ಬ್ರೇಕಿಂಗ್ ನ್ಯೂಸ್
22-09-26 02:53 pm ಬಾಲಸುಬ್ರಹ್ಮಣ್ಯ ಕಂಜರ್ಪಣೆ ಅಂಕಣಗಳು
ನಮ್ಮೂರಿನಲ್ಲಿ ಒಬ್ರು ಬಹಳ ಒಳ್ಳೆಯ ಮನುಷ್ಯ ಇದ್ರು. ಅವರು ಕುಡೀತಿರ್ಲಿಲ್ಲ. ಅವರಿಗೆ ಒಂದಿಬ್ಬರು ಗೆಳೆಯರು ಸೇರಿ ಕುಡಿಯೋದನ್ನು ಅಭ್ಯಾಸ ಮಾಡಿಸಿದ್ರು. ತಾವೇ ಸ್ವಂತ ಖರ್ಚಿನಲ್ಲಿ ಕುಡಿಸಿದ್ರು. ಕೆಲವು ಸಮಯದ ನಂತರ ಆ ವ್ಯಕ್ತಿ ತಾನೇ ಹಣ ಹಾಕಿ ಕುಡಿಯೋದಕ್ಕೆ ಶುರು ಮಾಡಿದ. ಅಂದರೆ ಕುಡಿಯೋದು ಅಭ್ಯಾಸ ಆಗಿರುತ್ತ, ಆಮೇಲೆ ಅದನ್ನು ಬಿಡಲು ಸಾಧ್ಯವಾಗುವುದಿಲ್ಲ. ಇದು ಸಾಮಾನ್ಯವಾಗಿ ಹೊಸ ಅಭ್ಯಾಸಗಳು ಬರುವ ಕ್ರಮ.
ನಮ್ಮಲ್ಲಿ ಈಚೆಗೆ ಯುಪಿಐ ಸಿಸ್ಟಂ ಬಂದಾಗ ಜನ ಎಲ್ಲವನ್ನೂ ಕೂಡಾ ಯುಪಿಐ ಮುಖಾಂತರ ಕೊಡೋದಿಕ್ಕೆ ಶುರು ಮಾಡಿದ್ರು, ಕೈಯಲ್ಲಿ ದುಡ್ಡಿದ್ರೂ ಟೆನ್ಷನ್ ಅನ್ನೋ ದೃಷ್ಟಿಯಲ್ಲಿ ಕೊಡ್ತಿದ್ರು. ಇದರಿಂದಾಗಿ ತಮಗೆ, ಸರ್ಕಾರಕ್ಕೆ ಲಾಭ ಆಗ್ತಿಲ್ಲ ಅಂತ ಇದರ ಕುರಿತು ಅಮೆರಿಕದ ಕೆಲವು ದೊಡ್ಡ ಸಂಸ್ಥೆಗಳು ದೂರು ಕೊಟ್ಟವು. ಟ್ರಂಪ್ ಸರ್ಕಾರವೂ ಈ ಬಗ್ಗೆ ಅನೇಕ ಬಾರಿ ಭಾರತದ ಬಳಿ ಮಾತಾಡಿದೆ.
ಭಾರತ ಸರ್ಕಾರ ಆಗಸ್ಟ್ ತಿಂಗಳಲ್ಲಿ ಸಂಸತ್ತಿನಲ್ಲಿ ಯುಪಿಐಗೆ ಶುಲ್ಕ ವಿಧಿಸಬೇಕು ಎನ್ನುವ ನಿರ್ಣಯಕ್ಕೆ ಬಂತು. ಜನ ಒಮ್ಮೆಲೆ ಎಚ್ಚೆತ್ತುಕೊಂಡವರಂತೆ, ನಾವು ಯುಪಿಐಯನ್ನು ಅಭ್ಯಾಸ ಮಾಡಿಕೊಂಡಿದ್ದೇವೆ, ನಗದು ಉಪಯೋಗಿಸದೆ ಯುಪಿಐ ಸಿಸ್ಟಂ ಬಳಸಿ ಅಂತ ಹೇಳಿದ ನೀವೇ ಈಗ ಅದಕ್ಕೆ ಶುಲ್ಕ ವಿಧಿಸಿದರೆ ಹೇಗೆ ಅನ್ನತೊಡಗಿದರು. ಹೊಸ ನಿಯಮದ ಪ್ರಕಾರ ಎರಡು ಸಾವಿರ ರೂ. ವರೆಗಿನ ಯುಪಿಐ ಪೇಮೆಂಟು ಶುಲ್ಕ ಫ್ರೀ. ಅದನ್ನು ಮೀರಿದರೆ ಶುಲ್ಕ ವಿಧಿಸಲಾಗುತ್ತದೆ. ಅದಕ್ಕೂ ಬೇರೆ ಬೇರೆ ನಿಯಮಗಳಿವೆ. ಅದು ಎಷ್ಟು, ಏನು ಅನ್ನುವುದಕ್ಕಿಂತ ಮುಖ್ಯವಾಗಿ ಈ ರೀತಿ ವಹಿವಾಟಿಗೆ ಅವಕಾಶ ಮಾಡಿಕೊಟ್ಟ ಸರ್ಕಾರವೇ ಅದರ ಮೇಲೆ ಶುಲ್ಕ ವಿಧಿಸುತ್ತದೆ ಅಂದ್ರೆ ಇನ್ನೇನೇನು ಮಾಡಬಹುದು ಅಂತ ಗೊತ್ತಿಲ್ಲ.
ನಮ್ಮಲ್ಲೀಗ ಪ್ರತಿಭಟಿಸುವ ಧೋರಣೆ ಅಥವಾ ಧ್ವನಿಯೇ ಇಲ್ಲವೇ. ಹಾಗಾಗಿ ಇದನ್ನೂ ವಿರೋಧಿಸದೆ ಇನ್ನು ಸ್ವಲ್ಪ ಕಾಲಕ್ಕೆ ಸುಮ್ಮನಾಗ್ತಾರೆ. ಇದರ ಪರಿಣಾಮ ಗೊತ್ತಾಗ್ಬೇಕಾದ್ರೆ ಶಾಲಾ ಫೀಸ್ ಕಟ್ಟಬೇಕಾದರೂ ಈಗ ಯುಪಿಐ ಪೇಮೆಂಟ್ ಮಾಡಿ ಅನ್ನುವ ಪರಿಸ್ಥಿತಿ ಇದೆ. ಪೋಸ್ಟ್ ಆಫೀಸಿಗೆ ಹೋದರೆ, ನಾನು ಕ್ಯಾಶ್ ಕೊಡ್ತೀನಿ, ಹಣ ಕೊಡ್ತೀನಿ ಅಂದ್ರೆ ಅವರು ಕೇಳೋದಿಲ್ಲ. ಯುಪಿಐ ಪೇಮೆಂಟ್ ಮಾಡಿ ಅಂತಾರೆ. ಯುಪಿಐಯನ್ನು ಕಡ್ಡಾಯ ಮಾಡುವ ಒಂದು ಧೂರ್ತ ಯೋಚನೆಯೂ ಇದರಲ್ಲಿದೆ. ಮುಂದೆ ಉಸಿರಾಡೋದಕ್ಕೂ ಜಿಎಸ್‌ಟಿ ಹಾಕ್ತಾರೆ ಅಂತ ಒಬ್ರು ವ್ಯಂಗ್ಯ ಮಾಡಿದ್ರು.
ಯುಪಿಐ ಪೇಮೆಂಟು ಯಾವುದೇ ರೀತಿಲಿ ನಾವು ಹೇಗೆ ಮಾಡಿದ್ರು ಕೂಡ ನಮ್ಮನ್ನ ಸುಲಿಯೋದಕ್ಕು ಅನುಕೂಲ ಆಗಿದೆ. ನೀವು ಬ್ಯಾಂಕುಗಳ ಕಡೆಗೆ ಹೋದ್ರೆ ಅಲ್ಲಿ ಡೆಪಾಸಿಟ್ ಮಾಡಿದ್ರೂ ಅದಕ್ಕೊಂದು ಕ್ಯಾಶ್ ಹ್ಯಾಂಡ್ಲಿಂಗ್ ಚಾರ್ಜಸ್ ಅಂತ ಮಾಡ್ತಾರೆ. ನಾನು ಒಂದು ಸಲ ಬ್ಯಾಂಕ್‌ನಲ್ಲಿ ಕೇಳಿದ್ದೆ-ಕ್ಯಾಶ್ ಹ್ಯಾಂಡ್ಲಿಂಗ್ ಚಾರ್ಜ್ ಅಂದ್ರೇನು? ನೀವು ಕ್ಯಾಶ್ ಹ್ಯಾಂಡಲ್ ಮಾಡದೆ ಇನ್ನೇನು ಮಾಡ್ತೀರಾ, ಕಾವಲಿ ಅಥವಾ ದೋಸೆ ಹ್ಯಾಂಡಲ್ ಮಾಡ್ತೀರಾ? ಅಂತ ತಮಾಷೆ ಮಾಡಿದ್ದೆ.
ಈಗ, ಈ ಜಿಎಸ್‌ಟಿಯೂ ನಿಮಗಲ್ಲ, ನೋಡಿ. ಅದು ವ್ಯಾಪಾರಸ್ಥರು, ಕಂಪೆನಿಗಳು ಅದರ ಹೊರೆಯನ್ನು ಹೊರಬೇಕು ಅಂತ ಹೇಳಿದ್ರೂ ಕೊನೆಗೂ ಅದು ಬರೋದು ಗ್ರಾಹಕರ ಮೇಲೆಯೇ ಅನ್ನುವುದು ನಮಗೆ ಗೊತ್ತಿದೆ. ಬಡವರ ಬವಣೆ ಕೇಳೋದೆ ಬೇಡ. ಅವರು ಯುಪಿಐಯನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಅದರಿಂದ ವ್ಯಾಪಾರವೂ ಚೇತರಿಸಿಕೊಂಡಿದೆ. ತರಕಾರಿ ಮಾರುವವರು, ಹಣ್ಣು ಮಾರುವವರು, ಇಂಥ ಸಣ್ಣ ಸಣ್ಣ ಅಂಗಡಿಯವರು ಕೂಡ ಯುಪಿಐ ಪೇಮೆಂಟ್ ಸ್ವೀಕರಿಸುವುದರಿಂದ ಅವರಿಗೂ ವ್ಯಾಪಾರ ಹೆಚ್ಚಾಗಿದೆ. ಜನರಿಗೂ ಅನುಕೂಲವಾಗಿತ್ತು. ಇನ್ನು ಮುಂದೆ ಹಾಗಾಗುವುದಿಲ್ಲ. ಈಗ ಅದಕ್ಕೂ ಚಾರ್ಜ್ ಮಾಡ್ತಾರೆ ಅಂದ್ರೆ, ಕೊನೆಗೆ ಬಂದು ಬೀಳೋದು ಬಳಕೆದಾರರ ಮೇಲೆಯೇ.
ಸರ್ಕಾರ ಹೇಳಿದ್ದನ್ನೇ ಯಾವತ್ತೂ ಮಾಡೋದಿಲ್ಲ. ಎಷ್ಟರ ಮಟ್ಟಿಗೆ ನಮಗಿದು ಅನುಕೂಲ ಆಗುತ್ತದೆ ಎನ್ನುವುದನ್ನು ಬರುವ ದಿನಗಳಲ್ಲಿ ಹೇಳಬಹುದು. ಈಗ ಹಣದ ಮಟ್ಟಿಗೆ ಸರ್ಕಾರ ನಿರ್ದಾಕ್ಷಿಣ್ಯವಾಗಿ ಜನರನ್ನ ಸುಲಿಯೋದಕ್ಕೆ ಶುರು ಮಾಡಿದೆ. ಯುಪಿಐ ಪೇಮೆಂಟ್ ಎರಡು ಸಾವಿರ ರೂಪಾಯಿಗೆ ಶುಲ್ಕ ಹಾಕ್ತಾರಾ, ಮೂರು ಸಾವಿರಕ್ಕೆ ಹಾಕ್ತಾರಾ ಅನ್ನೋದು ಪ್ರಶ್ನೆಯಲ್ಲ. ಯುಪಿಐಗೆ ಶುಲ್ಕ ವಿಧಿಸುವುದೇ ತಪ್ಪು ಧೋರಣೆ. ಇಂಥ ನಿರ್ಧಾರ ತೆಗೆದುಕೊಳ್ಳುವ ಮೊದಲು ರಾಷ್ಟ್ರಮಟ್ಟದಲ್ಲಿ ಚರ್ಚೆ ನಡೆಯಬೇಕಾಗಿತ್ತು. ಜನರ ಜೊತೆ ಮಾತನಾಡಬೇಕಾಗಿತ್ತು. ಬಹುತೇಕ ಜನರಿಗೆ ಇದರ ಬಗ್ಗೆ ಗೊತ್ತೇ ಇಲ್ಲ.
ಇವತ್ತು ಯುಪಿಐ ಪೇಮೆಂಟ್ ಇನ್ನೂ ಕಡಿಮೆ ಮಾಡ್ತಾರೆ ಅಂದರೂ, ಅದರ ಪರಿಣಾಮ ನಮ್ಮ ಮೇಲೆಯೇ ಬೀಳುತ್ತದೆ. ಹಾಗಾಗಿ ಸಾಧ್ಯವಾದಷ್ಟು ಕಡೆಗಳಲ್ಲಿ ಯುಪಿಐ ಬದಲು ನಗದು ಪಾವತಿ ಮಾಡುವ ಮೂಲಕ ಸರ್ಕಾರಕ್ಕೆ ಒಂದು ಸಂದೇಶ ಕೊಡಬಹುದು. ಸಾಧ್ಯವಾದರೆ ನಗದು ವ್ಯವಹಾರವೇ ಮಾಡಿದರೆ ಇದ್ರಿಂದೇನೂ ಲಾಭ ಇಲ್ಲ ಅಂತಾದರೆ ಸರ್ಕಾರ ಹಿಂದೆ ಸರಿಯಲೂಬಹುದು.
ಯಾಕೆಂದರೆ ತನ್ನ ಕೈಯನ್ನು ಸದಾ ಇನ್ನೊಬ್ಬರ ಕಿಸೇಲಿ ಇಟ್ಟುಕೊಳ್ಳೋದೇ ಸರ್ಕಾರದ ಕೆಲಸ. ಆಡಳಿತ ಅಂದ್ರೆ ಇನ್ನೊಬ್ಬರ ಹಣವನ್ನ ಪಡ್ಕೊಂಡು ತಾನು ಖುಷಿಯಲ್ಲಿ ಬದುಕೋದು, ಇಂಥದ್ದನ್ನ ಈ ಸರ್ಕಾರ ಮಾಡ್ತಾಯಿದೆ. ಇದು ಪತ್ರಿಕೆಯಲ್ಲಿ ಬಂದರೂ ಕೂಡ ಜನರು ವಿಶೇಷವಾಗಿ ಯೋಚನೆ ಮಾಡೋದಿಲ್ಲ. ನಾನು ನಿನ್ನೆ ಯುಪಿಐನಲ್ಲಿ ಪೇಮೆಂಟ್ ಮಾಡಿದ್ದೇನೆ, ಇವತ್ತೂ ಮಾಡಿದ್ದೇನೆ. ಅಕ್ಟೋಬರ್ ಹತ್ತರಿಂದ ಶುಲ್ಕ ಹಾಕ್ತಾರಂತೆ. ಅಲ್ಲಿಯವರೆಗೆ ಪರವಾಗಿಲ್ಲ ಅಂತ ಯೋಚಿಸುತ್ತೇವೆಯೇ ಹೊರತು ದೂರದಿಂದ್ಲೇ ಆಪತ್ತು ಬರುವಾಗ ಅದನ್ನು ಎದುರಿಸ್ಬೇಕು ಅನ್ನುವುದನ್ನು ಯೋಚನೆಯೇ ಮಾಡುವುದಿಲ್ಲ.
ನಾನು ಕರೆ ಕೊಡುವುದಿಷ್ಟೇ – ಒಂದೋ ಯುಪಿಐ ಪೇಮಂಟನ್ನು ಕಡಿಮೆ ಮಾಡಿ ಅಥವಾ ಇದರ ಕುರಿತು ಸರ್ಕಾರಕ್ಕೆ ಪ್ರತಿಭಟನೆಯ ಧ್ವನಿಯನ್ನು ಸಲ್ಲಿಸಿ.
21-09-26 12:58 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಮತ್ತೆ ಯೂಟ್ಯೂಬ...
20-09-26 07:13 pm
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
22-09-26 09:42 am
HK News Staffer
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
21-09-26 10:36 pm
HK News Desk
ಮುಸ್ಲಿಂ ಲೀಗ್ ಮನಸ್ಥಿತಿಯನ್ನು ಜನರ ಮೇಲೆ ಹೇರಲು ಹೊರ...
21-09-26 09:49 pm
ನಾಲ್ಕು ದಿನ ರಾಜ್ಯದಲ್ಲಿ ಭಾರೀ ಮಳೆ ಮುನ್ಸೂಚನೆ ; ಸೆ...
21-09-26 09:46 pm
ಸೌಜನ್ಯಾ ಪ್ರಕರಣದಲ್ಲಿ 14 ವರ್ಷಗಳ ಬಳಿಕ ಮರು ತನಿಖೆಗ...
21-09-26 01:37 pm
HYROX ಮೆನ್ಸ್ ಡಬಲ್ಸ್ ಫಿಟ್ನೆಸ್ ಸ್ಪರ್ಧೆಯಲ್ಲಿ ದಕ್...
21-09-26 10:08 am
22-09-26 02:57 pm
HK News Staffer
ಲಂಚಕ್ಕೆ ಕೈಯೊಡ್ಡಿ ಲೋಕಾಯುಕ್ತಕ್ಕೆ ಟ್ರಾಪ್ ಆದ ಬಜ್ಪ...
21-09-26 08:21 pm
ಕಳತ್ತೂರಿನಲ್ಲಿ ಮೇಯಲು ಬಿಟ್ಟಿದ್ದ ದನ ಕಳವು ಪ್ರಕರಣ...
21-09-26 06:16 pm
Ramanth Rai Car Accident: ಕಾರ್ಕಳ ; ಮಾಜಿ ಸಚಿವ...
20-09-26 04:39 pm
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm