ಎಸ್ಕೇಪ್ ಆಗುತ್ತಿದ್ದ ಮುರುಘಾ ಮಠದ ಸ್ವಾಮೀಜಿ ಪೊಲೀಸರ ವಶಕ್ಕೆ ; ಮಹಾರಾಷ್ಟ್ರಕ್ಕೆ ತೆರಳಲು ಪ್ಲಾನ್ ಹಾಕಿದ್ದ ಸ್ವಾಮೀಜಿ ! 

29-08-22 02:04 pm       HK News Desk   ಕ್ರೈಂ

ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಯನ್ನು ದಿಢೀರ್ ವಶಕ್ಕೆ ಪಡೆದಿದ್ದಾರೆ.

ಚಿತ್ರದುರ್ಗ, ಆಗಸ್ಟ್ 29: ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಪೊಲೀಸರು ಚಿತ್ರದುರ್ಗದ ಮುರುಘಾ ಮಠದ ಸ್ವಾಮೀಜಿಯನ್ನು ದಿಢೀರ್ ವಶಕ್ಕೆ ಪಡೆದಿದ್ದಾರೆ.

ನಿನ್ನೆಯಷ್ಟೇ ʼಸಂಧಾನಕ್ಕೂ ಸಿದ್ಧ, ಸಮರಕ್ಕೂ ಬದ್ದʼ ಎಂದು ಹೇಳಿದ್ದ ಶ್ರೀಗಳ ಬಗ್ಗೆ ಪೊಲೀಸರು ನಿಗಾ ಇಟ್ಟಿದ್ದರು. ರಾತ್ರಿ ವೇಳೆ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಭಾನುವಾರ ಪೊಲೀಸರು ಹಾಸ್ಟೆಲ್ ಮಕ್ಕಳ ಹೇಳಿಕೆ ಪಡೆದು ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಸ್ವಾಮೀಜಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿತ್ತು. ‌ಇದರಿಂದ ಬಂಧನ ಭೀತಿ ಎದುರಿಸುತ್ತಿದ್ದ ಸ್ವಾಮೀಜಿ, ಇಂದು ಬೆಳಗ್ಗೆ ಚಿತ್ರದುರ್ಗದ ಮಠದಿಂದ ಮಹಾರಾಷ್ಟ್ರ ತೆರಳುವ ಉದ್ದೇಶದಿಂದ ಖಾಸಗಿ ಕಾರಿನಲ್ಲಿ ಪಲಾಯನ ಆಗುತ್ತಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಾವೇರಿ ಜಿಲ್ಲೆಯ ಬಂಕಾಪುರ ಟೋಲ್ ಗೇಟ್ ನಲ್ಲಿ ಕಾರು ತಡೆದು ವಶಕ್ಕೆ ಪಡೆದಿದ್ದಾರೆ. ‌

ಸ್ವಾಮೀಜಿ ತಾವು ಬಳಸುತ್ತಿದ್ದ ಕಾರನ್ನು ಬಿಟ್ಟು ಮತ್ತೊಂದು ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾವಿಯನ್ನೂ ಧರಿಸದೆ ತಲೆಮರೆಸಿಕೊಳ್ಳಲೆಂದೇ ತೆರಳುತ್ತಿದ್ದರು ಎನ್ನಲಾಗುತ್ತಿದೆ. ಆದರೆ ಪ್ರಕರಣ ದಾಖಲಾದ ಬಳಿಕ ಸ್ವಾಮೀಜಿ ಚಲನವಲನದ ಮೇಲೆ ನಿಗಾ ಇಟ್ಟಿದ್ದ ಪೊಲೀಸರು ಪರಾರಿಯಾಗುತ್ತಿರುವ ವಿಚಾರ ತಿಳಿಯುತ್ತಲೇ ವಶಕ್ಕೆ ಪಡೆದಿದ್ದಾರೆ. 

ಇಂದು ಬೆಳಗ್ಗೆ ಮತ್ತೊಂದು ಕಾರಿನಲ್ಲಿ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ವೇಳೆ ಹಾವೇರಿ ಜಿಲ್ಲೆಯ ಬಂಕಾಪುರ ಬಳಿ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ವಶಕ್ಕೆ ಪಡೆದ ಬಳಿಕ ಪೊಲೀಸರು ಸ್ವಾಮೀಜಿಯನ್ನು ಚಿತ್ರದುರ್ಗ ಮಠಕ್ಕೇ ತಂದು ಬಿಟ್ಟಿದ್ದು ಅಲ್ಲಿಯೇ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ, ಮಠದ ಮುಂಭಾಗದಲ್ಲಿ ಸಾಕಷ್ಟು ಭಕ್ತರು ಸೇರಿದ್ದು ಸ್ವಾಮೀಜಿಗೆ ಬೆಂಬಲ ಘೋಷಿಸಿದ್ದಾರೆ.

Karnataka’s Chitradurga police have begun an investigation into a Protection of Children from Sexual Offences Act 2012 (POCSO) case registered against the chief pontiff of the Murugha Mutt, Dr Shivamurthy Murugha Sharanaru, along with four others.