ಬ್ರೇಕಿಂಗ್ ನ್ಯೂಸ್
17-03-21 02:50 pm Source: MYKHEL ಕ್ರೀಡೆ
ಯುವ ಲಾಂಗ್‌ಜಂಪ್ ಪಟು 21ರ ಹರೆಯದ ಶ್ರೀಶಂಕರ್ 2021ರ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ದಾಖಲೆ ನಿರ್ಮಾಣ ಮಾಡಿ ಶ್ರೀಶಂಕರ್ ಈ ಅರ್ಹತೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಪಾಟಿಯಾಲದಲ್ಲಿ ಫೆಡರೇಷನ್ ಕಪ್ ರಾಷ್ಟ್ರೀಯ ಹಿರಿಯರ ಆಥ್ಲೆಟಿಕ್ಸ್ ಚಾಂಪಿಯನ್‌ಷಿಪ್ ನಡೆಯುತ್ತಿದ್ದು ಇದರಲ್ಲಿ ಕೇರಳ ಮೂಲಕ ಮುರಳಿ ಶ್ರೀಶಂಕರ್ 8.26 ಮೀಟರ್ ದೂರಕ್ಕೆ ನೆಗೆದು ಈ ಸಾಧನೆ ಮಾಡಿದ್ದಾರೆ.
ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಪಡೆಯಲು 8.22 ಮೀಟರ್ ಜಿಗಿಯುವ ಮಾನದಂಡಕ್ಕಿಂತ ದೂರ ಜಿಗಿದಿದ್ದಾರೆ ಶ್ರೀಶಂಕರ್. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಪೆನ್ಸರ್ ಎನಿಸಿಕೊಂಡ ಭವಾನಿ ದೇವಿ ಲಾಂಗ್‌ಜಂಪ್‌ನಲ್ಲಿ ಈ ಹಿಂದೆ ರಾಷ್ಟ್ರೀಯ ದಾಖಲೆಯನ್ನು ಶ್ರೀಶಂಕರ್ ಅವರೇ ಹೊಂದಿದ್ದರು.
2018ರಲ್ಲಿ 8.20 ಮೀಟರ್ ಜಿಗಿದು ಈ ಮೊದಲು ಈ ದಾಖಲೆಯನ್ನು ತಮ್ಮ ಹೆಸರಿಗೆ ಬರೆದಿದ್ದರು ಶ್ರೀಶಂಕರ್ ಈಗ ತಮ್ಮದೇ ದಾಖಲೆಯನ್ನು ಉತ್ತಮಪಡಿಸಿಕೊಂಡಿದ್ದಲ್ಲದೆ ಒಲಿಂಪಿಕ್ಸ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಂಡು ಭರವಸೆ ಮೂಡಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಐದನೇ ಪ್ರಯತ್ನದಲ್ಲಿ ಶ್ರೀಶಂಕರ್ ಈ ಸಾಧನೆಯನ್ನು ಮಾಡಿದ್ದಾರೆ.
ಆರಂಭದ ಪ್ರಯತ್ನದಲ್ಲಿ 8.02, ನಂತರ 8.04, 8.07 ಮತ್ತು 8.09 ದೂರ ಜಿದಿದ್ದರು. ಆದರೆ ಅಂತಿಮ ಪ್ರಯತ್ನದಲ್ಲಿ 8.26 ಮೀಟರ್ ದೂರಕ್ಕೆ ಜಿಗಿಯಲು ಯಶಸ್ವಿಯಾದರು. ಇನ್ನೋರ್ವ ಕೇರಳದ ಲಾಂಗ್‌ಜಂಪ್ ಪಟು ಮುಹಮ್ಮದ್ ಅನೀಸ್ 8 ಮೀಟರ್ ದೂರ ಜಿಗಿದು ಬೆಳ್ಳಿ ಪದಕ ಗೆದ್ದರೆ ಕರ್ನಾಟಕದ ಎಸ್ ಲೋಕೇಶ್ 7.60 ಮೀಟರ್ ಜಿಗಿದು ಕಂಚಿನ ಪದಕ ಪಡೆದಿದ್ದಾರೆ.
This News Article Is A Copy Of MYKHEL
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
21-04-25 02:13 pm
HK News Desk
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
21-04-25 07:08 pm
Mangalore Correspondent
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
21-04-25 01:03 pm
Bangalore Correspondent
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm