ಬ್ರೇಕಿಂಗ್ ನ್ಯೂಸ್
23-08-21 10:44 am Mykhel: Sadashiva ಕ್ರೀಡೆ
ನೈರೋಬಿ: ಪ್ರತಿಭಾನ್ವಿತ ಲಾಂಗ್ ಜಂಪರ್ ಶೈಲಿ ಸಿಂಗ್ ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ಅಂಡರ್ 20 ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ. ಇದೇ ವಿಭಾಗದಲ್ಲಿ ಒಂದು ಸೆಂಟಿ ಮೀಟರ್ ಹೆಚ್ಚು ಜಿಗಿದ್ದರೂ ಭಾರತದ ಹೆಸರಿನಲ್ಲೊಂದು ಇತಿಹಾಸ ನಿರ್ಮಾಣವಾಗುತ್ತಿತ್ತು. ಆದರೆ ಶೈಲಿ ಬೆಳ್ಳಿಗೆ ತೃಪ್ತಿಪಟ್ಟರು.
17ರ ಹರೆಯದ ಶೈಲಿ ಸಿಂಗ್ ಅವರ ವೈಯಕ್ತಿಕ ಅತ್ಯುತ್ತಮ ಸಾಧನೆ 6.59 ಮೀಟರ್. ಆದರೆ ಈ ದೂರ ಕೂಡ ಶೈಲಿಗೆ ಬಂಗಾರ ಗೆಲ್ಲಲು ನೆರವಾಗಲಿಲ್ಲ. ಈ ವಿಭಾಗದಲ್ಲಿ ಚಿನ್ನ ಸ್ವೀಡನ್‌ನ ಹಾಲಿ ಜೂನಿಯರ್ ಚಾಂಪಿಯನ್ ಮಾಜ ಅಸ್ಕಾಗ್‌ಗೆ ದೊರೆಯಿತು.

ಭಾನುವಾರ (ಆಗಸ್ಟ್ 22) ನಡೆದ ಫೈನಲ್ ಸ್ಪರ್ಧೆಯಲ್ಲಿ ಅಸ್ಕಾಗ್ 6.60 ಮೀ. ಸಾಧನೆಯೊಂದಿಗೆ ಬಂಗಾರ ತನ್ನದಾಗಿಸಿಕೊಂಡರು. ಉಕ್ರೇನ್‌ನ ಮಾರಿಯಾ ಹೋರಿಲೋವಾ ಅವರು 6.50 ಮೀಟರ್ ದೂರದ ಸಾಧನೆಯೊಂದಿಗೆ ಕಂಚು ಪಡೆದುಕೊಂಡರು. ಅಂದ್ಹಾಗೆ ಶೈಲಿ, ದಂತಕತೆ ಅಂಜು ಬಾಬಿ ಜಾರ್ಜ್ ಅವರ ಶಿಷ್ಯೆ.
"6.59 ಮೀಟರ್‌ಗಿಂತ ದೂರ ಜಿಗಿದಿದ್ದರೆ ಬಹುಶಃ ನಾನು ಬಂಗಾರ ಗೆಲ್ಲುತ್ತಿದ್ದೆನೋ ಏನೋ. ಬಂಗಾರ ಗೆದ್ದು ರಾಷ್ಟ್ರಗೀತೆ ಮೊಳಗಿಸು ಎಂದು ನನ್ನ ತಾಯಿ ನನಗೆ ಹೇಳಿದ್ದರು. ಆದರೆ ಅದು ನನ್ನಿಂದ ಈ ಬಾರಿ ಸಾಧ್ಯವಾಗಲಿಲ್ಲ. ಮುಂದೆ ಕೊಲಂಬಿಯಾದಲ್ಲಿ ನಡೆಯಲಿರುವ ಚಾಂಪಿಯನ್‌ಶಿಪ್‌ನಲ್ಲಿ ಖಂಡಿತಾ ಚಿನ್ನ ಗೆಲ್ಲುತ್ತೇನೆ," ಎಂದು ಸ್ಪರ್ಧೆಯ ಬಳಿಕ ಶೈಲಿ ಭಾವುಕರಾಗಿ ಹೇಳಿದ್ದಾರೆ.
(Kannada Copy of Mykhel Kannada)
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 10:46 pm
HK News Staffer
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
Ramanath Rai, Mangalore, Tulu, Cabinet Meetin...
16-09-26 04:32 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm