸಿಕ್ಸರ್ ಮೂಲಕ 31 ರನ್ ಗಳಿಸಿ ಔಟಾದರು. ಇನ್ನೊರ್ವ ಆರಂಭಕಾರ ಶುಭಮನ್ ಗಿಲ್ 10 ರನ್ ಗಳಿಸಲಷ್ಟೇ ಶಕ್ತವಾದರು. ನಂತರ ನಾಯಕ ಸೂರ್ಯಕುಮಾರ್ ಜೊತೆಗೂಡಿದ ತಿಲಕ್ ವರ್ಮ ನಿಧಾನವಾಗಿ ಗೆಲುವಿನತ್ತ ಮುನ್ನಡೆಸಿದರು. ಆದರೆ ಸೈಮ್ ಅಯೂಬ್ ತಿಲಕ್ ವರ್ಮ (31) ವಿಕೆಟ್ ಉರುಳಿಸಿದರು. ಈ ಮಧ್ಯೆ ಇದೇ ಮೊದಲ ಪಾಕಿಸ್ತಾನ ವಿರುದ್ಧ 20 ರನ್ ಗಡಿ ದಾಟಿದ ಸೂರ್ಯಕುಮಾರ್ ಸಮಯೋಚಿತ ಆಟವಾಡಿ ಭಾರತಕ್ಕೆ ಗೆಲುವು ಖಾತ್ರಿಪಡಿಸಿದರು. ನಾಯಕನ ಜೊತೆ ಸೇರಿದ ಸ್ಪಿನ್ ಸ್ಪೆಷಲಿಸ್ಟ್ ಶಿವಮ್ ದುಬೆ (10*) ಗೆಲುವಿನ ಔಪಚಾರಿಕತೆ ಪೂರೈಸಿದರು.
ಪ್ರಸಕ್ತ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತಕ್ಕೆ ಇದು ಎರಡನೇ ಗೆಲುವಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಯುಎಇಯನ್ನು ಸೋಲಿಸಿತ್ತು.
ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ 20 ಓವರ್ ಗಳಲ್ಲಿ 127/9(ಫರ್ಹನ್ 40, ಅಫ್ರಿದಿ 33*, ಫಕರ್ ಜಮಾನ್ 17, ಫಹೀಮ್ 11, ಕುಲದೀಪ್ 18/3, ಅಕ್ಸರ್ 18/2, ಬುಮ್ರಾ 28/2)
ಭಾರತ 15.5 ಓವರ್ ಗಳಲ್ಲಿ 131/3
(ಸೂರ್ಯಕುಮಾರ್ ಯಾದವ್ 47*, ಅಭಿಷೇಕ್ 31, ತಿಲಕ್ 31, ಸೈಮ್ ಅಯೂಬ್ 35/3)
Easy business for India in this much-awaited match! Total domination from the men in blue from the very first over, and once the momentum was earned early on, they never let go. Pakistan wickets kept tumbling, in particular to Kuldeep Yadav and Axar Patel, but the lack of partnerships meant India were never threatened. A late Shaheen Shah Afridi cameo pushed them to 127/9, but that was never going to be enough to hurt this Indian batting full of power-hitters.
14-09-25 05:18 pm
Bangalore Correspondent
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
ಕುರುಬ ಕ್ರಿಶ್ಚಿಯನ್, ಕುಂಬಾರ ಕ್ರಿಶ್ಚಿಯನ್ ಇದೆಯೇ?...
13-09-25 08:46 pm
Caste Cenus News, Karnataka; ಸೆ.22ರಿಂದ ಅ.7ರ ವ...
13-09-25 07:50 pm
Hassan Accident, 9 killed, Update: ಗಣೇಶ ಮೆರವಣ...
13-09-25 04:31 pm
14-09-25 10:49 pm
HK News Desk
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
ವಾಷಿಂಗ್ ಮೆಷಿನ್ ವಿಷಯದಲ್ಲಿ ವಾಗ್ವಾದ ; ಅಮೆರಿಕದಲ...
12-09-25 11:33 am
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
14-09-25 10:55 pm
Mangalore Correspondent
Mangalore Protest: ರಸ್ತೆ ನಮ್ಮ ಹಕ್ಕು, ಭಿಕ್ಷೆಯಲ...
14-09-25 10:34 pm
Kundapura Accident, Samba Deer, Bike: ಕುಂದಾಪು...
13-09-25 11:05 pm
Mangalore, Police, Loud Speakers: ಗಣೇಶೋತ್ಸವಕ್...
12-09-25 10:58 pm
Mahesh Vikram Hegde Arrested, Post Card Kanna...
12-09-25 09:25 pm
14-09-25 06:01 pm
HK News Desk
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm