ಬ್ರೇಕಿಂಗ್ ನ್ಯೂಸ್
04-09-21 12:05 pm Source: News 18 Kannada ಕ್ರೀಡೆ
ನವದೆಹಲಿ : ಟೋಕಿಯೋ ಪ್ಯಾರಾಲಂಪಿಕ್ನಲ್ಲಿ (Tokyo Paralympics) ಚಿನ್ನದ ಪದಕ ಗೆಲ್ಲುವ ಮೂಲಕ ಅವನಿ ಲೇಖರಾ (Avani Lekhara ) ಹೊಸ ದಾಖಲೆ ಬರೆದಿದ್ದಾರೆ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್1 (Air Rifle Standing SH1) ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿ ಕೂಡ ಹೊಂದಿದ್ದಾರೆ. ಅವರ ಈ ಸಾಧನೆಗೆ ಮೆಚ್ಚಿ ದೇಶಾದ್ಯಂತ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಪ್ಯಾರಾಲಂಪಿಕ್ಸ್ನಲ್ಲಿ ಇತಿಹಾಸ ಸೃಷ್ಟಿಸಿರುವ ಅವನಿಗೆ ಉದ್ಯಮಿ ಆನಂದ್ ಮಹೀಂದ್ರ (Anand Mahindra ) ವಿಶೇಷ ಉಡುಗೊರೆಯನ್ನು ಘೋಷಿಸಿದ್ದಾರೆ. ಮಹೀಂದ್ರ ಗ್ರೂಪ್ನ ಅಧ್ಯಕ್ಷರಾಗಿರುವ ಆನಂದ್ ಮಹಿಂದ್ರ, ಅವರಿಗಾಗಿ ವಿಶೇಷ ಎಸ್ಯುವಿ ವಾಹನವನ್ನು ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಅವನಿ ಲೆಖಾರಾ ಅವರಿಗಾಗಿ ಮೊದಲ ಕಸ್ಟಮೈಸಡ್ ಎಸ್ಯುವಿ (SUV) ವಾಹನ ನೀಡುವುದಾಗಿ ತಿಳಿಸಿದ್ದಾರೆ. ಈ ರೀತಿಯು ವಾಹನವನ್ನು ನಿರ್ಮಾಣ ಮಾಡುವ ಪರಿಕಲ್ಪನೆಯನ್ನು ಭಾರತದ ಪ್ಯಾರಾಲಿಂಪಿಕ್ ಕಮಿಟಿಯ ಅಧ್ಯಕ್ಷೆ ದೀಪಾ ಮಲಿಕ್ ನೀಡಿದ್ದಾರೆ ಎಂದು ಕೂಡ ಅವರು ತಿಳಿಸಿದ್ದಾರೆ.
ಈ ವಿಶೇಷ ಕಾರನ್ನು ವಿಶೇಷ ಚೇತನರು ಕೂಡ ಸುಲಭವಾಗಿ, ಆರಾಮದಾಯಕವಾಗಿ ಚಾಲನೆ ಮಾಡಬಹದು. ಇದೇ ಉದ್ದೇಶದಿಂದ ಈ ವಿಶೇಷ ಎಸ್ಯುವಿ ವಾಹನ ನಿರ್ಮಾಣ ಮಾಡಲಾಗಿದೆ ಎಂದರು

ಕಳೆದೊಂದು ವಾರದ ಹಿಂದೆ ದೀಪಾ ಮಲಿಕ್ ಟೋಕಿಯೋದಲ್ಲಿ ತಾವು ಬಳಸಿದಂತೆ ವಿಶೇಷ ಚೇತನರಿಗಾಗಿ ಎಸ್ಯುವಿ ಕಾರನ್ನು ಅಭಿವೃದ್ಧಿಪಡಿಸುವಂತೆ ಸಲಹೆ ನೀಡಿದ್ದರು. ಈ ಕುರಿತು ತಮ್ಮ ಅಭಿವೃದ್ಧಿ ಮುಖ್ಯಸ್ಥ ವೇಲು ಅವರಿಗೆ ನಾನು ತಿಳಿಸಿದೆ. ವೇಲು ನಿರ್ಮಾಣ ಮಾಡುತ್ತಿರುವ ಈ ವಿಶೇಷ ಕಾರನ್ನು ಅವನಿ ಲೆಖಾರಾ ಅವರಿಗೆ ಮೊದಲು ಉಡುಗೊರೆಯಾಗಿ ನೀಡಲು ನಾನು ಬಯಸುತ್ತೇನೆ ಎಂದಿದ್ದಾರೆ.
ಮಹೀಂದ್ರಾ ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೆಲವರು, ಕ್ರೀಡಾಪಟುಗಳಿಗೆ ಇಂತಹ ಮೆಚ್ಚುಗೆ ಕಾರ್ಯಗಳು ಅತ್ಯಗತ್ಯ ಎಂದಿದ್ದಾರೆ. ಇದೊಂದು ಅಭೂತ ಪೂರ್ವ ನಿರ್ಣಯ ಎಂದು ಕೆಲವರು ಶ್ಲಾಘಿಸಿದ್ದಾರೆ.
ಮಹೀಂದ್ರಾ ಅವರು ಕ್ರೀಡಾಪಟುಗಳಿಗೆ ತಮ್ಮ ಕಂಪನಿಯ ಕಾರನ್ನು ಉಡುಗೊರೆ ನೀಡುತ್ತಿರುವುದು ಇದೇ ಮೊದಲಲ್ಲ. ಟೋಕಿಯೋ ಒಲಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಗೆದ್ದ ವಿಜೇತ ನೀರಜ್ ಚೋಪ್ರಾ ಅವರಿಗೆ ಕೂಡ ತಮ್ಮ ಹೊಸ ಕಾರನ್ನು ಉಡುಗೊರೆಯಾಗಿ ನೀಡುವುದಾಗಿ ತಿಳಿಸಿದ್ದರು ಅಕ್ಟೋಬರ್ನಲ್ಲಿ ಬಿಡುಗಡೆಯಾಗಲಿರುವ SUV, XUV 700 aನ್ನು ಉಡುಗೊರೆಯಾಗಿ ಅವರು ನೀಡಲಿದ್ದಾರೆ.
13-12-25 04:00 pm
Bangalore Correspondent
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
ಅಧಿವೇಶನ ಮುಗಿದ ತಕ್ಷಣವೇ ಡಿಕೆಶಿ ಮುಖ್ಯಮಂತ್ರಿಯಾಗುತ...
12-12-25 03:18 pm
ಅಧಿವೇಶನ ಮಧ್ಯೆಯೂ ಡಿಕೆಶಿ ಆಪ್ತ ಶಾಸಕರು, ಸಚಿವರ ಡಿನ...
12-12-25 03:15 pm
12-12-25 11:00 pm
HK News Desk
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
ಶಾಲೆಗಳಲ್ಲಿ ವಂದೇ ಮಾತರಂ ಹಾಡುವುದು ಕಡ್ಡಾಯಗೊಳಿಸಿ ;...
10-12-25 10:54 pm
13-12-25 04:36 pm
Mangalore Correspondent
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
Mangalore Jail Inmate, Death: ಎದೆನೋವು ; ಉಡುಪಿ...
11-12-25 10:55 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm