ಬ್ರೇಕಿಂಗ್ ನ್ಯೂಸ್
20-08-22 03:44 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 20 : ವೃದ್ಧ ಮಹಿಳೆಯನ್ನು ಕೊಂದು ಚಿನ್ನಾಭರಣ ದರೋಡೆಗೈದು ಪರಾರಿಯಾಗಿದ್ದ ಹಂತಕರನ್ನು ನೇಪಾಳ ಗಡಿಯಲ್ಲಿ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಎಚ್ಎಸ್ಆರ್ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 13ರಂದು ಜಯಶ್ರೀ ಎಂಬ ವೃದ್ಧೆಯನ್ನ ಕಟ್ಟಿ ಹಾಕಿ, ಹೊಡೆದು ದರೋಡೆಗೈದ ಘಟನೆ ನಡೆದಿತ್ತು. ವೃದ್ಧೆ ಬಳಿಕ ಸ್ಥಳದಲ್ಲೇ ಸಾವು ಕಂಡಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ನೇಪಾಳಿಗರ ಗ್ಯಾಂಗ್ ಕೃತ್ಯ ಅನ್ನೋ ಸುಳಿವು ಸಿಕ್ಕಿತ್ತು. ಆರೋಪಿಗಳು ನೇಪಾಳಕ್ಕೆ ಎಸ್ಕೇಪ್ ಆಗುತ್ತಿದ್ದಾರೆದು ತಿಳಿಯುತ್ತಿದ್ದಂತೆ ಅಲರ್ಟ್ ಆಗಿದ್ದ ಪೊಲೀಸರು ಟವರ್ ಲೊಕೇಶನ್ ಆಧರಿಸಿ ಬೆನ್ನತ್ತಿದ್ದರು. ಎರಡು ಪೊಲೀಸ್ ತಂಡಗಳು ಲೈವ್ ಲೊಕೇಷನ್, ಟೋಲ್ ಸಿಸಿಟಿವಿಗಳ ಮೂಲಕ ಆರೋಪಿಗಳನ್ನ ಬೆನ್ನು ಹತ್ತಿದ್ದವು.
ಉತ್ತರ ಪ್ರದೇಶದ ಲಕ್ನೋಗೆ ತೆರಳಿ, ಆರೋಪಿಗಳು ಅಲ್ಲಿಂದ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದರು. ಆದ್ರೆ ಅಲ್ಲಿ ತಮ್ಮ ಸಹಚರರು ಬಾರದ ಹಿನ್ನೆಲೆ ಕಾನ್ಪುರದಲ್ಲಿ ಅವಿತುಕೊಂಡಿದ್ದರು. ಆರೋಪಿಗಳು ಕಾನ್ಪುರದಲ್ಲಿ ಉಳಿದುಕೊಂಡಿರುವುದು ಖಚಿತವಾಗುತ್ತಲೇ ಪೊಲೀಸರು ರೌಂಡಪ್ ಮಾಡಿ ಸೆರೆ ಹಿಡಿದಿದ್ದಾರೆ. ಆರೋಪಿಗಳು ಚಿನ್ನಾಭರಣ ಸಹಿತ ಪರಾರಿಯಾಗುತ್ತಿದ್ದಾಗಲೇ ಬಂಧಿಸಿದ್ದು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ.
ಪರಾರಿಯಾಗುತ್ತಿದ್ದ ನೇಪಾಳಿ ಗ್ಯಾಂಗ್ ಬಂಧನಕ್ಕಾಗಿ ಆರು ಮಂದಿ ಇನ್ಸ್‌ಪೆಕ್ಟರ್ ಗಳನ್ನು ಬಳಸ್ಕೊಂಡು ವಿಶೇಷ ತಂಡವನ್ನು ರಚಿಸಲಾಗಿತ್ತು. ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ, ಹೆಚ್ಚುವರಿ ಪೊಲೀಸ್ ಆಯುಕ್ತ ಸುಬ್ರಹ್ಮಣೇಶ್ವರ್ ರಾವ್ ಮಾರ್ಗದರ್ಶನದಲ್ಲಿ ಕೊಲೆ ಪ್ರಕರಣವನ್ನು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಭೇದಿಸಿದ್ದಾರೆ.
ಈ ಬಗ್ಗೆ ಎಸಿಪಿ ಸುಬ್ರಹ್ಮಣ್ಯೇಶ್ವರ ರಾವ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು ಹೆಚ್ ಎಸ್ ಆರ್ ಲೇ ಔಟ್ ಠಾಣೆ ವ್ಯಾಪ್ತಿಯಲ್ಲಿ ಆಗಸ್ಟ್ 13 ರಂದು ಮಹಿಳೆಯ ಮರ್ಡರ್ ಆಗಿತ್ತು. ಪೊಲೀಸರು ಕರಾರುವಾಕ್ ಕಾರ್ಯಾಚರಣೆ ನಡೆಸಿ ಆರು ಜನ ನೇಪಾಳ ಮೂಲದ ಆರೋಪಿಗಳನ್ನು ಬಂಧಿಸಿದ್ದಾರೆ. ಇತ್ತಿಚೀನ ದಿನಗಳಲ್ಲಿ ವೃದ್ಧರನ್ನು ಟಾರ್ಗೆಟ್ ಮಾಡಿ ದರೋಡೆ ನಡೆಸುವ ಕೃತ್ಯ ಹೆಚ್ಚುತ್ತಿದೆ. ಆರೋಪಿಗಳು ನೇಪಾಳದ ಪ್ರಜೆಗಳಾಗಿದ್ದು ನಾಲ್ಕು ಜನ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಇನ್ನೂ ಇಬ್ಬರನ್ನು ನೇಪಾಳದಿಂದ ಕರೆಸಿಕೊಂಡು ಕೃತ್ಯ ಎಸಗಿದ್ದಾರೆ. ಇನ್ನು ಮುಂದೆ ಬೇರೆ ದೇಶದ ವ್ಯಕ್ತಿಗಳನ್ನು ನೇಮಕ ಮಾಡಿಕೊಳ್ಳುವಾಗ ಹಿನ್ನೆಲೆ ಬಗ್ಗೆ ವೆರಿಫೇಕೆಶನ್ ಮಾಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
Four Nepalis arrested for robbery and murder of old grandmother in Bangalore.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 07:19 pm
Mangaluru Correspondent
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm