ಬ್ರೇಕಿಂಗ್ ನ್ಯೂಸ್
01-07-26 12:59 pm ಡಾ.ಡಿ.ವಿ.ಗುರುಪ್ರಸಾದ್, ಹಿರಿಯ ಲೇಖಕರು ಅಂಕಣಗಳು
ಕೆಲವು ವರ್ಷಗಳ ಹಿಂದೆ ನಾನು ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್‌ಗೆ ಹೋಗಿದ್ದೆ. ಎಂದಿನಂತೆ ಬೆಳಗಿನ 4 ಗಂಟೆಗೆ ನನ್ನ ವಾಕಿಂಗ್ ಪ್ರಾರಂಭಿಸಿದೆ. ಹತ್ತಿರದಲ್ಲಿ ಯಾವುದೇ ಪಾರ್ಕ್ ಇರದಿದ್ದರಿಂದ ರಸ್ತೆಯಲ್ಲಿಯೇ ವಾಕಿಂಗ್ ಮಾಡುತ್ತಾ ಮುಂದೆ ಹೋದೆ. ಆಗ ಆ ರಸ್ತೆಯ ಪಕ್ಕದ ಫುಟ್‌ಪಾತ್‌ಗಳಲ್ಲಿ ಕೆಲವರು ಲೌಡ್‌ಸ್ಪೀಕರ್ ಮೂಲಕ ಹಾಡುಗಳನ್ನು ಹಾಕಿಕೊಂಡು ಮದ್ಯಪಾನವನ್ನು ಮಾಡುತ್ತಾ ನರ್ತಿಸುತ್ತಿದ್ದನ್ನು ಕಂಡೆ. ಬೆಳಕಾದರೂ ಇವರ ಪಾರ್ಟಿ ಮುಗಿದಿಲ್ಲವಲ್ಲ ಎಂದುಕೊಂಡು ನನ್ನ ಪಾಡಿಗೆ ಮುಂದೆ ಹೋಗುತ್ತಿದ್ದಾಗ ಆ ಗುಂಪಿನಲ್ಲಿದ್ದ ಒಬ್ಬ ಯುವತಿ ಬಂದು ಇದ್ದಕ್ಕಿದ್ದಂತೆ ನನ್ನನ್ನು ಅಪ್ಪಿಕೊಂಡಳು. ‘ನನ್ನ ಜತೆ ಸೆಕ್ಸ್‌ಗೆ ಬನ್ನಿ’ ಎಂದಳು. ನನಗೆ ಗಾಬರಿಯಾಯಿತು. ಅವಳಿಂದ ಬಿಡಿಸಿಕೊಂಡು, ʼಬೇಡʼ ಎಂದೆ. ಅದರೂ ಆಕೆ ನನ್ನನ್ನು ಮುಂದೆ ಸಾಗಲು ಬಿಡಲಿಲ್ಲ. ಅಷ್ಟರಲ್ಲಿ ಅಲ್ಲಿದ್ದ ಇನ್ನಷ್ಟು ಯುವತಿಯರು ನನ್ನನ್ನು ಸುತ್ತುವರಿದು, ‘ಅವಳು ಬೇಡದಿದ್ದರೆ ನಮ್ಮೊಡನೆ ಬನ್ನಿ’ ಎಂದು ನನ್ನನ್ನು ಎಳೆದಾಡತೊಡಗಿದರು. ಅವರಿಂದ ತಪ್ಪಿಸಿಕೊಂಡು ಬರುವಷ್ಟರಲ್ಲಿ ಸಾಕು ಸಾಕಾಯಿತು.
ಬ್ಯಾಂಕಾಕ್ ನಗರವು ವಿಶ್ವದ ಸೆಕ್ಸ್ ಟೂರಿಸಂನ ರಾಜಧಾನಿ ಎಂದು ನನಗೆ ತಿಳಿದಿತ್ತು. ಆದರೆ ಅಲ್ಲಿ ಈ ರೀತಿ ಮಾಡುವುದನ್ನು ಕಂಡು ಅಚ್ಚರಿಯಾಯಿತು. ಅದೇ ಪ್ರವಾಸದಲ್ಲಿ ನಾನು ಪಟ್ಟಾಯ ನಗರಕ್ಕೆ ಹೋದಾಗ ಯುರೋಪ್ ಮತ್ತು ಅಮೆರಿಕಗಳಿಂದ ಬಂದಿದ್ದ ನೂರಾರು ಮುದುಕರು ತಮ್ಮ ಮೊಮ್ಮಕ್ಕಳ ವಯಸ್ಸಿನ ಸ್ಥಳೀಯ ಯುವತಿಯರ ಜತೆ ಲಲ್ಲೆ ಹೊಡೆಯುತ್ತಿದ್ದುದ್ದನ್ನು ಕಂಡೆ. ಅವರೆಲ್ಲರೂ ಸೆಕ್ಸ್ ಉದ್ದೇಶಕ್ಕಾಗಿಯೇ ಬಂದಿದ್ದರು. ತಾವು ಥೈಲ್ಯಾಂಡಿನಲ್ಲಿ ಕಳೆಯುವ ಅಷ್ಟೂ ದಿನಗಳು ವೇಶ್ಯೆಯರನ್ನು ತಮ್ಮೊಡನೆ ಇಟ್ಟುಕೊಳ್ಳುವ ಉದ್ದೇಶ ಹೊಂದಿದ್ದರು.

ನಾನು ನೆದರ್‌ಲ್ಯಾಂಡ್‌ನ ರಾಜಧಾನಿ ಆಮ್‌ಸ್ಟರ್‌ಡಾಮ್‌ಗೆ ಹೋದಾಗ ಸೆಕ್ಸ್ ಟೂರಿಸಂನ ಇನ್ನೊಂದು ಝಲಕ್ ಸಿಕ್ಕಿತು. ಆ ನಗರದ ಕೇಂದ್ರ ಭಾಗದಲ್ಲಿಯೇ ಡೆ ವಾಲೆನ್ ಎನ್ನುವ ಬಡಾವಣೆಯಿದೆ. ಕೇಂದ್ರ ರೈಲ್ವೇ ನಿಲ್ದಾಣದಿಂದ ಹತ್ತು ನಿಮಿಷದ ನಡಿಗೆಯಲ್ಲಿ ತಲುಪಬಹುದಾದ ಇದು ಅಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಆ ನಗರಕ್ಕೆ ಬರುವ ಶೇ.90 ರಷ್ಟು ಪ್ರವಾಸಿಗಳು ಅದನ್ನು ನೋಡಲು ಹೋಗುತ್ತಾರೆ. ಅದರ ವಿಶೇಷತೆಯೆಂದರೆ ರಸ್ತೆಯ ಪಕ್ಕದಲ್ಲಿರುವ ಮನೆಗಳ ಎದುರು ಕೋಣೆಗಳಲ್ಲಿ, ಗಾಜಿನ ಕಿಟಕಿಗಳ ಹಿಂದೆ ನಿಂತು, ವೇಶ್ಯೆಯರು ತಮ್ಮ ದೇಹವನ್ನು ಪ್ರದರ್ಶಿಸುತ್ತಾ ಜನರನ್ನು ತಮ್ಮ ಜತೆ ಸೆಕ್ಸ್‌ಗಾಗಿ ಆಹ್ವಾನಿಸುತ್ತಾರೆ. ತೃತೀಯ ಲಿಂಗಿಗಳು ಸೇರಿದಂತೆ ಬಗೆಬಗೆಯ ವೇಶ್ಯೆಯರನ್ನು ಅಲ್ಲಿ ಕಾಣಬಹುದು. ಒಬ್ಬ ಗ್ರಾಹಕನನ್ನು ವೇಶ್ಯೆಯೊಬ್ಬಳು ತನ್ನ ಮನೆಯೊಳಗೆ ಕರೆದುಕೊಂಡ ಬಳಿಕ ಕಿಟಕಿಯ ಪರದೆ ಮುಚ್ಚಲ್ಪಡುತ್ತದೆ. ಈ ಬಡಾವಣೆಯಲ್ಲಿ ಸುಮಾರು 200 ವೇಶ್ಯಾಗೃಹಗಳಿದ್ದು ಸುಮಾರು 250 ವೇಶ್ಯೆಯರು ಇಲ್ಲಿ ತಮ್ಮ ಕಸುಬನ್ನು ನಡೆಸುತ್ತಾರೆ. ಪ್ರತಿ ವೇಶ್ಯೆಯೂ ನಗರಪಾಲಿಕೆ ಮತ್ತಿತರ ಕಚೇರಿಗಳಿಂದ ಲೈಸೆನ್ಸ್ ಪಡೆದಿರುತ್ತಾರೆ. ಇವರೆಲ್ಲರೂ ಪ್ರತಿವರ್ಷವೂ ಕಡ್ಡಾಯವಾಗಿ ಆರೋಗ್ಯ ಪರೀಕ್ಷೆಗೆ ಒಳಪಡಬೇಕಾಗುತ್ತದೆ. ದಿನದ 24 ಗಂಟೆಗಳೂ ಈ ವೇಶ್ಯಾಗೃಹಗಳು ತೆರೆದೇ ಇರುತ್ತವೆ. ಆದರೆ, ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಹೋಗುವುದೇ ಕತ್ತಲಾದ ಮೇಲೆ. ಆಗಂತೂ ಈ ಬಡಾವಣೆ ವಿಧವಿಧ ಬಣ್ಣಗಳ ದೀಪಗಳಿಂದ ಸಜ್ಜುಗೊಂಡು ಕಿನ್ನರ ಲೋಕದಂತೆ ಗೋಚರಿಸುತ್ತದೆ. ಡೆ ವಾಲೆನ್ ಬಡಾವಣೆಯಲ್ಲಿ ಸೆಕ್ಸ್ ಪ್ರಚೋದಿಸುವ ಬೆತ್ತಲೆ ಹಾಗೂ ಅರೆಬೆತ್ತಲೆ ನೃತ್ಯಗಳು, ಸ್ಟೇಜಿನ ಮೇಲೆಯೇ ಗಂಡು ಹೆಣ್ಣುಗಳು ಲೈಂಗಿಕ ಕ್ರಿಯೆಯನ್ನೂ ನಡೆಸುವ ಪ್ರದರ್ಶನಗಳೂ ಇರುತ್ತವೆ. ಇಲ್ಲಿ ಸೆಕ್ಸ್ ಆಟಿಕೆಗಳನ್ನು ಮಾರುವ ಅಂಗಡಿಗಳೂ ಇವೆ, ಗಾಂಜಾ ಮಾರುವ ಕೆಫೆಗಳೂ ಇವೆ. ಆಮ್‌ಸ್ಟರ್‌ಡಾಮ್‌ನಲ್ಲಿ ಸುಮಾರು 15,000 ವೇಶ್ಯೆಯರಿದ್ದು ಅವರು ವಿಶ್ವದ ವಿವಿಧ ದೇಶಗಳಿಗೆ ಸೇರಿದವರಾಗಿದ್ದಾರೆ.


ಥೈಲ್ಯಾಂಡ್ ಮತ್ತು ನೆದರ್‌ಲ್ಯಾಂಡ್ ದೇಶಗಳಲ್ಲಿ ನಾನು ಕಂಡಿದ್ದು ವಿಶ್ವದಲ್ಲಿ ಬೇಗನೇ ಬೆಳೆಯುತ್ತಿರುವ ಪ್ರವಾಸೋದ್ಯಮ. ಅದೇ ಸೆಕ್ಸ್ ಟೂರಿಸಂ. ಇದು ಆರಂಭವಾದದ್ದೇ ಥೈಲ್ಯಾಂಡ್‌ನಲ್ಲಿ. ವಿಯೆಟ್ನಾಂನಲ್ಲಿ ನಡೆಯುತ್ತಿದ್ದ ಸುದೀರ್ಘ ಯುದ್ಧದಲ್ಲಿ ಭಾಗವಹಿಸುತ್ತಿದ್ದ ಅಮೆರಿಕದ ಸೈನಿಕರು ತಮ್ಮ ವಿಶ್ರಾಂತಿ ಹಾಗೂ ಮನೋರಂಜನೆಗಾಗಿ ಥೈಲ್ಯಾಂಡ್‌ಗೆ ತಂಡೋಪತಂಡವಾಗಿ ಬರತೊಡಗಿದರು. ಬ್ಯಾಂಕಾಕ್ ಹಾಗೂ ಪಟ್ಟಾಯ ನಗರಗಳಿಗೆ ಹೆಚ್ಚು ಭೇಟಿ ನೀಡುತ್ತಿದ್ದರು. ಅವು ಅವರ ಸೆಕ್ಸ್ ಅವಶ್ಯಕತೆಗಳ ಪೂರೈಕೆಯ ಸ್ಥಳಗಳೂ ಆದವು. ಇದರಿಂದ ಅಪಾರ ಪ್ರಮಾಣದ ಆದಾಯವು ಹರಿದು ಬರತೊಡಗಿತು. ಬಡತನದಿಂದ ನಲುಗಿದ್ದ ಥೈಲ್ಯಾಂಡ್ ದೇಶವು ಸೆಕ್ಸ್ ಟೂರಿಸಂ ಅನ್ನು ತನ್ನ ಅದಾಯದ ಒಂದು ಮೂಲವನ್ನಾಗಿ ಮಾಡಿಕೊಳ್ಳಬಹುದೆಂದು ಮನಗಂಡಿತು. ಹೀಗಾಗಿ ವಿಯೆಟ್ನಾಂ ಯುದ್ಧ ಮುಗಿದ ನಂತರ ಅದು ಸೆಕ್ಸ್ ಟೂರಿಸಂ ಅನ್ನು ಪ್ರೋತ್ಸಾಹಿಸತೊಡಗಿತು. ವೇಶ್ಯಾವೃತ್ತಿಗೆ ಕಾನೂನಿನ ರಕ್ಷಣೆಯನ್ನು ನೀಡಿತು. ಸದ್ಯ ಥೈಲ್ಯಾಂಡಿನ ಸುಮಾರು 30 ಲಕ್ಷ ಜನರು ಸೆಕ್ಸ್ ವೃತ್ತಿಯಲ್ಲಿ ತೊಡಗಿದ್ದಾರೆ.
ವಿಶ್ವದ ಪ್ರವಾಸಿ ಭೂಪಟದಲ್ಲಿ ಸೆಕ್ಸ್ ಟೂರಿಸಂನ ಮೊದಲೆರಡು ತಾಣಗಳೆಂದರೆ ಅವು ಥೈಲ್ಯಾಂಡ್ ಮತ್ತು ನೆದರ್‌ಲ್ಯಾಂಡ್. ಮೂರನೆಯದು ಬ್ರೆಜಿಲ್, ನಾಲ್ಕನೆಯದು ಡಾಮಿನಿಕನ್ ರಿಪಬ್ಲಿಕ್ ಹಾಗೂ ಐದನೆಯದು ಫಿಲಿಪ್ಪೈನ್ಸ್. ಥೈಲ್ಯಾಂಡಿನಂತಯೇ ಫಿಲಿಪ್ಪೈನ್ಸ್ ಕೂಡ ಹೊರದೇಶದ ಸೈನಿಕರಿಗಾಗಿ ರೂಪುಗೊಂಡ ಸೆಕ್ಸ್ ತಾಣ. ಆರನೆಯ ಸ್ಥಾನದಲ್ಲಿ ಸ್ಪೇನ್ ದೇಶವಿದೆ. ಏಳನೆಯ ಸ್ಥಾನದಲ್ಲಿರುವ ಕೀನ್ಯಾ, ಆಫ್ರಿಕಾ ಖಂಡದ ಅತ್ಯಂತ ದೊಡ್ಡ ಸೆಕ್ಸ್ ಟೂರಿಸಂ ತಾಣವಾಗಿದೆ. ವಿಶೇಷವೆಂದರೆ ಶ್ವೇತವರ್ಣದ ಸ್ತ್ರೀಯರು ಪುರುಷ ವೇಶ್ಯೆಯರಿಗಾಗಿ ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ. ಕೊಲಂಬಿಯಾ ದೇಶವು ಒಂಬತ್ತನೆಯದಾಗಿದ್ದರೆ ಹತ್ತನೆಯದು ಇಂಡೋನೇಷ್ಯಾ. ಈ ದೇಶದಲ್ಲಿ ವೇಶ್ಯಾವೃತ್ತಿಯನ್ನು ಬಹಿಷ್ಕರಿಸಿದ್ದರೂ ಪುರುಷ ಹಾಗೂ ಸ್ತ್ರೀ ವೇಶ್ಯೆಯರಿಗಾಗಿ ಪ್ರವಾಸಿಗರು ಬರುತ್ತಾರೆ. ಇದರಂತೆಯೇ ಮಲೇಷಿಯಾ ದೇಶದಲ್ಲಿಯೂ ವೇಶ್ಯಾವೃತ್ತಿಗೆ ಬಹಿಷ್ಕಾರವಿದೆ. ಆದರೂ ಅಲ್ಲಿ ಚೀನಾ ಮತ್ತು ಥೈಲ್ಯಾಂಡ್ ದೇಶಗಳಿಂದ ಬಂದ ವೇಶ್ಯೆಯರು ಪ್ರವಾಸಿಗಳನ್ನು ಆಕರ್ಷಿಸುತ್ತಿದ್ದಾರೆ.

ಸೆಕ್ಸ್ ಟೂರಿಸಂಗಾಗಿ ಬರುವ ಪ್ರವಾಸಿಗರ ಮುಖ್ಯ ಉದ್ದೇಶವೇ ತಮ್ಮ ದೇಶದ ಜನರಿಗಿಂತ ಗಾತ್ರ, ಬಣ್ಣ, ಗುಣ, ಭಾಷೆ ಮುಂತಾದವುಗಳಲ್ಲಿ ಭಿನ್ನವಾಗಿರುವ ಪುರುಷ ಹಾಗೂ ಸ್ತ್ರೀಯರೊಡನೆ ದೈಹಿಕ ಸಂಪರ್ಕವನ್ನು ಬೆಳೆಸುವುದು. ಹೊಸ ಬಗೆಯ ಜನರ ಜತೆ ಹೊಸ ರೀತಿಯ ಸೆಕ್ಸ್ ನಡೆಸುವುದು ಕೆಲವರಿಗೆ ಥ್ರಿಲ್ ಕೊಡುತ್ತದೆ. ಇದೇ ಕಾರಣಕ್ಕಾಗಿಯೇ ಅಮೆರಿಕ ಮತ್ತು ಯುರೋಪ್ ಖಂಡಗಳ ಪ್ರವಾಸಿಗಳು ದಕ್ಷಿಣ ಅಮೆರಿಕ, ಏಷ್ಯಾ ಹಾಗೂ ಆಫ್ರಿಕಾ ಖಂಡಗಳ ದೇಶಗಳಿಗೆ ಹೋಗಿ ಅಲ್ಲಿನ ಸ್ತ್ರೀ-ಪುರುಷರೊಂದಿಗೆ ಸೆಕ್ಸ್ನಲ್ಲಿ ತೊಡಗಲು ಮುಗಿಬೀಳುತ್ತಾರೆ.
ಇಂಥ ಜನರಿಗಾಗಿಯೇ ತಮ್ಮ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದು ಸೆಕ್ಸ್ ಟೂರಿಸಂನ ಉದ್ದೇಶ. ಇದು ಸರಿಯೋ ತಪ್ಪೋ ಎನ್ನುವುದು ನಿರಂತರವಾಗಿ ಚರ್ಚೆಯಾಗುತ್ತಿರುವ ವಿಷಯ. ವಿಶ್ವದ ಹತ್ತು ಸೆಕ್ಸ್ ಟೂರಿಸಂ ತಾಣಗಳ ಪಟ್ಟಿಯಲ್ಲಿ ಇರುವ ಬಹಳ ದೇಶಗಳು ಬಡ ದೇಶಗಳೇ ಆಗಿದ್ದು, ಶ್ರೀಮಂತ ಪ್ರವಾಸಿಗರು ತಮ್ಮ ದೇಶಕ್ಕೆ ಸೆಕ್ಸ್ ಟೂರಿಸಂಗಾಗಿ ಬಂದರೆ ಸ್ವಲ್ಪವಾದರೂ ತಮ್ಮ ದೇಶದ ಆರ್ಥಿಕ ಪ್ರಗತಿ ಆಗುತ್ತದೆ ಎಂದು ಅವು ಭಾವಿಸುತ್ತವೆ. ಇದರಿಂದ ಬಡ ಕುಟುಂಬಗಳ ಜೀವನ ಸುಧಾರಿಸುತ್ತದೆ ಎನ್ನುವುದೂ ಅಲ್ಲಿನ ನಾಯಕರ ಅಭಿಪ್ರಾಯ.
ಆದರೆ ಸೆಕ್ಸ್ ಟೂರಿಸಂನಿಂದ ಅಪಾಯಗಳೇ ಹೆಚ್ಚು ಎನ್ನುವುದನ್ನು ಅವರು ಅರಿತಂತಿಲ್ಲ. ಸೆಕ್ಸ್ ಟೂರಿಸಂ ಅನ್ನು ಪ್ರೋತ್ಸಾಹಿಸಿದಾಗ ಅಪ್ರಾಪ್ತರನ್ನು ಅವರ ಕುಟುಂಬಗಳು ಸೆಕ್ಸ್‌ಗಾಗಿಯೇ ತಳ್ಳುವುದು, ಇಲ್ಲವೇ ಮಾರುವ ಅಪಾಯವಿದೆ. ಇಂಥವು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಶಾಲೆಗೆ ಹೋಗಬೇಕಾದ ಮಕ್ಕಳು ತಮ್ಮ ಕುಟುಂಬದ ಆರ್ಥಿಕ ತೊಂದರೆಗಳಿಂದ ವೇಶ್ಯಾವೃತ್ತಿಯನ್ನು ಮಾಡುವುದು ತಪ್ಪು ಎನ್ನುವುದು ಸಾರ್ವಜನಿಕ ಅಭಿಪ್ರಾಯ. ಸೆಕ್ಸ್ ಟೂರಿಸಂನ ಫಲವಾಗಿ ವೇಶ್ಯಾವೃತ್ತಿಯಲ್ಲಿರುವವರ ಆರೋಗ್ಯವು ಹಾಳಾಗುತ್ತದೆ. ಏಡ್ಸ್ ಮುಂತಾದ ರೋಗ ತಗುಲಿದವರ ಉಪಚಾರಕ್ಕೆ ಸಾಕಷ್ಟು ಹಣ ವ್ಯಯವಾಗುತ್ತದೆ. ಡ್ರಗ್ಸ್ ಸಮಸ್ಯೆ ಉಂಟಾಗುತ್ತದೆ. ಜೂಜಾಟ ಹೆಚ್ಚಾಗುತ್ತದೆ. ಕಳ್ಳತನ ಮತ್ತು ದರೋಡೆ ಪ್ರಕರಣಗಳು ಏರುತ್ತವೆ. ಹಿಂಸಾಚಾರ ಹೆಚ್ಚಾಗುತ್ತದೆ. ಸಾರ್ವಜನಿಕ ನೆಮ್ಮದಿಗೆ ಭಂಗತರುವಂಥ ಗಲಭೆ, ದಂಗೆ ಮುಂತಾದವು ಹೆಚ್ಚುತ್ತವೆ. ಒಟ್ಟಾರೆ ಕಾನೂನು ಬಾಹಿರ ಚಟುವಟಿಕೆಗಳು ಹೆಚ್ಚಾಗುತ್ತವೆ.
ಮಾನವ ಕಳ್ಳಸಾಗಾಣಿಕೆ ಸೆಕ್ಸ್ ಟೂರಿಸಂನ ಕರಾಳ ಪರಿಣಾಮಗಳಲ್ಲಿ ಒಂದಾಗಿದೆ. ನೆದರ್‌ಲ್ಯಾಂಡ್ ದೇಶಕ್ಕೆ ಆಫ್ರಿಕಾ ಮತ್ತು ಏಷ್ಯಾ ಖಂಡಗಳಿಂದ ಮಾನವ ಕಳ್ಳಸಾಗಾಣಿಕೆ ಆಗುತ್ತಿದೆ ಹಾಗೂ ಯುರೋಪಿನ ವಿವಿಧ ದೇಶಗಳಲ್ಲಿ ನಿರ್ಗತಿಕರಾಗಿ ವಲಸೆ ಬಂದವರನ್ನು ಸೆಕ್ಸ್ ಟೂರಿಸಂಗಾಗಿ ದಬ್ಬಲಾಗುತ್ತಿದೆ ಎಂದೂ ಒಂದು ವರದಿ ತಿಳಿಸುತ್ತದೆ. ಇದೂ ಇಂದು ಗಂಭೀರ ಸಮಸ್ಯೆಯಾಗಿದೆ.
ಸೆಕ್ಸ್ ಟೂರಿಸಂನಿಂದಾಗಿ ಇಂಥ ಸಮಸ್ಯೆಗಳು ಉದ್ಭವಿಸುವುದರಿಂದಲೂ ಇದರಿಂದ ಶ್ರೀಮಂತ ದೇಶಗಳ ಜನರಿಂದ ಬಡದೇಶದ ಬಡಪಾಯಿಗಳ ಶೋಷಣೆ ಆಗುತ್ತಿರುವುದರಿಂದಲೂ ಇದನ್ನು ಕೂಡಲೇ ನಿಲ್ಲಿಸಬೇಕು ಎನ್ನುವುದು ಬಹುಜನರ ಅಭಿಪ್ರಾಯವಾಗಿದೆ. ಆದರೆ ಪ್ರತಿ ವರ್ಷವೂ ಬಿಲಿಯನ್‌ಗಟ್ಟಲೆ ಡಾಲರ್‌ಗಳಿಸುವ ಉದ್ಯಮ ಈ ಸೆಕ್ಸ್ ಟೂರಿಸಂ ಆಗಿರುವ ಕಾರಣ, ಅದನ್ನು ನಿಲ್ಲಿಸುವುದು ಯಾರಿಗೂ ಬೇಕಾಗಿಲ್ಲ. ಹೀಗಾಗಿ ಸೆಕ್ಸ್ ಟೂರಿಸಂ ಪ್ರವಾಸೋದ್ಯಮದ ಒಂದು ಕರಾಳ ರೂಪವಾಗಿ ಮುಂದುವರಿಯುತ್ತಲೇ ಬಂದಿದೆ.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
23-08-26 06:17 pm
HK News Staffer
ಧಾರ್ಮಿಕ ದ್ವೇಷದ ನೆಪದಲ್ಲಿ ಪುತ್ತೂರು ಬಂದ್ ಕರೆ ಕೊಟ...
23-08-26 05:36 pm
ತಾಂತ್ರಿಕ ದೋಷದಿಂದ ದಾಖಲೆ ಸುಟ್ಟ ಆರೋಪ ; ಪುತ್ತೂರಿನ...
23-08-26 05:18 pm
ರಾಜ್ಯದಲ್ಲಿ ಕೃತಕ ಪನೀರ್ ಬ್ಯಾನ್, ನಕಲಿ ಔಷಧ ಜಾಲ ಹಿ...
22-08-26 01:37 pm
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
24-08-26 12:06 pm
HK News Staffer
ಡೇವಿಡ್ ಡಿಸೋಜ ಹತ್ಯೆಗೆ ಶಾರ್ಪ್ ಶೂಟರ್ಗಳನ್ನು ರವಾನ...
24-08-26 11:05 am
ಹೊಳೆನರಸೀಪುರ ; ಟ್ರ್ಯಾಕ್ಟರ್ ಕೀಯನ್ನು ತಿರುಗಿಸಿದ ಮ...
23-08-26 05:20 pm
ಹೆತ್ತವರನ್ನು ಕೊಲ್ತೇನೆಂದು ಹೇಳಿ ಒಂಬತ್ತನೇ ಕ್ಲಾಸ್...
22-08-26 12:43 pm
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm