ದುಬೈನಿಂದ ಚಿನ್ನದ ತರುತ್ತಿದ್ದ ಬಂಟ್ವಾಳದ ವ್ಯಕ್ತಿ ಕಸ್ಟಮ್ಸ್ ವಶಕ್ಕೆ  

22-08-22 10:01 pm       Mangalore Correspondent   ಕ್ರೈಂ

ದುಬೈನಿಂದ ಅಕ್ರಮವಾಗಿ ಚಿನ್ನ ಬಚ್ಚಿಟ್ಟುಕೊಂಡು ತರುತ್ತಿದ್ದ ಬಂಟ್ವಾಳ ಮೂಲದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮಂಗಳೂರು, ಆಗಸ್ಟ್ 22: ದುಬೈನಿಂದ ಅಕ್ರಮವಾಗಿ ಚಿನ್ನ ಬಚ್ಚಿಟ್ಟುಕೊಂಡು ತರುತ್ತಿದ್ದ ಬಂಟ್ವಾಳ ಮೂಲದ ವ್ಯಕ್ತಿಯನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಸೋಮವಾರ ಸ್ಪೈಸ್ ಜೆಟ್ ವಿಮಾನದಲ್ಲಿ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ವ್ಯಕ್ತಿಯ ಬಗ್ಗೆ ಸಂಶಯಗೊಂಡು ತಪಾಸಣೆ ನಡೆಸಿದಾಗ ಆತನ ದೇಹದಲ್ಲಿ ಚಿನ್ನದ ಉಂಡೆಗಳು ಪತ್ತೆಯಾಗಿವೆ. 24 ಕ್ಯಾರೆಟ್ ಚಿನ್ನವನ್ನು ಪೌಡರ್ ರೂಪಕ್ಕಿಳಿಸಿ, ನಾಲ್ಕು ಉಂಡೆಗಳಾಗಿಸಿ ತರಲಾಗುತ್ತಿತ್ತು.

45.83 ಲಕ್ಷ ಮೌಲ್ಯದ 878 ಗ್ರಾಮ್ ಚಿನ್ನವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಂಟಿನಲ್ಲಿ ಚಿನ್ನದ ಪೌಡರನ್ನು ಬೆರಸಿ ಉಂಡೆಗಳಾಗಿ ಮಾಡಲಾಗಿತ್ತು ಎಂದು ಕಸ್ಟಮ್ಸ್ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.

Mangalore international airport customs officers seize gold worth 45 lakhs.