ಬ್ರೇಕಿಂಗ್ ನ್ಯೂಸ್
25-08-22 02:56 pm HK News Desk ಕ್ರೈಂ
ನವದೆಹಲಿ, ಆಗಸ್ಟ್ 25: ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಸಾವಿನಲ್ಲಿ ಸಂಶಯ ಕೇಳಿಬಂದಿದ್ದು, ಆಕೆಯ ಪಿಎ ಮತ್ತು ಮ್ಯಾನೇಜರ್ ಸೇರಿಕೊಂಡು ಅತ್ಯಾಚಾರ ನಡೆಸಿ ಬ್ಲಾಕ್ಮೇಲ್ ಮಾಡಿ ಕೊಲೆಗೈದಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಆಕೆಯ ಸೋದರ ಮತ್ತು 15 ವರ್ಷದ ಮಗಳು ಗಂಭೀರ ಆರೋಪ ಮಾಡಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಸೋನಾಲಿ ಫೋಗಾಟ್ ಸಿನಿ ತಾರೆಯೂ ಆಗಿದ್ದು, ಬಿಗ್ ಬಾಸ್ -14 ಆವೃತ್ತಿಯಲ್ಲಿ ಸ್ಪರ್ಧಿಯಾಗಿ ಗಮನ ಸೆಳೆದಿದ್ದರು. ಎರಡು ದಿನಗಳ ಹಿಂದೆ ಸೋನಾಲಿ ಸಿನಿಮಾ ಚಿತ್ರೀಕರಣಕ್ಕೆಂದು ಗೋವಾಕ್ಕೆ ಬಂದಿದ್ದಾಗ ನಿಗೂಢ ಸಾವು ಕಂಡಿದ್ದರು ಎನ್ನಲಾಗಿದೆ. ಹೃದಯಾಘಾತದಿಂದ ಸಾವು ಸಂಭವಿಸಿದೆ ಎಂದು ಹೇಳಲಾಗಿತ್ತು. ಆದರೆ, ಸಾವು ಆಗಿರುವ ಬೆನ್ನಲ್ಲೇ ಹರ್ಯಾಣದಲ್ಲಿರುವ ಸೋನಾಲಿ ಅವರ ಸೋದರ ರಿಂಕು ಢಾಕಾ ಗೋವಾಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸೋನಾಲಿ ಜೊತೆಗಿರುತ್ತಿದ್ದ ಮತ್ತು ಆಕೆಯ ವಹಿವಾಟು ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಸುಧೀರ್ ಸಂಗ್ವಾನ್ ಮತ್ತು ಸುಖವಿಂದರ್ ಸಿಂಗ್ ವಿರುದ್ಧ ಆರೋಪ ಮಾಡಿದ್ದಾರೆ.
ಸೋನಾಲಿ ಹರ್ಯಾಣದ ಫತೇಹಬಾದ್ ಜಿಲ್ಲೆಯ ಭೂತಾನ್ ಕಲನ್ ಗ್ರಾಮದ ನಿವಾಸಿಯಾಗಿದ್ದು, ಚಂಡೀಗಢ ಬಳಿಯ ಹಿಸ್ಸಾರ್ ನಗರದಲ್ಲಿ ನೆಲೆಸಿದ್ದರು. ಕೆಲವು ವರ್ಷಗಳ ಹಿಂದೆ ಪತಿ ಸಂಜಯ್ ಫೋಗಾಟ್ ಸಾವನ್ನಪ್ಪಿದ ಬಳಿಕ ಸೋನಾಲಿ ಬಿಜೆಪಿ ಸೇರಿದ್ದರು. 2019ರಲ್ಲಿ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರವನ್ನೂ ನಡೆಸಿದ್ದರು. ಇದೇ ವೇಳೆ, ಸುಧೀರ್ ಸಂಗ್ವಾನ್ ಮತ್ತು ಸುಖವಿಂದರ್ ಪರಿಚಯ ಆಗಿದ್ದು, ಸೋನಾಲಿಯ ವಿಶ್ವಾಸ ಗಳಿಸಿಕೊಂಡು ಆಕೆಯ ಜೊತೆ ಪಿಎ ಆಗಿ ಸೇರಿಕೊಂಡಿದ್ದರು. 2021ರ ಆಗಸ್ಟ್ ನಲ್ಲಿ ಸೋನಾಲಿ ಮನೆಯಲ್ಲಿ ಕಳವು ಕೃತ್ಯ ನಡೆದಿತ್ತು. ಆನಂತರ, ಮನೆಯಲ್ಲಿದ್ದ ಅಡುಗೆಯವರು ಮತ್ತು ಇತರ ಕೆಲಸದವರನ್ನು ಹೊರಗೆ ಹಾಕಲಾಗಿತ್ತು. ಕಳವು ಕೃತ್ಯವನ್ನು ಸ್ವತಃ ಸುಧೀರ್ ಸಂಗ್ವಾನ್ ಮಾಡಿದ್ದ.
ಕಳವು ಕೃತ್ಯದ ಬಳಿಕ ಸೋನಾಲಿ ಮನೆಯಲ್ಲಿ ಅಡುಗೆ ಇನ್ನಿತರ ಕೆಲಸಗಳನ್ನು ಸುಧೀರ್ ಸಂಗ್ವಾನ್ ನೋಡಿಕೊಳ್ಳುತ್ತಿದ್ದ. ಒಂದು ದಿನ ಆಹಾರದಲ್ಲಿ ಅಮಲು ಪದಾರ್ಥ ಬೆರಸಿ ಸೋನಾಲಿಗೆ ಕೊಟ್ಟು, ಆಕೆಗೆ ಅರೆಪ್ರಜ್ಞೆ ಇರುವಾಗ ಸುಧೀರ್ ಮತ್ತು ಸುಖವಿಂದರ್ ಅತ್ಯಾಚಾರ ನಡೆಸಿದ್ದರು. ಅಲ್ಲದೆ, ಕೃತ್ಯವನ್ನು ಇಬ್ಬರೂ ಸೇರಿಕೊಂಡು ವಿಡಿಯೋ ಮಾಡಿದ್ದು, ಅದನ್ನು ಮುಂದಿಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದರು. ಈ ಬಗ್ಗೆ ಸ್ವತಃ ಸೋನಾಲಿ ಫೋಗಾಟ್ ತನ್ನಲ್ಲಿ ಹೇಳಿಕೊಂಡಿದ್ದಾಗಿ ರಿಂಕು ಢಾಕಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಅದಲ್ಲದೆ, ವಿಡಿಯೋವನ್ನು ಜಾಲತಾಣದಲ್ಲಿ ಹರಿಯಬಿಡುವುದಾಗಿ ಹೇಳಿ ಸೋನಾಲಿ ಮೇಲೆ ಮತ್ತೆ ಮತ್ತೆ ರೇಪ್ ಮಾಡಿದ್ದ. ಇದರಿಂದ ಸೋನಾಲಿ ತುಂಬ ಮಾನಸಿಕವಾಗಿ ನೊಂದಿದ್ದಳು ಎಂಬುದಾಗಿ ತನ್ನ ಗಂಡನ ಸೋದರನಲ್ಲೂ ಹೇಳಿಕೊಂಡಿದ್ದಳು.
ಸುಧೀರ್ ಸಂಗ್ವಾನ್ ಮತ್ತು ಸುಖವಿಂದರ್ ಸಿಂಗ್, ಸೋನಾಲಿಯನ್ನು ಬ್ಲಾಕ್ಮೇಲ್ ಮಾಡುತ್ತಲೇ ಇದ್ದರು. ಆಕೆಯ ಎಟಿಎಂ ಕಾರ್ಡ್, ಮೊಬೈಲ್ ಫೋನ್, ಮನೆಯ ಕೀಯನ್ನು ತಾವೇ ಇಟ್ಟುಕೊಳ್ಳುತ್ತಿದ್ದರು. ಆಕೆಯ ಆಸ್ತಿಯನ್ನು ಕಬಳಿಸುವುದಕ್ಕಾಗಿ ಇದೀಗ ಕೊಂದಿದ್ದಾರೆ. ಅವರು ಆಸ್ತಿಗಾಗಿ ಏನು ಮಾಡುವುದಕ್ಕೂ ಹೇಸುವವರಲ್ಲ. ನನಗೆ ಫೋನ್ ಮಾಡಿ ಶೂಟಿಂಗ್ ಹೋಗಿದ್ದ ವೇಳೆ ಸಾವನ್ನಪ್ಪಿದ್ದಾಗಿ ತಿಳಿಸಿದ್ದರು. ಫೋನ್ ಮಾಡಿ, ಆಬಳಿಕ ಮೊಬೈಲನ್ನು ಸಂಪರ್ಕ ಸಿಗದಂತೆ ಮಾಡಿದ್ದರು ಎಂದು ಸೋದರ ರಿಂಕು ಢಾಕಾ ಆರೋಪ ಮಾಡಿದ್ದಾರೆ.
ನಾವು ಗೋವಾಕ್ಕೆ ಬಂದ ಸಂದರ್ಭದಲ್ಲಿ ಅಲ್ಲಿ ಯಾವುದೇ ಶೂಟಿಂಗ್ ಇದ್ದಿರಲಿಲ್ಲ ಅನ್ನುವುದು ತಿಳಿದುಬಂದಿದೆ. ಈ ಕೊಲೆಯ ಹಿಂದೆ ಭಾರೀ ಷಡ್ಯಂತ್ರ ನಡೆಸಿದ್ದಾರೆ. ಸುಧೀರ್ ಮೊದಲಿಗೆ ಫೋನ್ ಮಾಡಿ, ಸೋನಾಲಿ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದ. ಆದರೆ ಆನಂತರ ಫೋನ್ ಮಾಡಿದಾಗ, ರಿಸೀವ್ ಮಾಡಿರಲಿಲ್ಲ. ಬಳಿಕ ಫೋನನ್ನೇ ಸ್ವಿಚ್ ಮಾಡಿದ್ದರು. ಸೋನಾಲಿಯವರ ಫೋನನ್ನೂ ಸ್ವಿಚ್ ಆಫ್ ಮಾಡಿದ್ದ ಎಂದು ರಿಂಕು ಢಾಕಾ ಮತ್ತು ಕುಟಂಬಸ್ಥರು ಆರೋಪ ಮಾಡಿದ್ದಾರೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
The mystery over the death of BJP leader and actress Sonali Phogat has deepened with her family lodging a written complaint with the police, suspecting rape and murder by her personal assistant Sudhir Sangwan and his friend Sukhwinder. The police have yet to register an FIR.In the complaint, Sonali's brother Rinku Dhaka has said that Phogat had spoken to their brother-in-law Aman Punia on August 22, alleging she had been served food laced with some intoxicant.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm