ಬ್ರೇಕಿಂಗ್ ನ್ಯೂಸ್
19-02-26 10:37 pm mangalore ಕರಾವಳಿ
ಮಂಗಳೂರು, ಫೆ.19ನಕ್ಸಲ್ ಕರಪತ್ರ ಹಂಚಿದ್ದ ಪ್ರಕರಣದಲ್ಲಿ ಕೇರಳದಲ್ಲಿ ಶರಣಾಗತಿಯಾಗಿದ್ದ ರಾಯಚೂರು ಮೂಲದ ನಟೋರಿಯಸ್ ನಕ್ಸಲ್ ಜಾನ್@ ಜಯಣ್ಣ@ಮಹೇಶ್ (49) ನನ್ನು ಪೊಲೀಸರು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಕೇರಳದ ತ್ರಿಶೂರ್ ಜೈಲಿನಲ್ಲಿ ಇರಿಸಿದ್ದ ಜಯಣ್ಣ(49) ನನ್ನು ಬಿಗಿ ಭದ್ರತೆಯಲ್ಲಿ ಕೇರಳ ವಿಶೇಷ ಪೊಲೀಸರು ಬೆಳ್ತಂಗಡಿ ಕರೆತಂದು ಕೋರ್ಟಿಗೆ ಹಾಜರು ಮಾಡಿಸಿದ್ದಾರೆ.
ಬೆಳ್ತಂಗಡಿಯ ಕುತ್ಲೂರು ಎಂಬಲ್ಲಿ 2012 ರಲ್ಲಿ ನಕ್ಸಲ್ ಕರಪತ್ರಗಳನ್ನು ಹಂಚಿದ್ದ ಪ್ರಕರಣ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಬಾಡಿ ವಾರೆಂಟ್ ಪಡೆದು ಕೇರಳದ ಜೈಲಿನಿಂದ ಕರೆತಂದಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣ ಸಂಬಂಧಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



ಮೂಲತಃ ರಾಯಚೂರು ಜಿಲ್ಲೆಯ ಅರೋಲಿ ಗ್ರಾಮದ ನಿವಾಸಿಯಾಗಿದ್ದ ಜಯಣ್ಣ ನಕ್ಸಲ್ ಚಳವಳಿಗೆ ಆಕರ್ಷಿತನಾಗಿ ತಂಡದಲ್ಲಿ ಸೇರಿಕೊಂಡು ಕರ್ನಾಟಕದಲ್ಲಿ ಎಎನ್ಎಫ್ ಕಾರ್ಯಾಚರಣೆ ಬಿಗಿಯಾಗುತ್ತಿದ್ದಂತೆ ಕೇರಳಕ್ಕೆ ಪರಾರಿಯಾಗಿದ್ದ. 2012 ರಲ್ಲಿ ಕೊತ್ಲೂರಿನ ಲಿಂಗಪ್ಪ ಮಲೆಕುಡಿಯ ಅವರ ಮನೆಯ ಅಂಗಳದಲ್ಲಿ ನಕ್ಸಲ್ ಕರಪತ್ರಗಳನ್ನು ಹಚ್ಚಿದ್ದ ಪ್ರಕರಣದಲ್ಲಿ ಜಯಣ್ಣ ಪ್ರಮುಖ ಆರೋಪಿಯಾಗಿದ್ದ.
ಇತ್ತಿಚೆಗೆ ಪ್ರಕರಣದ ಮರು ತನಿಖೆಗೆ ಬೆಳ್ತಂಗಡಿ ನ್ಯಾಯಾಲಯ ಆದೇಶ ಹೊರಡಿಸಿದ್ದರಿಂದ ತನಿಖೆ ಸಲುವಾಗಿ ಕೇರಳ ಪೊಲೀಸರು ಕರೆತಂದಿದ್ದಾರೆ. ಕಳೆದ ಆರು ತಿಂಗಳ ಹಿಂದೆ ಕೇರಳ ಸಿಎಂ ಪಿಣರಾಯಿ ಎದುರಲ್ಲಿ ಶರಣಾಗತಿಯಾಗಿದ್ದ ಜಯಣ್ಣನನ್ನು ವಿವಿಧ ಪ್ರಕರಣದಲ್ಲಿ ಪೊಲೀಸರು ವಿಚಾರಣೆ ನಡೆಯುತ್ತಿರುವುದರಿಂದ ತ್ರಿಶೂರ್ ಜೈಲಿನಲ್ಲಿ ಇರಿಸಲಾಗಿದೆ
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
26-08-26 06:41 pm
HK News Staffer
ಹಿಜಾಬ್ ಇಸ್ಲಾಮಿನ ಧಾರ್ಮಿಕ ಆಚರಣೆಯಲ್ಲಿ ಅನಿವಾರ್ಯ ಅ...
26-08-26 02:05 pm
ಮಂಗಳೂರನ್ನು ಪಾಲಕ್ಕಾಡ್ ರೈಲ್ವೇ ವಿಭಾಗದಿಂದ ತೆರವು ಮ...
26-08-26 12:01 pm
ಅಮರಾವತಿ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ ; ವೆಂಟ...
24-08-26 04:55 pm
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
26-08-26 09:36 pm
HK News Staffer
ಸೂರ್ಯಪೇಟೆಯಲ್ಲಿ ಭೀಕರ ಅಪಘಾತ ; ಕಂಟೇನರ್ ಲಾರಿಗೆ ಬ...
26-08-26 11:26 am
ವಿಜಯಪುರದಲ್ಲಿ ಭೀಕರ ದುರಂತ ; ನಾಪತ್ತೆಯಾಗಿದ್ದ ಒಂದೇ...
26-08-26 11:23 am
ಚಿಕ್ಕಮಗಳೂರು ; ಟಿಪ್ಪು ಕಟೌಟ್ ಜೊತೆಗೆ ಮುಜಾಹಿದ್ ಹಾ...
25-08-26 10:39 pm
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm