ಬ್ರೇಕಿಂಗ್ ನ್ಯೂಸ್
17-08-22 10:25 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 17: ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣದ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಲೆ ಕೃತ್ಯದ ಬಳಿಕ ಆರೋಪಿಗಳನ್ನು ಕಾರಿನಲ್ಲಿ ತನ್ನ ಮನೆಗೆ ಕರೆದೊಯ್ದು ಉಳಿದುಕೊಳ್ಳಲು ಅವಕಾಶ ನೀಡಿದ ಬಂಟ್ವಾಳ ನಿವಾಸಿ ಹರ್ಷಿತ್ (28) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ತಪ್ಪಿಸಿಕೊಳ್ಳಲು ಬಳಸಿದ್ದ ಕಾರನ್ನೂ ವಶಕ್ಕೆ ಪಡೆಯಲಾಗಿದೆ.
ಜುಲೈ 28ರಂದು ರಾತ್ರಿ 8.30ರ ಸುಮಾರಿಗೆ ಸುರತ್ಕಲ್ ಪೇಟೆಯಲ್ಲಿ ಕೊಲೆ ಕೃತ್ಯ ನಡೆದಿತ್ತು. ವಾಚ್ ಖರೀದಿಸಲೆಂದು ಸುರತ್ಕಲ್ ಪೇಟೆಗೆ ಬಂದಿದ್ದ ಫಾಜಿಲ್ ನನ್ನು ಅಟ್ಟಾಡಿಸಿದ್ದು, ಬಟ್ಟೆ ಅಂಗಡಿಗೆ ನುಗ್ಗಿದ್ದಾಗ ಅದರೊಳಗೆ ಹೋಗಿ ತಲವಾರಿನಲ್ಲಿ ಕಡಿದು ಕೊಲೆಗೈದಿದ್ದರು. ಪ್ರಕರಣದಲ್ಲಿ ನಾಲ್ಕೇ ದಿನದಲ್ಲಿ ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಏಳು ಮಂದಿಯೂ ಕೃತ್ಯದಲ್ಲಿ ನೇರ ಶಾಮೀಲಾಗಿದ್ದರು. ಬೆಳ್ಳಾರೆಯ ಪ್ರವೀಣ್ ಹತ್ಯೆಗೆ ಪ್ರತೀಕಾರಕ್ಕಾಗಿ ಕೊಲೆ ನಡೆಸಿದ್ದರು. ಹ್ಯುಂಡೈ ಇಯೋನ್ ಕಾರಿನಲ್ಲಿ ಬಂದು ಕೃತ್ಯ ಎಸಗಿದ್ದು, ಆನಂತರ ಕಾರನ್ನು ಕಾರ್ಕಳ ತಾಲೂಕಿನ ಇನ್ನಾದಲ್ಲಿ ಬಿಟ್ಟು ಹೋಗಿದ್ದರು. ಅಲ್ಲಿಂದ ಬೇರೆ ಕಾರಿನಲ್ಲಿ ಪರಾರಿಯಾಗಿದ್ದರು ಎನ್ನುವುದು ತನಿಖೆಯಲ್ಲಿ ಕಂಡುಬಂದಿತ್ತು. ಇದೀಗ ಅಲ್ಲಿಂದ ಪರಾರಿಯಾಗಲು ಬಳಸಿದ್ದ ಕಾರು ಮತ್ತು ಅದಕ್ಕೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ.
Mangalore One more person has been arrested in connection with the murder of Fazil in Surathkal on July 28. The accused has been identified as Harshith (28) from Bantwal
03-10-26 05:30 pm
HK News Staffer
Urdu Habba Row: ವಿಧಾನಸೌಧ ಮೆಟ್ಟಿಲುಗಳಲ್ಲಿ ಉರ್ದು...
01-10-26 10:50 pm
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ್ ನಿಧನ ;...
27-09-26 03:21 pm
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
05-10-26 01:49 pm
HK News Staffer
ನಾನು ಸಾವಿಗೆ ಅಂಜಲ್ಲ, ವಿಮಾನ ಪತನವೇ ಉದ್ದೇಶವಾಗಿತ್ತ...
05-10-26 11:40 am
Ramesh Chennithala: ಕೇರಳದಲ್ಲಿ ಪಿಡಬ್ಲ್ಯೂಡಿ ರಸ್...
04-10-26 07:07 pm
Smith Machar, benjamin netanyahu: ಸ್ಮಿತ್ ಮಚ್ಚ...
04-10-26 12:34 pm
Smith Machar, Mankind Pharma: 180 ಜೀವ ಉಳಿಸಿದ...
03-10-26 01:00 pm
05-10-26 12:35 pm
HK News Staffer
'ಮುಳಿಯ ಜುವೆಲ್ಲರಿ' ಮಾಲೀಕ ಪುತ್ತೂರಿನ ಮುಳಿಯ ಶ್ಯಾಮ...
05-10-26 11:41 am
brijesh chowta: ಹೈಕೋರ್ಟ್ ಪೀಠ ಸ್ಥಾಪನೆಗೆ ಒಗ್ಗಟ್...
03-10-26 09:56 pm
Tammanna Shetty, mysore kambala: ಮೈಸೂರು ದಸರಾ...
03-10-26 01:27 pm
KSCA, Mangaluru: ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ...
02-10-26 05:20 pm
05-10-26 12:28 pm
HK News Staffer
Belthangady News, Banakal Accident, Mudigere...
05-10-26 10:49 am
bantwal rain: ಕರಾವಳಿ ಭಾಗದಲ್ಲಿ ಹಿಂಗಾರು ಮಳೆ ಅಬ್...
05-10-26 10:04 am
ಕಾಲೇಜು ಕ್ಯಾಂಟೀನ್ ಬಳಿ ಬಿಸಿಎ ವಿದ್ಯಾರ್ಥಿಗೆ ಚೂರಿ...
04-10-26 12:51 pm
ಪುತ್ತೂರು ; ವಿದ್ಯುತ್ ಸ್ಪರ್ಶಿಸಿ ಪವರ್ಮ್ಯಾನ್ ಸಾ...
03-10-26 08:46 pm