ವಿಕಾಸ್ ಕಾಲೇಜಿನಲ್ಲಿ 76ನೇ ಸ್ವಾತಂತ್ರ್ಯೋತ್ಸವ ಆಚರಣೆ 

15-08-22 09:56 pm       Mangalore Correspondent   ಕಾಲೇಜು ಕ್ಯಾಂಪಸ್

ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನಗರದ ವಿಕಾಸ್ ಕಾಲೇಜಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ಮಂಗಳೂರು, ಆಗಸ್ಟ್ 15 : ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ನಗರದ ವಿಕಾಸ್ ಕಾಲೇಜಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಕೃಷ್ಣ ಜೆ. ಪಾಲೆಮಾರ್ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿದ್ದರು. ಸ್ವಾತಂತ್ರ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅಹಿಂಸಾ ಮಾರ್ಗದ ಮೂಲಕ  ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು.  ಅವರ ತ್ಯಾಗದ ಪರಿಣಾಮವಾಗಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ಪ್ರಧಾನಿಯವರ ಕನಸಿನಂತೆ ಮುಂದಿನ ದಿನಗಳಲ್ಲಿ ಭಾರತ ವಿಶ್ವದಲ್ಲಿಯೇ ಪ್ರಥಮ ಸ್ಥಾನವನ್ನು ಪಡೆಯುವಂತೆ ನಾವು ಕರ್ತವ್ಯ ನಿರತರಾಗಬೇಕು ಎಂದರು.

ವೇದಿಕೆಯಲ್ಲಿ ವಿಕಾಸ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಖಜಾಂಚಿ ಜೆ. ಕೊರಗಪ್ಪ, ಟ್ರಸ್ಟಿ ಸೂರಜ್ ಕುಮಾರ್ ಕಲ್ಯ, ಸಿಇಓ ಪಾರ್ಥಸಾರಥಿ ಜೆ.  ಪಾಲೆಮಾರ್, ವಿಕಾಸ್ ಫಿಸಿಯೋತೆರಪಿ ಕಾಲೇಜಿನ ಪ್ರಾಂಶುಪಾಲ ಡಾ. ಅಜಯ್ ಠಾಕೂರ್, ವಿಕಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಮೋಹನಾ ಆರ್, ವಿಕಾಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಐಶ್ವರ್ಯ ಕೆ. ಉಪಸ್ಥಿತರಿದ್ದರು.ವಿದ್ಯಾರ್ಥಿಗಳಾದ ಪ್ರಿಯಾಂಕಾ ಸ್ವಾಗತಿಸಿದರು. ಪ್ರಣೀತಾ ವಂದಿಸಿದರು. ಅರ್ಚನಾ ನಾಯರ್  ಮತ್ತು ಪ್ರಕೃತಿ ನಿರೂಪಿಸಿದರು.

Mangalore Vikas college celebrates 75th Independence day with grandeur and Majesty.