ಬ್ರೇಕಿಂಗ್ ನ್ಯೂಸ್
05-08-22 06:53 pm Mangalore Correspondent ಕಾಲೇಜು ಕ್ಯಾಂಪಸ್
ಮಂಗಳೂರು, ಆ.5: ಮಂಗಳೂರು ವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ ವತಿಯಿಂದ ವಿವಿ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಅಂತರ್ ಕಾಲೇಜು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳು ಆ.10 ರಿಂದ 25ರ ವರೆಗೆ ನಡೆಯಲಿದೆ.
ಸಾಹಿತ್ಯ, ಲಲಿತ ಕಲೆ, ಸಂಗೀತ, ನೃತ್ಯ ಮತ್ತು ರಂಗಭೂಮಿ ಹೀಗೆ ಐದು ಪ್ರಕಾರಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಕ್ರಮವಾಗಿ ಕುಂದಾಪುರದ ಶ್ರೀ ಕಾಳವಾರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜು, ಸುರತ್ಕಲ್ ನ ಗೋವಿಂದದಾಸ ಕಾಲೇಜು, ಮಂಗಳೂರಿನ ಶ್ರೀ ರಾಮಕೃಷ್ಣ ಕಾಲೇಜು ಹಾಗೂ ಮೂಡಬಿದಿರೆಯ ಆಳ್ವಾಸ್ ಕಾಲೇಜುಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯ ಎಲ್ಲಾ ಕಾಲೇಜುಗಳ ಆಸಕ್ತ ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ವಿದ್ಯಾರ್ಥಿಗಳು ಮುಂದಿನ ದಕ್ಷಿಣ ವಲಯ ಯುವಜನೋತ್ಸವ ಮತ್ತು ರಾಷ್ಟ್ರ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ ಎಂದು ಮಂಗಳೂರು ವಿವಿ ಕ್ಷೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಕಿಶೋರಿ ನಾಯಕ್ ಕೆ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Inter state cultural activity at Mangalore university from August 10 to 15th in Mangalore
29-05-25 03:34 pm
HK News Desk
CM Siddaramaiah, B K Hariprasad, Mangalore Mu...
29-05-25 02:43 pm
COVID, African Swine Fever Bagalkote: ಕೊರೋನಾ...
29-05-25 02:19 pm
Ma Saleem, DG, IGP, Court: ಡಿಜಿ ಎಂ.ಎ.ಸಲೀಂ ಪ್ರ...
28-05-25 07:06 pm
ST Somasekhar: ಬಿಜೆಪಿಯ 10 ರಿಂದ 12 ಸ್ಥಾನ ಖಾಲಿ...
27-05-25 11:17 pm
26-05-25 11:34 pm
HK News Desk
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
Trump, Europe: ಟ್ರಂಪ್ ತೆರಿಗೆಯ ‘ಕದನ ವಿರಾಮ’ ; ಅ...
26-05-25 06:14 pm
28-05-25 11:16 pm
Mangalore Correspondent
Mangalore Bantwal Murder, SDPI, Congress resi...
28-05-25 10:41 pm
Bantwal Abdul Raheem Murder Case, ADGP Hitend...
28-05-25 08:04 pm
Bantwal Rahiman Murder, Puttur, Ashraf Kalega...
28-05-25 07:44 pm
Krishaveni Mines and Geology, Arrest, Mangalo...
28-05-25 05:27 pm
29-05-25 02:16 pm
Mangalore Correspondent
Karkala, Chikkamagaluru: ನವಜಾತ ಶಿಶುವನ್ನು ಕಾರ್...
29-05-25 01:13 pm
Garuda Gang, Mangalore crime, Karwar police:...
29-05-25 12:44 pm
Mangalore, Bantwal Murder, Attack, Kambodi: ಬ...
27-05-25 05:29 pm
Mangalore Valachil Murder: ಡ್ರಗ್ಸ್ ಅಮಲೋ, ವಿಚಿ...
23-05-25 11:20 pm