ಬ್ರೇಕಿಂಗ್ ನ್ಯೂಸ್
03-09-22 03:00 pm Bangalore Correspondent ಕ್ರೈಂ
ಬೆಂಗಳೂರು, ಸೆ.3 : ತನ್ನನ್ನು ತಾನು ಪ್ರೇಮಸಾಯಿ ದೇವಮಾನವನೆಂದು ಹೇಳಿಕೊಂಡಿದ್ದಲ್ಲದೆ, ಜನರ ಕಷ್ಟಗಳನ್ನು ನಿವಾರಿಸುತ್ತೇನೆಂದು ಹೇಳಿ ಸಾರ್ವಜನಿಕರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ಪ್ರಕರಣ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಕೊಲ್ಲಾಪುರದಿಂದ ಬಂದಿದ್ದ ತಂಡವೊಂದು ಪ್ರೇಮ ಸಾಯಿಬಾಬಾ ಎಂದು ಹೇಳಿಕೊಂಡು ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ. ಚನ್ನಪಟ್ಟಣ ನಗರದ ಎಂ.ಜಿ. ರಸ್ತೆಯ ಯಶೋದಮ್ಮ ಎಂಬವರ ಮನೆಯಲ್ಲಿ 8 ತಿಂಗಳಿಂದ ಸಚಿನ್ ಅಕಾರಾಂ ಸರ್ಗರ್ ಎಂಬಾತ ಉಳಿದುಕೊಂಡಿದ್ದಲ್ಲದೆ, ಜನರ ಸಮಸ್ಯೆ ಪರಿಹರಿಸುತ್ತೇನೆಂದು ಹೇಳಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪೂಜಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದ. ಸ್ಥಳೀಯರು ಆತ ನಡೆಸುತ್ತಿದ್ದ ಭಜನಾ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ಮಹಿಳೆಯರು, ವೃದ್ಧರು, ಪುರುಷರು ಕೂಡ ಸೇರುತ್ತಿದ್ದರು.
ಈ ನಡುವೆ, ಯಶೋದಮ್ಮನ ಮನೆ ಚಿಕ್ಕದಾಗಿದ್ದು ಭಜನಾ ಕಾರ್ಯಕ್ಕೆ ಜಾಗ ಸಾಲುತ್ತಿಲ್ಲ. ಪ್ರತಿ ಗುರುವಾರ ಭಜನೆಗೆ ನಿಮ್ಮ ತೋಟದ ಮನೆಯಲ್ಲಿ ಅವಕಾಶ ಕೊಡುವಂತೆ ಸಿಂಧು ಎಂಬ ಮಹಿಳೆಯ ಬಳಿ ಕೇಳಿದ್ದಾನೆ. ಅದರಂತೆ, ಮೂರು ತಿಂಗಳ ಕಾಲ ಪ್ರತಿ ಗುರುವಾರ ತೋಟದಲ್ಲಿ ಭಜನೆ ನಡೆಸುತ್ತಿದ್ದರು. ಭಜನೆ ಬಳಿಕ, ಪ್ರೇಮಸಾಯಿ ಎಂದು ಹೇಳಿಕೊಂಡಿದ್ದ ವ್ಯಕ್ತಿ ಯಶೋಧಮ್ಮ ಮನೆಗೆ ತೆರಳುತ್ತಿದ್ದ.
ಆನಂತರ, ತೋಟದ ಮನೆಗೇ ಕನ್ನ ಹಾಕಿದ್ದ. ತೋಟದ ಜಾಗವನ್ನು ಶ್ರೀ ಪ್ರೇಮ ಸ್ವರೂಪಿಣಿ ಸಾಯಿ ಸೇವಾ ಸಮಿತಿ ಟ್ರಸ್ಟ್ಗೆ ದಾನವಾಗಿ ಕೊಡುವಂತೆ ಒತ್ತಾಯಿಸಿದ್ದ. ಆದರೆ, ದಾನ ಮಾಡಲು ಸಿಂಧು ಮನೆಯವರು ನಿರಾಕರಿಸಿದ್ದರು.
ಇತ್ತೀಚೆಗೆ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನೆಲೆಸಿದ್ದ ಚನ್ನಪಟ್ಟಣ ಮೂಲದ ಡಾ.ಸಾಯಿಕುಮಾರಿ, ಕೃಷ್ಣಯ್ಯ ಮತ್ತು ಗಿರೀಶ್ ವಿಜೇಂದ್ರ ಎನ್ನುವವರು ಗುರುಪೂರ್ಣಿಮಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಇಲ್ಲಿ ನೆಲೆಸಿದ್ದ ಸಚಿನ್ ಅಕಾರಾಂ ಸರ್ ಗರ್ನನ್ನು ನೋಡುತ್ತಿದ್ದಂತೆ ಈತ ಪ್ರೇಮಸಾಯಿ ಅಲ್ಲ ಎನ್ನುವುದನ್ನು ಖಾತ್ರಿಪಡಿಸಿದ್ದಾರೆ. ಅನುಮಾನಗೊಂಡ ಕೆಲವು ಭಕ್ತರು ಕೊಲ್ಲಾಪುರಕ್ಕೆ ತೆರಳಿ ವ್ಯಕ್ತಿಯ ಪೂರ್ವಾಪರ ವಿಚಾರಿಸಿದ್ದು ಮೋಸದ ಅರಿವಾಗಿರುವುದು ಗೊತ್ತಾಗಿದೆ.
ಆದರೆ, ಅಷ್ಟರಲ್ಲೇ ಹಲವರಿಂದ ಹಣ ಪಡೆದಿದ್ದ ವ್ಯಕ್ತಿ ಮೋಸ ಮಾಡಿದ್ದಾನೆ. ಸಿಂಧು 1.5 ಲಕ್ಷ ರೂ., ವೆಂಕಟೇಶ್, ಚನ್ನೇಗೌಡ ಎನ್ನುವವರು ತಲಾ 1 ಲಕ್ಷ ರೂ, ಎಚ್.ಜೆ.ರಾಜೇಶ್ ಎನ್ನುವವರು 2 ಲಕ್ಷ ರೂ.ಗಳನ್ನು ಕೊಟ್ಟು ಮೋಸ ಹೋಗಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಮೋಸದ ವಿಷಯ ಬೆಳಕಿಗೆ ಬರುತ್ತಲೇ ಸಚಿನ್ ಅಕಾರಾಂ ಸರ್ಗರ್ ಆತನ ಜೊತೆಗಿದ್ದ ವಿನಾಯಕ ರಾಜ್, ಸಾಯಿರಾಜ್, ಜಯಂತ್, ಯಶೋದಮ್ಮ, ಉಮಾಶಂಕರ್, ಪ್ರಶಾಂತ್ ಎನ್ನುವವರು ತಲೆಮರೆಸಿಕೊಂಡಿದ್ದಾರೆ.
Fake Baba arrives at Channapatna in Bangalore, calls himself God cheats many in the name of Bajan.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 02:25 pm
Mangaluru Correspondent
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
Wenlock Hospital, Mangalore, organ harvesting...
10-01-25 03:31 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm