ಟೆಂಡರ್‌ಗಳ ಮೇಲೆ 1% ಕಮಿಷನ್ ಆರೋಪ ; ಎರಡೇ ತಿಂಗಳಲ್ಲಿ ಪಂಜಾಬ್ ಆರೋಗ್ಯ ಸಚಿವರ ವಜಾ, ಬಂಧನ

24-05-22 04:58 pm       HK News Desk   ಕ್ರೈಂ

ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪ ಹೊತ್ತ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಮಂಗಳವಾರ ಸಂಪುಟದಿಂದ ಕಿತ್ತುಹಾಕಲಾಗಿದೆ.

ಚಂಡೀಗಡ, ಮೆ 24: ಪಂಜಾಬ್‌ನಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಭ್ರಷ್ಟಾಚಾರ ಆರೋಪ ಹೊತ್ತ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಮಂಗಳವಾರ ಸಂಪುಟದಿಂದ ಕಿತ್ತುಹಾಕಲಾಗಿದೆ. ಸಿಂಗ್ಲಾ ವಿರುದ್ಧದ ಆರೋಪಕ್ಕೆ ಸಾಕಷ್ಟು ಪುರಾವೆಗಳು ಲಭ್ಯವಾದ ಕಾರಣ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಸಂಪುಟದಿಂದ ವಜಾಗೊಳಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ.

ಟೆಂಡರ್‌ಗಳ ಮೇಲೆ ಶೇ 1ರಷ್ಟು ಕಮಿಷನ್ ನೀಡುವಂತೆ ಸಿಂಗ್ಲಾ ಬೇಡಿಕೆ ಇರಿಸಿದ್ದರು ಎನ್ನಲಾಗಿದೆ. ಸಂಪುಟದಿಂದ ವಜಾಗೊಳಿಸಿದ ಕೆಲವೇ ಸಮಯದಲ್ಲಿ ಪಂಜಾಬ್ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳ ಅವರನ್ನು ಬಂಧಿಸಿದೆ.

ಕೇವಲ 10 ದಿನಗಳ ಹಿಂದಷ್ಟೇ ಸಿಎಂ ಭಗವಂತ್ ಮಾನ್ ಅವರಿಗೆ ಆರೋಗ್ಯ ಸಚಿವ ಸಿಂಗ್ಲಾ ವಿರುದ್ಧ ದೂರು ಬಂದಿತ್ತು. ದೇಶದ ಇತಿಹಾಸದಲ್ಲಿ ಮುಖ್ಯಮಂತ್ರಿಯೊಬ್ಬರು ತಮ್ಮದೇ ಪಕ್ಷದ ಸಂಪುಟ ಸಹೋದ್ಯೋಗಿ ವಿರುದ್ಧ ಈ ರೀತಿ ಕಠಿಣ ಕ್ರಮ ತೆಗೆದುಕೊಂಡಿರುವುದು ಇದು ಎರಡನೇ ಸಲವಾಗಿದೆ. ಇದಕ್ಕೂ ಮುನ್ನ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು 2015ರಲ್ಲಿ ಭ್ರಷ್ಟಾಚಾರ ಆರೋಪದಲ್ಲಿ ತಮ್ಮ ಸಚಿವರೊಬ್ಬರನ್ನು ವಜಾಗೊಳಿಸಿದ್ದರು.

ಸಿಂಗ್ಲಾ ವಿರುದ್ಧ ಮುಖ್ಯಮಂತ್ರಿ ಕಚೇರಿಗೆ ಹತ್ತು ದಿನಗಳ ಹಿಂದೆ ಸರ್ಕಾರಿ ಅಧಿಕಾರಿಯೊಬ್ಬರು ದೂರು ಸಲ್ಲಿಸಿದ್ದರು. ಸಚಿವರ ಬಗ್ಗೆ ಯಾವುದೇ ಭಯಪಡುವ ಅಗತ್ಯವಿಲ್ಲ ಮತ್ತು ನಾನು ನಿಮ್ಮ ಜತೆಗೆ ಇರುತ್ತೇನೆ ಎಂದು ಅಧಿಕಾರಿಗೆ ಸಿಎಂ ಮಾನ್ ವೈಯಕ್ತಿಕ ಭರವಸೆ ನೀಡಿದ್ದರು ಎನ್ನಲಾಗಿದೆ. ಅಧಿಕಾರಿಯ ಸಹಾಯದಿಂದ ಕಾರ್ಯಾಚರಣೆ ನಡೆಸಲಾಗಿತ್ತು. ಅದರಲ್ಲಿ ಸಚಿವರು ಮತ್ತು ಅವರ ಆಪ್ತರು ಶೇ 1ರಷ್ಟು ಕಮಿಷನ್ ಕೇಳುತ್ತಿರುವುದು ಬಯಲಾಗಿತ್ತು. ಕಾಲ್ ರೆಕಾರ್ಡಿಂಗ್‌ಗಳು ಮತ್ತು ಇತರೆ ಪುರಾವೆಗಳನ್ನು ಸಂಗ್ರಹಿಸಿದ ಬಳಿಕ, ಸಿಎಂ ಮಾನ್ ಕ್ರಮ ಕೈಗೊಂಡಿದ್ದಾರೆ. ಜತೆಗೆ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

Arvind Kejriwal Punjab CM Bhagwant Mann Move On Minister Vijay Singla | Vijay  Singla Arrested: पंजाब के स्वास्थ्य मंत्री विजय सिंगला की बर्खास्तगी पर  सीएम केजरीवाल बोले- भगवंत मान ...

"ಶೇ 1ರಷ್ಟು ಭ್ರಷ್ಟಾಚಾರವನ್ನು ಕೂಡ ಸಹಿಸುವುದಿಲ್ಲ. ಜನರು ಬಹಳಷ್ಟು ಭರವಸೆಯೊಂದಿಗೆ ಎಎಪಿ ಸರ್ಕಾರಕ್ಕೆ ಮತ ಹಾಕಿದ್ದಾರೆ. ನಾವು ಅದಕ್ಕೆ ಅನುಗುಣವಾಗಿ ಬದುಕಬೇಕು. ಅರವಿಂದ್ ಕೇಜ್ರಿವಾಲ್ ಅವರಂತಹ ಮಗ ಮತ್ತು ಭಗವಂತ್ ಮಾನ್ ಅವರಂತಹ ಸೈನಿಕನನ್ನು ಭಾರತ ಮಾತೆ ಹೊಂದಿರುವವರೆಗೂ ಭ್ರಷ್ಟಾಚಾರದ ವಿರುದ್ಧದ ಮಹಾ ಯುದ್ಧ ಮುಂದುವರಿಯುತ್ತದೆ" ಎಂದು ವಿಡಿಯೋ ಸಂದೇಶದಲ್ಲಿ ಮಾನ್ ಹೇಳಿದ್ದಾರೆ. ತಮ್ಮ ತಪ್ಪನ್ನು ಸಿಂಗ್ಲಾ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ನಿರ್ಧಾರದ ಬೆನ್ನಲ್ಲೇ ಭಗವಂತ್ ಮಾನ್ ಅವರನ್ನು ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದ್ದಾರೆ. "ನಿಮ್ಮ ಬಗ್ಗೆ ಹೆಮ್ಮೆಯಾಗುತ್ತಿದೆ ಭಗವಂತ್. ನಿಮ್ಮ ಕ್ರಮವು ನನ್ನ ಕಣ್ಣುಗಳಲ್ಲಿ ನೀರು ತರಿಸಿದೆ. ಇಂದು ಇಡೀ ದೇಶ ಎಎಪಿ ಬಗ್ಗೆ ಹೆಮ್ಮೆ ಪಡುತ್ತಿದೆ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

"ಭ್ರಷ್ಟಾಚಾರ ಆರೋಪದ ನೆಲಗಟ್ಟಿನಲ್ಲಿ ತನ್ನದೇ ಸದಸ್ಯರ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಮಗ್ರತೆ, ಧೈರ್ಯ ಮತ್ತು ನೇರವಂತಿಕೆ ಹೊಂದಿರುವ ಏಕೈಕ ಪಕ್ಷವೆಂದರೆ ಆಮ್ ಆದ್ಮಿ ಪಕ್ಷ. ಇದನ್ನು ನಾವು ದಿಲ್ಲಿಯಲ್ಲಿ ನೋಡಿದ್ದೆವು. ಈಗ ನಾವು ಪಂಜಾಬ್‌ನಲ್ಲಿ ಕಾಣುತ್ತಿದ್ದೇವೆ. ಭ್ರಷ್ಟಾಚಾರ ಕುರಿತು ಶೂನ್ಯ ಸಹಿಷ್ಣುತೆ" ಎಂದು ಪಕ್ಷದ ಸಂಸದ ರಾಘವ ಛಡ್ಡಾ ಟ್ವೀಟ್ ಮಾಡಿದ್ದಾರೆ.

Proud of you Bhagwant. Ur action has brought tears to my eyes.

Whole nation today feels proud of AAP https://t.co/glg6LxXqgs

— Arvind Kejriwal (@ArvindKejriwal) May 24, 2022

Aam Aadmi Party is the only party that has the integrity, courage & uprightness to take action against their own on grounds of corruption.

We saw it in Delhi, now we are witnessing it in Punjab.

ZERO TOLERANCE FOR CORRUPTION.

Commendable decision by CM @BhagwantMann

— Raghav Chadha (@raghav_chadha) May 24, 2022

Punjab health minister Vijay Singla was arrested by the Anti-Corruption Bureau on Tuesday, hours after he was sacked by chief minister Bhagwant Mann following corruption allegations against him. It has been less than two months since the Aam Aadmi Party (AAP) formed the government in Punjab. Earlier in the day, Mann had recommended registration of a corruption case against Singla.