ಬ್ರೇಕಿಂಗ್ ನ್ಯೂಸ್
11-06-22 03:57 pm Mangalore Correspondent ಕ್ರೈಂ
ಮಂಗಳೂರು, ಜೂನ್ 10 : ರೈಲ್ವೇ ನೌಕರರು ತಮ್ಮ ದೈಹಿಕ ಕ್ಷಮತೆ ಬಗ್ಗೆ ಪ್ರತಿ ವರ್ಷ ಇಲಾಖೆಗೆ ಪ್ರಮಾಣ ಪತ್ರ ಸಲ್ಲಿಸಬೇಕು. ದೈಹಿಕವಾಗಿ ಸ್ವಸ್ಥರಿದ್ದೇವೆ ಎನ್ನುವುದನ್ನು ಮುಂದಿನ ವರ್ಷದ ಕರ್ತವ್ಯಕ್ಕೆ ಹೊರಡುವ ಮುನ್ನ ದೃಢಪಡಿಸಬೇಕು. ಅನಾರೋಗ್ಯ, ರೋಗಬಾಧೆ ಇರುವ ಬಗ್ಗೆ ವೈದ್ಯರು ದೃಢೀಕರಿಸಿದಲ್ಲಿ ನಿಗದಿತ ಕರ್ತವ್ಯಕ್ಕೆ ಹಾಜರಾಗಲು ಅವಕಾಶ ಇರುವುದಿಲ್ಲ. ಆದರೆ, ಈ ರೀತಿಯ ಕಡ್ಡಾಯ ನೀತಿ ಇರುವುದರಿಂದಲೇ ರೈಲ್ವೇ ನೌಕರರು ವೈದ್ಯರ ತಪಾಸಣೆಗೆ ಹಾಜರಾಗದೆ ದಲ್ಲಾಳಿಗಳ ಮೂಲಕ ಪ್ರಮಾಣಪತ್ರ ಪಡೆಯುತ್ತಿದ್ದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಮಂಗಳೂರು ಕೇಂದ್ರವಾಗಿಟ್ಟು ರೈಲ್ವೇ ನೌಕರರಿಗೆ ನಕಲಿ ವೈದ್ಯಕೀಯ ಪ್ರಮಾಣಪತ್ರ ಒದಗಿಸುತ್ತಿದ್ದ ಜಾಲವೊಂದನ್ನು ಸಿಬಿಐ ಅಧಿಕಾರಿಗಳು ಭೇದಿಸಿದ್ದು, ಸದ್ದಿಲ್ಲದೆ ದಾಳಿ ನಡೆಸಿ ಒಬ್ಬರು ವೈದ್ಯರು ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ. ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದ ಬಳಿಯಿರುವ ರೈಲ್ವೇ ಇಲಾಖೆಯ ಆರೋಗ್ಯ ಕೇಂದ್ರದ ಮೇಲೆ ದಾಳಿ ನಡೆಸಿದ್ದು ವೈದ್ಯಕೀಯ ಅಧೀಕ್ಷಕ ಸೇರಿ ಮೂವರನ್ನು ಬಂಧಿಸಿದ್ದಾರೆ.
ಹಲವು ಸಮಯಗಳಿಂದ ಇಲ್ಲಿ ದಂಧೆ ನಡೆಯುತ್ತಿದ್ದ ಬಗ್ಗೆ ಮಾಹಿತಿಗಳಿದ್ದು, ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ ಮತ್ತು ಕೊಂಕಣ ರೈಲ್ವೇಯಲ್ಲಿ ಉದ್ಯೋಗದಲ್ಲಿರುವ ಸಿಬಂದಿ ಇಲ್ಲಿನ ಆರೋಗ್ಯ ಕೇಂದ್ರದಿಂದಲೇ ಪ್ರಮಾಣ ಪತ್ರಗಳನ್ನು ಪಡೆಯುತ್ತಿದ್ದರು. ಸಿಬಿಐ ಅಧಿಕಾರಿಗಳು ಇದುವರೆಗೆ 1,500ಕ್ಕೂ ಹೆಚ್ಚು ನಕಲಿ ವೈದ್ಯಕೀಯ ಪ್ರಮಾಣಪತ್ರಗಳನ್ನು ಮಂಗಳೂರಿನ ಕೇಂದ್ರದಿಂದ ನೀಡಿರುವುದನ್ನು ಪತ್ತೆ ಮಾಡಿದ್ದಾರೆ. ಆರೋಗ್ಯ ಕೇಂದ್ರದ ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ.ಶಿವಶಂಕರ ಮೂರ್ತಿ, ಔಷಧಾಲಯದ ಅಧಿಕಾರಿ ವಿಜಯನ್ ವಿ.ಎ. ಮತ್ತು ಇವರಿಗೆ ದಲ್ಲಾಳಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳೂರಿನ ಇಬ್ರಾಹಿಂ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ದಾಳಿ ಮಾಡಿ, ಮೂವರನ್ನು ವಶಕ್ಕೆ ಪಡೆದಿರುವ ಬಗ್ಗೆ ಸಿಬಿಐ ಅಧಿಕಾರಿಗಳು ಮಂಗಳೂರಿನ ಪಾಂಡೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ರೈಲ್ವೇಯಲ್ಲಿ ಫಿಟ್ನೆಸ್ ಪ್ರಮಾಣಪತ್ರ ಕಡ್ಡಾಯ
ರೈಲುಗಳಲ್ಲಿ ಕೆಲಸ ಮಾಡುವ ಎಲ್ಲ ರೀತಿಯ ಸಿಬಂದಿ, ರೈಲು ನಿಲ್ದಾಣದ ಪ್ಲಾಟ್ ಫಾರಂ ಸಿಬಂದಿ, ರೈಲು ಸಿಬಂದಿಗೆ ಅಡುಗೆ ಮಾಡುವವರು, ರೈಲು ಚಾಲಕ, ಗಾರ್ಡ್, ಇಂಜಿನಿಯರ್ ಇತ್ಯಾದಿ ಎಲ್ಲ ವರ್ಗದ ನೌಕರರು ತಮ್ಮ ದೈಹಿಕ ಕ್ಷಮತೆ ಬಗ್ಗೆ ಪ್ರತಿ ವರ್ಷ ರೈಲ್ವೇ ಇಲಾಖೆಗೆ ಫಿಟ್‌ನೆಸ್ ಪ್ರಮಾಣ ಪತ್ರಗಳನ್ನು ಸಲ್ಲಿಸಬೇಕಿರುತ್ತದೆ. ರೈಲ್ವೇ ಇಲಾಖೆಯ ಆರೋಗ್ಯ ಕೇಂದ್ರದಲ್ಲೇ ತಪಾಸಣೆ ನಡೆಸಿ ಪ್ರಮಾಣಪತ್ರ ಪಡೆಯಬೇಕಿರುತ್ತದೆ. ಇತರೇ ಖಾಸಗಿ ಆರೋಗ್ಯ ಕೇಂದ್ರಗಳಲ್ಲಿ ಪಡೆದಿರುವ ಪ್ರಮಾಣಪತ್ರಗಳಿಗೆ ಮಾನ್ಯತೆ ಇರುವುದಿಲ್ಲ. ಹೀಗಾಗಿ ಇಲ್ಲಿನ ಆರೋಗ್ಯ ಕೇಂದ್ರಗಳು ಅನಾರೋಗ್ಯದ ವಿಚಾರಕ್ಕೆ ಸೇವೆ ನೀಡದಿದ್ದರೂ, ಪ್ರಮಾಣಪತ್ರದ ಕಾರಣಕ್ಕೆ ಮಹತ್ವದ್ದಾಗಿರುತ್ತದೆ.
ನಕಲಿ ಪ್ರಮಾಣಪತ್ರ ಯಾಕೆ ಪಡೆಯುತ್ತಾರೆ ?
ಆದರೆ ಕರ್ತವ್ಯ ನಿಮಿತ್ತ ಊರೂರು ಸುತ್ತಾಡುವ ನೌಕರರು, ದೈಹಿಕವಾಗಿ ರೋಗಬಾಧೆ ಇನ್ನಿತರ ಸಮಸ್ಯೆ ಎದುರಿಸುತ್ತಿರುವವರು ವೈದ್ಯರ ಪ್ರಮಾಣಪತ್ರ ಪಡೆಯಲು ಹಿಂಜರಿಯುತ್ತಾರೆ. ಇಂತಹ ಸಂದರ್ಭದಲ್ಲಿ ದಲ್ಲಾಳಿಗಳು ಇಂತಿಷ್ಟು ಹಣ ಕೊಟ್ಟರೆ. ಪ್ರಮಾಣ ಪತ್ರ ಮಾಡಿಸಿಕೊಡುತ್ತೇವೆಂದು ಡೀಲ್ ಕುದುರಿಸುತ್ತಾರೆ. ರೈಲ್ವೇ ಇಲಾಖೆಯಲ್ಲಿ ಸಾಕಷ್ಟು ವೇತನ ಇರುವುದರಿಂದ ಹೋಗಲಿ ಬಿಡಿ ಎಂದು ದಲ್ಲಾಳಿಗಳಿಗೆ ಹಣ ಕೊಟ್ಟು ಪ್ರಮಾಣ ಪತ್ರ ಮಾಡಿಸುತ್ತಿದ್ದರು. ದಲ್ಲಾಳಿಗೆ ಹಣ ಕೊಟ್ಟರೆ, ನೇರವಾಗಿ ವೈದ್ಯರ ತಪಾಸಣೆಗೆ ಹಾಜರಾಗುವುದು ತಪ್ಪುತ್ತಿತ್ತು.
ಖುದ್ದಾಗಿ ತಪಾಸಣೆ ಮಾಡದೇ ಸರ್ಟಿಫಿಕೇಟ್
ದಲ್ಲಾಳಿಗಳ ನೆರವಿನಲ್ಲಿ ವಾಟ್ಸಾಪ್ ಮೂಲಕ ಆರೋಗ್ಯ ಕೇಂದ್ರದ ಅಧಿಕಾರಿಗಳಿಗೆ ತಮ್ಮ ಆಧಾರ್ ಕಾರ್ಡ್, ಇನ್ನಿತರ ದಾಖಲೆ ಪತ್ರಗಳನ್ನು ಕಳುಹಿಸಿ, ಖುದ್ದಾಗಿ ಹಾಜರಾಗದೆ ವೈದ್ಯರಿಂದ ಪ್ರಮಾಣಪತ್ರವನ್ನು ಪಡೆಯುತ್ತಿದ್ದರು. ಇದಕ್ಕಾಗಿ 525 ರೂಪಾಯಿ ಚಲನ್ ಕಟ್ಟುವುದರ ಜೊತೆಗೆ ದಲ್ಲಾಳಿಗೆ ಇಂತಿಷ್ಟು ಪಾವತಿ ಮಾಡುತ್ತಿದ್ದರು. ಅದರಲ್ಲಿ ವೈದ್ಯರಿಗೂ ಪಾಲು ಸಿಗುತ್ತಿತ್ತು. ಇದು ಒಂದು ರೀತಿಯಲ್ಲಿ ಖುದ್ದಾಗಿ ಡ್ರೈವಿಂಗ್ ಪರೀಕ್ಷೆ ಪಾಸ್ ಮಾಡದೆ, ಹಣ ಕೊಟ್ಟು ಡ್ರೈವಿಂಗ್ ಲೈಸನ್ಸ್ ಪಡೆದಂತೆ. ಮಂಗಳೂರಿನ ಆರೋಗ್ಯ ಕೇಂದ್ರದಲ್ಲಿ ಖುದ್ದಾಗಿ ಹಾಜರಾಗದೆ ಪ್ರಮಾಣಪತ್ರ ಸಿಗುತ್ತಿದ್ದುದರಿಂದ ಅತ್ತ ಪಾಲ್ಘಾಟ್ ವಿಭಾಗ ಮತ್ತು ಕೊಂಕಣ ರೈಲ್ವೇ ಸಿಬಂದಿ ಇಲ್ಲಿಂದಲೇ ಅತಿ ಹೆಚ್ಚು ಸರ್ಟಿಫಿಕೇಟ್ ಪಡೆಯುತ್ತಿದ್ದರು.
ಸಿಬಿಐ ದಾಳಿಯೇ ಯಾಕೆ ?
ರೈಲ್ವೇ ಇಲಾಖೆಯು ಅಂತಾರಾಜ್ಯ ಸಾರಿಗೆ ವ್ಯವಸ್ಥೆಯಾಗಿದ್ದು ನೇರವಾಗಿ ಕೇಂದ್ರ ಸರಕಾರದ ಅಧೀನದಲ್ಲಿರುವ ಸಂಸ್ಥೆ. ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಾತ್ರ ಈ ರೀತಿಯ ಆರೋಗ್ಯ ಕೇಂದ್ರಗಳು ಇರುತ್ತವೆ. ಕರ್ನಾಟಕದಲ್ಲಿ ಮಂಗಳೂರು, ಬೆಂಗಳೂರು, ಕೇರಳದಲ್ಲಿ ಕೊಚ್ಚಿ, ಮಹಾರಾಷ್ಟ್ರದಲ್ಲಿ ಮುಂಬೈ ಹೀಗೆ ಪ್ರಮುಖ ನಿಲ್ದಾಣಗಳಲ್ಲಿ ತಪಾಸಣಾ ಕೇಂದ್ರಗಳಿದ್ದು, ಅಲ್ಲಿಯೇ ದೈಹಿಕ ಆರೋಗ್ಯ ಬಗ್ಗೆ ತಪಾಸಣೆ ಮಾಡಿಕೊಳ್ಳಬೇಕಿರುತ್ತದೆ. ಹೀಗಾಗಿ ಅಂತಾರಾಜ್ಯ ಗೋಲ್ಮಾಲ್ ಪ್ರಕರಣ ಆಗಿರುವುದರಿಂದ ಕೇಂದ್ರೀಯ ತನಿಖಾ ದಳ ತನಿಖೆ ಆರಂಭಿಸಿದೆ. ದೈಹಿಕ ಆರೋಗ್ಯದಲ್ಲಿ ಕಳ್ಳಾಟ ನಡೆಸುವುದರಿಂದ ರೈಲು ಅಪಘಾತಕ್ಕೂ ಕಾರಣವಾಗುತ್ತದೆ. ಚಾಲಕ, ಇಂಜಿನಿಯರ್, ಗಾರ್ಡ್ ಸೂಕ್ತವಾಗಿ ಕೆಲಸ ಮಾಡದಿದ್ದಲ್ಲಿ ಸಿಗ್ನಲ್ ಪರಿಶೀಲನೆ ಮಾಡದೇ ನಿದ್ದೆ ಹೋದಲ್ಲಿ ಅಪಘಾತಗಳಿಗೆ ಕಾರಣವಾಗುತ್ತದೆ. ಹೀಗಾಗಿ ರೈಲ್ವೇ ಇಲಾಖೆಯಲ್ಲಿ ನೌಕರರ ದೈಹಿಕ ಕ್ಷಮತೆ ಬಗ್ಗೆ ನಿಗಾ ವಹಿಸಲಾಗುತ್ತದೆ. ಸದ್ಯಕ್ಕೆ ಮಂಗಳೂರಿನ ಕೇಂದ್ರದಲ್ಲಿ ನಕಲಿ ಆಗುತ್ತಿರುವುದು ಕಂಡುಬಂದಿದೆ. ಬೇರೆ ಕಡೆಗಳಲ್ಲೂ ಇದೇ ರೀತಿಯ ಲೋಪ ಆಗುತ್ತಿರುವ ಸಾಧ್ಯತೆ ಹೆಚ್ಚಿದೆ.
The Central Bureau of Investigation (CBI) on Friday afternoon raided the Railway Health Unit near Mangaluru Central station and arrested three individuals including the Additional Chief Medical Superintendent for their alleged involvement in a fake medical certificate scam. According to sources, three individuals, ACMS, Dr Shiva Shankar Murthy, pharmacist Vijayan V A and broker Ibrahim were arrested by the CBI. A huge CBI team is still carrying out raids inside the health unit. A total of 1500 pages of documents have been seized by CBI officials in this connection.
10-01-25 11:01 pm
Bangalore Correspondent
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
Ramnagara Accident, KSRTC: KSRTC ಬಸ್ - ಬೈಕ್ ನ...
09-01-25 07:04 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
10-01-25 11:14 pm
Mangalore Correspondent
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
Mangalore crime, Misfire, Police; ಪಿಎಫ್ಐ ಒಳಸಂ...
09-01-25 07:50 pm
ಜನವರಿ 11-12 ; 'ಮಂಗಳೂರು ಲಿಟ್ ಫೆಸ್ಟ್' ಏಳನೇ ಆವೃತ...
08-01-25 09:51 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm