ಬ್ರೇಕಿಂಗ್ ನ್ಯೂಸ್
29-07-26 09:54 pm HK News Staffer ಕರ್ನಾಟಕ
ಬೆಂಗಳೂರು, ಜುಲೈ 29: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವೇಳೆ ಗೈರು, ಸ್ಥಳಾಂತರ, ನಕಲಿ ಹಾಗೂ ಮರಣ (ಎಸ್ಡಿಡಿಒ) ಸೇರಿದಂತೆ ವಿವಿಧ ಕಾರಣಕ್ಕಾಗಿ 84.31 ಲಕ್ಷ ಮತದಾರರು ಗಣತಿ ನಮೂನೆ ಪಡೆದುಕೊಂಡಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.
ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಮರಣ ಹೊಂದಿದವರನ್ನು ಹೊರತುಪಡಿಸಿ ಉಳಿದವರು ಭರ್ತಿ ಮಾಡಿದ ಅರ್ಜಿ ನೀಡಲು ಆಗಸ್ಟ್ 8ರಂದು ಕೊನೆಯ ದಿನವಾಗಿದೆ. 2002ರ ಎಸ್ಐಆರ್ ಪಟ್ಟಿಯಲ್ಲಿ ಹೆಸರಿಲ್ಲದಿದ್ದರೂ ಅರ್ಜಿಯಲ್ಲಿ ಸಹಿ ಮಾಡಿ ಬಿಎಲ್ಒಗಳಿಗೆ ನೀಡುವಂತೆ ಮನವಿ ಮಾಡಿದರು.
2002ರ ಎಸ್ಐಆರ್ ಪಟ್ಟಿಯಲ್ಲಿ ಪೋಷಕರ ಹೆಸರಿಲ್ಲ ಎಂದು ಗಣತಿ ನಮೂನೆ ಪಡೆದು ಭರ್ತಿ ಮಾಡದೇ ಸುಮ್ಮನಾಗದಿರಿ. ಹೆಸರಿಲ್ಲದಿದ್ದರೂ ಅರ್ಜಿಯಲ್ಲಿ ಸಹಿ ಮಾಡಿ ಸ್ಥಳೀಯ ಬಿಎಲ್ಒಗಳಿಗೆ ನೀಡಬೇಕು. ಬಿಎಲ್ಒಗಳು ಅರ್ಜಿ ಡಿಜಿಟಲೀಕರಣಗೊಳಿಸಿದ್ಧಾರೆ. ಆ.17ರಂದು ಮತದಾರರ ಕರಡು ಪಟ್ಟಿ ಪ್ರಕಟಗೊಳ್ಳಲಿದೆ. ಬಳಿಕ ಅಗತ್ಯ ದಾಖಲೆ ಕೋರಿ ಮತದಾರರಿಗೆ ಆಯೋಗದಿಂದ ನೋಟಿಸ್ ನೀಡಲಾಗುತ್ತದೆ. ದಾಖಲಾತಿ ಸಲ್ಲಿಸಿದರೆ ಮತದಾರರ ಅಂತಿಮ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಲಿದೆ. 2002ರ ಎಸ್ಐಆರ್ ಪಟ್ಟಿಯಲ್ಲಿ ಹೆಸರಿಲ್ಲದವರ ಪೈಕಿ 29 ಲಕ್ಷ ಮಂದಿ ಗಣತಿ ನಮೂನೆಯಲ್ಲಿ ಸಹಿ ಮಾಡಿ ನೀಡಿದ್ದಾರೆ ಎಂದರು.
ರಾಜ್ಯದಲ್ಲಿ 5.54 ಕೋಟಿ ಮತದಾರರ ಪೈಕಿ 46 ಲಕ್ಷ ಮತದಾರರು ಗಣತಿ ನಮೂನೆ ಪಡೆದು ವಾಪಸ್ ನೀಡಿಲ್ಲ. ಆಗಸ್ಟ್ 8ರೊಳಗೆ ಬಿಎಲ್ಓಗಳಿಗೆ ನೀಡಬೇಕು. ಇರುವ ಮಾಹಿತಿಯೊಂದಿಗೆ ಅರ್ಜಿಯಲ್ಲಿ ಸಹಿ ಮಾಡಿ ನೀಡುವುದು ಕಡ್ಡಾಯವಾಗಿದೆ. ರಾಜ್ಯದಲ್ಲಿ 14.99 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. 54.74 ಲಕ್ಷ ಮಂದಿ ಸ್ಥಳಾಂತರಗೊಂಡರೆ, 5.62 ಲಕ್ಷ ಮತದಾರರು ಈಗಾಗಲೇ ಬೇರೆ ಕಡೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಎಸ್ಐಆರ್ ವೇಳೆ 11.61 ಲಕ್ಷ ನಾಗರಿಕರು ಗೈರಾದರೆ, ಸಹಿ ನಿರಾಕರಣೆ ಸೇರಿದಂತೆ ವಿವಿಧ ಕಾರಣಕ್ಕಾಗಿ 33 ಸಾವಿರ ಗಣತಿ ನಮೂನೆ ಪಡೆದಿಲ್ಲ. ಒಟ್ಟಾರೆ 84.31 ಲಕ್ಷ ಮಂದಿ ಮತದಾರರು ಎಸ್ಐಆರ್ ವ್ಯಾಪ್ತಿಗೆ ಬಂದಿಲ್ಲ. ಹಾಗಂತ ಮತದಾರರ ಪಟ್ಟಿ ಸೇರ್ಪಡೆಗೆ ಅನರ್ಹರಲ್ಲ ಎಂದು ಭಾವಿಸಲಾಗದು. ಸ್ಥಳಾಂತರಗೊಂಡವರು ಅಥವಾ ಎಸ್ಐಆರ್ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ಬಯಸುವವರು ಫಾರ್ಮ್ 8 ನಮೂನೆ ಪಡೆದು ಭರ್ತಿ ಮಾಡಿ ಬಿಎಲ್ಒಗಳಿಗೆ ನೀಡುವಂತೆ ಆಯುಕ್ತರು ಮನವಿ ಮಾಡಿದರು.
ಮತದಾರರ ಪಟ್ಟಿಗೆ ಹೊಸ ಹೆಸರು ಸೇರ್ಪಡೆಗಾಗಿ 3.32 ಲಕ್ಷ (ಫಾರ್ಮ್ 8), ಎನ್ಐಆರ್ ಪ್ರಜೆಗಳು ಪಟ್ಟಿಯಲ್ಲಿ ಸೇರಿಸಲು 2.783 (6ಎ) ಮಂದಿ ಅರ್ಜಿ ಪಡೆದರೆ ಮತದಾರರ ಗುರುತಿನ ಚೀಟಿ ವಿಳಾಸ ಬದಲಾವಣೆ, ತಿದ್ದುಪಡಿ ಮಾಡಲು (ಫಾರ್ಮ್ 8) ಹಾಗೂ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು (ಫಾರ್ಮ್ 7) ಅರ್ಜಿ ಪಡೆದಿದ್ದಾರೆ. ಈವರೆಗೂ ಒಟ್ಟು 11.40 ಲಕ್ಷ ಮಂದಿ ಅರ್ಜಿಗಳು ಸ್ವೀಕೃತವಾಗಿವೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ 5.54 ಕೋಟಿ 4.26 ಕೋಟಿ ಅರ್ಜಿಗಳು ಡಿಜಿಟಲೀಕರಣಗೊಳಿಸಲಾಗಿದೆ. 43.24 ಲಕ್ಷ ಅರ್ಜಿಗಳು ಮಾತ್ರ ಬಾಕಿಯಿವೆ. ಜಿಬಿಎ ವ್ಯಾಪ್ತಿಯಲ್ಲಿ 1.03 ಕೋಟಿ ಮತದಾರರ ಪೈಕಿ 47.92 ಲಕ್ಷ ಅರ್ಜಿ ಡಿಜಿಟಲೀಕರಣಗೊಳಿಸಿದರೆ 16.57 ಲಕ್ಷ ಅರ್ಜಿಗಳು ಬಾಕಿಯಿವೆ. ಜೊತೆಗೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಎಎಸ್ಡಿಡಿಓ ಪೈಕಿ 39.38 ಲಕ್ಷ ಮಂದಿ ಗಣತಿ ನಮೂನೆ ಪಡೆದಿಲ್ಲ. 28.39 ಲಕ್ಷ ಮಂದಿ ಸ್ಥಳಾಂತರಗೊಂಡರೆ, 7.39 ಲಕ್ಷ ಗೈರಾಗಿದ್ದಾರೆ. 2.95 ಲಕ್ಷ ಸಾವನ್ನಪ್ಪಿದ್ದಾರೆ ಎಂದರು.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm