ಬ್ರೇಕಿಂಗ್ ನ್ಯೂಸ್
25-08-22 10:49 pm HK News Desk ಕ್ರೈಂ
ಗಾಜಿಯಾಬಾದ್, ಆಗಸ್ಟ್ 25: 16 ವರ್ಷದ ಬಾಲಕನೊಬ್ಬ ಶಾಲೆಗೆ ಹೋಗುವುದನ್ನು ತಪ್ಪಿಸಲು ತನ್ನ ಗೆಳೆಯನಾಗಿದ್ದ 14 ವರ್ಷದ ಬಾಲಕನನ್ನು ಕೊಂದು ಜೈಲು ಸೇರಿದ ಘಟನೆ ದೆಹಲಿಯಲ್ಲಿ ನಡೆದಿದೆ. ಹೆತ್ತವರು ಶಾಲೆಗೆ ಹೋಗಲು ಒತ್ತಾಯಿಸುತ್ತಿದ್ದರು. ಅದಕ್ಕಾಗಿ ಐದು ತಿಂಗಳ ಹಿಂದೆಯೇ ಕೊಲೆ ಮಾಡಿ ಜೈಲಿಗೆ ಹೋಗಲು ಪ್ಲಾನ್ ಹಾಕಿದ್ದೆ ಎಂದು ಹುಡುಗ ಪೊಲೀಸರಲ್ಲಿ ತಿಳಿಸಿದ್ದಾನೆ. ದೆಹಲಿ- ಮೀರತ್ ಎಕ್ಸ್ ಪ್ರೆಸ್ ಹೆದ್ದಾರಿಯ ಮಸೂರಿ ಎಂಬಲ್ಲಿ ಘಟನೆ ನಡೆದಿದೆ.
ಸೋಮವಾರ ಸಂಜೆ ಶಾಲೆ ಬಿಟ್ಟ ನಂತರ ಅದೇ ಪರಿಸರದ ಏಳನೇ ಕ್ಲಾಸ್ ಕಲಿಯುತ್ತಿದ್ದ ಹುಡುಗನನ್ನು ತನ್ನ ಜೊತೆಗೆ ಕರ್ಕೊಂಡು ಹೋಗಿದ್ದ. ಕಾರು ರೇಸ್ ತೋರಿಸುತ್ತೇನೆ ಎಂದು ಹೇಳಿ ಕರೆದೊಯ್ದಿದ್ದು, ರಸ್ತೆ ಬದಿ ಬಿದ್ದಿದ್ದ ಗ್ಲಾಸ್ ಚೂರನ್ನು ಎತ್ತಿಕೊಂಡು 14 ವರ್ಷದ ಬಾಲಕನ ಕುತ್ತಿಗೆಯನ್ನು ಸೀಳಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಹುಡುಗನನ್ನು ರಸ್ತೆ ಬದಿಯ ಹೊಂಡಕ್ಕೆ ನೂಕಿ ಅಲ್ಲಿಂದ ಆರೋಪಿ ಬಾಲಕ ಪರಾರಿಯಾಗಿದ್ದ. ಆನಂತರ, ಪೊಲೀಸರು ಹುಡುಕಾಟದ ಸಂದರ್ಭದಲ್ಲಿ ಚಹಾ ಅಂಗಡಿಯೊಂದರಲ್ಲಿ ಆರೋಪಿ ಹುಡುಗ ಪತ್ತೆಯಾಗಿದ್ದಾನೆ.
ಮೃತ ಹುಡುಗನ ತಂದೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ. ಆರೋಪಿ ಹುಡುಗನ ತಂದೆ ಜಾಗದ ಸೇಲ್ ಮಾಡುತ್ತಿದ್ದು ಸ್ವಲ್ಪ ಮಟ್ಟಿಗೆ ಶ್ರೀಮಂತನಾಗಿದ್ದ. ಇಬ್ಬರದ್ದೂ ಒಂದೇ ಪರಿಸರದಲ್ಲಿ ಮನೆಗಳಿದ್ದವು. ಇಬ್ಬರೂ ಪರಿಚಯದವರೇ ಆಗಿದ್ದು, 16 ವರ್ಷದ ಹುಡುಗ ಶಾಲೆಗೆ ಹೋಗುವುದಿಲ್ಲ. ಕಲಿಯಲು ಇಷ್ಟವಿಲ್ಲ ಎಂದು ಹಠ ಹಿಡಿಯುತ್ತಿದ್ದ. ಆತನ ಜೊತೆಗಿದ್ದವರು ಮೂರು ಕ್ಲಾಸ್ ಮುಂದೆ ಹೋಗಿದ್ದರು. ಬೇರೆ ಶಾಲೆಗೆ ಸೇರಿದ್ದರು. ಈತ ಮಾತ್ರ ಫೇಲ್ ಆಗಿ ಅಲ್ಲಿಯೇ ಉಳಿದುಕೊಂಡಿದ್ದ. ಇದರಿಂದ ನೊಂದುಕೊಂಡಿದ್ದ ಹುಡುಗ ಶಾಲೆಗೇ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದ. ಆದರೆ ಹೆತ್ತವರು ಮಾತ್ರ ಶಾಲೆಗೆ ಹೋಗಲೇ ಬೇಕು ಹಠ ಮಾಡುತ್ತಿದ್ದರು. ಈ ನಡುವೆ ಸಿನಿಮಾ ನೋಡಿ ಪ್ರೇರಣೆಗೊಂಡಿದ್ದ ಹುಡುಗ, ಐದು ತಿಂಗಳ ಹಿಂದೆಯೇ ಕೊಲೆಗೆ ಪ್ಲಾನ್ ಹಾಕಿದ್ದ.
ಇದಕ್ಕೂ ಹಿಂದೆ ಇನ್ನೊಬ್ಬ ಹುಡುಗನನ್ನು ಕೊಲೆ ಮಾಡಲು ಪ್ಲಾನ್ ಹಾಕಿದ್ದ. ಆದರೆ ಧೈರ್ಯ ಸಾಲದೆ ಅದರಿಂದ ಹಿಂದೆ ಸರಿದಿದ್ದ. ಈಗ ತನಗಿಂತ ಸಣ್ಣ ಪ್ರಾಯದ ಹುಡುಗ ಸಿಕ್ಕಿದ್ದರಿಂದ ಕುತ್ತಿಗೆಯ ನರವನ್ನು ಸೀಳಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿದರೆ, ಶಾಲೆಗೆ ಹೋಗುವುದನ್ನು ನಿಲ್ಲಿಸಬಹುದು. ಜೈಲು ಸೇರಿದರೆ ಅಲ್ಲಿ ಉಚಿತವಾಗಿ ಊಟ ಸಿಗುತ್ತದೆ ಎಂದು ಸಿನಿಮಾದಲ್ಲಿ ನೋಡಿದ್ದನ್ನು ಯಥಾವತ್ತಾಗಿ ಪಾಲಿಸಿದ್ದ. ಆತನ ಮಾತು ಕೇಳಿ ಪೊಲೀಸರೇ ಚಕಿತಗೊಂಡಿದ್ದಾರೆ. ಘಟನೆ ತಿಳಿದ ಬೆನ್ನಲ್ಲೇ ಸ್ಥಳೀಯರು ಪ್ರತಿಭಟನೆ ನಡೆಸಿದ್ದು, ಮೃತ ಹುಡುಗನ ಕುಟುಂಬಸ್ಥರಿಗೆ 50 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.
A 16-year-old boy was detained for allegedly slitting the throat of his 13-year-old friend on the Delhi-Meerut Expressway in Masuri in cold blood on Monday evening. The boy, police said, had been plotting the murder for the past five months just so he could end up in a shelter home and escape studies.On Monday evening, he allegedly lured his friend on the pretext of watching cars cruise down the DME. There, he picked up a piece of glass lying on the road and slit his friend's throat, police said. He then threw the body in the bushes off the expressway and fled.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 04:57 pm
Mangaluru Correspondent
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm