ಬ್ರೇಕಿಂಗ್ ನ್ಯೂಸ್
21-08-22 10:35 pm Manjunath K, Bengaluru ಕ್ರೈಂ
ಬೆಂಗಳೂರು, ಆಗಸ್ಟ್ 21: ಯೂಸುಫ್ ಸುಲೇಮಾನ್ ಕಾದ್ರಿ ಅಲಿಯಾಸ್ ಯೂಸುಫ್ ಬಚಖಾನ್. ಮುಂಬೈ ಮೂಲದ ಭೂಗತ ಪಾತಕಿಯಾಗಿದ್ದರೂ, ಕಳೆದ 20 ವರ್ಷಗಳಿಂದ ಕರ್ನಾಟಕದ ಜೈಲಿನಲ್ಲೇ ಇದ್ದಾನೆ. ಹಾಗಂತ, ಜೈಲು ಕಂಬಿಯಲ್ಲಿ ಬಂಧಿಯಾಗಿಲ್ಲ. ಜೈಲಿನಲ್ಲಿದ್ದುಕೊಂಡೇ ತನ್ನ ಭೂಗತ ಚಟುವಟಿಕೆಯನ್ನು ಸಕ್ರಿಯವಾಗಿ ಇರಿಸ್ಕೊಂಡಿರುವ, ಬೇಕಾದಾಗೆಲ್ಲ ಐಷಾರಾಮಿ ಹೊಟೇಲಿಗೆ ನುಗ್ಗಿ ಮೈಬಿಸಿ ಮಾಡಿಕೊಳ್ಳುತ್ತಿದ್ದ ಚಾಲಾಕಿ. ಜೈಲಿನ ಸಿಬಂದಿಗೇ ಹಣ ಬಿಸಾಕಿ, ಅವರನ್ನೇ ಕಾವಲಿರಿಸಿ ಐಷಾರಾಮಿ ಹೊಟೇಲುಗಳಲ್ಲಿ ಪ್ರೇಯಸಿಯರ ಜೊತೆ ಸುಖಿಸುತ್ತಿದ್ದ ಸುಖ ಪುರುಷ!
ಜೈಲು ಕೈದಿಯಾಗಿದ್ದುಕೊಂಡೇ ಯೂಸುಫ್ ಬಚಖಾನ್ ಐಷಾರಾಮಿ ಹೊಟೇಲಿನಲ್ಲಿ ಹೆಣ್ಣಿನ ಜೊತೆ ಸುಖಿಸೋದು ಸಾಧ್ಯನಾ ಅನ್ನೋದು ನಿಮ್ಮ ಪ್ರಶ್ನೆ ಆಗಿರಬಹುದು. ಆದರೆ, ನಮ್ಮ ದೈನೇಸಿ ವ್ಯವಸ್ಥೆ, ಹಣ ಕೊಟ್ಟರೆ ಹೆಣವೂ ಬಾಯಿಬಿಡುತ್ತೆ ಅನ್ನುವಂಥ ಪೊಲೀಸರು, ನಾಮರ್ಧ ಜೈಲು ಸಿಬಂದಿಯ ಕಾರಣಕ್ಕಾಗಿ ಒಬ್ಬ ಖತರ್ನಾಕ್ ಭೂಗತ ಪಾತಕಿಯಾಗಿದ್ದವನು ತನ್ನನ್ನು ಕೋರ್ಟಿಗೆ ಕರೆದೊಯ್ಯುವ ಹಾದಿಯಲ್ಲೇ ಪೊಲೀಸ್ ಬಸ್ಸನ್ನೇ ನಿಲ್ಲಿಸಿ, ಒಂದಷ್ಟು ಹೊತ್ತು ಹೊಟೇಲಿನಲ್ಲಿ ತನ್ನ ಕೆಲಸ ಮುಗಿಸಿ ಬರುತ್ತೇನೆಂದು ಹೇಳಿ ಹೋಗುತ್ತಾನೆಂದ್ರೆ ಈ ರಾಜ್ಯದಲ್ಲಿರುವ ಪೊಲೀಸಿಂಗ್ ಹೇಗಿರಬೇಕು ಹೇಳಿ. ಆದರೆ ಬಚ್ಚಾಖಾನ್ ಅನ್ನೋ ಈ ಪಾತಕಿ ಸಾಮಾನ್ಯ ಆಸಾಮಿಯಲ್ಲ ಅನ್ನೋದನ್ನು ತೋರಿಸೋದಷ್ಟೇ ಈ ಬರಹದ ಕಳಕಳಿ. ಕರ್ನಾಟಕದ ಜೈಲಿನಲ್ಲಿದ್ದುಕೊಂಡೇ ಈ ಆಸಾಮಿ ಕೊಲೆ, ಬೆದರಿಸಿ ಹಫ್ತಾ ವಸೂಲಿ ಎಲ್ಲವನ್ನೂ ಮಾಡುತ್ತಿದ್ದ ಅನ್ನೋದನ್ನು ಕೇಳಿದರೆ, ಸಾಮಾನ್ಯ ಜನ ನಂಬೋದು ಕಷ್ಟ.
16 ವರ್ಷದಲ್ಲೇ ಪಾತಕ ಲೋಕಕ್ಕೆ ಎಂಟ್ರಿ
ತನಗೆ 16 ವರ್ಷ ಇದ್ದಾಗಲೇ ವೇಶ್ಯಾವಾಟಿಕೆಯ ಪಿಂಪ್ ಒಬ್ಬನನ್ನು ಕೊಲೆ ಮಾಡಲು ಹೋಗಿ ಪೊಲೀಸರ ಬಂಧನಕ್ಕೊಳಗಾಗಿದ್ದ ಯೂಸುಫ್ ಖಾನ್, ಮೊದಲ ಬಾರಿಗೆ ಪೊಲೀಸ್ ಕೇಸು ದಾಖಲು ಮಾಡಿಕೊಂಡಿದ್ದ. ಆದರೆ ಅಪ್ರಾಪ್ತ ಅನ್ನುವ ಕಾರಣಕ್ಕೆ ಜೈಲು ಸೇರದೇ ಹೊರಕ್ಕೆ ಬಂದಿದ್ದ. ಹೀಗೆ ಪಾತಕ ಲೋಕಕ್ಕೆ ಎಂಟ್ರಿ ಪಡೆದಿದ್ದ ಆತನಿಗೆ ಅಷ್ಟರಲ್ಲೇ ಭೂಗತ ಪಾತಕಿ ಛೋಟಾ ರಾಜನ್ ಸಂಪರ್ಕ ಸಿಕ್ಕಿತ್ತು. ದಾವೂದ್ ಇಬ್ರಾಹಿಂ ತಂಡದ ಸದಸ್ಯರನ್ನು ಮುಗಿಸೋಕೆ ಛೋಟಾ ರಾಜನ್, ಇದೇ ಯೂಸುಫ್ ಖಾನನ್ನು ಬಳಕೆ ಮಾಡಲಾರಂಭಿಸಿದ್ದ. 1998ರಲ್ಲಿ ಮೊದಲ ಬಾರಿಗೆ ದಾವೂದ್ ಇಬ್ರಾಹಿಂ ಪಾಲಿಗೆ ಫೈನಾನ್ಸರ್ ಆಗಿದ್ದ ಮುತಾಲಿಕ್ ಪಟೇಲ್ ನನ್ನು ಬಾಂದ್ರಾ ರೈಲು ನಿಲ್ದಾಣದಲ್ಲಿ ಇದೇ ಯೂಸುಫ್ ಶೂಟ್ ಮಾಡಿ ಸಾಯಿಸಿದ್ದ. 1999ರಲ್ಲಿ ತನ್ನಲ್ಲಿ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದು ಮತ್ತು ನಕಲಿ ಪಾಸ್ಪೋರ್ಟ್ ಪ್ರಕರಣದಲ್ಲೂ ತಗ್ಲಾಕ್ಕೊಂಡಿದ್ದ. 2001ರಲ್ಲಿ ಹನೀಫ್ ಲಾಖಾಡ್ ವಾಲಾನನ್ನು ಸಾಯಿಸಿದ ಪ್ರಕರಣದಲ್ಲಿಯೂ ಈತನ ಕೈವಾಡ ಇತ್ತು. ಒಂದೆರಡು ವರ್ಷದಲ್ಲೇ ಮುಂಬೈನಲ್ಲಿ ಶಾರ್ಪ್ ಶೂಟರ್ ಎಂಬ ಹೆಸರಿನ ಗರಿ ಸಿಕ್ಕಿಸಿಕೊಂಡಿದ್ದ ಯೂಸುಫ್ ಖಾನ್, ಆಬಳಿಕ ರವಿ ಪೂಜಾರಿ ಬಳಗದಲ್ಲಿ ಗುರುತಿಸಿಕೊಂಡಿದ್ದ.
ಮುತ್ತಪ್ಪ ರೈ ಡೀಲ್ ಪಡೆದು ಸಿಕ್ಕಾಕ್ಕೊಂಡಿದ್ದ
ಅದೇ ಹೊತ್ತಿಗೆ, ಬೆಂಗಳೂರಿನಲ್ಲಿ ಜಾಗದ ವಿಚಾರಕ್ಕೆ ಬಿಲ್ಡರ್ ಸುಬ್ಬರಾವ್ ಜೊತೆಗೆ ಮ್ತತೊಬ್ಬ ಪಾತಕಿ ಮುತ್ತಪ್ಪ ರೈಗೆ ಸ್ವಲ್ಪ ತಕರಾರು ಆಗಿತ್ತು. ಹಾಗಾಗಿ, ರವಿ ಪೂಜಾರಿಗೆ ಸುಬ್ಬರಾವ್ ಮೇಲೆ ಫೈರ್ ಮಾಡಿ ಬೆದರಿಸಲು ಡೀಲ್ ಕೊಡಲಾಗಿತ್ತು. ರವಿ ಪೂಜಾರಿ, ಇದಕ್ಕಾಗಿ ತನ್ನ ಶಾರ್ಪ್ ಶೂಟರ್ ಯೂಸುಫ್ ಖಾನ್ ಮತ್ತು ಇನ್ನೊಬ್ಬನನ್ನು ಮುಂಬೈನಿಂದ ಕಳಿಸಿಕೊಟ್ಟಿದ್ದ. 2001ರಲ್ಲಿ ಬೆಂಗಳೂರಿನ ಶೇಷಾದ್ರಿಪುರಂನಲ್ಲಿದ್ದ ಸುಬ್ಬರಾವ್ ಕಚೇರಿ ಮುಂಭಾಗಕ್ಕೆ ಬಂದಿದ್ದ ಯೂಸುಫ್ ಬಚ್ಚಾಖಾನ್, ಅಲ್ಲಿ ಸುಬ್ಬರಾವ್ ಇರುವುದನ್ನು ಖಚಿತಪಡಿಸಿದ್ದ. ವಿಷಯವನ್ನು ಮುತ್ತಪ್ಪ ರೈಗೆ ತಿಳಿಸುತ್ತಲೇ ಹೊರಗಿನಿಂದ ಫೈರ್ ಮಾಡುವಂತೆ ಸೂಚನೆ ನೀಡಿದ್ದರು. ಆದರೆ ಯೂಸುಫ್ ಖಾನ್, ಸುಬ್ಬರಾವ್ ಮೇಲೆ ನೇರವಾಗಿ ಗುರಿಯಿಟ್ಟು ಸಾಯಿಸಿದ್ದ. ಪ್ರಕರಣದಲ್ಲಿ ಡೀಲ್ ಮುಗಿದ ಬಳಿಕ ಹಣ ಪಡೆಯೋಕೆ ಮುತ್ತಪ್ಪ ರೈ ಬೆಂಗಳೂರಿನಲ್ಲಿ ವಕೀಲನಾಗಿದ್ದ ಸಂತೋಷ್ ಎಂಬಾತನ ನಂಬರ್ ಕೊಟ್ಟಿದ್ದರು. ಡೀಲ್ ಮುಗಿಯುತ್ತಲೇ ಬಚ್ ಖಾನ್, ವಕೀಲ ಸಂತೋಷನಿಗೆ ಕರೆ ಮಾಡಿದ್ದ.
ಇದೇ ಸುಳಿವು ಹಿಡಿದ ಪೊಲೀಸರು ಸಂತೋಷನ್ನು ವಶಕ್ಕೆ ಪಡೆದು, ಮುಂಬೈ ಮೂಲದ ಯೂಸುಫ್ ಬಚ್ ಖಾನನ್ನು ಅರೆಸ್ಟ್ ಮಾಡಿದ್ದರು. ಮುತ್ತಪ್ಪ ರೈ ಕೂಡ ಪ್ರಕರಣದಲ್ಲಿ ಫಿಕ್ಸ್ ಆಗಿದ್ದರು. ಆದರೆ, ಸಂತೋಷ್ ಮತ್ತು ಮುತ್ತಪ್ಪ ರೈ ಮೇಲಿನ ಆರೋಪ ಖುಲಾಸೆ ಆಗಿದ್ದರೆ, ಯೂಸುಫ್ ಖಾನ್ 2004ರಲ್ಲಿ ಜೀವಾವಧಿ ಶಿಕ್ಷೆಗೊಳಗಾಗಿ ಬೆಳಗಾವಿಯ ಹಿಂಡಲಗಾ ಜೈಲಿಗೆ ಹೋಗಿದ್ದ. ಇತ್ತೀಚೆಗೆ ರವಿ ಪೂಜಾರಿ ಬೆಂಗಳೂರು ಪೊಲೀಸರ ಬಲೆಗೆ ಬಿದ್ದು ತನಿಖೆಯ ಸಂದರ್ಭದಲ್ಲಿ ಯೂಸುಫ್ ಬಚ್ಖಾನ್ ತನ್ನದೇ ಸಹಚರ ಎಂದೇ ಹೇಳಿಕೊಂಡಿದ್ದ. ಈ ಮಧ್ಯೆ ಬೆಳಗಾವಿ ಜೈಲಿನಲ್ಲಿದ್ದಾಗಲೂ ಯೂಸುಫ್ ಖಾನ್, ತನ್ನ ನೆರವಿಗೆ ಮುತ್ತಪ್ಪ ರೈ ಬರ್ತಾ ಇಲ್ಲ. ಅವನನ್ನೂ ಹಾಗೇ ಬಿಡಲ್ಲ ಎಂದು ಅಬ್ಬರಿಸುತ್ತಿದ್ದ.
ಜೈಲಿನಲ್ಲಿದ್ದೇ ಹಫ್ತಾ ವಸೂಲಿ, ಬೆದರಿಕೆ
ಬೆಳಗಾವಿ ಜೈಲಿನಲ್ಲಿದ್ದರೂ, ಯೂಸುಫ್ ಬಚ್ ಖಾನ್ ಸೆಲ್ ಒಳಗಿದ್ದುಕೊಂಡೇ ಹಫ್ತಾ ವಸೂಲಿ ಮಾಡುತ್ತಿದ್ದ. ಮುಂಬೈ, ಬೆಂಗಳೂರಿನ ಉದ್ಯಮಿಗಳಿಗೆ ಕರೆ ಮಾಡಿ, ಹಣ ಕೀಳುತ್ತಿದ್ದ. ಅದೇ ಹಣವನ್ನು ಜೈಲು ಸಿಬಂದಿಗೆ ಕೊಟ್ಟು ಜೈಲಿನೊಳಗಿದ್ದುಕೊಂಡೇ ಐಷಾರಾಮಿ ಜೀವನ ಮಾಡುತ್ತಿದ್ದ. ಈ ನಡುವೆ, ಮುಂಬೈನ ಘಾಟ್ ಕೋಪರ್ ಮೂಲದ ಉದ್ಯಮಿಯನ್ನು ಬೆದರಿಸಿ 50 ಲಕ್ಷ ರೂಪಾಯಿ ಹಫ್ತಾ ಕೇಳಿದ್ದ. ಉದ್ಯಮಿಗೆ ವಿದೇಶದಿಂದ ಬರುತ್ತಿರುವ ರೀತಿ ಕರೆಗಳು ಬರುತ್ತಿದ್ದವು. ಈ ಬಗ್ಗೆ ಉದ್ಯಮಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರ ತನಿಖೆಯಲ್ಲಿ ವಿದೇಶಿ ಕರೆಯಂತೆ ತೋರಿಸುತ್ತಿದ್ದ ನಂಬರನ್ನು ಟ್ರೇಸ್ ಮಾಡಿದಾಗ, ಕರ್ನಾಟಕದ ಜೈಲಿನಿಂದ ಕರೆ ಬಂದಿದ್ದು ತೋರಿಸಿತ್ತು. ಅಂತಾರಾಷ್ಟ್ರೀಯ ಸಾಫ್ಟ್ ವೇರ್ ಒಂದನ್ನು ಬಳಸಿ ಯೂಸುಫ್ ಬಚ್ ಖಾನ್ ಕರೆ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಪ್ರಕರಣದಲ್ಲಿ ಮುಂಬೈ ಪೊಲೀಸರು ಬಾಡಿ ವಾರೆಂಟ್ ಪಡೆದು ಮುಂಬೈಗೆ ಒಯ್ದು ತನಿಖೆಯನ್ನೂ ನಡೆಸಿದ್ದರು.
ಉದ್ಯಮಿಗಳ ನಂಬರ್ ತೆಗೆಸಿಕೊಡುತ್ತಿದ್ದ ಯುವತಿ
ಪೊಲೀಸರ ತನಿಖೆಯಲ್ಲಿ ಯೂಸುಫ್ ಬಚ್ ಖಾನ್ ಗೆ ಉದ್ಯಮಿಗಳ ನಂಬರನ್ನು ತೆಗೆದುಕೊಡುತ್ತಿದ್ದುದು ಅಂಡರ್ ವರ್ಲ್ಡ್ ಇದ್ದ ಯುವತಿ ಅನ್ನೋದು ಬೆಳಕಿಗೆ ಬಂದಿತ್ತು. ಆಕೆಗೆ ಪ್ರಕಾಶ್ ಕೊರ್ವೆ ಎನ್ನುವ ಮುಂಬೈ ಮಹಾನಗರ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಉದ್ಯಮಿಗಳ ನಂಬರನ್ನು ಸಂಗ್ರಹಿಸಿ ಕೊಡುತ್ತಿದ್ದ. ಅದನ್ನು ಹಬೀಬಾ ಖಾನ್ ಎಂಬ ಮುಂಬೈನ ಯುವತಿ ನೇರವಾಗಿ ಯೂಸುಫ್ ಬಚ್ ಖಾನ್ ಗೆ ತಲುಪಿಸುತ್ತಿದ್ದಳು. ಆಕೆಯನ್ನೂ ಪೊಲೀಸರು ಆನಂತರ ಬಂಧಿಸಿದ್ದರು. ಯೂಸುಫ್ ಬಚ್ ಖಾನ್ ಜೈಲಿನಲ್ಲಿದ್ದರೂ, ಮುಂಬೈನ ಹಲವಾರು ಉದ್ಯಮಿಗಳಿಂದ ವಸೂಲಿ ಬಾಜಿ ಮಾಡುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ. ಬದ್ಲಾಪುರ್, ಥಾರ್, ಕುರ್ಲಾ, ಧಾರಾವಿ, ಥಾಣೆ ಠಾಣೆಗಳ ವ್ಯಾಪ್ತಿಯಲ್ಲಿ ಉದ್ಯಮಿಗಳಿಂದ ಹಣ ವಸೂಲಿ ಮಾಡುತ್ತಿದ್ದುದನ್ನೇ ಯೂಸುಫ್ ಖಾನ್ ಕಸುಬು ಮಾಡಿಕೊಂಡಿದ್ದ. ತನ್ನ ಸಹಚರರನ್ನು ಇಟ್ಟುಕೊಂಡು ಅವರ ಮೂಲಕವೇ ಹಣವನ್ನು ಸಂಗ್ರಹ ಮಾಡುತ್ತಿದ್ದ. ಈ ಬಗ್ಗೆ ಮುಂಬೈ ನಗರದಲ್ಲಿ 15 ಕೇಸುಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದ.
ಜೈಲಿನಲ್ಲಿದ್ದೇ ಹುಬ್ಬಳ್ಳಿಯ ಫ್ರುಟ್ ಖಾನ್ ಹತ್ಯೆ
2020ರಲ್ಲಿ ಹುಬ್ಬಳ್ಳಿಯಲ್ಲಿ ಸಯ್ಯದ್ ಇರ್ಫಾನ್ ಅಲಿಯಾಸ್ ಫ್ರುಟ್ ಖಾನ್ ಎಂಬಾತನ ಹತ್ಯೆ ಮಾಡಲಾಗಿತ್ತು. ಅದನ್ನು ಯೂಸುಫ್ ಖಾನ್ ಜೈಲಿನಲ್ಲಿದ್ದುಕೊಂಡೇ ತನ್ನ ಐವರು ಸಹಚರರಿಂದ ಮಾಡಿಸಿದ್ದ. ಈ ಪ್ರಕರಣದಲ್ಲಿಯೂ ಯೂಸುಫ್ ಖಾನ್ ಮತ್ತೆ ಪೊಲೀಸರ ಬಂಧನಕ್ಕೀಡಾಗಿದ್ದ. ಸಹಚರರು ಕೂಡ ಸಿಕ್ಕಿಬಿದ್ದಿದ್ದಾರೆ. 2021ರಲ್ಲಿ ಮುಂಬೈ ಪೊಲೀಸರು ಬೆಳಗಾವಿಯಿಂದ ಮುಂಬೈಗೆ ಒಯ್ದು ತನಿಖೆಯನ್ನೂ ನಡೆಸಿದ್ದರು. ಜೈಲು ಸಿಬಂದಿಯನ್ನೇ ಮುಂದಿಟ್ಟು ತನ್ನ ಕಾರುಬಾರು ಮಾಡುತ್ತಿರುವುದು ತಿಳಿಯುತ್ತಲೇ ಯೂಸುಫ್ ಖಾನನ್ನು ಎರಡು ವರ್ಷಗಳ ಹಿಂದೆ ಬೆಳಗಾವಿಯಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಅಲ್ಲಿ ಹೋದರೂ ತನ್ನ ಚಾಳಿ ಬಿಟ್ಟಿರಲಿಲ್ಲ. ಜೈಲಿನಲ್ಲಿದ್ದ ಪೊಲೀಸ್ ಸಿಬಂದಿಯನ್ನೇ ತನ್ನ ಹಣದ ಥೈಲಿಯಿಂದ ಖರೀದಿಸುತ್ತಿದ್ದ.
ಜೈಲು ಸಿಬಂದಿಯನ್ನೇ ಕಾವಲಿಟ್ಟು ಸುಖಿಸುತ್ತಿದ್ದ !
ಎರಡು ದಿನಗಳ ಹಿಂದೆ ಫ್ರುಟ್ ಖಾನ್ ಕೊಲೆ ಪ್ರಕರಣದಲ್ಲಿ ಹುಬ್ಬಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಪೊಲೀಸರು ಬಸ್ಸಿನಲ್ಲಿ ಕರೆದೊಯ್ದಿದ್ದರು. ಅಲ್ಲಿಂದ ಹಿಂತಿರುಗುತ್ತಿದ್ದ ದಾರಿಯಲ್ಲಿ ಐಷಾರಾಮಿ ಹೊಟೇಲ್ ಒಂದರಲ್ಲಿ ಬಸ್ ನಿಲ್ಲಿಸಿದ್ದರು. ಖುದ್ದು ಯೂಸುಫ್ ಬಚ್ ಖಾನ್ ಹೇಳಿಯೇ ಬಸ್ಸನ್ನು ಅಲ್ಲಿ ನಿಲ್ಲಿಸಲಾಗಿತ್ತು. ಅಷ್ಟೇ ಅಲ್ಲ, ಖುದ್ದು ಪೊಲೀಸರ ಉಸ್ತುವಾರಿಯಲ್ಲೇ ಜೈಲು ಕೈದಿ ಹೊಟೇಲ್ ರೂಮ್ ಸೇರಿದ್ದ. ಪೊಲೀಸರು ರೂಮ್ ಹೊರಗಡೆ ಕಾವಲು ಕಾಯುತ್ತಿದ್ದರು. ಅಷ್ಟರಲ್ಲೇ ಹೊಟೇಲ್ ಕೊಠಡಿಗೆ ಯುವತಿಯೂ ಎಂಟ್ರಿ ಕೊಟ್ಟಿದ್ದಳು. ಇದನ್ನು ನೋಡಿದ ಹೊಟೇಲ್ ಸಿಬಂದಿ ಏನೋ ಎಡವಟ್ಟು ಆಗಿದೆ ಎಂದು ಸ್ಥಳೀಯ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ವಿಷ್ಯ ತಿಳಿಯುತ್ತಲೇ ಹುಬ್ಬಳ್ಳಿ ಪೊಲೀಸ್ ಕಮಿಷನರ್ ಲಾಬೂರಾಮ್ ತಾನೇ ಖುದ್ದಾಗಿ ಪೊಲೀಸರ ಜೊತೆ ಹೊಟೇಲಿಗೆ ದಾಳಿ ನಡೆಸಿದ್ದರು. ಪ್ರೇಯಸಿ ಜೊತೆ ಏಕಾಂತದಲ್ಲಿದ್ದಾಗಲೇ ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆ ದಂಧೆಯೇನೋ ಎನ್ನುವಂತೆ ಕೈದಿಯನ್ನು ವಶಕ್ಕೆ ಪಡೆದಿದ್ದರು. ಅಷ್ಟರಲ್ಲಿ ಹಣದಾಸೆಗೆ ಬಿದ್ದ ಜೈಲು ಸಿಬಂದಿ ಕೈದಿಯನ್ನು ಹೊಟೇಲಿನಲ್ಲಿ ಹೆಣ್ಣಿನ ಜೊತೆ ಸುಖಿಸಲು ಬಿಟ್ಟಿದ್ದು ಮತ್ತು ಅದಕ್ಕೆ ಕಾವಲು ನಿಂತಿದ್ದ ವ್ಯಭಿಚಾರದ ವಿಚಾರವೂ ಹೊರಬಂದಿತ್ತು.
ಒಂದೇ ಫೋನ್ ಕರೆಗೆ ಬಂದುಬೀಳ್ತಿತ್ತು ಹತ್ತು ಲಕ್ಷ
ನನ್ನ ಒಂದು ಫೋನ್ ಕರೆಗೆ ಹತ್ತು ಲಕ್ಷ ಬಂದು ಬೀಳುತ್ತೆ ಎನ್ನುತ್ತಿದ್ದ ಯೂಸುಫ್ ಬಚ್ ಖಾನ್ ಮಾತಿಗೆ ಜೈಲು ಸಿಬಂದಿ ನಕರಾ ಆಡುವಂತಿರಲಿಲ್ಲ. ಆತ ಎಸೀತಿದ್ದ ಹಣದ ಮುಂದೆ ಬೀದಿ ನಾಯಿಗಳಂತಾಗಿದ್ದರು ಜೈಲು ಸಿಬಂದಿ. ಹಾಗಾಗಿ, ಎರಡೆರಡು ಕೊಲೆ ಪ್ರಕರಣ, ಹಫ್ತಾ ವಸೂಲಿ, ಕೊಲೆಯತ್ನ ಪ್ರಕರಣಗಳಲ್ಲಿ ಶಿಕ್ಷೆಯಾಗಿ ಜೈಲು ಕೈದಿಯಾಗಿದ್ದರೂ, ಆತನ ಕಾಮದಾಟಕ್ಕೂ ಸೈ ಅನ್ನುತ್ತಿದ್ದರು. ಆಗಾಗ ಕೋರ್ಟಿಗೆ ಒಯ್ಯುವ ಸಂದರ್ಭದಲ್ಲೆಲ್ಲ ಹುಡುಗಿಯರನ್ನು ಹೊಟೇಲಿನಲ್ಲಿ ಬುಕ್ ಮಾಡ್ಕೊಂಡು ತನ್ನ ಕಾಮತೃಷೆಯನ್ನು ತೀರಿಸಿಕೊಳ್ಳುವುದಕ್ಕೆ ಜೈಲು ಸಿಬಂದಿಯನ್ನೇ ಹಣದಾಸೆ ಹುಟ್ಟಿಸಿ ಖರೀದಿಸಿ ಬಿಡುತ್ತಿದ್ದ ಅಂದ್ರೆ ನೀವು ಹುಬ್ಬೇರಿಸಲೇಬೇಕು.
The police allegedly allowed a murder accused Underworld don Bacha Khan who was brought to a court for hearing to spend time with his girlfriend at a lodge for sex in Dharwad Saturday. After the incident was reported, a case was registered against a few police personnel as well as the undertrial, said officials. He was highly influencing jail officers to do his work by giving them enough money it is alleged. He used to make threats from the jail. Bacha khan is said to be close aide of Underworld don Ravi Poojari.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 10:06 am
Mangalore Correspondent
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm