ಬ್ರೇಕಿಂಗ್ ನ್ಯೂಸ್
25-08-22 08:41 pm HK News Desk ಕ್ರೈಂ
ಕೇರಳ,ಆಗಸ್ಟ್ 25: ತನ್ನ ಹೆತ್ತ ತಂದೆ ಮತ್ತು ತಾಯಿಗೆ ಮಗಳೊಬ್ಬಳು ಇಲಿ ಪಾಷಾಣ ಬೆರೆಸಿದ ಚಹಾ ನೀಡಿರುವ ಆಘಾತಕಾರಿ ಪ್ರಕರಣ ಕೇರಳದ ತ್ರಿಶೂರ್ ಜಿಲ್ಲೆಯ ಕುನ್ನಂಕುಲಂನಲ್ಲಿ ಬೆಳಕಿಗೆ ಬಂದಿದೆ.
ಈ ಘಟನೆಯಲ್ಲಿ ತಾಯಿ ಮೃತಪಟ್ಟರೆ, ಅದೃಷ್ಟವಶಾತ್ ತಂದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಮಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇಂದುಲೇಖಾ ಎಂಬ ಮಹಿಳೆ ಈ ದುಷ್ಕೃತ್ಯ ಎಸಗಿದ್ದಾಳೆ. ತಾಯಿ ರುಕ್ಮಿಣಿ (57) ಮಗಳಿಂದ ಹತ್ಯೆಯಾದವರು. ಇಂದುಲೇಖಾ 8 ಲಕ್ಷ ರೂಪಾಯಿ ಸಾಲ ಹೊಂದಿದ್ದು, ಇದನ್ನು ತೀರಿಸಲು ತಂದೆ ಹೆಸರಲ್ಲಿದ್ದ ಮನೆ ಮತ್ತು ಜಮೀನನ್ನು ಒತ್ತೆಯಿಡಲು ಸಂಚು ರೂಪಿಸಿದ್ದಳು. ಇದಕ್ಕಾಗಿ ತಂದೆ ಚಂದ್ರನ್ ಮತ್ತು ತಾಯಿ ರುಕ್ಮಿಣಿ ಜೊತೆಗೆ ಮಗಳು ನಿತ್ಯವೂ ಜಗಳವಾಡುತ್ತಿದ್ದಳಂತೆ.
ಏನಾದರೂ ಮಾಡಿ ಆಸ್ತಿ ಪಡೆಯಬೇಕೆಂಬ ದುರುದ್ದೇಶ ಹೊಂದಿದ್ದ ಇಂದುಲೇಖಾ ಚಹಾದಲ್ಲಿ ತಂದೆ - ತಾಯಿಗೆ ಇಲಿ ಪಾಷಾಣ ಬೆರೆಸಿ ಕೊಟ್ಟಿದ್ದಾಳೆ. ಆದರೆ, ತಂದೆ ಚಂದ್ರನ್ ಚಹಾ ರುಚಿಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಅದನ್ನು ಕುಡಿದಿರಲಿಲ್ಲ. ತಾಯಿ ಚಹಾ ಸೇವಿಸಿ ತೀವ್ರ ಅಸ್ವಸ್ಥರಾಗಿದ್ದರು.
ನಂತರ ಇಂದುಲೇಖಾ ಅಸ್ವಸ್ಥಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು, ತನ್ನ ತಾಯಿ ಫುಡ್ ಪಾಯ್ಸನಿಂಗ್ನಿಂದ ಬಳಲುತ್ತಿದ್ದಾರೆ ಎಂದು ವೈದ್ಯರಿಗೆ ತಿಳಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ತಾಯಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಆಕೆಯ ದೇಹದಲ್ಲಿ ಇಲಿ ವಿಷ ಬೆರೆತಿರುವುದು ಪತ್ತೆಯಾಗಿದೆ.
ಇತ್ತ, ಇಂದುಲೇಖಾ ಬಗ್ಗೆ ತಂದೆಗೆ ಅನುಮಾನ ಬಂದಿದ್ದು, ಆಕೆಯ ವರ್ತನೆ ಹಾಗೂ ಜಗಳದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ನಂತರ ಪೊಲೀಸರು ಇಂದುಲೇಖಾಳನ್ನು ವಿಚಾರಣೆಗೊಳಪಡಿಸಿದ್ದು, ಆಗ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾಳೆ. ಆಸ್ತಿ ಪಡೆಯಲೆಂದೇ ಪೋಷಕರನ್ನು ಕೊಲೆ ಮಾಡಲು ಬಯಸಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಅಲ್ಲದೇ, ಪೋಷಕರಿಗೆ ನೀಡುತ್ತಿದ್ದ ಆಹಾರದಲ್ಲಿ ಕೆಲ ಸಮಯದಿಂದ ಮಾತ್ರೆಗಳನ್ನು ಇಂದುಲೇಖಾ ಬೆರೆಸುತ್ತಿದ್ದಳು. ಇಲಿಪಾಷಾಣದ ಬಗ್ಗೆ ಇಂಟರ್ನೆಟ್ನಲ್ಲಿ ಹುಡುಕಾಟ ನಡೆಸಿದ್ದಳು ಎಂದು ಪೊಲೀಸರು ಹೇಳಿದ್ದಾಳೆ.
Rugmini, 58, wife of Chandran of Kizhoor, near Kunnamkulam in Thrissur district, was admitted to a hospital at Kunnamkulam last Monday after she collapsed at home. She was later shifted to a hospital in Thrissur city where she died.The doctors, who grew suspicious about the cause of death, informed the police. A postmortem examination revealed the presence of poison in her body, and the police registered a case of unnatural death on Wednesday and interrogated the family members.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 04:57 pm
Mangaluru Correspondent
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm