ಪಿಚ್ ಚೆನ್ನಾಗಿತ್ತು, ಬ್ಯಾಟಿಂಗ್‌ ಗುಣಮಟ್ಟ ಚೆನ್ನಾಗಿರಲಿಲ್ಲ: ವಿರಾಟ್ ಕೊಹ್ಲಿ

26-02-21 11:03 am       Source: MYKHEL   ಕ್ರೀಡೆ

ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಚೆನ್ನಾಗೇ ಇತ್ತು ಆದರೆ, ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್‌ ಗುಣಮಟ್ಟ ಚೆನ್ನಾಗಿರಲಿಲ್ಲ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಅಹ್ಮದಾಬಾದ್: ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ಚೆನ್ನಾಗೇ ಇತ್ತು ಆದರೆ, ಬ್ಯಾಟ್ಸ್‌ಮನ್‌ಗಳ ಬ್ಯಾಟಿಂಗ್‌ ಗುಣಮಟ್ಟ ಚೆನ್ನಾಗಿರಲಿಲ್ಲ ಎಂದು ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ತೃತೀಯ ಟೆಸ್ಟ್‌ ಮುಕ್ತಾಯದ ಬಳಿಕ ಕೊಹ್ಲಿ ಈ ಹೇಳಿಕೆ ನೀಡಿದ್ದಾರೆ.

ತೃತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳ ಬ್ಯಾಟಿಂಗ್ ಪ್ರದರ್ಶನ ಚೆನ್ನಾಗಿರಲಿಲ್ಲ. ನಾಲ್ಕೂ ಇನ್ನಿಂಗ್ಸ್‌ಗಳಲ್ಲಿ ಒಬ್ಬರೂ ಕೂಡ ಗಮನಾರ್ಹ ಬ್ಯಾಟಿಂಗ್‌ ತೋರಿರಲಿಲ್ಲ. ಪಿಚ್ ಬಹುತೇಕ ಬೌಲರ್‌ಗಳಿಗೆ ಅದರಲ್ಲೂ ಸ್ಪಿನ್‌ಗೆ ಅನುಕೂಲಕರ ಪಿಚ್‌ನಂತಿತ್ತು. ಪಂದ್ಯದಲ್ಲಿ ಇಂಗ್ಲೆಂಡ್ 10 ವಿಕೆಟ್‌ಗಳ ಸೋಲನುಭವಿಸಿತ್ತು.

ಭಾರತ-ಇಂಗ್ಲೆಂಡ್ ಎರಡೂ ತಂಡಗಳ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ನಿಲ್ಲಲು ಪರದಾಡುತ್ತಿದ್ದನ್ನು ಕಂಡು ಅನೇಕ ಕ್ರಿಕೆಟ್ ಪರಿಣಿತರು ಪಿಚ್‌ ಬಗ್ಗೆ ಅಸಮಾಧಾನ ತೋರಿಕೊಂಡಿದ್ದರು. ಟೆಸ್ಟ್‌ ಪಂದ್ಯಕ್ಕೆ ಮೊಟೆರಾ ಪಿಚ್ ಯೋಗ್ಯವಲ್ಲ ಎಂದು ಹೇಳಿಕೊಂಡಿದ್ದರು. ಇಂಗ್ಲೆಂಡ್ ನಾಯಕ ಜೋ ರೂಟ್ ಕೂಡ ಇಂಥದ್ದೇ ಹೇಳಿಕೆ ನೀಡಿದ್ದರು. ಆದರೆ ಕೊಹ್ಲಿ ಇದಕ್ಕೆ ವಿರುದ್ಧ ಹೇಳಿಕೆ ನೀಡಿದ್ದಾರೆ.

'ಪ್ರಾಮಾಣಿಕವಾಗಿ ಹೇಳೋದಾದ್ರೆ, ಗುಣಮಟ್ಟದ ಮಟ್ಟಕ್ಕೆ ಬ್ಯಾಟಿಂಗ್‌ ಗುಣಮಟ್ಟ ಇರಲಿಲ್ಲ. ನಾವು 100 ರನ್ ಹೊತ್ತಿಗೆ 3 ವಿಕೆಟ್ ಕಳೆದುಕೊಂಡಿದ್ದೆವು. 150ಕ್ಕೂ ಕಡಿಮೆ ರನ್ ವೇಳೆಗೆ ಆಲ್ ಔಟ್ ಆಗಿದ್ದೆವು. ಚೆಂಡು ತಿರುಗುತ್ತಿತ್ತು ಅನ್ನೋದು ಬಿಟ್ಟರೆ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಮಾಡಲು ಪಿಚ್ ಚೆನ್ನಾಗಿತ್ತು,' ಎಂದು ಕೊಹ್ಲಿ ಹೇಳಿದ್ದಾರೆ.

This News Article is a Copy of MYKHEL