ಬ್ರೇಕಿಂಗ್ ನ್ಯೂಸ್
05-03-21 12:13 pm Source: MYKHEL ಕ್ರೀಡೆ
ಭಾರತದ ವಿರುದ್ಧದ ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಇಂಗ್ಲೆಂಡ್ ತಂಡದ ಮತ್ತೋರ್ವ ಮಾಜಿ ಕ್ರಿಕೆಟಿಗ ಟೀಕಿಸಿದ್ದಾರೆ. ಮೈಕಲ್ ವಾನ್ ಕೆವಿನ್ ಪೀಟರ್ಸನ್ ಬಳಿಕ ಆಂಡ್ರೋ ಸ್ಟ್ರಾಸ್ ಕೂಡ ಭಾರತೀಯ ನೆಲದಲ್ಲಿ ಇಂಗ್ಲೆಂಡ್ ಆಟಗಾರರ ಕಳಪೆ ಬ್ಯಾಟಿಂಗ್ ಬಗ್ಗೆ ಕುಟುಕಿದ್ದಾರೆ.
ಮೂರನೇ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಅಂತ್ಯವಾದ ಬಳಿಕ ಸ್ಟ್ರಾಸ್ ಅಹ್ಮದಾಬಾದ್ ಪಿಚ್ ಬಗ್ಗೆ ಟೀಕೆಯನ್ನು ಮಾಡಿದ್ದರು. ನಾಲ್ಕನೇ ಪಂದ್ಯವನ್ನು ಕೂಡ ಅಹ್ಮದಾಬಾದ್‌ನಲ್ಲಿಯೇ ಆಡಿದ್ದರಾದರೂ ಬೇರೆ ಪಿಚ್‌ನಲ್ಲಿ ಆಡಲಾಗುತ್ತಿದೆ. ಈ ಹಿಂದಿನ ಪಂದ್ಯದಂತೆ ಹೆಚ್ಚಿನ ತಿರುವನ್ನು ಚೆಂಡು ಪಿಚ್ ಈ ಪಿಚ್‌ನಲ್ಲಿ ಮೊದಲ ದಿನದಾಟದಲ್ಲಿ ಪಡೆದಿರಲಿಲ್ಲ. ಹಾಗಿದ್ದರೂ ಇಂಗ್ಲೆಂಡ್ 205 ರನ್‌ಗಳಿಸಲಷ್ಟೇ ಶಕ್ತವಾಗಿತ್ತು.
"ಭಾರತೀಯ ಬೌಲಿಂಗ್ ದಾಳಿ ಅತ್ಯುತ್ತಮವಾಗಿತ್ತು. ನಾವು ಉತ್ತಮ ಗುಣಮಟ್ಟದ ಭಾರತೀಯ ಬೌಲಿಂಗ್ ದಾಳಿಯನ್ನು ನಿರೀಕ್ಷಿಸಿದ್ದೆವು. ಆದರೆ ಸತ್ಯವನ್ನು ನಾವು ಮರೆಮಾಚಲು ಸಾಧ್ಯವಿಲ್ಲ. ಇಂತಾ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಗುಣಮಟ್ಟ ಸಾಕಾಗಲಿಲ್ಲ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ" ಎಂದಿದ್ದಾರೆ ಆ್ಯಂಡ್ರೋ ಸ್ಟ್ರಾಸ್.
"ಪಿಚ್ ಬಗ್ಗೆ, ಎಸೆತಗಳ ಬಗ್ಗೆ ಹಾಗೂ ಅನನುಭವದ ಬಗ್ಗೆ ಎಲ್ಲಾ ರೀತಿಯ ನೆಪಗಳನ್ನು ನೀವು ಯೋಚಿಸಬಹುದು. ಆದರೆ ಭಾರತದಲ್ಲಿ ನೀವು ಗೆಲ್ಲಲೇಬೇಕಾದರೆ ಮೊದಲ ಇನ್ನಿಂಗ್ಸ್‌ನಲ್ಲಿ ನೀವು ರನ್‌ಗಳಿಸಿವು ದಾರಿಯನ್ನು ಹೊಂದಿರಲೇಬೇಕು. ಅದನ್ನು ಇಂಗ್ಲೆಂಡ್‌ಗೆ ಸಾಧಿಸಲು ಸಾಧ್ಯವಾಗಿಲ್ಲ" ಎಂದಿದ್ದಾರೆ ಸ್ಟ್ರಾಸ್.
ಇಂಗ್ಲಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭಾರತ 2-1 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸರಣಿಯನ್ನು ಡ್ರಾ ಗೊಳಿಸಬೇಕಾದರೆ ಗೆಲುವು ಅನಿವಾರ್ಯವಾಗಿದೆ.
This News Article Is A Copy Of MYKHEL
15-12-25 02:23 pm
Bangalore Correspondent
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
Deputy Chief Minister, D.K. Shivakumar: ನೀವು...
14-12-25 03:19 pm
ನೀವು ನಮ್ಮ ಪ್ರತಿನಿಧಿ ಹೊರತು ಯಜಮಾನರಲ್ಲ, ಮಂತ್ರಿಗಳ...
14-12-25 02:37 pm
14-12-25 07:20 pm
HK News Desk
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಯುಡಿಎಫ್ ಅತಿ ಹೆ...
13-12-25 08:34 pm
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
14-12-25 05:48 pm
Mangalore Correspondent
ಕೇಶವನ ಬದುಕು ಬದಲಿಸಿದ ರಕ್ತಬೀಜ ! ಅಸುರೀತನದ ಜೀವನಕ್...
13-12-25 11:02 pm
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
15-12-25 12:19 pm
Udupi Correspondent
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm
ಟೀಮ್ ಎಸ್ಡಿಪಿಐ ಹೆಸರಲ್ಲಿ ಹಿಂದುಗಳ ಬಗ್ಗೆ ನಿಂದಿಸಿ...
14-12-25 09:12 pm
Illegal Cattle Transport Case: ಅಕ್ರಮ ಗೋಸಾಗಾಟ...
14-12-25 08:35 pm