IPL 2022: ತಮ್ಮ ಯಶಸ್ಸಿನ ಶ್ರೇಯ ಈ ಆಟಗಾರನಿಗೆ ಸಲ್ಲಬೇಕೆಂದ ಕುಲ್ದೀಪ್‌ ಯಾದವ್‌!

21-04-22 03:05 pm       Source: Vijayakarnataka   ಕ್ರೀಡೆ

ಪಂಜಾಬ್‌ ಕಿಂಗ್ಸ್ ವಿರುದ್ಧ 2022ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಎರಡು ವಿಕೆಟ್‌ ಕಬಳಿಸುವ ಮೂಲಕ ಕುಲ್ದೀಪ್ ಯಾದವ್ ಡಲ್ಲಿ ಕ್ಯಾಪಿಟಲ್ಸ್‌ ತಂಡದ 9 ವಿಕೆಟ್‌ಗ...

ಪಂಜಾಬ್‌ ಕಿಂಗ್ಸ್‌ ವಿರುದ್ಧ ಡಲ್ಲಿ ಕ್ಯಾಪಿಟಲ್ಸ್‌ ತಂಡದ 9 ವಿಕೆಟ್‌ಗಳ ಭರ್ಜರಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ ಕುಲ್ದೀಪ್‌ ಯಾದವ್‌, ಪ್ರಸಕ್ತ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿನ ತಮ್ಮ ಯಶಸ್ಸಿನ ಶ್ರೇಯವನ್ನು ನಾಯಕ ರಿಷಭ್‌ ಪಂತ್‌ಗೆ ಅರ್ಪಿಸಿದ್ದಾರೆ.

ಮುಂಬೈನ ಬ್ರಬೋರ್ನ್‌ ಮೈದಾನದಲ್ಲಿ ಬುಧವಾರ ರಾತ್ರಿ ನಡೆದಿದ್ದ 2022ರ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಪಂಜಾಬ್‌ ಕಿಂಗ್ಸ್ ತಂಡ ಕುಲ್ದೀಪ್‌ ಯಾದವ್‌(24ಕ್ಕೆ 2) ಹಾಗೂ ಅಕ್ಷರ್ ಪಟೇಲ್‌(10ಕ್ಕೆ 2) ಸ್ಪಿನ್‌ ಮೋಡಿಗೆ ನಲುಗಿ ಕೇವಲ 115 ರನ್‌ಗಳಿಗೆ ಸೀಮಿತವಾಯಿತು. ಬಳಿಕ ಸಾಧಾರಣ ಮೊತ್ತದ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ಆರಂಭಿಕ ಡೇವಿಡ್‌ ವಾರ್ನರ್‌(60*) ಅವರ ಅರ್ಧಶತಕದ ಬಲದಿಂದ 9 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು.

ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಕುಲ್ದೀಪ್‌ ಯಾದವ್‌, "ತಮಗೆ ಸಿಕ್ಕಿರುವ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಅಕ್ಷರ್‌ ಪಟೇಲ್‌ ಅವರೊಂದಿಗೆ ಹಂಚಿಕೊಳ್ಳುತ್ತೇನೆ. ಅವರು ಕೂಡ ಅತ್ಯುತ್ತಮವಾಗಿ ಬೌಲ್‌ ಮಾಡಿದ್ದು, ಮಧ್ಯಮ ಓವರ್‌ಗಳಲ್ಲಿ ಪ್ರಮುಖ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ," ಎಂದು ಗುಣಗಾನ ಮಾಡಿದರು.

ವಿಕೆಟ್‌ಗಳನ್ನು ಪಡೆದ ಬಗ್ಗೆ ಮಾತನಾಡಿ, "ಕಗಿಸೊ ರಬಾಡ ವಿರುದ್ಧ ಸಾಕಷ್ಟು ಬಾರಿ ಆಡಿದ್ದೇನೆ ಹಾಗೂ ಬ್ಯಾಟಿಂಗ್‌ ವೇಳೆ ಅವರ ಫುಟ್‌ವರ್ಕ್‌ ಚಲನೆ ಕಡಿಮೆ ಇದೆ ಎಂಬುದು ತಮಗೆ ತಿಳಿದಿದೆ. ಹಾಗಾಗಿ, ಒಮ್ಮೆ ಚೈನಾಮನ್‌ ಮತ್ತು ಇನ್ನೊಮ್ಮೆ ಗೂಗ್ಲಿ ಹಾಕುವುದು ನನ್ನ ಯೋಜನೆಯಾಗಿತ್ತು. ಇನ್ನು ಎರಡನೇ ವಿಕೆಟ್‌ ಪಡೆಯುವ ಸಲುವಾಗಿ ರೌಂಡ್‌ ದಿ ವಿಕೆಟ್‌ ಬೌಲ್‌ ಮಾಡುವಂತೆ ರಿಷಭ್‌ ಪಂತ್‌ ಸಲಹೆ ನೀಡಿದ್ದರು," ಎಂದರು.

We cannot take our foot off the pedal: Delhi Capitals pacer Kagiso Rabada  ahead of RCB clash- The New Indian Express

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಆವೃತ್ತಿಯಲ್ಲಿ ತಾನು ಸಾಕಷ್ಟು ವಿಶ್ವಾಸದೊಂದಿಗೆ ಬೌಲ್‌ ಮಾಡುತ್ತಿದ್ದೇನೆ. ತಮ್ಮ ಪಾತ್ರದ ಬಗ್ಗೆ ತನಗೆ ಸ್ಪಷ್ಟತೆ ಇದೆ. ಬ್ಯಾಟ್ಸ್‌ಮನ್‌ ಏನು ಮಾಡಬಲ್ಲರು ಎಂಬ ಬಗ್ಗೆ ಯೋಚಿಸದೆ ಲೈನ್‌ ಅಂಡ್‌ ಲೆನ್ತ್‌ ಕಡೆಗೆ ಗಮನಹರಿಸುತ್ತಿದ್ದೇನೆ. ಅಂದಹಾಗೆ ತಾನು ಈಗ ವಿಡಿಯೋಗಳನ್ನು ವೀಕ್ಷಿಸುವುದಿಲ್ಲ. ಏಕೆಂದರೆ ಇದು ನನ್ನಲ್ಲಿ ಗೊಂದಲವನ್ನು ಉಂಟುಮಾಡುತ್ತದೆ," ಎಂದು ಹೇಳಿದರು.

"ದೀರ್ಘಾವಧಿಯ ಬಳಿಕ ತಾನು ತನ್ನ ಬೌಲಿಂಗ್‌ ಪ್ರದರ್ಶನವನ್ನು ಆನಂದಿಸುತ್ತಿದ್ದೇನೆ. ಪ್ರಸಕ್ತ ಆವೃತ್ತಿಯಲ್ಲಿನ ತಮ್ಮ ಯಶಸ್ಸಿನ ಶ್ರೇಯ ತನ್ನನ್ನು ಬೆಂಬಲಿಸುತ್ತಿರುವ ನಾಯಕ ರಿಷಭ್‌ ಪಂತ್‌ಗೆ ಸಲ್ಲಬೇಕು. ಒಬ್ಬ ಬೌಲರ್‌ ಆಗಿ ಇದು ತನಗೆ ಸಾಕಷ್ಟು ವಿಶ್ವಾಸವನ್ನು ಮೂಡಿಸಿದೆ. ಇದು ನಮ್ಮ ಪಾಲಿಗೆ ಪ್ಲಸ್‌ ಪಾಯಿಂಟ್‌ ಆಗಿದೆ," ಎಂದು ತಿಳಿಸಿದರು.

IPL 2022: Rishabh Pant batting at No. 3 could be the way forward for Delhi  Capitals, feels Graeme Smith | Cricket News - Times of India

ಕುಲ್ದೀಪ್‌ ಯಾದವ್‌ಗೆ 2ನೇ ಸ್ಥಾನ: ಪ್ರಸಕ್ತ ಆವೃತ್ತಿಯಲ್ಲಿ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರುತ್ತಿರುವ ಕುಲ್ದೀಪ್‌ ಯಾದವ್‌ ಆಡಿರುವ 6 ಪಂದ್ಯಗಳಲ್ಲಿ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆ ಮೂಲಕ 2022ರ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡದ ಯುಜ್ವೇಂದ್ರ ಚಹಲ್‌ 17 ವಿಕೆಟ್‌ ಪಡೆದು ಅಗ್ರ ಸ್ಥಾನದಲ್ಲಿದ್ದಾರೆ.

ರಿಷಭ್‌ ಪಂತ್‌ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಇಲ್ಲಿಯವರೆಗೂ ಆಡಿರುವ ಆರು ಪಂದ್ಯಗಳಲ್ಲಿ ಮೂರರಲ್ಲಿ ಗೆಲುವು ಪಡೆದಿದ್ದು, ಇನ್ನುಳಿದ ಮೂರು ಹಣಾಹಣಿಗಳಲ್ಲಿ ಸೋಲು ಅನುಭವಿಸಿದೆ. ಆ ಮೂಲಕ ಪಾಯಿಂಟ್ಸ್‌ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿದೆ.

Ipl 2022 I Would Like To Share This Award With Axar Pate says Kuldeep Yadav After Win Against Pbks.