ಬ್ರೇಕಿಂಗ್ ನ್ಯೂಸ್
30-08-22 10:39 pm HK News Desk ಕ್ರೈಂ
ರಾಂಚಿ, ಆಗಸ್ಟ್ 30: ಆಕೆ ಪದವಿ ಓದಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಹೊತ್ತಿದ್ದಳು. ಆದರೆ, ಆಕೆಯ ಹಿಂದೆ ಬಿದ್ದ ಯುವಕನೊಬ್ಬ ಪ್ರೀತಿಸುವಂತೆ ಪೀಡಿಸಿ, ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದು ಕೊಂದೇ ಬಿಟ್ಟಿದ್ದಾನೆ. ಹೌದು.. ಜಾರ್ಖಂಡಿನಲ್ಲಿ ಹಿಂದು ಯುವತಿಯನ್ನು ಮುಸ್ಲಿಂ ಯುವಕ, ಪೆಟ್ರೋಲ್ ಸುರಿದು ಕೊಂದು ಹಾಕಿದ್ದು ಭಾರೀ ಪ್ರತಿಭಟನೆಗೆ ಕಾರಣವಾಗಿದೆ. ರಾಜ್ಯದಾದ್ಯಂತ ಬಿಜೆಪಿ ಮತ್ತು ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಜಾರ್ಖಂಡಿನ ದುಮ್ಕಾ ಜಿಲ್ಲೆಯಲ್ಲಿ ಆಗಸ್ಟ್ 23ರಂದು ಘಟನೆ ನಡೆದಿದ್ದು ಚಿಕಿತ್ಸೆ ಫಲಿಸದೆ ಬಡ ಕುಟುಂಬದ ಯುವತಿ ಆಗಸ್ಟ್ 28ರಂದು ದುರಂತ ಸಾವು ಕಂಡಿದ್ದಳು. 19 ವರ್ಷದ ಅಂಕಿತಾ ಎಂಬ ಪಿಯುಸಿ ಓದುತ್ತಿದ್ದ ಹುಡುಗಿ ಮೃತಪಟ್ಟಾಕೆ. ಆಗಸ್ಟ್ 23ರಂದು ರಾತ್ರಿ ಊಟ ಮಾಡಿ ತನ್ನ ಮನೆಯಲ್ಲಿ ಮಲಗಿದ್ದ ಅಂಕಿತಾ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಹಚ್ಚಲಾಗಿತ್ತು. ಶಾರುಖ್ ಎಂಬ ರೋಡ್ ರೋಮಿಯೋ ಕೃತ್ಯ ಎಸಗಿದ್ದ ಯುವಕ. ಪೊಲೀಸರು ಘಟನೆ ಬೆನ್ನಲ್ಲೇ ಆರೋಪಿಯನ್ನು ಬಂಧಿಸಿದ್ದಾರೆ. ಅದಕ್ಕೂ ಹತ್ತು ದಿನಗಳ ಹಿಂದೆ ಶಾರುಖ್, ಅಂಕಿತಾಗೆ ಕರೆ ಮಾಡಿ ತನ್ನನ್ನು ಪ್ರೀತಿಸುವಂತೆ ಕೇಳಿಕೊಂಡಿದ್ದ. ತನ್ನ ಫೋನ್ ಕರೆ ಸ್ವೀಕರಿಸಿ, ಮಾತನಾಡುವಂತೆ ಒತ್ತಡ ಹೇರಿದ್ದ. ಆದರೆ ಅಂಕಿತಾ ಆತನನ್ನು ನಿರಾಕರಿಸಿದ್ದಕ್ಕೆ, ಕೊಂದು ಬಿಡುವುದಾಗಿ ಬೆದರಿಕೆಯನ್ನೂ ಹಾಕಿದ್ದ. ಈ ಬಗ್ಗೆ ತಂದೆಯ ಬಳಿಯೂ ಅಂಕಿತಾ ಹೇಳಿಕೊಂಡಿದ್ದಳು. ಆತನ ಕುಟುಂಬದ ಜೊತೆ ಮಾತನಾಡುವುದಾಗಿ ತಂದೆಯೂ ಭರವಸೆ ನೀಡಿದ್ದರು.
ಆದರೆ, ಈ ನಡುವೆ ಆಗಸ್ಟ್ 23ರಂದು ರಾತ್ರಿ ಅಂಕಿತಾ ಮಲಗಿದ್ದ ಕೋಣೆಯ ಕಿಟಕಿಯಿಂದ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ್ದಾನೆ. ಹುಡುಗಿ ಎಚ್ಚರಗೊಳ್ಳುತ್ತಲೇ ಬೆಂಕಿಯ ಜ್ವಾಲೆಯನ್ನು ನೋಡಿ ಚೀರಾಡಿದ್ದಾಳೆ. ಬಳಿಕ ತಂದೆ ಬಂದು ಬೆಂಕಿ ನಂದಿಸಿದ್ದಾರೆ. ಆದರೆ ಅದಾಗಲೇ ಹುಡುಗಿ ಅರ್ಧ ಸುಟ್ಟು ಹೋಗಿದ್ದಳು. ಆನಂತರ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆಗಸ್ಟ್ 28ರಂದು ಚಿಕಿತ್ಸೆ ಫಲಿಸದೆ ಅಂಕಿತಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಮುಸ್ಲಿಂ ಯುವಕನಿಂದಾಗಿ ಹಿಂದು ಯುವತಿ ದುರಂತ ಸಾವು ಕಂಡಿದ್ದಾಳೆ ಅನ್ನುವ ಸುದ್ದಿ ತಿಳಿಯುತ್ತಲೇ ಹಿಂದು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಧುಮ್ಕಾ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸರು ಮತ್ತು ಜಾರ್ಖಂಡಿನ ಹೇಮಂತ್ ಸೊರೇನ್ ಸರಕಾರದ ವಿರುದ್ಧ ಪ್ರತಿಭಟನೆ ನಡೆದಿದೆ.
ತಾಯಿ ಚಿಕಿತ್ಸೆಗಾಗಿ ಜಮೀನು ಮಾರಿದ್ದರು
ಅಂಕಿತಾಳದ್ದು ಬಡ ಕುಟುಂಬವಾಗಿದ್ದು, ವರ್ಷಗಳ ಹಿಂದೆ ತಾಯಿ ಕ್ಯಾನ್ಸರ್ ಗೆ ತುತ್ತಾಗಿದ್ದರು. ತಂದೆ ತನಗಿದ್ದ ಭೂಮಿಯನ್ನು ಪತ್ನಿಯ ಚಿಕಿತ್ಸೆಗಾಗಿ ಮಾರಾಟ ಮಾಡಿದ್ದರು. ಆನಂತರ, ಜಮೀನು ಇಲ್ಲದೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೂ ಮಗಳು ಅಂಕಿತಾ ಮತ್ತು ಆರನೇ ಕ್ಲಾಸ್ ಓದುತ್ತಿದ್ದ ಇನ್ನೊಬ್ಬ ಮಗನನ್ನು ಕಷ್ಟದಲ್ಲಿ ಓದಿಸುತ್ತಿದ್ದರು. ಅಂಕಿತಾ ಪಿಯುಸಿ ಓದುತ್ತಾ ಆಸುಪಾಸಿನ ಮಕ್ಕಳಿಗೆ ಟ್ಯೂಷನ್ ಕೊಟ್ಟು ತಿಂಗಳಿಗೆ ಒಂದು ಸಾವಿರ ಸಂಪಾದಿಸುತ್ತಿದ್ದಳು. ಈ ನಡುವೆ, ಅದೇ ಪರಿಸರದ ನಿವಾಸಿ ಶಾರುಖ್ ಬೆನ್ನು ಬಿದ್ದಿದ್ದು ಪ್ರೀತಿಸಲು ಹಠ ಹಿಡಿದಿದ್ದ. ಆದರೆ ಅಂಕಿತಾ ತಾನು ಓದಿ ಪೊಲೀಸ್ ಅಧಿಕಾರಿಯಾಗಬೇಕೆಂಬ ಕನಸು ಕಂಡಿದ್ದಳು. ಹೀಗಾಗಿ ಆತನ ಪ್ರೀತಿಯನ್ನು ನಿರಾಕರಣೆ ಮಾಡಿದ್ದಳು. ಈಗ ಆಕೆಯೇ ದುರುಳನ ದಾಳಕ್ಕೆ ಬಿದ್ದು ಬಲಿಯಾಗಿ ಹೋಗಿದ್ದಾಳೆ.
ಬಿಜೆಪಿ ನಾಯಕರು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದರಿಂದ ಮುಖ್ಯಮಂತ್ರಿ ಹೇಮಂತ್ ಸೊರೇನ್, ಅಂಕಿತಾ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ರಾಜ್ಯಪಾಲರು ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದಾರೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಂಕಿತಾ ಮನೆಗೆ ತೆರಳಿ, ತರ್ತಾಗಿ ಹತ್ತು ಲಕ್ಷ ಪರಿಹಾರದ ಚೆಕ್ಕನ್ನು ಆಕೆಯ ತಂದೆಗೆ ನೀಡಿದ್ದಾರೆ. ಇದೇ ವೇಳೆ ಪ್ರತಿಕ್ರಿಯಿಸಿದ ಅಂಕಿತಾ ತಂದೆ, ಮಗಳು ಜೀವಂತ ಇರುವಾಗಲೇ ಈ ಪರಿಹಾರದ ಹಣ ಸಿಗುತ್ತಿದ್ದರೆ ಆಕೆ ಉಳಿಯುತ್ತಿದ್ದಳು. ಬದುಕಿಸಬಹುದಿತ್ತು ಎಂದು ಅಳುತ್ತಾ ಹೇಳಿದ್ದಾರೆ. ಅಲ್ಲದೆ, ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗಬೇಕೆಂದು ಕೋರಿದ್ದಾರೆ. ಇದೇ ವೇಳೆ, ಆರೋಪಿ ಶಾರುಖ್ ಗೆ ಪೆಟ್ರೋಲ್ ತಂದು ಕೊಟ್ಟಿದ್ದ ನಯೀಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
The murder of a 16-year-old girl in Jharkhand’s Dumka, allegedly by her Muslim “stalker”, has spelt fresh trouble for the Jharkhand Mukti Morcha (JMM)-led coalition government, with top BJP leaders terming the incident a case of “love jihad” and targeting a senior police officer, Dumka DSP Noor Mustafa, for allegedly attempting to save the accused.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 02:47 pm
Mangalore Correspondent
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm