ಬ್ರೇಕಿಂಗ್ ನ್ಯೂಸ್
19-09-21 11:54 am Mykhel: Sadashiva ಕ್ರೀಡೆ
ಅಬುಧಾಬಿ, ಸೆ.19 : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ದ್ವಿತೀಯ ಹಂತದ ಪಂದ್ಯಗಳು ಸೆಪ್ಟೆಂಬರ್ 19ರಿಂದ ಶುರುವಾಗಲಿದೆ. ಸನ್ ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಎಚ್) ತಂಡ ಈ ಹಂತದಲ್ಲಿ ಹೇಗೆ ಕಮ್‌ಬ್ಯಾಕ್ ಮಾಡಲಿದೆ ಅನ್ನೋದರ ಮೇಲೆ ತಂಡದ ಪ್ರಶಸ್ತಿ ಆಸೆ ಅವಲಂಬಿತವಾಗಿದೆ ಎಂದು ಭಾರತದ ಮಾಜಿ ಬ್ಯಾಟ್ಸ್‌ಮನ್, ಹೈದರಾಬಾದ್ ಮೆಂಟರ್ ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ.
ಟಿ20 ಕ್ರಿಕೆಟ್ ಮಾದರಿಗಳಲ್ಲಿ ಬಹಳಷ್ಟು ಬದಲಾವಣೆಗೆ ಅವಕಾಶವಿರುತ್ತದೆ. ಅಂದರೆ ದುರ್ಬಲ ತಂಡವೊಂದು ಅಚಾನಕ್ ಬಲಿಷ್ಠ ತಂಡವಾಗಿ ಬದಲಾಗಬಹುದು. ಮುಖ್ಯವಾಗಿ ಇಂಥ ಟೂರ್ನಿಗಳ ವೇಳೆ ದುರ್ಬಲ ತಂಡವೊಂದು ಬಲಿಷ್ಠ ತಂಡವಾಗಿ ಅಥವಾ ಬಲಿಷ್ಠ ತಂಡವೊಂದು ದುರ್ಬಲ ತಂಡವಾಗಿ ಬದಲಾಗಲು ಅವಕಾಶಗಳಿರುತ್ತವೆ ಎಂದು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.

"ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ನಮ್ಮಂಥ (ಸನ್ ರೈಸರ್ಸ್ ಹೈದರಾಬಾದ್) ತಂಡಗಳಿಗೆ ಐಪಿಎಲ್ ಆರಂಭಿಕ ಹಂತ ಮತ್ತು ಎರಡನೇ ಹಂತದ ನಡುವಿನ ಈ ಬಿಡುವು ಒಗ್ಗಟ್ಟಾಗಿ ಮತ್ತು ಮಾನಸಿಕವಾಗಿ ಬಲಶಾಲಿಯಾಗಿ ಮರಳಲು ಅವಕಾಶ ನೀಡಿದೆ. ನಮಗೆ ಮಾನಸಿಕ ಸ್ಥೈರ್ಯ ಲಭಿಸಿದೆ. ನಮ್ಮ ಗುರಿ ಹೊಸತನದಿಂದ ಕೂಡಿದೆ," ಎಂದು ಲಕ್ಷ್ಮಣ್ ಅಭಿಪ್ರಾಯಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಭಾರತದಲ್ಲಿ ಅರ್ಧಕ್ಕೆ ನಿಲುಗಡೆಯಾಗಿದ್ದ ಐಪಿಎಲ್ 2021ರ ಆವೃತ್ತಿ ಸೆಪ್ಟೆಂಬರ್ 19ರಿಂದ ಅಕ್ಟೋಬರ್ 15ರ ವರೆಗೆ ಯುಎಇಯಲ್ಲಿ ನಡೆಯಲಿದೆ. ಸೆಪ್ಟೆಂಬರ್ 22ರಂದು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹೈದರಾಬಾದ್ ಮಧ್ಯೆ ಪಂದ್ಯ ನಡೆಯಲಿದೆ. ಹೈದರಾಬಾದ್ ಈಗ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದೆ. ಆಡಿರುವ ಏಳು ಪಂದ್ಯಗಳಲ್ಲಿ ಎಸ್‌ಆರ್‌ಎಚ್ ಒಂದೇ ಪಂದ್ಯ ಗೆದ್ದಿದೆ.
25-10-25 09:33 pm
Bangalore Correspondent
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
ಚಿತ್ತಾಪುರ ಆರೆಸ್ಸೆಸ್ ಪಥಸಂಚಲನ ; ಅ.28ರಂದು ಶಾಂತಿ...
24-10-25 06:04 pm
25-10-25 09:36 pm
HK News Desk
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
ಬಿಹಾರ ಚುನಾವಣೆ ; ಇಂಡಿಯಾ ಒಕ್ಕೂಟದ ಮುಖ್ಯಮಂತ್ರಿ ಸ್...
23-10-25 03:39 pm
ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪ...
22-10-25 10:56 pm
25-10-25 08:08 pm
Mangalore Correspondent
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
Mangalore Land Fraud, Lawyer, Mohiuddin Bava:...
24-10-25 07:57 pm
Police Commissioner Sudheer Reddy, Mangalore:...
24-10-25 11:57 am
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm