ಬ್ರೇಕಿಂಗ್ ನ್ಯೂಸ್
30-03-21 11:31 am Source: MYKHEL ಕ್ರೀಡೆ
ವಿಂಡ್ ಸರ್ಫಿಂಗ್ ವಿಭಿನ್ನವಾದ ಕ್ರೀಡಾ ಪ್ರಾಕಾರ. ಭಾರತದಲ್ಲಿ ಪುರುಷರು ಹೆಚ್ಚಿನ ಪ್ರಾಭಲ್ಯವನ್ನು ಹೊಂದಿರುವ ಕ್ರೀಡೆಯಿದು. ಸಾಕಷ್ಟು ಪರಿಣತಿ ಹಾಗೂ ಮನೋಸ್ಥೈರ್ಯವಿದ್ದರೆ ಮಾತ್ರ ಇದ್ರಲ್ಲಿ ಯಶಸ್ಸು ಗಳಿಸಲು ಸಾಧ್ಯ. ಆದರೆ ತಮಿಳುನಾಡು ಮೂಲಕ ಐಶ್ವರ್ಯ ಗಣೇಶ್ ಏಕಾಂಗಿಯಾಗಿ ವಿಂಡ್ ಸರ್ಫಿಂಗ್ ಕಲಿತು ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದಲ್ಲದೆ ಈಗ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ಕನಸು ಹೊತ್ತಿದ್ದಾರೆ.
ಐಶ್ವರ್ಯ ಗಣೇಶ್ ಮೊದಲಿಗೆ ಸೈಲಿಂಗ್(ಹಾಯಿದೋಣಿ) ತರಬೇತಿಗಾಗಿ ಎರಡು ದಶಕಗಳಿಂದ ಸೈಲಿಂಗ್ ತರಬೇತಿ ನೀಡುತ್ತಿರುವ ಡಿಪಿ ಸೆಲ್ವಂ ಅವರೊಂದಿಗೆ ಸೇರಿಕೊಂಡಿದ್ದರು. 2014ರಿಂದ 2017ರವರೆಗೆ ಸೈಲಿಂಗ್ ಅಭ್ಯಾಸವನ್ನು ಪಡೆದುಕೊಂಡಿದ್ದರು. ಆದರೆ ಐಶ್ವರ್ಯ ಗಣೇಶ್ ಸೈಲಿಂಗ್ ಜೊತೆಗೆ ವಿಂಡ್ ಸರ್ಫಿಂಗ್ ಕಡೆಗೆ ವಾಲಿದರು. ಚೆನ್ನೈ ಸಮುದ್ರದದಲ್ಲಿ ಸೈಲಿಂಗ್ ಸಹಪಾಠಿಗಳ ಜೊತೆಗೆ ವಿಂಡ್ ಸರ್ಫಿಂಗ್ ಅಭ್ಯಾಸವನ್ನು ಮಾಡತೊಡಗಿದರು.
ಆದರೆ ಈ ಸಂದರ್ಭದಲ್ಲಿ ಐಶ್ವರ್ಯಗೆ ವಿಂಡ್ ಸರ್ಫಿಂಗ್‌ಗೆ ಯಾವುದೇ ತಜ್ಞರು ಇರಲಿಲ್ಲ. ಯೂಟ್ಯೂಬ್‌ನಲ್ಲಿಯೇ ಕೆಲ ವಿಡಿಯೋಗಳನ್ನು ನೋಡಿಕೊಂಡು ವಿಂಡ್ ಸರ್ಫಿಂಗ್‌ನ ಚಾಕಚಕ್ಯತೆಯನ್ನು ಅಭ್ಯಾಸ ಮಾಡಲು ಆರಂಭಿಸಿದರು. ಸೈಲಿಂಗ್‌ನ ಜೊತೆಗೆ ವಿಂಡ್ ಸರ್ಫಿಂಗ್‌ನಲ್ಲಿಯೂ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಾ ಪ್ರಶಸ್ತಿ ಗಳಿಸಲು ಆರಂಭಿಸಿದರು.
"ಸೈಲ್ ಬೋಟ್‌ನಲ್ಲಿ ಮಾಸ್ಟರ್ ಆಗಿ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿಗಳಿಸಲು ಸಾಮಾನ್ಯವಾಗಿ ಮೂರರಿಂದ ನಾಲ್ಕು ವರ್ಷಗಳು ಬೇಕಾಗುತ್ತದೆ. ಆದರೆ ಐಶ್ವರ್ಯ ಮೊದಲ ವರ್ಷದಲ್ಲಿಯೇ ಜೂನಿಯರ್ ಕ್ಲಾಸ್‌ನಿಂದ ಯೂತ್ ಕ್ಲಾಸ್‌ಗೆ ಬಂದು ಬಳಿಕ ಮರು ವರ್ಷವೇ ಸೀನಿಯರ್ ಕ್ಲಾಸ್ ಕೂಡ ಪೂರ್ಣಗೊಳಿಸುವುದರ ಜೊತೆಗೆ ಎಲ್ಲಾ ವಿಂಡ್ ಸರ್ಫಿಂಗ್ ಪ್ರಶಸ್ತಿಗಳನ್ನು ಕೂಡ ಗಳಿಸಿಕೊಂಡಿದ್ದಾರೆ" ಎಂದು ಐಶ್ವರ್ಯ ಗಣೇಶ್ ಅವರ ಕೋಚ್ ಡಿಪಿ ಸೆಲ್ವಂ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಭಾರತದಲ್ಲಿ ಪುರುಷರೇ ಪ್ರಾಬಲ್ಯವನ್ನು ಹೊಂದಿರುವ ವಿಂಡ್ ಸರ್ಫಿಂಗ್‌ನಲ್ಲಿ ಐಶ್ವರ್ಯ ಗಣೇಶ್ ವಿಶೇಷ ಸಾಧನೆಯನ್ನು ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಐಶ್ವರ್ಯ ಗಣೇಶ್ ರಾಷ್ಟ್ರೀಯ ವಿಂಡ್ ಸರ್ಫಿಂಗ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಈಗ ಒಮಾನ್‌ನಲ್ಲಿದ್ದು ಮುಸ್ಸನ್ಹಾ ಓಪನ್ ಚಾಂಪಿಯನ್‌ಶಿಪ್ ಇವೆಂಟ್‌ನಲ್ಲಿ ಪಾಲ್ಗೊಂಡಿದ್ದು ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
This News Article Is A Copy Of MYKHEL
05-09-25 11:15 pm
Bangalore Correspondent
ಭೋವಿ ಅಭಿವೃದ್ಧಿ ನಿಗಮದಲ್ಲಿ ಕಮಿಷನ್ ವಸೂಲಿ ; ಅಧ್ಯಕ...
05-09-25 07:55 pm
ಡಿಸಿಎಂ ಡಿಕೆಶಿ ಬೆಂಬಲಿಗರ ಹತ್ತಾರು ಕೇಸು ಸೇರಿದಂತೆ...
05-09-25 05:40 pm
ಕಾಂಗ್ರೆಸಿನ ಯಾರ ಮನೆಯ ನಾಯಿ ಸ್ವಾತಂತ್ರ್ಯಕ್ಕಾಗಿ ಹೋ...
03-09-25 09:00 pm
ಧರ್ಮಸ್ಥಳ ಚಲೋ' ಬಿಜೆಪಿ ನಾಯಕರ ವಿಡಿಯೋ ಬಳಸಿ ಜಾಲತಾಣ...
03-09-25 08:35 pm
06-09-25 10:34 am
HK News Desk
ಗಣೇಶ ವಿಸರ್ಜನೆ ಸಡಗರ ಹಿನ್ನೆಲೆ ; ಮುಂಬೈ ಮಹಾನಗರದಲ್...
04-09-25 08:47 pm
ಜಿಎಸ್ಟಿ ತೆರಿಗೆಯಲ್ಲಿ ಭಾರೀ ಪರಿಷ್ಕರಣೆ ; ಕಡೆಗೂ ತೆ...
04-09-25 10:54 am
ತಂದೆ ಸ್ಥಾಪಿಸಿದ ಬಿಆರ್ ಎಸ್ ಪಕ್ಷದಿಂದ ಮಗಳಿಗೆ ಗೇಟ್...
03-09-25 10:04 pm
ಹೊಳೆಯಂತಾದ ದೆಹಲಿಯ ಬೀದಿಗಳು, ನೀರಲ್ಲೇ ಮಾರ್ಕೆಟ್!...
03-09-25 09:59 pm
06-09-25 04:46 pm
Mangalore Correspondent
Ullal News, Warrant, Video, Mangalore: ಮೊದಲ ಪ...
05-09-25 08:12 pm
ತಡರಾತ್ರಿ ಫಾಸ್ಟ್ ಫುಡ್ ಗೌಜಿ ಪ್ರಶ್ನಿಸಿದ್ದಕ್ಕೆ ಸಿ...
05-09-25 05:09 pm
ಸೌಜನ್ಯಾ ಕೊಲೆ ಪ್ರಕರಣವನ್ನು ಮುಚ್ಚಿ ಹಾಕಿದ್ದೇ ಆರ್....
04-09-25 11:07 pm
Dharmasthala, Sameer Md, House Raid: ಧರ್ಮಸ್ಥಳ...
04-09-25 10:29 pm
06-09-25 05:26 pm
HK News Desk
Udupi cyber fraud crime; ಷೇರು ಟ್ರೇಡಿಂಗ್ ಹೆಸರಿ...
06-09-25 01:58 pm
ಮುಂಬೈಗೆ 14 ಲಷ್ಕರ್ ಉಗ್ರರ ಎಂಟ್ರಿ ಬೆದರಿಕೆ ! 400...
06-09-25 10:37 am
Mangalore Cow Slaughter, Crime, Arrest: ಪೆರ್ನ...
05-09-25 10:53 pm
Mukka Murder, Mangalore, Crime: ಪತ್ನಿಯ ಅಶ್ಲೀಲ...
05-09-25 10:26 pm